ಜ್ಯೋತಿಗಳ ಸ್ಪಂದನಗಳ ಬಗ್ಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ಅದ್ವಿತೀಯ ಸಂಶೋಧನೆ |
|
|
|
|
|
|
ಸಂಜೆಯ ಸಮಯದಲ್ಲಿ ದೇವರ ಮುಂದೆ ದೀಪವನ್ನು ಹಚ್ಚಿ ಶುಭಂಕರೋತಿ, ಶ್ರೀರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ ಇತ್ಯಾದಿಗಳನ್ನು ಹೇಳುವುದು ನಮ್ಮ ಪರಂಪರೆಯಾಗಿದೆ. ಈಗಿನ ವೈಜ್ಞಾನಿಕ ಯುಗದಲ್ಲಿಯೂ ಈ ಪರಂಪರೆಯು ಇನ್ನೂ ಉಳಿದುಕೊಂಡಿದೆ. ದೇವರ ಮುಂದೆ ಎಣ್ಣೆಯ ದೀಪ ಅಥವಾ ತುಪ್ಪದ ನೀಲಾಂಜನವನ್ನು ಬೆಳಗುತ್ತಾರೆ. ಹಾಗೆಯೇ ಹುಟ್ಟುಹಬ್ಬ, ಧಾರ್ಮಿಕ ವಿಧಿಗಳಂತಹ ಸಮಯದಲ್ಲಿ ವ್ಯಕ್ತಿಗೆ ಇವುಗಳಿಂದ ಬೆಳಗಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಜನರು ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಮೊಂಬತ್ತಿಗಳನ್ನು ಆರಿಸಿ ಆಚರಿಸುವುದು ಕಂಡುಬರುತ್ತದೆ. ಕೆಲವರು ದೀಪಾವಳಿಯಲ್ಲಿ ಪಾರಂಪರಿಕ ಮಣ್ಣಿನ ಹಣತೆಗಳ ಬದಲಿಗೆ ಮೊಂಬತ್ತಿ ಅಥವಾ ಕೆಲವು ಸ್ಥಳಗಳಲ್ಲಿಯಂತೂ ಮೊಂಬತ್ತಿಗಳನ್ನೇ ಹಚ್ಚಿರುವುದು ಕಂಡುಬರುತ್ತದೆ. ‘ಮೊಂಬತ್ತಿ, ಮೇಣದ ಹಣತೆ, ಮಣ್ಣಿನ ಹಣತೆ, ಎಣ್ಣೆಯ ದೀಪ ಮತ್ತು ತುಪ್ಪದ ನೀಲಾಂಜನದ ಜ್ಯೋತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳಲ್ಲಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಏನು ವ್ಯತ್ಯಾಸವಿದೆ ?’, ಎಂಬುದರ ಅಧ್ಯಯನಕ್ಕಾಗಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಸಂಶೋಧನಾತ್ಮಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ಲೋಲಕವನ್ನು ಬಳಸಲಾಯಿತು. ಲೋಲಕದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆ ಯನ್ನು ಅಳೆಯಲು ಬರುತ್ತದೆ. ಈ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ನೋಂದಣಿಯ ವಿವೇಚನೆ
ಈ ಪ್ರಯೋಗದಲ್ಲಿ ಎಣ್ಣೆಯ ದೀಪ ಮತ್ತು ಪಾರಂಪರಿಕ ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ಮತ್ತು ತುಪ್ಪದ ನೀಲಾಂಜನದಲ್ಲಿ ದೇಶಿ ಹಸುವಿನ ತುಪ್ಪವನ್ನು ಹಾಕಲಾಗಿತ್ತು. ಕೈಯಿಂದ ಮಾಡಿದ ಹತ್ತಿಯ ಬತ್ತಿಯನ್ನು ಹಾಕಿ ಆ ಮೂರು ರೀತಿಯ ದೀಪಗಳನ್ನು ಪ್ರಜ್ವಲಿಸಲಾಯಿತು. ನಂತರ ಅವುಗಳ ಛಾಯಾಚಿತ್ರಗಳನ್ನು ತೆಗೆಯಲಾಯಿತು. ಅನಂತರ ಮೊಂಬತ್ತಿ ಮತ್ತು ಮೇಣದ ಹಣತೆಯನ್ನು ಹಚ್ಚಿ ಅವುಗಳ ಛಾಯಾಚಿತ್ರಗಳನ್ನೂ ತೆಗೆಯಲಾಯಿತು. ಲೋಲಕದಿಂದ ಈ ಎಲ್ಲ ಛಾಯಾಚಿತ್ರಗಳ ಪರೀಕ್ಷಣೆ ಮಾಡಲಾಯಿತು.

