ಉಪವಾಸದ ಪದಾರ್ಥಗಳಲ್ಲಿ ಸಾತ್ತ್ವಿಕತೆ ಹೆಚ್ಚಿರುವುದರಿಂದ ಅವುಗಳನ್ನು ಉಪವಾಸದ ಸಮಯದಲ್ಲಿ ಸೇವಿಸುವುದು ಉತ್ತಮ !

‘ಹಿಂದೂ ಧರ್ಮದಲ್ಲಿ ವಿವಿಧ ಹಬ್ಬ, ಉತ್ಸವ, ವ್ರತ ಮುಂತಾದವುಗಳ ಸಮಯದಲ್ಲಿ ಉಪವಾಸ  ಮಾಡಲಾಗುತ್ತದೆ, ಉದಾ. ಮಹಾಶಿವರಾತ್ರಿಯ ದಿನ ಅನೇಕ ಜನರು ಸಂಪೂರ್ಣ ದಿನ ಉಪವಾಸ ಮಾಡುತ್ತಾರೆ. ಹಿಂದೂ ಸ್ತ್ರೀಯರು ವಟಪೂರ್ಣಿಮೆ, ಹರಿತಾಲಿಕೆ ಇತ್ಯಾದಿ ವ್ರತಗಳ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಉಪವಾಸಕ್ಕೆ ನಿಯಮಿತ ಊಟದಲ್ಲಿನ ಪದಾರ್ಥಗಳು, ಉದಾ. ಚಪಾತಿ-ಪಲ್ಯ, ತೊವ್ವೆ-ಅನ್ನ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಉಪವಾಸಕ್ಕೆ ಕೆಲವು ವಿಶಿಷ್ಟ ಪದಾರ್ಥಗಳನ್ನು ಸೇವಿಸುವ ಪರಂಪರೆಯಿದೆ, ಉದಾ. ತುರಿದಗೆಣಸು, ಸಾಬಕ್ಕಿಯ ಕಿಚಡಿ, ಹಣ್ಣುಗಳು ಇತ್ಯಾದಿ. ನಿತ್ಯದ ಊಟದಲ್ಲಿನ ಮತ್ತು ಉಪವಾಸದ ಪದಾರ್ಥಗಳಿಂದ ಪ್ರಕ್ಷೇಪಿಸುವ ಸ್ಪಂದನಗಳನ್ನು ಅಭ್ಯಾಸ  ಮಾಡಲು ಕೆಲವು ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ಲೋಲಕವನ್ನು ಉಪಯೋಗಿಸ ಲಾಯಿತು. ಲೋಲಕದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಬಹುದು. ಈ ಸಂದರ್ಭದಲ್ಲಿನ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.

೧. ನಿತ್ಯದ ಊಟದ ಪದಾರ್ಥಗಳಿಗಿಂತ ಉಪವಾಸದ ಪದಾರ್ಥಗಳಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಿರುವುದು

ಈ ಪ್ರಯೋಗದಲ್ಲಿ ನಿತ್ಯದ ಊಟದಲ್ಲಿನ ಕೆಲವು ಪದಾರ್ಥ ಗಳು ಮತ್ತು ಉಪವಾಸದ ಕೆಲವು ಪದಾರ್ಥಗಳ ಛಾಯಾಚಿತ್ರಗಳನ್ನು ಲೋಲಕದಿಂದ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗಳಲ್ಲಿನ ನೋಂದಣಿಯನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.

ಪ್ರತಿದಿನದ ಊಟದಲ್ಲಿ ಎಲ್ಲ ರೀತಿಯ ಮತ್ತು ಹೊಟ್ಟೆ ತುಂಬುವ ಆಹಾರವನ್ನು ಹೇಳಲಾಗಿದೆ ಮತ್ತು ಉಪವಾಸದಂದು ಸಾತ್ತ್ವಿಕತೆಯನ್ನು ಹೆಚ್ಚಿಸುವ ಮತ್ತು ಕೇವಲ ಹೊಟ್ಟೆಗೆ ಆಧಾರವನ್ನು ನೀಡುವ ಕೆಲವೊಂದು ಪದಾರ್ಥಗಳನ್ನು ಹೇಳಲಾಗಿದೆ.

