ಭಾರತದಲ್ಲಿನ ಪ್ಯಾಲೆಸ್ಟೈನ್ ನ ರಾಯಭಾರಿ ಅಬ್ದುಲ್ಲಾ ಅಬು ಶಾವೇಶ್ ಅವರ ಹೇಳಿಕೆ

ನವದೆಹಲಿ – ಭಾರತದಲ್ಲಿನ ಪ್ಯಾಲೆಸ್ಟೈನ್ ರಾಯಭಾರಿ ಅಬ್ದುಲ್ಲಾ ಅಬು ಶಾವೇಶ್ ಅವರು ಮಾತನಾಡಿ, “ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅರೇಬಿಕ್, ಇಂಗ್ಲಿಷ್ ಮತ್ತು ಹೀಬ್ರೂ ಎಂಬ ಮೂರು ಭಾಷೆಗಳಲ್ಲಿ ಸಂದೇಶ ನೀಡುವ ಮೂಲಕ, ಭಾರತವು ಪ್ಯಾಲೆಸ್ಟೈನ್ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದನ್ನು ತೋರಿಸಿದ್ದಾರೆ. ಪ್ಯಾಲೆಸ್ಟೈನ್ ಗೆ ಮಾನ್ಯತೆ ನೀಡಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಭಾರತ ನಿನ್ನೆ ನಮ್ಮೊಂದಿಗೆ ಇತ್ತು, ಇಂದು ಇದೆ ಮತ್ತು ನಾಳೆಯೂ ಇರುತ್ತದೆ. ವಿಶ್ವದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತದ ಪಾತ್ರವು ಅತ್ಯಂತ ಮಹತ್ವದ್ದಾಗಿದೆ,” ಎಂದು ಹೇಳಿದರು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ನಿಲ್ಲಿಸುವ ಕುರಿತು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 20 ಅಂಶಗಳ ಸೂತ್ರವನ್ನು ಮಂಡಿಸಿದ ಬಗ್ಗೆ ಪ್ರತಿಕ್ರಿಯಿಸುವಾಗ ಶಾವೇಶ್ ಅವರು ಮಾತನಾಡುತ್ತಿದ್ದರು. ಅವರು ಭಾರತ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ಯಾಲೆಸ್ಟೈನ್‌ಗೆ ನೀಡಿದ ಸಹಾಯವನ್ನು ಶ್ಲಾಘಿಸಿದರು.
ಭಾರತದಿಂದ ನಿರೀಕ್ಷೆ!
ರಾಯಭಾರಿ ಶಾವೇಶ್ ಅವರು ಮಾತನಾಡಿ, “ಭಾರತದ ಧ್ವನಿಯನ್ನು ಇಡೀ ಜಗತ್ತು ಕೇಳುತ್ತದೆ. ಯಾವಾಗ ಭಾರತ ನಮ್ಮೊಂದಿಗೆ ನಿಲ್ಲುವುದೂ, ಆಗ ಅದರ ಸಂದೇಶವು ಇಡೀ ಮಧ್ಯ-ಪ್ರಾಚ್ಯಕ್ಕೆ ತಲುಪುತ್ತದೆ. ಭಾರತ ಭವಿಷ್ಯದಲ್ಲಿಯೂ ಶಾಂತಿ ಪ್ರಕ್ರಿಯೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎಂದು ನಾವು ನಂಬುತ್ತೇವೆ,” ಎಂದು ಹೇಳಿದರು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman