ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಕ್ಷಮತೆಯನ್ನು ಗಮನದಲ್ಲಿಡಿ !

ಶ್ರೀ. ದುರ್ಗೇಶ ಪರುಳಕರ

ಹಿಂದೂ ಧರ್ಮ ಇದು ಸಾಮಾನ್ಯ ಧರ್ಮವಲ್ಲ. ಅದು ಕ್ಷಮಾಶೀಲವಾಗಿದ್ದರೂ, ಬಲಶಾಲಿ ಮತ್ತು ವೀರ್ಯವಂತÀವಾಗಿದೆ. ‘ಸಂಪೂರ್ಣ ಜಗತ್ತನ್ನು ಆರ್ಯಮಯ ಮಾಡುವೆವು’, ಎಂದು ನಮ್ಮ ವೇದಗಳು ಉದ್ಘೋಷಣೆಯನ್ನು ಮಾಡಿವೆ. ಇದರ ಅರ್ಥ ಹಿಂದೂ ಧರ್ಮವು ಜಗತ್ತಿನಲ್ಲಿನ ಮಾನವ ಸಮಾಜವನ್ನು ಸುವಿದ್ಯಾಸಂಪನ್ನ ಮತ್ತು ಸುಸಂಸ್ಕೃತ ಮಾಡುವ ಪ್ರತಿಜ್ಞೆಯನ್ನು ತೆಗೆದು ಕೊಂಡಿದೆ, ಹಾಗೆಯೇ ‘ಸಜ್ಜನರ ರಕ್ಷಣೆ ಮತ್ತು ದುರ್ಜನರ ನಾಶ’ ಇದು ಹಿಂದೂ ಧರ್ಮದ ಬೋಧನೆಯಾಗಿದೆ. ‘ಪೌರುಷ್ಯವನ್ನು ತ್ಯಜಿಸುವ ಹೇಡಿತನ ಮಾಡಬೇಡ’, ಎಂಬುದು ಶ್ರೀಕೃಷ್ಣನ ಆಜ್ಞೆಯಾಗಿದೆ. ಹಿಂದೂ ಸಮಾಜವು ಈ ಆಜ್ಞೆಯ ಪಾಲನೆ ಮಾಡುತ್ತದೆ. ಅಹಿಂಸೆಯನ್ನು ಯಥೋಚಿತವಾಗಿ ಗೌರವಿಸುವ ಹಿಂದೂ ಸಂಸ್ಕೃತಿಯು ಸಂಸ್ಕಾರ ಮಾಡುವಲ್ಲಿ ಎಲ್ಲಿಯೂ ಕಡಿಮೆ ಬೀಳುವುದಿಲ್ಲ. ಹೀಗಿದ್ದರೂ ಕ್ರೂರ ಕೃತ್ಯ ಮಾಡುವವರಿಗೆ ಜೀವದಾನ ಮಾಡುವುದೆಂದರೆ ಮಾನವ ಸಮಾಜವನ್ನು ಅಪಾಯಕ್ಕೆ ಸಿಲುಕಿಸಿದ ಹಾಗಾಗಿದೆ. ಸ್ವಲ್ಪದರಲ್ಲಿ ಹಿಂದೂ ಧರ್ಮವು ತನ್ನ ಅನುಯಾಯಿಗಳಿಗೆ ಸಮನ್ವಯ ಸಾಧಿಸಲು ಪ್ರೋತ್ಸಾಹ ನೀಡುತ್ತದೆ.

೧. ಸತ್ಯ, ನ್ಯಾಯ ಮತ್ತು ಧರ್ಮ ಇವುಗಳನ್ನು ಪಾಲಿಸಲೇಬೇಕು ಎಂದು ಒತ್ತಿ ಹೇಳುವ ಭಗವಾನ ಶ್ರೀಕೃಷ್ಣ !

