ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳಕ್ಕೆ ಸಂತಾನೋತ್ಪತ್ತಿ ದರ ಕಾರಣವಲ್ಲ, ಬದಲಿಗೆ ನುಸುಳುಕೋರಿಕೆ ಕಾರಣ! Amit Shah Warns Infiltrators

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಖಂಡತುಂಡ ನಿಲುವು

  • ‘ಒಬ್ಬ ಹಿಂದುವಾಗಿ ಭಾರತದ ಮೇಲೆ ನನಗಿರುವಷ್ಟೇ ಹಕ್ಕು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳಿಗೂ ಇದೆ’ ಎಂದು ಸಹ ಹೇಳಿಕೆ.

  • ದೇಶದ ನುಸುಳುಕೋರರನ್ನು ಹೊರಹಾಕಲಾಗುವುದು! – ಗೃಹ ಸಚಿವರು

ನವ ದೆಹಲಿ – ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಸಂತಾನೋತ್ಪತ್ತಿ ದರದಿಂದ ಹೆಚ್ಚಿಲ್ಲ, ಬದಲಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಆದ ನುಸುಳುಕೋರಿಕೆಯಿಂದ ಹೆಚ್ಚಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖಂಡತುಂಡ ನಿಲುವು ತೆಗೆದುಕೊಂಡಿದ್ದಾರೆ. ಅವರು ಇಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ, ಅವರು ೧೯೫೧ ರಿಂದ ೨೦೧೧ ರವರೆಗಿನ ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಯ ಅಂಕಿ-ಅಂಶಗಳನ್ನು ಓದಿ ಹೇಳಿದರು. ಅವರು, ಭಾರತದಲ್ಲಿ ೧೯೫೧ ರಲ್ಲಿ ಶೇ. ೮೪.೧ ರಷ್ಟು ಹಿಂದೂಗಳು ಮತ್ತು ಶೇ. ೯.೮ ರಷ್ಟು ಮುಸ್ಲಿಮರು ಇದ್ದರು. ೧೯೭೧ ರಲ್ಲಿ ಈ ಅಂಕಿ-ಅಂಶಗಳು ಕ್ರಮವಾಗಿ ಶೇ. ೮೨.೭೨ ಮತ್ತು ಶೇ. ೧೧, ೧೯೯೧ ರಲ್ಲಿ ಶೇ. ೮೧ ಮತ್ತು ಶೇ. ೧೨.೧೨, ಮತ್ತು ೨೦೧೧ ರಲ್ಲಿ ಹಿಂದೂಗಳ ಜನಸಂಖ್ಯೆ ಶೇ. ೭೯ಕ್ಕೆ ಇಳಿದು, ಮುಸ್ಲಿಮರ ಜನಸಂಖ್ಯೆ ಶೇ. ೧೪.೨ಕ್ಕೆ ಹೆಚ್ಚಳವಾಗಿದೆ, ಎಂದು ಹೇಳಿದರು.

ಕೇಂದ್ರ ಗೃಹ ಸಚಿವರು ಮಂಡಿಸಿದ ಪ್ರಮುಖ ಅಂಶಗಳು!

1. ಭಾಜಪವು (ಆಗಿನ ಭಾರತೀಯ ಜನಸಂಘವು) 1950 ರಿಂದ ‘ನುಸುಳುಕೋರರನ್ನು ಹುಡುಕಿ, ತೆಗೆದುಹಾಕಿ ಮತ್ತು ಗಡಿಪಾರು ಮಾಡಿ’ ಎಂಬ ಸೂತ್ರವನ್ನು ಅಳವಡಿಸಿಕೊಂಡಿದೆ. ನಾವು ನುಸುಳುಕೋರರನ್ನು ಹುಡುಕುತ್ತೇವೆ, ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತೇವೆ ಮತ್ತು ಈ ದೇಶದಿಂದ ಹೊರಹಾಕುತ್ತೇವೆ.