೧ ಅ. ಮೊಂಬತ್ತಿ ಮತ್ತು ಮೇಣದ ಹಣತೆಯಿಂದ ಜ್ಯೋತಿಗಳಲ್ಲಿನ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು; ಬದಲಾಗಿ ಮಣ್ಣಿನ ಹಣತೆ, ಎಣ್ಣೆಯ ದೀಪ ಮತ್ತು ತುಪ್ಪದ ನೀಲಾಂಜನದ ಜ್ಯೋತಿಗಳಿಂದ ಉತ್ತರೋತ್ತರ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ಮೊಂಬತ್ತಿ ಮತ್ತು ಮೇಣದ ಹಣತೆಯ ಜ್ಯೋತಿಗಳಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು. ತದ್ವಿರುದ್ದ ಮಣ್ಣಿನ ಹಣತೆ, ಎಣ್ಣೆಯ ದೀಪ ಮತ್ತು ತುಪ್ಪದ ನೀಲಾಂಜನದ ಜ್ಯೋತಿಯಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಅವುಗಳಲ್ಲಿ ಉತ್ತರೋತ್ತರ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇದು ಮುಂದೆ ನೀಡಿರುವ ನೊಂದಣಿಯಿಂದ ಗಮನಕ್ಕೆ ಬರುತ್ತದೆ.

ಮೇಲಿನ ನೋಂದಣಿಯಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
೧ ಅ ೧. ಮೊಂಬತ್ತಿ ಮತ್ತು ಮೇಣದ ಹಣತೆಯ ಜ್ಯೋತಿಯಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ಮೇಣವು ಮಾನವ ನಿರ್ಮಿತಿಯಾಗಿದೆ, ಮಣ್ಣು, ಎಳ್ಳೆಣ್ಣೆ ಮತ್ತು ಹತ್ತಿ ಈ ಘಟಕಗಳು ನೈಸರ್ಗಿಕವಾಗಿವೆ. ಸಾಮಾನ್ಯವಾಗಿ ನೈಸರ್ಗಿಕ ಘಟಕಗಳಲ್ಲಿ ಸತ್ವಗುಣ ಪ್ರಧಾನವಾಗಿರುತ್ತದೆ ಮತ್ತು ಅನೈಸರ್ಗಿಕ (ಕೃತಕ) ವಸ್ತುಗಳಲ್ಲಿ ತಮೋಗುಣ ಪ್ರಧಾನವಾಗಿರುತ್ತದೆ. ಯಾವ ಘಟಕಗಳಲ್ಲಿ ಯಾವ ಗುಣ ಪ್ರಧಾನವಾಗಿರುತ್ತದೆಯೋ, ಆ ಸ್ಪಂದನಗಳು ಆ ವಸ್ತುಗಳಿಂದ ವಾತಾವರಣದಲ್ಲಿ ಪ್ರಕ್ಷೇಪಿಸುತ್ತವೆ. ಮೇಣಬತ್ತಿಯನ್ನು ತಮೋಗುಣಿ ಪದಾರ್ಥಗಳಿಂದ ತಯಾರಿಸಿದ್ದರಿಂದ ಅದರಲ್ಲಿ ಮೂಲತಃ ತಮೋಗುಣಿ ಸ್ಪಂದನಗಳಿರುತ್ತವೆ. ಅದನ್ನು ಪ್ರಜ್ವಲಿಸಿದ ನಂತರ ಅದರಿಂದ ತಮೋಗುಣಿ ಸ್ಪಂದನಗಳು ವೇಗವಾಗಿ ಪ್ರಕ್ಷೇಪಿಸುತ್ತವೆ. ಇದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತದೆ. ದೀಪಾವಳಿಯಲ್ಲಿ ಜನರು ಮೇಣದ ಹಣತೆ ಅಥವಾ ಮೇಣಬತ್ತಿಯನ್ನು ಹಚ್ಚುತ್ತಾರೆ, ಹಾಗೆಯೇ ಹುಟ್ಟುಹಬ್ಬದಂದು ಮೊಂಬತ್ತಿಗಳನ್ನು ಹಚ್ಚಿ ಅವುಗಳನ್ನು ಊದಿ ಆಚರಿಸುತ್ತಾರೆ, ಆಗ ಅವರ ಮೇಲೆ ಈ ತೊಂದರೆದಾಯಕ ಸ್ಪಂದನಗಳ ನಕಾರಾತ್ಮಕ ಪರಿಣಾಮವಾಗುತ್ತದೆ. ಸಾಮಾನ್ಯವಾಗಿ ಮನುಷ್ಯನು ಸಾಧನೆ ಮಾಡದಿರುವುದರಿಂದ ಅವನಿಗೆ ಈ ಸೂಕ್ಷ್ಮ ಸ್ಪಂದನಗಳು ತಿಳಿಯುವುದಿಲ್ಲ. ಇದರಿಂದಾಗಿ ಮೇಲ್ನೋಟಕ್ಕೆ ನೋಡಲು ಆಕರ್ಷಕವಾಗಿ ಅಥವಾ ಅನುಕೂಲಕರವೆನಿಸುವ ವಸ್ತುಗಳು ವಾಸ್ತವಿಕವಾಗಿ ಆಧ್ಯಾತ್ಮಿಕದೃಷ್ಟಿಯಲ್ಲಿ ಎಷ್ಟು ಹಾನಿಕಾರಕವಾಗಿದೆ, ಎಂಬ ಕಲ್ಪನೆಯೂ ಸಾಮಾನ್ಯ ಮನುಷ್ಯನಲ್ಲಿ ಇರುವುದಿಲ್ಲ. ಆದ್ದರಿಂದ ಅವನಿಂದ ಇಂತಹ ಅಯೋಗ್ಯ ಕೃತಿಗಳು ಆಗುವುದು ಕಂಡುಬರುತ್ತದೆ.
೧ ಅ ೨. ಮಣ್ಣಿನ ಹಣತೆ, ಎಣ್ಣೆಯ ದೀಪ ಮತ್ತು ತುಪ್ಪದ ನೀಲಾಂಜನದ ಜ್ಯೋತಿಗಳಿಂದ ಉತ್ತರೋತ್ತರ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ಸಾಮಾನ್ಯವಾಗಿ ಎಣ್ಣೆಯ ದೀಪದಿಂದ ರಜೋಗುಣಿ ಲಹರಿಗಳು ಪ್ರಕ್ಞೇಪಿಸುತ್ತವೆ; ಆದರೆ ಎಳ್ಳೆಣ್ಣೆಯ ದೀಪದಿಂದ ಸ್ವಲ್ಪ ಪ್ರಮಾಣದಲ್ಲಿ ಸತ್ವ ಲಹರಿಗಳು ಪ್ರಕ್ಷೇಪಿಸುತ್ತವೆ. ಆದ್ದರಿಂದ ಇತರ ಎಣ್ಣೆಗಳ ತುಲನೆಯಲ್ಲಿ ಎಳ್ಳಿನ ಎಣ್ಣೆಯ ದೀಪವು ಹೆಚ್ಚು ಸಾತ್ತ್ವಿಕವಾಗಿರುತ್ತದೆ. ಮಣ್ಣಿನ ಹಣತೆಯು ಮೂಲತಃ ಸಾತ್ತ್ವಿಕವಾಗಿದೆ. ಅದರಲ್ಲಿ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯನ್ನು ಹಾಕಿ ಅದನ್ನು ಪ್ರಜ್ವಲಿಸಿದರೆ ಅದರ ಜ್ಯೋತಿಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಿದವು. ಎಲ್ಲ ಎಣ್ಣೆಗಳಿಗಿಂತ ತುಪ್ಪದ (ದೇಶಿ ಹಸುವಿನ ಶುದ್ಧ ತುಪ್ಪದ) ದೀಪವು ಅತ್ಯಧಿಕ ಸಾತ್ತ್ವಿಕವಾಗಿದೆ; ಏಕೆಂದರೆ ತುಪ್ಪದಲ್ಲಿ ದೇವತೆಯ ಸಾತ್ತ್ವಿಕ ಲಹರಿಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚು ಇರುತ್ತದೆ.