(ಸದ್ಗುರು) ಡಾ. ಮುಕುಲ ಗಾಡಗೀಳ

‘ಈ ಲೇಖನದಿಂದ ಯಾರಿಗಾದರು ಹೀಗೆ ಪ್ರಶ್ನೆ ಬರಬಹುದು, ‘ಉಪವಾಸದ ಪದಾರ್ಥಗಳು ಇಷ್ಟೊಂದು ಲಾಭದಾಯಕವಾಗಿರುವಾಗ ಪ್ರತಿದಿನ ಊಟ ಮಾಡುವಾಗ ಅವುಗಳನ್ನು ಏಕೆ ಸೇವಿಸುವುದಿಲ್ಲ ? ಇದರ ಉತ್ತರ ಹೀಗಿದೆ, ‘ನಮಗೆ ಋಷಿಮುನಿಗಳು ಪ್ರತಿದಿನದ ಊಟದಲ್ಲಿ ಯಾವ ಆಹಾರವನ್ನು ಹೇಳಿದ್ದಾರೆಯೋ, ಅದು ಸಂಪೂರ್ಣ ಆಹಾರವಾಗಿದೆ. ಯಾವ ಆಹಾರದಿಂದ ನಮಗೆ ಪ್ರೋಟೀನು, ಕೊಬ್ಬು, ಕಾರ್ಬೋಹೈಡ್ರೆಟ್, ಜೀವಸತ್ವಗಳು, ಕ್ಷಾರ ಇತ್ಯಾದಿಗಳು ಸಮತೋಲನದ ಪ್ರಮಾಣದಲ್ಲಿ ಸಿಗುತ್ತವೆಯೋ, ಅದು ಪೋಷಕ ಆಹಾರ ಅಂದರೆ ‘ಸಂಪೂರ್ಣ ಆಹಾರವಾಗಿದೆ. ಈ ಆಹಾರದಿಂದ ನಮಗೆ ಲೋಹ, ಶಕ್ತಿ, ತೇಜ, ಸಂತೋಷ, ಪ್ರತಿಭೆ ಮತ್ತು ಆರೋಗ್ಯ ಸಿಗುತ್ತದೆ. ಈ ಆಹಾರದಿಂದ ಹುಳಿ, ಖಾರ, ಉಪ್ಪು, ಒಗರು, ಸಿಹಿ ಮತ್ತು ಕಹಿ ಈ ೬ ರಸಗಳು ಸಿಗುತ್ತವೆ. ಈ ರಸಗಳಿಂದ ದೇಹದ ಉತ್ತಮ ರೀತಿಯಲ್ಲಿ ಪೋಷಣೆಯಾಗುತ್ತದೆ. ಆದ್ದರಿಂದ ಊಟದ ತಟ್ಟೆಯಲ್ಲಿ ತೊವ್ವೆ, ಅನ್ನ, ಪಲ್ಯ, ಚಪಾತಿ, ಮಜ್ಜಿಗೆ, ಮೊಸರು ಈ ಮುಖ್ಯ ಪದಾರ್ಥಗಳೊಂದಿಗೆ ಉಪ್ಪು, ನಿಂಬೆಹಣ್ಣು, ಕೋಸಂಬರಿ, ಹಪ್ಪಳ ಇಂತಹ ನಂಜಿಕೊಳ್ಳುವ ಪದಾರ್ಥಗಳೂ ಇರುತ್ತವೆ. ಆದರೂ ‘ಯಾವ ಋತುಗಳಲ್ಲಿ ಯಾವ ರಸದ ಆಹಾರವನ್ನು ಸೇವಿಸಬೇಕು ?, ಎಂಬ ಶಾಸ್ತ್ರವೂ ಇದೆ.ಇಂತಹ ಸಂಪೂರ್ಣ ಆಹಾರದ ತುಲನೆಯಲ್ಲಿ ಉಪವಾಸದ ಸಮಯದಲ್ಲಿ ಉಪವಾಸಕ್ಕಾಗಿ ಹೇಳಿದ ಪದಾರ್ಥಗಳನ್ನೇ ಸೇವಿಸಬೇಕು ಮತ್ತು ಅದೂ ಸ್ವಲ್ಪ ಪ್ರಮಾಣದಲ್ಲಿ. ಈ ಪದಾರ್ಥಗಳು ನಮ್ಮ ಸಾತ್ತ್ವಿಕತೆಯನ್ನು ಹೆಚ್ಚಿಸುತ್ತವೆ. ಉಪವಾಸದಂದು ‘ಹೊಟ್ಟೆ ತುಂಬಿಸುವುದು ಅಥವಾ ಪೋಷಕ ಆಹಾರ ಸಿಗುವುದು, ಈ ಸಂಕಲ್ಪನೆ ಇರದೇ, ಕೇವಲ ‘ಹೊಟ್ಟೆಗೆ ಆಧಾರ ನೀಡುವುದು,  ಎಂಬ ಸಂಕಲ್ಪನೆ ಇದೆ. ಉಪವಾಸದಿಂದ ನಾಲಿಗೆಯ ಮೇಲೆ ನಿಯಂತ್ರಣವನ್ನಿಡಲಾಗು ತ್ತದೆ. ಉಪವಾಸ ಮಾಡುವುದು ಲಂಘನದ ಒಂದು ಪ್ರಕಾರವಾಗಿದೆ. ‘ಉಪವಾಸದಿಂದ ಯೌವನವು ಚಿರಕಾಲ ಉಳಿಯುತ್ತದೆ, ಎಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ಉಪವಾಸಕ್ಕಾಗಿ ಧರ್ಮಶಾಸ್ತ್ರದಲ್ಲಿ ಸೀಮಿತ ಪದಾರ್ಥಗಳನ್ನು ಹೇಳಲಾಗಿದೆ.

