ಹಿಂದೂ ಧರ್ಮದ್ರೋಹಿ ಪ್ರೊ. ಕೆ.ಎಸ್. ಭಗವಾನ್ ಅವರ ಅಶ್ಲಾಘನೀಯ ಹೇಳಿಕೆ

ದಾವಣಗೆರೆ – ನೀವು ಯಾವ ಶ್ರೀರಾಮನನ್ನು ಪೂಜಿಸುತ್ತೀರೋ, ಅವರು ದಶರಥನ ಪುತ್ರನಲ್ಲ. ಶ್ರೀರಾಮನ ತಂದೆ ದಶರಥನು ಪುತ್ರಕಾಮೇಷ್ಟಿ ಯಜ್ಞ ಮಾಡಿದ್ದನು. ಆ ಪೂಜೆಯಲ್ಲಿ ರಾಣಿಯು ಪುರೋಹಿತರೊಂದಿಗೆ ರಾತ್ರಿ ಕಳೆಯಬೇಕಾಗುತ್ತದೆ. ಒಂದು ವೇಳೆ ರಾಣಿಯು ಪುರೋಹಿತರೊಂದಿಗೆ ರಾತ್ರಿ ಕಳೆದಿದ್ದರೆ, ಇದರ ಅರ್ಥವನ್ನು ನೀವೇ ಅರ್ಥಮಾಡಿಕೊಳ್ಳಿ ಎಂದು ಅತ್ಯಂತ ಆಕ್ಷೇಪಾರ್ಹ ಮತ್ತು ಆಕ್ರೋಶಭರಿತ ಹೇಳಿಕೆಯನ್ನು ಪ್ರೊ. ಕೆ.ಎಸ್. ಭಗವಾನ್ ನೀಡಿದ್ದಾರೆ. ಅವರು ದಾವಣಗೆರೆ ಜಿಲ್ಲೆಯ ಹರಿಹರದ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಭಗವಾನ್ ಮಾತನಾಡಿ, ‘ರಾಮಮಂದಿರ ಏಕೆ ಬೇಕು ?’ ಎಂಬ ನನ್ನ ಪುಸ್ತಕದಲ್ಲಿ ನಾನು ಇದನ್ನು ಬರೆದಿದ್ದೇನೆ ಮತ್ತು ವಾಲ್ಮೀಕಿ ರಾಮಾಯಣದಲ್ಲೂ ಇದರ ಉಲ್ಲೇಖವಿದೆ ಎಂದು ಹೇಳಿದರು. (ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಆರಾಧ್ಯ ದೈವದ ಬಗ್ಗೆ ಯಾರಾದರೂ ಹೀಗೆ ಮಾತನಾಡಲು ಹೇಗೆ ಸಾಧ್ಯ? ಹಿಂದೂಗಳ ಭಾವನೆಗಳನ್ನು ತುಳಿಯುವ ಇಂತವರ ವಿರುದ್ಧ ಕಾನೂನಿನ ಕ್ರಮ ಕೈಗೊಂಡು ಅವರಿಗೆ ಗಲ್ಲು ಶಿಕ್ಷೆ ವಿಧಿಸಲು ಪೊಲೀಸರು ಪ್ರಯತ್ನಿಸಬೇಕು! – ಸಂಪಾದಕರು)
ಭಗವಾನ್ ಮಾತನಾಡುತ್ತಾ,
೧. ಶೂದ್ರ ಶಂಭುಕ, ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನನ್ನು ರಾಮನೇ ಕೊಂದನು. ಅಂತಹ ವ್ಯಕ್ತಿ ನಮ್ಮ ಆದರ್ಶ ಹೇಗೆ ಆಗಲು ಸಾಧ್ಯ? (ಯಾವ ವ್ಯಕ್ತಿಯ ಸಮಾಜದಲ್ಲಿನ ಮಹತ್ವವೇ ನಷ್ಟವಾಗಿದೆಯೋ, ಆ ವ್ಯಕ್ತಿಯು ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳಲು ಈ ರೀತಿಯ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾನೆ ಎಂಬುದನ್ನು ಗಮನಿಸಿ! – ಸಂಪಾದಕರು)
೨. ಪಂಚಾಂಗ ನೋಡುವುದನ್ನು ಮೊದಲು ನಿಲ್ಲಿಸಿ, ಮೊದಲು ನಿಮ್ಮ ಮೇಲೆ ನಂಬಿಕೆ ಇಡಲು ಕಲಿಯಿರಿ. ‘ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರಾಗಿದ್ದಾರೆ’, ಎಂದು ಮನುಸ್ಮೃತಿ ಹೇಳುತ್ತದೆ.
೩. ಗಾಂಧೀಜಿಯವರು ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಕೊಡಿಸಿದರು, ಆದರೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಜನರನ್ನು ಈ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. (ಕ್ರಾಂತಿಕಾರಿಗಳ ಅಪ್ರತಿಮ ತ್ಯಾಗವನ್ನು ಅವಮಾನ ಮಾಡುವ ಪ್ರೊ. ಭಗವಾನ್! – ಸಂಪಾದಕರು)
೪. ಮದುವೆಯ ಸಮಯದಲ್ಲಿ ಪುರೋಹಿತರು ಹೇಳುವ ಮಂತ್ರಗಳ ಅರ್ಥ ನಿಮಗೆ ತಿಳಿದಿರುವುದಿಲ್ಲ. ಆದರೆ ನನಗೆ ಇದು ತಿಳಿದಿರುವುದರಿಂದಲೇ ನಾನು ನನ್ನ ಮದುವೆಯಲ್ಲಿ ಯಾವುದೇ ಪುರೋಹಿತರನ್ನು ಕರೆಯದಂತೆ ನನ್ನ ತಂದೆಗೆ ಹೇಳಿದ್ದೆ. (ಭಗವಾನ್ ಅವರ ಮನೋವಿಕೃತಿಯ ಹಿಂದಿನ ಕಾರಣಗಳು ಈಗ ತಿಳಿದವು. ಹಿಂದೂಗಳ ಶ್ರೇಷ್ಠ ಪರಂಪರೆಗಳು, ಆಧ್ಯಾತ್ಮಿಕ ಮಂತ್ರಗಳ ಸಂಸ್ಕಾರಗಳೇ ಇಲ್ಲದ ವ್ಯಕ್ತಿಯು ಹೀಗೆಯೇ ಮಾತನಾಡುತ್ತಾನೆ! – ಸಂಪಾದಕರು)
೫. ಪ್ರಸ್ತುತ ಪಠ್ಯಪುಸ್ತಕಗಳು ಸತ್ಯವಿಲ್ಲದೆ ತಮ್ಮ ಸತ್ವವನ್ನು ಕಳೆದುಕೊಂಡಿವೆ. ಸ್ವಾಮಿ ವಿವೇಕಾನಂದರು ‘ನಾವು ಬೌದ್ಧ ಧರ್ಮದವರು’, ಎಂದು ಹೇಳಿದ್ದರು. ಬೌದ್ಧ ಧರ್ಮವು ಅತ್ಯಂತ ಮಾನವೀಯ ಮತ್ತು ವೈಜ್ಞಾನಿಕ ಧರ್ಮವಾಗಿದೆ. ನನ್ನ ಈ ಹೇಳಿಕೆಯ ವಿರುದ್ಧ ಯಾರಾದರೂ ಮೊಕದ್ದಮೆ ಹೂಡಬೇಕಿದ್ದರೆ, ಅವರು ಸಂಪೂರ್ಣ ಮಾಹಿತಿ ಪಡೆದುಕೊಂಡೇ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಹೇಳಿದ್ದಾರೆ.
ಗೃಹಿಣಿಯರು ರಾಷ್ಟ್ರ ನಿರ್ಮಾತೃಗಳು! – ಸರ್ವೋಚ್ಚ ನ್ಯಾಯಾಲಯ
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ನಿಯತ್, ನೀತಿ ಮತ್ತು ನಿರ್ಣಯಗಳಿಂದ ದೇಶದ ಅಭಿವೃದ್ಧಿಗೆ ವೇಗ! – ಪ್ರಧಾನಮಂತ್ರಿ : PM Narendra Modi
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಾಯಕ ನಿಜಾಮ್ ಅಲಿಯಾಸ್ ಇಬ್ರಾಹಿಂ ಬಂಧನ!
ಹಿಂದೂತ್ವನಿಷ್ಠ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಜಾಕೀರ್ಗೆ ಮಧ್ಯಂತರ ಜಾಮೀನು!
‘ಅಮೆಜಾನ್ ಇಂಡಿಯಾ’ದ ಜಾಹೀರಾತಿನಲ್ಲಿ ಶ್ರೇಷ್ಠ ವಿಜ್ಞಾನಿ ಆರ್ಯಭಟರಿಗೆ ಅಪಮಾನ!