‘ಆಚಾರ-ವಿಚಾರಗಳು ಶುದ್ಧ ಮತ್ತು ಪವಿತ್ರ ಇರಬೇಕು’, ಎಂದು ಹಿಂದೂ ಧರ್ಮವು ಒತ್ತಿ ಹೇಳುತ್ತದೆ. ಅದಕ್ಕಾಗಿ ಸಮಯ ಬಂದರೆ ಆಗ್ರಹದ ನಿಲುವನ್ನು ತೆಗೆದುಕೊಳ್ಳಲು ಹಿಂದೂ ಧರ್ಮವು ಹಿಂದೆಮುಂದೆ ನೋಡುವುದಿಲ್ಲ. ಹಿಂದೂ ಧರ್ಮವು ಕರುಣೆ ಮತ್ತು ದಯೆಯ ಮಹತ್ವವನ್ನು ಅರಿತಿದೆ. ಹಿಂದೂ ಧರ್ಮವು ಅವುಗಳನ್ನು ಎಂದಿಗೂ ಕಡಿಮೆ ಎಂದು ತಿಳಿದುಕೊಳ್ಳುವುದಿಲ್ಲ. ಆದುದರಿಂದ ಹಿಂದೂ ಧರ್ಮವು, ‘ಕ್ರೌರ್ಯ, ದುಷ್ಟತನ, ದುರಾಚಾರಗಳಿಗೆ ದಯೆ ತೋರಿಸಬಾರದು’, ಎಂಬ ಬೋಧನೆ ಯನ್ನು ನೀಡುತ್ತದೆ. ಅದಕ್ಕಾಗಿ ಅದು ಪ್ರಸಂಗಗಳಿಗನುಸಾರ ಆಗ್ರಹದ ನಿಲುವನ್ನು ತೆಗೆದುಕೊಳ್ಳುತ್ತದೆ.

‘ಸತ್ಯಕ್ಕಾಗಿ, ನ್ಯಾಯಕ್ಕಾಗಿ ಮತ್ತು ಧರ್ಮಕ್ಕಾಗಿ ತನ್ನ ವಚನವನ್ನು ಉಲ್ಲಂಘಿಸಿದರೂ ನಡೆಯುತ್ತದೆ; ಆದರೆ ಅಸತ್ಯ, ಅನ್ಯಾಯ ಮತ್ತು ಅಧರ್ಮ ಇವುಗಳ ನಾಶ ಮಾಡಲೇಬೇಕು’, ಎಂಬ ವಸ್ತುನಿಷ್ಠ ಪಾಠವನ್ನು ಕಲಿಸುವ ಭಗವಾನ ಶ್ರೀಕೃಷ್ಣನು ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದು ರಣಾಂಗಣದಲ್ಲಿ ನಿಂತಿದ್ದಾನೆ. ಅವನು ‘ಕೈಯಲ್ಲಿ ಶಸ್ತ್ರ ಹಿಡಿಯುವುದಿಲ್ಲ’, ಎಂದು ಮಹಾಭಾರತದ ಯುದ್ಧದ ಪ್ರಸಂಗದಲ್ಲಿ ಪ್ರತಿಜ್ಞೆ ಮಾಡಿದ್ದನು; ಆದರೆ ಸತ್ಯ, ನ್ಯಾಯ ಮತ್ತು ಧರ್ಮ ಇವು ಸಂಕಟದಲ್ಲಿ ಸಿಲುಕಿವೆ ಎಂದು ಗೊತ್ತಾದಾಗ, ಶ್ರೀಕೃಷ್ಣನು ತನ್ನ ಪ್ರತಿಜ್ಞೆಯನ್ನು ಮುರಿದನು. ಹಿಂದೂ ಸಮಾಜವು ಈ ವಿಷಯವನ್ನು ಎಂದಿಗೂ ಮರೆತಿಲ್ಲ, ಮರೆಯುವುದಿಲ್ಲ ಮತ್ತು ಮರೆಯಲಾರದು. ರಾಮಾಯಣ, ಮಹಾಭಾರತದಲ್ಲಿನ ಇಂತಹ ಘಟನೆಗಳಿಗೆ ವಿಪರೀತ ಅರ್ಥ ನೀಡಿ ಹಿಂದೂಗಳ ಕ್ಷಾತ್ರತೇಜವನ್ನು ನಾಶ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಲಾಯಿತು. ಇಂತಹ ಪ್ರಯತ್ನಗಳನ್ನು ಮಾಡುವವರು ಗಮನದಲ್ಲಿಡಬೇಕಾದ ಒಂದು ವಿಷಯವೆಂದರೆ, ಭಗವದ್ಗೀತೆ ಮತ್ತು ಭಗವಾನ ಶ್ರೀಕೃಷ್ಣನು ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಆರಾಧ್ಯ ದೈವವಾಗಿದ್ದಾರೆ.