– ಸದ್ಗುರು ಡಾ. ಮುಕುಲ ಗಾಡಗೀಳ (ರಸಾಯನಶಾಸ್ತ್ರದಲ್ಲಿನ ಪಿಎಚ್.ಡಿ., ಮುಂಬೈ ವಿಶ್ವವಿದ್ಯಾಲಯ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೭.೨೦೨೫)

ಪಕ್ಕದ ಕೋಷ್ಟಕದಲ್ಲಿನ ನೋಂದಣಿಗಳಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು.

೧. ಯಾವುದೇ ಪದಾರ್ಥದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ.

೨. ನಿತ್ಯದ ಊಟದಲ್ಲಿನ ಪದಾರ್ಥಗಳಿಗಿಂತ ಉಪವಾಸದ ಪದಾರ್ಥಗಳಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚು ಕಂಡುಬಂದಿತು. ನಿತ್ಯದ ಊಟದಲ್ಲಿನ ಪದಾರ್ಥಗಳು ಶರೀರದ ಆರೋಗ್ಯಕ್ಕಾಗಿ ಉತ್ತಮವಾಗಿವೆ. ಆದ್ದರಿಂದ ಊಟದಲ್ಲಿ ಆ ಪದಾರ್ಥಗಳನ್ನು ಸೇರಿಸಬೇಕು. ಉಪವಾಸದ ಪದಾರ್ಥಗಳು ಆಧ್ಯಾತ್ಮಿಕ ಆರೋಗ್ಯಕ್ಕಾಗಿ ಉತ್ತಮವಾಗಿವೆ. ಪರೀಕ್ಷಣೆಗಳಿಂದಲೂ  ಕಂಡುಬಂದಿರುವುದೇನೆಂದರೆ, ನಿತ್ಯದ ಪದಾರ್ಥ ಗಳಿಗಿಂತ ಉಪವಾಸದ ಪದಾರ್ಥಗಳಲ್ಲಿ ಸಕಾರಾತ್ಮಕ ಊರ್ಜೆ, ಅಂದರೆ ಸಾತ್ತ್ವಿಕತೆ ಹೆಚ್ಚಿದೆ. ಇದರಿಂದ ‘ಉಪವಾಸಕ್ಕೆ ಉಪವಾಸದ ಪದಾರ್ಥಗಳನ್ನು ಸೇವಿಸುವ ಪರಂಪರೆ ಯೋಗ್ಯವಾಗಿದೆ, ಇದು ಗಮನಕ್ಕೆ ಬರುತ್ತದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೮.೬.೨೦೨೫)

ವಿ-ಅಂಚೆ : [email protected]