ಪಹಲ್ಗಾಮ್ ದಾಳಿಗೆ ಮುನ್ನ ಲಷ್ಕರ್-ಎ-ತೊಯ್ಬಾ ಮುಖ್ಯ ಭಯೋತ್ಪಾದಕನು ಪ್ರಸಾರ ಮಾಡಿದ್ದ ವಿಡಿಯೋ ಬಹಿರಂಗ

ಇಸ್ಲಾಮಾಬಾದ (ಪಾಕಿಸ್ತಾನ) – ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಮುಖ್ಯ ಭಯೋತ್ಪಾದಕ ಸೈಫುಲ್ಲಾ ಕಸೂರಿಯ ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಅವನು ಭಾರತ ಮತ್ತು ಹಿಂದೂಗಳ ವಿರುದ್ಧ ವಿಷಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬರುತ್ತದೆ. ಅವನು ಭಾರತದಿಂದ ಹಿಂದೂಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ, ಇಲ್ಲಿ ಇಸ್ಲಾಂನ ರಾಜ್ಯವನ್ನು ಸ್ಥಾಪಿಸುವ ಘೋಷಣೆ ಮಾಡಿದ್ದಾನೆ. ಈ ವಿಡಿಯೋ ಪಹಲ್ಗಾಮ್ ನಲ್ಲಿ ನಡೆದ ದಾಳಿಯ ಕೆಲವು ದಿನಗಳ ಮೊದಲು ಬಂದಿದೆ ಎಂದು ಹೇಳಲಾಗುತ್ತಿದೆ. ಇದರಿಂದ, ಅಮಾಯಕ ಹಿಂದೂ ಪ್ರವಾಸಿಗರ ಮೇಲೆ ನಡೆದ ಈ ಅಮಾನವೀಯ ದಾಳಿಯ ಸಂಚನ್ನು ಪಾಕಿಸ್ತಾನದಲ್ಲಿಯೇ ರೂಪಿಸಲಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಕಸೂರಿ ತನ್ನ ಭಾಷಣದಲ್ಲಿ, ತಾನು ಲಷ್ಕರ್-ಎ-ತೊಯ್ಬಾದ ಮುರಿದಕೆ ಪ್ರಧಾನ ಕಛೇರಿಯಿಂದ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಾನೆ. ಪಹಲ್ಗಾಮ್ ದಾಳಿಯ ನಂತರ ಭಾರತವು ‘ಆಪರೇಷನ್ ಸಿಂದೂರ್’ ಅಡಿಯಲ್ಲಿ ದಾಳಿ ಮಾಡಿ ಆ ಪ್ರದೇಶವನ್ನು ನಾಶಪಡಿಸಿತ್ತು. ನಂತರ ಪಾಕಿಸ್ತಾನ ಸೇನೆಯು, ಆ ಸ್ಥಳವು ಭಯೋತ್ಪಾದಕ ನೆಲೆಯಲ್ಲ, ಬದಲಿಗೆ ಮಸೀದಿ ಎಂದು ಸುಳ್ಳು ಹೇಳಿತ್ತು.
ಇಸ್ಲಾಂನ ರಾಜ್ಯ ತರುವ ಬೆದರಿಕೆ
ಈ ವಿಡಿಯೋದಲ್ಲಿ ಕಸೂರಿ, ಭಯೋತ್ಪಾದಕರ ಪ್ರವಾಹವು ಎಂದಿಗೂ ನಿಲ್ಲುವುದಿಲ್ಲ. ಅದು ನಿರಂತರವಾಗಿ ಮುಂದುವರಿಯುತ್ತದೆ ಮತ್ತು ಅವರು ಭಾರತದ ಮೇಲೆ ಇಸ್ಲಾಂನ ಧ್ವಜವನ್ನು ಹಾರಿಸದೆ ನಿಲ್ಲುವುದಿಲ್ಲ ಎಂದು ಹೇಳುತ್ತಾನೆ. ಆ ಸಮಯ ಹತ್ತಿರ ಬಂದಿದೆ ಮತ್ತು ಯಾರೂ ನಿರಾಶರಾಗಬಾರದು ಅಥವಾ ಕೀಳಾಗಿ ಕಾಣಬಾರದು ಎನ್ನುತ್ತಾನೆ.
ಹಿಂದೂಗಳ ಸಂಹಾರದ ಬಹಿರಂಗ ಬೆದರಿಕೆ
ಭಾರತೀಯ ಹಿಂದೂಗಳ ವಿರುದ್ಧ ವಿಷಕಾರಿ ಭಾಷೆಯನ್ನು ಬಳಸುತ್ತಾ ಕಸೂರಿ, “ನಾವು ಪ್ರತಿ ಕ್ಷೇತ್ರದಲ್ಲಿಯೂ ಶತ್ರುವನ್ನು ಸೋಲಿಸಿದ್ದೇವೆ. ಈ ವಿಗ್ರಹಾರಾಧಕ ಹಿಂದೂಗಳು ನಮ್ಮ ಮುಂದೆ ಏನು ನಿಲ್ಲಲು ಸಾಧ್ಯ? ಭಾರತದಿಂದ ಈ ಹಿಂದೂಗಳ ಸಂಪೂರ್ಣ ನಿರ್ಮೂಲನೆಯಾಗಲಿದೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ ಇಸ್ಲಾಂನ ರಾಜ್ಯವು ಸ್ಥಾಪನೆಯಾಗಲಿದೆ” ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಅವನು ಪಾಕಿಸ್ತಾನದ ನೆಲವನ್ನು ಭಯೋತ್ಪಾದನೆಗಾಗಿ ಬಳಸಲು ಸಾಧ್ಯವಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿ, ಅದನ್ನು ‘ಅಲ್ಲಾಹನ ಕೃಪೆ’ ಎಂದು ಕರೆದಿದ್ದಾನೆ.
ಸಂಪಾದಕೀಯ ನಿಲುವುಇದರಿಂದ, ಪಹಲ್ಗಾಮ್ ದಾಳಿಯನ್ನು ಪಾಕಿಸ್ತಾನದ ಭಯೋತ್ಪಾದಕರು ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತ ಇನ್ನೂ ಯಾವುದಕ್ಕಾಗಿ ದಾರಿ ಕಾಯುತ್ತಿದೆ? |
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್