ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಟೀಕೆಗಳ ವಿರುದ್ಧ ಮುಂಬಯಿ ಹೈಕೋರ್ಟ್ ಮೊರೆ ಹೋದ ಕಾರಣ, ಪೋಸ್ಟ್‌ಗಳನ್ನು ತೆಗೆದುಹಾಕಲು ನ್ಯಾಯಾಲಯದ ಆದೇಶ
(ಇನ್ಫ್ಲುಯೆನ್ಸರ್ – ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಭಾವ ಬೀರುವ ವ್ಯಕ್ತಿ)

ಮುಂಬಯಿ – ಭಾರತದಲ್ಲಿ ಆಭರಣಗಳನ್ನು ಮಾರಾಟ ಮಾಡುವ ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್’ ಸಂಸ್ಥೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿದ್ದ ಎಲ್ಲಾ ‘ಪೋಸ್ಟ್’ಗಳನ್ನು (ಬರಹ ಅಥವಾ ಚಿತ್ರ) ತೆಗೆದುಹಾಕಲು ಮುಂಬಯಿ ಹೈಕೋರ್ಟ್ ಆದೇಶ ನೀಡಿದೆ. ಈ ಸಂಸ್ಥೆಯು ಹಿಂದೂ ಕಾರ್ಯಕರ್ತ ವಿಜಯ್ ಪಟೇಲ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿ, ಅವರನ್ನು ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದೆ.
Malabar Gold Controversy! 💎
The brand tied up with Pakistani🇵🇰 influencer Aleeshba Khalid – who mocked Operation Sindoor
Activist @vijaygajera exposed the deal – now #BoycottMalabar is trending 🔥
Malabar rushed to the Bombay High Court, which ordered takedown of all critical… pic.twitter.com/oMcEtYG3Y1
— Sanatan Prabhat (@SanatanPrabhat) October 17, 2025
ಪಾಕಿಸ್ತಾನಿ ‘ಇನ್ಫ್ಲುಯೆನ್ಸರ್’ ‘ಆಪರೇಷನ್ ಸಿಂದೂರ್’ ಅನ್ನು ಅವಮಾನಿಸಿದ್ದರು
ವಿಜಯ್ ಪಟೇಲ್ ಅವರು ಹೇಳಿದ್ದೇನೆಂದರೆ, ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್’ ಸಂಸ್ಥೆಯು ಭಾರತಕ್ಕೆ ಅವಮಾನ ಮಾಡಿದ ಪಾಕಿಸ್ತಾನಿ ‘ಇನ್ಫ್ಲುಯೆನ್ಸರ್’ ಜೊತೆ ಮಾಡಿಕೊಂಡ ಒಪ್ಪಂದವನ್ನು ತಾನು ಬಯಲಿಗೆಳೆದ ಕಾರಣ, ಸಂಸ್ಥೆಯು ತನ್ನ ಮೇಲೆ ಕ್ರಮ ಕೈಗೊಳ್ಳಲು ನೋಡುತ್ತಿದೆ. ಈ ‘ಇನ್ಫ್ಲುಯೆನ್ಸರ್’ ‘ಆಪರೇಷನ್ ಸಿಂದೂರ್ ಅನ್ನು ಅವಮಾನಿಸಿದ್ದರು. ನಮ್ಮ ಸೈನ್ಯದ ಗೌರವಕ್ಕಾಗಿ ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಯಾರು ಗೆಲ್ಲುತ್ತಾರೆ ನೋಡೋಣ? ನಿಮ್ಮ ಹಣ ಮತ್ತು ಶಕ್ತಿಯೇ? ಅಥವಾ ಭಾರತೀಯರ ಬೆಂಬಲವೇ? ಕೇವಲ ಹಣದ ಬಲದಿಂದ ನೀವು ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ.

ಈ ವಿವಾದವು ೨೦೨೫ ರ ಸೆಪ್ಟೆಂಬರ್ ೬ ರಂದು ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಸಂಸ್ಥೆಯ ಹೊಸ ಅಂಗಡಿಯ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ‘ಇನ್ಫ್ಲುಯೆನ್ಸರ್’ ಅಲೇಶ್‌ಬಾ ಖಾಲಿದ್ ಭಾಗವಹಿಸಿದ್ದರು. ಅವರೊಂದಿಗೆ ವೀಡಿಯೊ ತಯಾರಿಸಿ ಸಂಸ್ಥೆಯು ‘ಇನ್ಸ್ಟಾಗ್ರಾಮ್’ನಲ್ಲಿ ಪ್ರಸಾರ ಮಾಡಿತು. ಅಲೇಶ್‌ಬಾ ಖಾಲಿದ್ ಅವರು ಮೇ ೨೦೨೫ ರಲ್ಲಿ ‘ಆಪರೇಷನ್ ಸಿಂದೂರ್ ಅನ್ನು ‘ಹೇಡಿತನದ ಕೃತ್ಯ’ ಎಂದು ಕರೆದಿದ್ದರು ಮತ್ತು ಪಾಕಿಸ್ತಾನದ ಬಗೆಗಿನ ನಿಷ್ಠೆಯನ್ನು ಉಲ್ಲೇಖಿಸಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಪೋಸ್ಟ್‌ನಲ್ಲಿ ಬರೆದಿದ್ದರು.