೨. ಪ್ರತಿಕಾರ ಮತ್ತು ರಕ್ಷಣೆಗಾಗಿ ಕೈಯಲ್ಲಿ ಶಸ್ತ್ರ ಹಿಡಿದು ಹೋರಾಡಲು ಆಜ್ಞೆಯನ್ನು ನೀಡುವ ಹಿಂದೂ ಧರ್ಮ !

ಹಿಂದೂ ಧರ್ಮವು ಕೇವಲ ಸಂಖ್ಯಾಬಲಕ್ಕೆ ಮಹತ್ವ ನೀಡುವುದಿಲ್ಲ, ಅದು ಸಂಖ್ಯಾಬಲದೊಂದಿಗೆ ಗುಣಬಲವನ್ನು ಹೆಚ್ಚಿಸುವ ಕಡೆಗೆ ಹೆಚ್ಚು ಗಮನ ನೀಡುತ್ತಿರುತ್ತದೆ. ‘ಗುಣಗಳ ಸಂವರ್ಧನೆ ಇದು ಮಾನವೀ ಜೀವನದ ಉತ್ಕರ್ಷದ ಬುನಾದಿಯಾಗಿದೆ’, ಎಂಬ ಸಿದ್ಧಾಂತವನ್ನು ಹಿಂದೂ ಧರ್ಮವು ಪ್ರಸ್ಥಾಪಿಸಿದೆ. ಹಿಂದೂ ಧರ್ಮವು ಪ್ರಭು ಶ್ರೀರಾಮನನ್ನು ‘ಆದರ್ಶ ಪುರುಷ’ನೆಂದು ಪೂಜಿಸುತ್ತದೆ; ಏಕೆಂದರೆ ಗೌತಮರ ಧರ್ಮಪತ್ನಿ ಅಹಿಲ್ಯೆಯ ಚರಣಗಳ ಮೇಲೆ ತಮ್ಮ ತಲೆಯನ್ನಿಟ್ಟರು. ರಾವಣನನ್ನು ಕೊಲ್ಲುವ ಮೊದಲು ಮಹಾತಪಸ್ವಿನಿಯಾಗಿರುವ ಶಬರಿದೇವಿಯ ದರ್ಶನ ಪಡೆದು ಅವಳ ಇಚ್ಛೆಯನ್ನು ಪೂರ್ತಿ ಗೊಳಿಸುತ್ತಾನೆ; ಆದರೆ ಅದೇ ಸಮಯಕ್ಕೆ ತ್ರಾಟಿಕಾ ಮತ್ತು ಶೂರ್ಪನಖಾರಂತಹ ದುಷ್ಟ ಪಾಪಿ ದುರಾಚಾರಿ ರಾಕ್ಷಸಿಯರನ್ನು ದಂಡಿಸುವಾಗ ಅವನ ಮನಸ್ಸು ಸ್ವಲ್ಪವೂ ಹಿಂಜರಿಯುವುದಿಲ್ಲ. ತಂದೆಯ ವಚನವನ್ನು ಪಾಲಿಸಲು ರಾಜವಸ್ತ್ರಗಳನ್ನು ತ್ಯಜಿಸಿ ಕಶಾಯವಸ್ತ್ರವನ್ನು ಧರಿಸುವಾಗ ಅವನ ಮನಸ್ಸು ಸ್ವಲ್ಪವೂ ವಿಚಲಿತವಾಗುವುದಿಲ್ಲ. ಸೀತಾಮಾತೆಯನ್ನು ಮುಕ್ತಗೊಳಿಸಲು ಮಾತ್ರ ಶ್ರೀರಾಮನು ರಾವಣನನ್ನು ಕೊಂದದ್ದಲ್ಲ; ರಘುಕುಲವನ್ನು ಅವಮಾನಿಸಿದನೆಂದೂ ಅವನನ್ನು ಕೊಂದನು. ಅದರ ಸೇಡು ತೀರಿಸಿಕೊಳ್ಳಲು ಶ್ರೀರಾಮ ಮತ್ತು ವಾನರರು ಲಂಕೆಯ ಮೇಲೆ ದಾಳಿ ಮಾಡಿದರು. ಹಾವು ವ್ಯಕ್ತಿಯನ್ನು ಕಚ್ಚುವಾಗ ಅದು ವ್ಯಕ್ತಿಯ ರಕ್ತವನ್ನು ಕುಡಿಯುವ ಉದ್ದೇಶದಿಂದ ಕಚ್ಚುವುದಿಲ್ಲ, ಅದು ತನ್ನ ಬಾಲದ ಮೇಲೆ ಕಾಲು ಇಟ್ಟನೆಂದು; ಸೇಡು ತೀರಿಸಿಕೊಳ್ಳಲು ಕಚ್ಚುತ್ತದೆ. ಇದರ ಅರ್ಥ ನಮ್ಮ ಶ್ರದ್ಧಾಸ್ಥಾನಗಳು ಸಂಸ್ಕೃತಿ ಮತ್ತು ರಾಷ್ಟ್ರ-ಧರ್ಮ ಇವುಗಳ ಮೇಲೆ ಯಾರಾದರೂ ದಾಳಿ ಮಾಡಿ ಅವುಗಳನ್ನು ನಾಶ ಮಾಡಲು ಪ್ರಯತ್ನಿಸಿದರೆ, ಅವುಗಳ ರಕ್ಷಣೆಗಾಗಿ ಪ್ರಾಣವನ್ನು ಪಣಕ್ಕಿಟ್ಟು ಅವುಗಳನ್ನು ರಕ್ಷಿಸಲು ಕೈಯಲ್ಲಿ ಶಸ್ತ್ರವನ್ನು ಹಿಡಿದುಕೊಂಡು ಹೋರಾಡುವ ಆಜ್ಞೆಯನ್ನು ಅಖಿಲ ಹಿಂದೂ ರಾಷ್ಟ್ರಕ್ಕೆ ಹಿಂದೂ ಧರ್ಮವು ನೀಡುತ್ತದೆ.

೩. ಸ್ವಾತಂತ್ರ್ಯವೀರ ಸಾವರಕರ ಇವರು ಸ್ಪಷ್ಟ ಪಡಿಸಿದ ಹಿಂದೂ ಮತ್ತು ಮುಸಲ್ಮಾನ ಸಮಾಜದಲ್ಲಿನ ಭೇದ

ಹಿಂದೂ ಮತ್ತು ಮುಸಲ್ಮಾನ ಸಮಾಜದ ನಡುವಿನ ಭೇದವನ್ನು ಸ್ಪಷ್ಟ ಪಡಿಸುವಾಗ ಸ್ವಾತಂತ್ರ್ಯವೀರ ಸಾವರಕರರು, ”ಹಿಂದೂಗಳು ಮುಸಲ್ಮಾನರಂತೆ ಕ್ರೂರರಲ್ಲ; ಧರ್ಮಉನ್ಮತ್ತವೀರರಲ್ಲ; ಹಿಂದೂಗಳು ಹಿಂದೂಗಳು ಕಠೋರರೂ, ಧರ್ಮವೀರರೂ ಆಗಿದ್ದಾರೆ. ಹಿಂದೂಗಳು ಧರ್ಮವೀರರಾಗಿರದಿದ್ದರೆ ಈ ಜೀವನದ ಕಲಹದಲ್ಲಿ ಇಲ್ಲಿಯವರೆಗೆ ಅವರು ಬದುಕುತ್ತಿರಲಿಲ್ಲ’’ ಎಂದು ಹೇಳಿದ್ದರು.

