
೧. ಸಾಧನೆ ತಿಳಿದ ನಂತರ ತಕ್ಷಣ ೨೦೨೫ ನೆಯ ವರ್ಷದ ಗುರುಪೂರ್ಣಿಮೆ ನಿಮಿತ್ತದ ಪ್ರಸಾರದ ಸೇವೆಯನ್ನು ತಳಮಳದಿಂದ ಮಾಡುವುದು
೨೦೨೫ ನೆಯ ವರ್ಷದ ಗುರುಪೂರ್ಣಿಮೆಯಲ್ಲಿ ಪ್ರಸಾರದ ಸಂದರ್ಭದಲ್ಲಿ ಮುಧೋಳದ ಧರ್ಮಪ್ರೇಮಿ ಶ್ರೀ. ಕೇಶವ ಸಾರ್ವಡ ಇವರು ನಮ್ಮ ಸಂಪರ್ಕಕ್ಕೆ ಬಂದರು. ಅವರಿಗೆ ಸಾಧನೆಯ ಬಗ್ಗೆ ತಿಳಿದ ನಂತರ ಅವರು ಅತ್ಯಂತ ಸೇವಾಭಾವದಿಂದ ಗುರುಪೂರ್ಣಿಮೆಯ ನಿಮಿತ್ತ ಸೇವೆಯನ್ನು ಮಾಡಿದ್ದಾರೆ. ಅವರಿಗೆ ತೀವ್ರ ಶಾರೀರಿಕ ತೊಂದರೆ ಇದ್ದು ಸರಿಯಾಗಿ ಮಾತನಾಡಲು ಬರುವುದಿಲ್ಲ. ಆದರೂ ಅವರು ಪ್ರತಿ ದಿನ ಗುರುಪೂರ್ಣಿಮೆಯ ಸೇವೆಗೆ ಬರುತ್ತಿದ್ದರು. ಗುರುಪೂರ್ಣಿಮೆಯ ೪೦೦ ಕ್ಕಿಂತ ಹೆಚ್ಚು ಆಮಂತ್ರಣ ಪತ್ರಿಕೆಗಳನ್ನು ಒಬ್ಬರೇ ಮನೆ ಮನೆಗೆ ಹಂಚಿದರು. ಅನೇಕ ಧರ್ಮಪ್ರೇಮಿಗಳನ್ನು ಕಾರ್ಯಕ್ರಮಕ್ಕೆ ಕರೆತಂದರು. ಗುರುಪೂರ್ಣಿಮೆಯ ದಿನ ಬಂದ ಅನೇಕ ಜಿಜ್ಞಾಸುಗಳ ನೀಡಿದ ತಮ್ಮ ಅಭಿಪ್ರಾಯದಲ್ಲಿ ‘ಕೇಶವ ಇವರಿಂದಾಗಿ ನಾವು ಇಲ್ಲಿ ಬಂದಿದ್ದೇವೆ’ ಎಂದು ಹೇಳಿದರು.
೨. ಅವರು ಪ್ರತಿದಿನ ಉಪ್ಪುನೀರಿನ ಉಪಾಯ (ಟಿಪ್ಪಣಿ) ಮತ್ತು ‘ಶ್ರೀ ಗುರುದೇವ ದತ್ತ |’ ಈ ನಾಮಜಪ ಮಾಡುತ್ತಾರೆ
(ಟಿಪ್ಪಣಿ : ಉಪ್ಪುನೀರಿನ ಉಪಾಯವೆಂದರೆ ಸಾಧಾರಣ ಅರ್ಧ ಬಕೇಟ್ ನೀರಿನಲ್ಲಿ ೧-೨ ಮುಷ್ಠಿ ಕಲ್ಲುಪ್ಪನ್ನು ಹಾಕಿದ ನಂತರ ಅದರಲ್ಲಿ ಕಾಲು ಮುಳುಗಿಸಿ ೧೦ ರಿಂದ ೧೫ ನಿಮಿಷ ನಾಮಜಪ ಮಾಡುವುದು ಮತ್ತು ನಂತರ ಆ ನೀರನ್ನು ಪ್ರಸಾಧನಗೃಹದಲ್ಲಿ ವಿಸರ್ಜನೆ ಮಾಡುವುದು)
೩. ಗುರುಪೂರ್ಣಿಮೆಯ ನಂತರ ತಾವಾಗಿ ವಿವಿಧ ಸೇವೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವುದು
ಅವರು ಗುರುಪೂರ್ಣಿಮೆಯ ನಂತರ ‘ಇನ್ನು ಮುಂದೆ ನಾನು ಯಾವ ಸೇವೆ ಮಾಡಲಿ ?’ ಎಂದು ಕೇಳಿದರು. ಅವರು ೨೦೦ ಕ್ಕೂ ಹೆಚ್ಚು ‘ಸನಾತನ ಪ್ರಭಾತ ನಿಯತಕಾಲಿಕೆಗಳನ್ನು ವಿತರಿಸಿದರು. ಆದರ್ಶ ಗಣೇಶೋತ್ಸವ ಅಭಿಯಾನದ ನಿಮಿತ್ತ ಗಣೇಶ ಮಂಡಳಿಗಳ ಕಾರ್ಯಕರ್ತರನ್ನು ಭೇಟಿಯಾದರು. ಅವರು ಸಾತ್ತ್ವಿಕ ಉತ್ಪಾದನೆಗಳು ಮತ್ತು ಸನಾತನದ ಗ್ರಂಥಗಳನ್ನು ಖರೀದಿಸಿ ಸಾಮಜದಲ್ಲಿ ವಿತರಣೆ ಮಾಡುತ್ತಿದ್ದಾರೆ. ಗ್ರಂಥ ಪ್ರದರ್ಶಿನಿ ಸೇವೆಯಲ್ಲಿ ಉತ್ಸಾಹದಿಂದ ಸಹಭಾಗಿ ಆಗುತ್ತಿದ್ದಾರೆ. ಅಲ್ಲದೆ ‘ಸನಾತನ ಪ್ರಭಾತ’ ನಿಯತಕಾಲಿಕೆಗಳಿಗೆ ಹೊಸ ಚಂದಾದಾರರನ್ನಾಗಿಸುವ ಸೇವೆಯನ್ನು ಮಾಡುತ್ತಿದ್ದಾರೆ.
– ಸೌ. ಸುಜಾತಾ ಹುಳಿಪಲ್ಲೇದ, ಬಾಗಲಕೋಟೆ (೨೬.೮.೨೦೨೫)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !