
ಕೋಲಕಾತಾ (ಬಂಗಾಳ) – ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸಾಗರದ್ವೀಪದ ಚಕ್ ಫುಲದುಬಿ ಬಜಾರಿನ ಸಾರ್ವಜನಿಕ ದುರ್ಗೋತ್ಸವ ಸಮಿತಿಯ ದುರ್ಗಾಪೂಜಾ ಮಂಟಪದಲ್ಲಿ ‘ಆಪರೇಷನ್ ಸಿಂದೂರ್’ ಕುರಿತು ಪ್ರದರ್ಶನವನ್ನು ಮಾಡಲಾಗಿತ್ತು; ಆದರೆ ಆಡಳಿತವು ಈ ಪ್ರದರ್ಶನವನ್ನು ತೆಗೆದುಹಾಕಲು ಅನಿವಾರ್ಯಗೊಳಿಸಿತು. ಈ ಘಟನೆಯ ನಂತರ ಅಸಮಾಧಾನಗೊಂಡ ಸಮಿತಿಯು ರಾಜ್ಯ ಸರಕಾರದಿಂದ ದೊರೆಯುವ ವಾರ್ಷಿಕ ದುರ್ಗಾಪೂಜಾ ಅನುದಾನವನ್ನು ಹಿಂತಿರುಗಿಸಲು ನಿರ್ಧರಿಸಿತು. ಈ ವರ್ಷ ರಾಜ್ಯಾದ್ಯಂತ ಪ್ರತಿಯೊಂದು ದುರ್ಗಾಪೂಜಾ ಸಮಿತಿಗೆ 1 ಲಕ್ಷ 10 ಸಾವಿರ ರೂಪಾಯಿ ಅನುದಾನ ದೊರೆತಿತ್ತು.
🚫 Bengal administration removes ‘#OperationSindoor’ display at Durga Puja
📍 South 24 Parganas — pandal showcased India’s victory over Pakistan
🔺 Admin forced removal
🇮🇳 Symbol of Indian valour
❗Opposing it is treachery
❓ How much more before this Government is dissolved?… pic.twitter.com/QMQ2TbNmyc— Sanatan Prabhat (@SanatanPrabhat) September 28, 2025
ಪ್ರದರ್ಶನವನ್ನು ವಿರೋಧಿಸುವವರ ಮೇಲೆ ದೇಶದ್ರೋಹದ ಕ್ರಮವಾಗಬೇಕು! – ಭಾಜಪ
ಈ ಘಟನೆಯ ಕುರಿತು ಕೇಂದ್ರ ಸಚಿವ ಮತ್ತು ಭಾಜಪ ಮಾಜಿ ರಾಜ್ಯಾಧ್ಯಕ್ಷರಾದ ಸುಕಾಂತ ಮಜುಮ್ದಾರ ಅವರು ಮಾತನಾಡಿ, ಆಡಳಿತವು ದುರ್ಗಾಪೂಜಾ ಮಂಟಪದ ಪ್ರದರ್ಶನವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆಪರೇಷನ್ ಸಿಂದೂರ್ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯ ಪರಾಕ್ರಮದ ಸಂಕೇತವಾಗಿದೆ. ಇದನ್ನು ವಿರೋಧಿಸುವವರ ಮೇಲೆ ದೇಶದ್ರೋಹದ ಕ್ರಮ ಆಗಬೇಕು ಎಂದು ಹೇಳಿದರು.
ತೃಣಮೂಲದ ವಿರೋಧ ಮತ್ತು ಸ್ಪಷ್ಟೀಕರಣ
ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವರಾದ ಬಂಕಿಂ ಹಾಜರಾ ಅವರು ಈ ಘಟನೆಯ ಬಗ್ಗೆ, ಎಲ್ಲೆಡೆ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಈ ಪೂಜಾ ಸಮಿತಿಯು ಭಾಜಪಕ್ಕೆ ಸಂಬಂಧಿಸಿದ್ದು, ರಾಜಕೀಯ ಉದ್ದೇಶಗಳಿಗಾಗಿ ತೃಣಮೂಲ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದರು.
ಕೋಲಕಾತಾದಲ್ಲಿಯೂ ‘ಆಪರೇಷನ್ ಸಿಂದೂರ್’ ಪ್ರದರ್ಶನ!
ಉತ್ತರ ಕೋಲಕಾತಾದ ಸಂತೋಷ ಮಿತ್ರಾ ಸ್ಕ್ವೇರ್ ಪೂಜಾ ಸಮಿತಿಯು ಕೂಡ ‘ಆಪರೇಷನ್ ಸಿಂದೂರ್’ ವಿಷಯದ ಮೇಲೆ ಪ್ರದರ್ಶನವನ್ನು ಏರ್ಪಡಿಸಿದೆ. ಇದರ ಆಯೋಜಕರು ಭಾಜಪ ಕಾರ್ಪೊರೇಟರ್ ಸಜಲ ಘೋಷ್ ಆಗಿದ್ದಾರೆ. ಆಡಳಿತವು ಅನೇಕ ಬಾರಿ ಈ ಸಮಿತಿಯ ಮೇಲೆ ಒತ್ತಡ ಹೇರಿತ್ತು ಎಂದು ಸಜಲ್ ಘೋಷ್ ತಿಳಿಸಿದರು.
ಸಂಪಾದಕೀಯ ನಿಲುವುಆಪರೇಷನ್ ಸಿಂದೂರ್ ನ ಪ್ರದರ್ಶನವೆಂದರೆ ಭಾರತವು ಪಾಕಿಸ್ತಾನವನ್ನು ಸೋಲಿಸಿದ ಶೌರ್ಯವಾಗಿದೆ. ಅದನ್ನು ಯಾರಾದರೂ ಪ್ರದರ್ಶಿಸಲು ನಿರಾಕರಿಸಿದರೆ, ಅದು ದೇಶದ್ರೋಹವೇ ಸರಿ. ಇಂತಹ ದೇಶದ್ರೋಹವನ್ನು ತೃಣಮೂಲ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಇನ್ನೂ ಯಾವ ಪಾಪಗಳು ಆದ ನಂತರ ಈ ಸರಕಾರ ವಿಸರ್ಜನೆಯಾಗುವುದು? ಕೇಂದ್ರ ಸರಕಾರ ಇನ್ನು ಯಾವುದಕ್ಕೆ ಕಾಯುತ್ತಿದೆ? ಎನ್ನುವ ಪ್ರಶ್ನೆಗಳು ದೇಶಪ್ರೇಮಿ ಹಿಂದುಗಳಿಗೆ ಕಾಡುತ್ತಿದೆ! |
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!