‘ಕ್ರಿಮ್ಸನ್ ಕ್ರೆಸೆಂಟ್ – ದಿ ಲಾಸ್ಟ್ ಕ್ವಾರ್ಟರ್’ ಪ್ರಸಾರವಾಯಿತು : ಸಾಕ್ಷ್ಯಚಿತ್ರದ ಮೂಲಕ ಕೇಳಿದ ಪ್ರಶ್ನೆ !
|
‘ಕ್ರಿಮ್ಸನ್ ಕ್ರೆಸೆಂಟ್ – ದಿ ಲಾಸ್ಟ್ ಕ್ವಾರ್ಟರ್’ ಎಂಬ ಸಾಕ್ಷ್ಯಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ ರಾಜಧಾನಿಯಲ್ಲಿರುವ ‘ಪ್ರೆಸ್ ಕ್ಲಬ್ ಆಫ್ ಇಂಡಿಯಾ’ದಲ್ಲಿ ಒಂದು ಗಂಟೆ ನಲವತ್ತೈದು ನಿಮಿಷಗಳ ಈ ಆಂಗ್ಲ ಭಾಷೆಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಲಾಯಿತು. ‘ಸೌದಿ ಅರೇಬಿಯಾದ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ (ಎಮ್.ಬಿ.ಎಸ್.) ಇವರಿಂದ ಇಸ್ಲಾಮಿಕ್ ಜಗತ್ತಿನಲ್ಲಿ ಅತ್ಯಂತ ಮಹತ್ವದ ಸೈದ್ಧಾಂತಿಕ ಬದಲಾವಣೆಗಳನ್ನು ಶಾಂತಿಯುತವಾಗಿ ತರಲು ಸಾಧ್ಯವಿದೆಯೆ ?’ ಎಂಬ ಪ್ರಶ್ನೆಯನ್ನು ಈ ಸಾಕ್ಷ್ಯಚಿತ್ರದಲ್ಲಿ ಕೇಳಲಾಗಿತ್ತು. ಅನೇಕ ದಶಕಗಳಿಂದ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಮದರಸಾಗಳಲ್ಲಿ ಮೂಲಭೂತವಾದಿ ವಹಾಬಿ ಸಿದ್ಧಾಂತವನ್ನು (ವಹಾಬಿ ಸಿದ್ಧಾಂತವು ಕುರಾನ್ ಮತ್ತು ಸುನ್ನತ್ ನಲ್ಲಿರುವ ಬರಹಗಳ ಅಕ್ಷರಶಃ ಅರ್ಥಕ್ಕೆ ಒತ್ತು ನೀಡುತ್ತದೆ) ಪ್ರಸಾರ ಮಾಡುತ್ತಿದ್ದ ಸೌದಿ ಅರೇಬಿಯಾ ಇಂದು ‘ಎಮ್.ಬಿ.ಎಸ್.’ ನಾಯಕತ್ವದಲ್ಲಿ ಮೂಲಭೂತವಾದಿ ಇಸ್ಲಾಮ್‌ನಲ್ಲಿ ಸುಧಾರಣೆ ತರುವುದೇ ? ಎಂಬ ವಿಚಾರವನ್ನು ಖ್ಯಾತ ನಿರ್ದೇಶಕ ಮತ್ತು ಪತ್ರಕರ್ತ ಮಯಾಂಕ್ ಜೈನ್ ಅವರು ಈ ಸಾಕ್ಷ್ಯಚಿತ್ರದ ಮೂಲಕ ಇಟ್ಟಿದ್ದಾರೆ. ಅವರು ಈ ಸಾಕ್ಷ್ಯಚಿತ್ರದ ಲೇಖಕರು ಮತ್ತು ನಿರ್ದೇಶಕರಾಗಿದ್ದಾರೆ. ಈ ಸಾಕ್ಷ್ಯಚಿತ್ರವು ರಾಬರ್ಟ್ ಸ್ಪೆನ್ಸರ್ ಅವರ ‘ಜಿಹಾದ್ ವಾಚ್’, ‘ಸಂಗಮ್ ಟಾಕೀಸ್’, ‘ಸುದರ್ಶನ್ ನ್ಯೂಸ್’, ನೀರಜ್ ಅತ್ರಿ ಅವರ ‘ಪಾಲಿಟಿಕಲಿ ಇನ್‌ಕರೆಕ್ಟ್’, ‘ಅಪ್‌ವರ್ಡ್’, ‘ಪಿ ಗುರುಜ’, ‘ಪಾಲಿಟಿಕಲ್ ಅಡ್ಡಾ’ ಸೇರಿದಂತೆ ಹಲವಾರು ಪ್ರಸಿದ್ಧ ಯೂಟ್ಯೂಬ್ ಚಾನೆಲ್‌ಗಳ ಮೂಲಕ ಪ್ರಸಾರಗೊಂಡಿದ್ದು, ಇದಕ್ಕೆ ಸಾವಿರಾರು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. |
ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಮಹತ್ವಪೂರ್ಣ ಅಂಶಗಳು !

೧. ನಿಓಮ್ : ಮರುಭೂಮಿಯ ಬದಲಾವಣೆಯ ಪ್ರತಿಬಿಂಬವೇ ?
೧೯೮೯ ರಲ್ಲಿ ಬರ್ಲಿನ್ ಗೋಡೆ ಕೆಡವಿ ಸಾಮ್ಯವಾದಿಯಾಗಿರುವ ಪೂರ್ವ ಜರ್ಮನಿ ಮತ್ತು ಪ್ರಜಾಪ್ರಭುತ್ವದ ಪಶ್ಚಿಮ ಜರ್ಮನಿ ಒಂದಾದಂತೆ, ಸೌದಿ ಅರೇಬಿಯಾದ ಮರುಭೂಮಿಯಲ್ಲಿ ‘ನಿಓಮ್’ ಎಂಬ ಅತಿ ಮಹತ್ವಾಕಾಂಕ್ಷೆಯ ಮತ್ತು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ‘ಸ್ಮಾರ್ಟ್ ಸಿಟಿ’ ನಿರ್ಮಾಣವು ಸೌದಿ ಅರೇಬಿಯಾ ಮೂಲಭೂತವಾದಿ ಇಸ್ಲಾಮ್ ಗೋಡೆಯನ್ನು ಒಡೆಯುವುದೇ ? ಎಂಬ ಗಹನವಾದ ಪ್ರಶ್ನೆಯನ್ನು ನಿರ್ದೇಶಕ ಮತ್ತು ಪತ್ರಕರ್ತ ಮಯಾಂಕ್ ಜೈನ್ ಅವರು ಈ ಸಾಕ್ಷ್ಯಚಿತ್ರದಲ್ಲಿ ಕೇಳಿದ್ದಾರೆ. ಈ ‘ಸ್ಮಾರ್ಟ್ ಸಿಟಿ’ ನಿರ್ಮಾಣಕ್ಕೆ ಬರೋಬ್ಬರಿ ಒಂದೂವರೆ ಟ್ರಿಲಿಯನ್ ಡಾಲರ್, ಅಂದರೆ ೧೩೧ ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದರಿಂದ ವಹಾಬಿ ಸಿದ್ಧಾಂತದ ಪ್ರಸಾರಕ್ಕಾಗಿ ಸೌದಿ ಅರೇಬಿಯಾ ಬಳಿ ಹಣವಿಲ್ಲ ಎಂಬ ವಾದವನ್ನು ‘ಕ್ರಿಮ್ಸನ್ ಕ್ರೆಸೆಂಟ್’ ಮೂಲಕ ಮಂಡಿಸಲಾಗಿದೆ.
ಜೈನ್ ಹೇಳುವಂತೆ, ಇದರಿಂದ ‘ನಿಓಮ್’ ಕೇವಲ ಒಂದು ನಗರ ವಾಗಿ ಉಳಿಯದೆ, ಅದೊಂದು ಕ್ರಾಂತಿಕಾರಿ ಸಾಧನವಾಗುತ್ತದೆ, ಜೊತೆಗೆ ಶಾಂತಿ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ಜೋಡಿಸುತ್ತದೆ.
೨. ವಿವಿಧ ಸಮೀಕ್ಷೆಗಳ ಮೂಲಕ ಮದರಸಾಗಳು ಹಿಂಸಾಚಾರಕ್ಕೆ ಹೇಗೆ ಪ್ರೋತ್ಸಾಹ ನೀಡುತ್ತವೆ ? ಇದರ ಮೇಲೆ ಬೆಳಕು ಚೆಲ್ಲುವುದು !
‘ಕ್ರಿಮ್ಸನ್ ಕ್ರೆಸೆಂಟ್ – ದಿ ಲಾಸ್ಟ್ ಕ್ವಾರ್ಟರ್’ ಒಂದು ಕಠಿಣ ಪ್ರಶ್ನೆಯನ್ನು ಕೇಳುತ್ತದೆ. ಅದು ಹೀಗಿದೆ, ‘ಮದರಸಾಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಧರ್ಮದ ಹೆಸರಿನಲ್ಲಿ ಕೊಲೆ ಮಾಡುವ ಸಾಧ್ಯತೆ ಹೆಚ್ಚಿದೆಯೇ ?’ ‘ಕಾಂಬ್ಯಾಟಿಂಗ್ ಟೆರರಿಸಂ ಸೆಂಟರ್ ಎಂಡ್ ಇಂಟರ್ ನ್ಯಾಷನಲ್ ಕ್ರೈಸಿಸ್ ