|

ತಿರುವನಂತಪುರಂ (ಕೇರಳ) – ಮಲಯಾಳಂ ನಟ ಶೇನ್ ನಿಗಮ್ ಅವರ ಮುಂಬರುವ ‘ಹಾಲ್’ ಹೆಸರಿನ ಚಲನಚಿತ್ರದಲ್ಲಿ ಗೋಮಾಂಸವಿರುವ ಬಿರಿಯಾನಿ ತಿನ್ನುವ ದೃಶ್ಯವಿದೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸೆನ್ಸಾರ್ ಮಂಡಳಿ) ಈ ಹಿಂದೆಂದೂ ಇಲ್ಲದಷ್ಟು ಸೂಕ್ಷ್ಮತೆಯನ್ನು ತೋರಿಸಿದ್ದು, ಚಲನಚಿತ್ರದಲ್ಲಿ ಸೂಚಿಸಲಾದ ೧೫ ಬದಲಾವಣೆಗಳಲ್ಲಿ ಈ ದೃಶ್ಯವನ್ನು ತೆಗೆದುಹಾಕುವಂತೆಯೂ ಹೇಳಿದೆ. ಆದರೆ, ಈ ನಿರ್ಧಾರದ ವಿರುದ್ಧ ಚಲನಚಿತ್ರ ನಿರ್ಮಾಪಕರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಚಲನಚಿತ್ರದ ಜನಸಂಪರ್ಕ ಅಧಿಕಾರಿಗಳ ಪ್ರಕಾರ, ‘ಧ್ವಜಕ್ಕೆ ವಂದನೆ ಸಲ್ಲಿಸುವುದು’ ಮತ್ತು ‘ಗೋಮಾಂಸವಿರುವ ಬಿರಿಯಾನಿ ತಿನ್ನುವುದು’ ಈ ಎರಡು ಸನ್ನಿವೇಶಗಳನ್ನು ತೆಗೆದುಹಾಕಲು ಸೆನ್ಸಾರ್ ಮಂಡಳಿ ಹೇಳಿದೆ. ಚಲನಚಿತ್ರದಲ್ಲಿ ಗೋಮಾಂಸವಿರುವ ಬಿರಿಯಾನಿಯನ್ನು ತೋರಿಸಿಲ್ಲ ಮತ್ತು ‘ಸೆನ್ಸಾರ್ ಮಂಡಳಿಯು ತಪ್ಪು ತಿಳಿದಿದೆ’ ಎಂದು ಅವರು ಹೇಳಿದ್ದಾರೆ. ‘ಹಾಲ್’ ಚಲನಚಿತ್ರವನ್ನು ಸೆಪ್ಟೆಂಬರ್ ೧೦ ರಂದೇ ಮಂಡಳಿಯ ಸದಸ್ಯರಿಗೆ ತೋರಿಸಲಾಗಿತ್ತು.
ಸಂಪಾದಕೀಯ ನಿಲುವುಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಂದರೆ ಸೆನ್ಸಾರ್ ಮಂಡಳಿಯ ಮುಂದೆ ಚಲನಚಿತ್ರ ಪ್ರದರ್ಶಿಸಿದ ನಂತರವೂ ‘ಮಂಡಳಿಯ ತಪ್ಪು ತಿಳುವಳಿಕೆಯಾಗಿದೆ’ ಎಂದು ಹೇಳುವುದು ಬಾಲಿಶ ಹೇಳಿಕೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸುವಂತೆ ನ್ಯಾಯಾಲಯವು ನಿರ್ಮಾಪಕರಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂಬ ನಿರೀಕ್ಷೆ ಇದೆ! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!