೪. ಮಹಿಳೆಯರ ಸಹಿತ ಎಲ್ಲರನ್ನೂ ಗೌರವದಿಂದ ಕಾಣುವ ಹಿಂದೂ ಧರ್ಮ !

ಮುಸಲ್ಮಾನ ಧರ್ಮವು ಅವರಿಗೆ ಸಹಿಷ್ಣುತೆಯ ಶಿಕ್ಷಣವನ್ನು ನೀಡುವುದಿಲ್ಲ. ತಮ್ಮ ಅಸ್ತಿತ್ವವನ್ನು ಉಳಿಸಿ ಕೊಳ್ಳಲು ಇತರರ ಹತ್ಯೆ ಮಾಡುವ ಅವಶ್ಯಕತೆ ಇರುವುದಿಲ್ಲ, ಹಾಗೆಯೇ ತನ್ನ ಶ್ರೇಷ್ಠತೆಯನ್ನು ಮೆರೆಸಲು ಇನ್ನೊಬ್ಬರನ್ನು ನಾಶ ಮಾಡುವ ಆವಶ್ಯಕತೆ ಇಲ್ಲ. ‘ನಾವು ಪ್ರಾಮಾಣಿಕವಾಗಿ ಜೀವನವನ್ನು ಜೀವಿಸಬೇಕು ಮತ್ತು ಕಷ್ಟದಿಂದ ತಮ್ಮ ಅಭಿವೃದ್ಧಿಯನ್ನು ಸಾಧಿಸ ಬೇಕು’, ಎಂಬ ಸಂಸ್ಕಾರ ಮತ್ತು ವಿಚಾರಗಳ ಮೇಲೆ ಹಿಂದೂ ಧರ್ಮದ ಶ್ರದ್ಧೆ ಇದೆ. ‘ನಿರಪರಾಧಿಯನ್ನು ಕೊಲ್ಲುವುದು ಪಾಪ ಮತ್ತು ನೀಚ ಕೃತ್ಯವಾಗಿದೆ’, ಎಂದು ಹಿಂದೂ ಧರ್ಮವು ನಂಬುತ್ತದೆ. ಪರಸ್ತ್ರೀಯನ್ನು ತಾಯಿಗೆ ಸಮಾನವೆಂದು ನಂಬಿ ಅವಳನ್ನು ಗೌರವಿಸುವ ಸಂಸ್ಕಾರವನ್ನು ಹಿಂದೂ ಧರ್ಮವು ಹಿಂದೂಗಳಲ್ಲಿ ಮೂಡಿಸುತ್ತದೆ. ಹಿಂದೂ ಧರ್ಮದಲ್ಲಿನ ರಕ್ಷಾಬಂಧನ ಮತ್ತು ಸಹೋದರಬಿದಿಗೆ ಈ ಹಬ್ಬಗಳು ಅದರದ್ದೇ ಪ್ರತೀಕವಾಗಿವೆ.