ಮಲಬಾರ್ ಅನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಿಂದ ಕರೆ
ಈ ಭಾರತ-ವಿರೋಧಿ ಪೋಸ್ಟ್ ನಂತರ ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್’ ವಿರುದ್ಧ ತೀವ್ರ ಟೀಕೆಗಳು ಬರಲು ಪ್ರಾರಂಭಿಸಿದವು. ಸಂಸ್ಥೆಯು ಭಾರತ-ವಿರೋಧಿ ನಿಲುವು ಹೊಂದಿದ್ದ ಪಾಕಿಸ್ತಾನಿ ‘ಇನ್ಫ್ಲುಯೆನ್ಸರ್’ ಜೊತೆ ಒಪ್ಪಂದ ಮಾಡಿಕೊಂಡ ಕಾರಣ, ಜನರು ‘ಬಾಯ್ಕಾಟ್ ಮಲಬಾರ್’ (ಮಲಬಾರ್ ಅನ್ನು ಬಹಿಷ್ಕರಿಸಿ) ಎಂಬ ‘ಹ್ಯಾಶ್‌ಟ್ಯಾಗ್’ (ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸಲು) ‘ಟ್ರೆಂಡ್’ (ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸಲು) ಮಾಡಿದರು. ಈ ಟೀಕೆ ಮಾಡುವವರಲ್ಲಿ ವಿಜಯ್ ಪಟೇಲ್ ಮುಂಚೂಣಿಯಲ್ಲಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿದ್ದ ಟೀಕೆಗಳ ವಿರುದ್ಧ ಕ್ಷಮೆಯಾಚಿಸುವ ಬದಲು, ಸಂಸ್ಥೆಯು ಮುಂಬಯಿ ಹೈಕೋರ್ಟ್ ಮೊರೆ ಹೋಯಿತು. ಸಂಸ್ಥೆಯು ತನ್ನ ವಿರುದ್ಧ ಇರುವ ಸಾಮಾಜಿಕ ಮಾಧ್ಯಮಗಳ ಅವಮಾನಕಾರಿ ಬರಹಗಳನ್ನು ತೆಗೆದುಹಾಕುವಂತೆ ಕೋರಿತು. ‘ಈ ಪೋಸ್ಟ್‌ಗಳಿಂದ ಸಂಸ್ಥೆಯ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಇದರಲ್ಲಿ ಹೇಳಲಾಗಿತ್ತು. ಸಂಸ್ಥೆಯು ನ್ಯಾಯಾಲಯದಲ್ಲಿ ಹೇಳಿದ್ದೇನೆಂದರೆ, ಬರ್ಮಿಂಗ್‌ಹ್ಯಾಮ್‌ನಲ್ಲಿನ ಅಂಗಡಿಯ ಜಾಹೀರಾತಿಗಾಗಿ ಅವರು ‘ಜಿಎಬಿ ಸ್ಟುಡಿಯೋಸ್’ ಎಂಬ ಸಂಸ್ಥೆಯನ್ನು ನೇಮಿಸಿದ್ದರು. ಸ್ಥಳೀಯ ಪ್ರಭಾವಿ ವ್ಯಕ್ತಿಗಳನ್ನು ಆಹ್ವಾನಿಸಿದ್ದು ಅವರೇ, ಇದರಲ್ಲಿ ಬ್ರಿಟನ್ ಮೂಲದ ಪಾಕಿಸ್ತಾನಿ ‘ಇನ್ಫ್ಲುಯೆನ್ಸರ್’ ಅಲೇಶ್‌ಬಾ ಖಾಲಿದ್ ಕೂಡ ಸೇರಿದ್ದರು. ಅಲೇಶ್‌ಬಾ ಅವರು ಭಾರತ-ವಿರೋಧಿ ಪೋಸ್ಟ್ ಮಾಡಿದ್ದಾರೆ ಮತ್ತು ಅವರು ಪಾಕಿಸ್ತಾನಿ ಎಂದು ಸಂಸ್ಥೆಗೆ ನಂತರ ತಿಳಿಯಿತು. ಸಂಸ್ಥೆಯ ಈ ಹೇಳಿಕೆಯನ್ನು ಆಲಿಸಿದ ನ್ಯಾಯಾಲಯವು ಮಧ್ಯಂತರ ಆದೇಶ ನೀಡಿತು: ‘ಇನ್ಸ್ಟಾಗ್ರಾಮ್’, ‘ಫೇಸ್‌ಬುಕ್’, ‘ವಾಟ್ಸಾಪ್’ ಮತ್ತು ‘ಎಕ್ಸ್’ ಈ ಸಾಮಾಜಿಕ ಮಾಧ್ಯಮಗಳಿಂದ ಎಲ್ಲಾ ಅವಮಾನಕಾರಿ ಪೋಸ್ಟ್‌ಗಳನ್ನು ತೆಗೆದುಹಾಕಬೇಕು ಮತ್ತು ಭವಿಷ್ಯದಲ್ಲಿ ಅಂತಹ ಬರಹಗಳನ್ನು ನಿಷೇಧಿಸಬೇಕು ಎಂದು ಆದೇಶಿಸಿತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