೨. ‘ಧರ್ಮಶಾಸ್ತ್ರವು ನೀಡಿದ ನಿಯಮಗಳು ಮನುಷ್ಯನಿಗೆ ಹಿತದಾಯಕ’, ಎಂಬುದನ್ನು ಗಮನದಲ್ಲಿಡಿ !
ದೇವರ ಮುಂದೆ ಪ್ರತಿದಿನ ತುಪ್ಪದ ದೀಪವನ್ನು ಹಚ್ಚಲು ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಹಬ್ಬಹರಿದಿನಗಳಲ್ಲಿಯಾದರೂ ತುಪ್ಪದ ದೀಪವನ್ನು ಹಚ್ಚಬಹುದು ಮತ್ತು ಇತರ ದಿನಗಳಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಬಹುದು. ದೀಪಾವಳಿಯಲ್ಲಿ ಮೊಂಬತ್ತಿ ಅಥವಾ ಮೇಣದ ಹಣತೆಯ ಬದಲು ಮಣ್ಣಿನ ಹಣತೆಗಳಲ್ಲಿ ಎಳ್ಳಿನ ಎಣ್ಣೆ ಮತ್ತು ಹತ್ತಿಯ ಬತ್ತಿಗಳನ್ನು ಹಾಕಿ ಅವುಗಳನ್ನು ಪ್ರಜ್ವಲಿಸಿರಿ, ಒಟ್ಟಿನಲ್ಲಿ ಅವುಗಳ ಜ್ಯೋತಿಗಳಿಂದ ಪ್ರಕ್ಷೇಪಿಸುವ ಚೈತನ್ಯಮಯ ಸ್ಪಂದನಗಳ ನಮಗೆ ಲಾಭವಾಗುವುದು, ಹಾಗೆಯೇ ಹುಟ್ಟುಹಬ್ಬ, ಧಾರ್ಮಿಕ ವಿಧಿ ಇತ್ಯಾದಿ ಪ್ರಸಂಗಗಳಲ್ಲಿ ತುಪ್ಪದ ನೀಲಾಂಜನಗಳಿಂದ ಬೆಳಗಿ. ಇದರಿಂದ ಬೆಳಗಿಸಿಕೊಳ್ಳುವವರಿಗೆ ಸಾತ್ತ್ವಿಕತೆಯ ಲಾಭವಾಗುವುದು.
ಸಂಕ್ಷಿಪ್ತವಾಗಿ ಹೇಳುವುದಾದರೆ ‘ಧರ್ಮಶಾಸ್ತ್ರವು ನೀಡಿದ ನಿಯಮಗಳು ಮನುಷ್ಯನಿಗೆ ಹಿತದಾಯಕವಾಗಿವೆ’, ಎಂಬುದನ್ನು ಗಮನದಲ್ಲಿಟ್ಟು ಆಚಾರಧರ್ಮವನ್ನು ಸರಿಯಾಗಿ ಪಾಲಿಸಿ ಮತ್ತು ಅದರಿಂದ ದೊರಕುವ ಸಾತ್ತ್ವಿಕತೆಯ ಲಾಭವನ್ನು ಪಡೆಯಿರಿ.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೨.೨೦೨೫)





ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಯುನಿವರ್ಸಲ್ ಆರಾ ಸ್ಕ್ಯಾನರ್ ಮಿತಿಗಳ ಹಿನ್ನೆಲೆಯಲ್ಲಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಆಧ್ಯಾತ್ಮಿಕ ಸಂಶೋಧನೆಗಾಗಿ ಲೋಲಕ ಪರೀಕ್ಷೆಯನ್ನು (Pendulum Testing) ಪರಿಚಯಿಸುತ್ತಿದೆ.
ಆಭರಣಗಳನ್ನು ಉಪಯೋಗಿಸುವ ಮಹತ್ವ