2. ‘ನುಸುಳುಕೋರರು ಯಾರು?’ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತಾ, ಧಾರ್ಮಿಕ ಕಿರುಕುಳಕ್ಕೆ ಒಳಗಾಗದಿದ್ದರೂ ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದವರು ನುಸುಳುಕೋರರು ಎಂದರು.

3. ನುಸುಳುವಿಕೆ ಮತ್ತು ಚುನಾವಣಾ ಆಯೋಗದ ಮತದಾರರ ಪಟ್ಟಿಯನ್ನು ನವೀಕರಿಸುವ ‘ವಿಶೇಷ ತೀವ್ರ ಸುಧಾರಣಾ ಅಭಿಯಾನವನ್ನು’ (ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆ) ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಇದು ರಾಷ್ಟ್ರೀಯ ವಿಷಯವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಅದು ಚುನಾವಣಾ ಆಯೋಗದ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ.

4. ಮತದಾರರ ಪಟ್ಟಿಯಲ್ಲಿ ಹೆಸರಿರುವ ನುಸುಳುಕೋರರನ್ನು ದೇಶದ ರಾಜಕೀಯ ಪ್ರಕ್ರಿಯೆಯ ಭಾಗವಾಗಲು ಬಿಡುವುದು ಸಂವಿಧಾನದ ಆಶಯವನ್ನು ಭ್ರಷ್ಟಗೊಳಿಸಿದಂತೆ. ಮತದಾನದ ಹಕ್ಕು ಈ ದೇಶದ ನಾಗರಿಕರಿಗೆ ಮಾತ್ರ ನೀಡಬೇಕು.

ಮತ ಬ್ಯಾಂಕ್ ನಾಶವಾಗುತ್ತಿರುವುದರಿಂದಲೇ ಕಾಂಗ್ರೆಸ್ ವಿರೋಧ! – ಶಾ

ಕಾಂಗ್ರೆಸ್ ಮೇಲೆ ಟೀಕೆ ಮಾಡುತ್ತಾ ಗೃಹ ಸಚಿವ ಶಾ ಅವರು, ಕಾಂಗ್ರೆಸ್ ಮನಬಂದಂತೆ ವರ್ತಿಸುತ್ತಿದೆ. ಏಕೆಂದರೆ ಅದರ ಮತ ಬ್ಯಾಂಕ್ ನಾಶವಾಗುತ್ತಿದೆ. ನಿಮಗೆ ಯಾವುದೇ ಸಮಸ್ಯೆ ಇದ್ದರೆ, ನೀವು ನ್ಯಾಯಾಲಯಕ್ಕೆ ಹೋಗಬಹುದು. ದೇಶದ ಪ್ರಧಾನಿ ಯಾರು? ಮುಖ್ಯಮಂತ್ರಿ ಯಾರು? ಎಂಬುದನ್ನು ನಿರ್ಧರಿಸುವ ಹಕ್ಕು ದೇಶದ ನಾಗರಿಕರಿಗಲ್ಲದೆ ಬೇರೆ ಯಾರಿಗಾದರೂ ಇರಬೇಕೇ? ಎಂದು ನಾನು ದೇಶದ ಎಲ್ಲ ನಾಗರಿಕರಿಗೆ ಕೇಳಲು ಬಯಸುತ್ತೇನೆ ಎಂದರು.

ಸಂಪಾದಕೀಯ ನಿಲುವು

ಅಮಿತ್ ಶಾ ಅವರ ಖಂಡತುಂಡ ನಿಲುವಿಗೆ ಅಭಿನಂದನೆಗಳು! ದೇಶದಲ್ಲಿರುವ ಕೋಟ್ಯಂತರ ನುಸುಳುಕೋರರನ್ನು ಪತ್ತೆ ಹಚ್ಚಿ, ಅವರನ್ನು ವಾಪಸ್ ಕಳುಹಿಸಲು ಸಮರೋಪಾದಿಯಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಬೇಕು. ಇದಕ್ಕಾಗಿ ಜನರೂ ಸಹ ಸಹಾಯ ಮಾಡುತ್ತಾರೆ ಮತ್ತು ದೇಶವು ನುಸುಳುಕೋರರಿಂದ ಮುಕ್ತವಾಗುತ್ತದೆ!