ಮಧ್ಯಪ್ರದೇಶದ 27 ಮದರಸಾಗಳಿಂದ 556 ಹಿಂದೂ ಮಕ್ಕಳಿಗೆ ಕುರಾನ್ ಕಲಿಕೆ ! Hindus Madrasa Quran

  • ಹಿಂದೂ ಮಕ್ಕಳ ಮತಾಂತರದ ಪ್ರಯತ್ನ

  • ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಶಿಕ್ಷಣ ವಿಭಾಗದ ಪ್ರಮುಖ ಕಾರ್ಯದರ್ಶಿಗಳ ಬಳಿ ಕೇಳಿದೆ ಉತ್ತರ!

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ 27 ಮದರಸಾಗಳಲ್ಲಿ ಹಿಂದೂ ಮಕ್ಕಳ ಕಾನೂನುಬಾಹಿರ ಮತಾಂತರ ನಡೆಯುತ್ತಿದೆ. 556 ಹಿಂದೂ ಮಕ್ಕಳನ್ನು ಇಸ್ಲಾಂ ಸ್ವೀಕರಿಸಲು ಗುರಿಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಳಿ ದೂರು ನೀಡಲಾಗಿದೆ. ಆಯೋಗವು ಈ ಪ್ರಕರಣವನ್ನು ಪರಿಗಣಿಸಿ ಶಿಕ್ಷಣ ವಿಭಾಗದ ಪ್ರಮುಖ ಕಾರ್ಯದರ್ಶಿಗಳಿಂದ 15 ದಿನಗಳ ಒಳಗೆ ಉತ್ತರ ಕೇಳಿದೆ. ಹಾಗೆಯೇ ಈ ಸಂಬಂಧ ದೂರು ದಾಖಲಿಸುವ ಬೇಡಿಕೆಯನ್ನೂ ಮಾಡಲಾಗಿದೆ.

ಈ ದೂರಿನಲ್ಲಿ, ಮೊರೈನಾ, ಇಸ್ಲಾಮಪುರಾ, ಜೌರಾ ಮತ್ತು ಇತರ ಭಾಗಗಳ ಈ ಮದರಸಾಗಳು ‘ಕಿಶೋರ್ ನ್ಯಾಯ ಅಧಿನಿಯಮ 2015′ ರ ಉಲ್ಲಂಘನೆ ಮಾಡುತ್ತಿವೆ ಎಂದು ಹೇಳಲಾಗಿದೆ. ಆಯೋಗವು ಈ ಪತ್ರದಲ್ಲಿ  ಮದರಸಾಗಳು ಶಿಕ್ಷಣದ ಹಕ್ಕು ಕಾನೂನಿನ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಹಿಂದೂ ಮಕ್ಕಳಿಗೆ ಪ್ರವೇಶ ಏಕೆ ನೀಡಲಾಗುತ್ತಿದೆ? ಹಾಗೆಯೇ ಈ ಮದರಸಾಗಳ ಮೇಲೆ ಕಾನೂನುಬಾಹಿರ ವಿದೇಶಿ ನಿಧಿ ಪಡೆಯುವ ಮತ್ತು ರಾಷ್ಟ್ರವಿರೋಧಿ ಅಂಶಗಳ ಜೊತೆ ಸಂಬಂಧ ಇರುವ ಗಂಭೀರ ಆರೋಪ ಮಾಡಲಾಗಿದೆ.

ಮದರಸಾಗಳು ಶಿಕ್ಷಣ ಕೇಂದ್ರ ಇಲ್ಲದ ಕಾರಣ ರಾಜ್ಯ ಸರಕಾರಗಳು ಮದರಸಾಗಳಿಗೆ ನೀಡಲಾಗುವ ಅನುದಾನಗಳನ್ನು ತಕ್ಷಣ ನಿಲ್ಲಿಸಬೇಕು!

ಆಯೋಗದ ಸದಸ್ಯ ಪ್ರಿಯಂಕ ಕಾನೂನಿಗೋ ಅವರು, ಮದರಸಾಗಳು ಶಿಕ್ಷಣ ಕೇಂದ್ರಗಳಾಗಿರದೇ  ಧಾರ್ಮಿಕ ಸಂಪ್ರದಾಯಗಳನ್ನು ಕಲಿಸುವ ಸ್ಥಳಗಳಾಗಿವೆ. ಹಿಂದೂ ಮಕ್ಕಳಿಗೆ ಕುರಾನ್ ಕಲಿಸುವ ಸಮಸ್ಯೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ರಾಜ್ಯ ಸರಕಾರಗಳು ಮದರಸಾಗಳಿಗೆ ನೀಡಲಾಗುವ ಅನುದಾನಗಳನ್ನು ತಕ್ಷಣ ನಿಲ್ಲಿಸಬೇಕು; ಏಕೆಂದರೆ ಅದು ಸರಕಾರದ ಕೆಲಸ ಅಲ್ಲ. ಆಯೋಗವು ಈಗ ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಿದ್ಧತೆಯಲ್ಲಿದೆ.

ಸಂಪಾದಕೀಯ ನಿಲುವು

  • ಮದರಸಾಗಳಿಂದ ಕುರಾನ್ ಕಲಿಸಲಾಗುತ್ತಿದೆ, ಇದು ತಿಳಿದಿರುವಾಗ ಹಿಂದೂ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಏಕೆ ಕಳುಹಿಸುತ್ತಾರೆ? ಇದರಿಂದ ಹಿಂದೂಗಳಲ್ಲಿ ಎಷ್ಟು ಜಾಗೃತಿ ಮೂಡಿಸುವ ಮತ್ತು ಅವರಿಗೆ ಧರ್ಮಶಿಕ್ಷಣ ನೀಡುವ ಅವಶ್ಯಕತೆ ಇದೆ, ಎನ್ನುವುದು ಗಮನಕ್ಕೆ ಬರುತ್ತದೆ!
  • ಮದರಸಾಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಪ್ರವೇಶ ತೆಗೆದುಕೊಳ್ಳಲು ಕಾನೂನಿನಿಂದ ನಿರ್ಬಂಧವಿದ್ದರೂ, ಈ ರೀತಿಯಾಗಿ ಅವರಿಗೆ ಪ್ರವೇಶ ನೀಡುವವರನ್ನು ಕಾರಾಗೃಹಕ್ಕೆ ಅಟ್ಟಬೇಕು!