೫. ರಾಷ್ಟ್ರ-ಧರ್ಮಕ್ಕಾಗಿ ಬಲಿದಾನ ಕೊಡುವ ಬಗ್ಗೆ ಹಿಂದೂ ಧರ್ಮದ ಶಿಕ್ಷಣ

 ರಾಷ್ಟ್ರರಕ್ಷಣೆಗಾಗಿ ಯೌವನದ ಹೊಸ್ತಿಲಿನಲ್ಲಿದ್ದ ಮತ್ತು ಯುವಾವಸ್ಥೆಗೆ ಪ್ರವೇಶಿಸಿದ ಅನೇಕ ವೀರರು ಮೃತ್ಯುವನ್ನು ಆಲಂಗಿಸಿದ್ದಾರೆ, ಹಾಗೆಯೇ ಹಿಂದೂ ಧರ್ಮಕ್ಕಾಗಿ ಗುರು ಗೋವಿಂದ ಸಿಂಗ್‌ ಇವರ ಮಕ್ಕಳು ಬಾಲ್ಯಾವಸ್ಥೆಯಲ್ಲಿಯೇ ಆತ್ಮ ಬಲಿದಾನವನ್ನು ಮಾಡಿದರು. ಅದೇ ಪರಂಪರೆಯನ್ನು ಛತ್ರಪತಿ ಸಂಭಾಜಿ ಮಹಾರಾಜರು ಮುನ್ನಡೆಸಿದರು, ಭಾರತಮಾತೆಗಾಗಿ ಪ್ರಾಣವನ್ನು ಅರ್ಪಿಸಿದ ವೀರರು ಭಾರತಮಾತೆಗೆ, ‘ಹೇ ಭಾರತ ಮಾತೆ, ನಮ್ಮ ಈ ವೀರ ಮರಣಕ್ಕೆ ದುಃಖಿಸಬೇಡ. ಸ್ವಲ್ಪ ಧೈರ್ಯ ತಾಳು. ಪುನಃ ೯ ತಿಂಗಳುಗಳ ನಂತರ ನಾವು ನಿನ್ನ ಹೊಟ್ಟೆಯಲ್ಲಿ ಹುಟ್ಟಿ ನಿನ್ನ ಸೇವೆಗೆ ಸಿದ್ಧರಾಗುತ್ತೇವೆ’ ಎಂದು ಹೇಳಿದರು. ರಾಷ್ಟ್ರ-ಧರ್ಮಕ್ಕಾಗಿ ತ್ಯಾಗ ಮಾಡಿದರೆ ಅಪ್ಸರೆಯರನ್ನು ಭೋಗಿಸ ಬಹುದು’, ಎಂದು ಹಿಂದೂ ಧರ್ಮವು ಹೇಳುವುದಿಲ್ಲ, ಇದನ್ನು ಮೇಲಿನ ಉದಾಹರಣೆಯಿಂದ ತಿಳಿದುಕೊಳ್ಳಬಹುದು.

೬. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಿ !

ಹಿಂದೂ ಧರ್ಮವು ಉಪಭೋಗದ ಹಂಬಲವನ್ನು ಸೃಷ್ಟಿಸುವುದಿಲ್ಲ, ಅದು ತ್ಯಾಗದ ಹಂಬಲವನ್ನು ಸೃಷ್ಟಿಸುತ್ತದೆ. ಈ ವಿಷಯವನ್ನು ನಿಖರವಾಗಿ ಅರಿತುಕೊಂಡರೆ, ಹಿಂದೂ ಧರ್ಮದ ಶ್ರೇಷ್ಠತೆಯ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇರಲಾರದು. ಆದುದರಿಂದ ವಿನಾಕಾರಣ ಹಿಂದೂ ಧರ್ಮವನ್ನು ದೂಷಿಸುವವರೆಗೆ ಹೇಳಬಯಸುವುದೇನೆಂದರೆ, ಅವರು ಹಿಂದೂ ಧರ್ಮವನ್ನು ನಿಖರವಾಗಿ ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು, ಅಂದರೆ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಸಾಮರ್ಥ್ಯವು ಗಮನಕ್ಕೆ ಬರಬಹುದು.

– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ಲೇಖಕರು ಮತ್ತು ವ್ಯಾಖ್ಯಾನಕಾರರು, ಡೊಂಬಿವಲಿ. (೨೨.೩.೨೦೨೪)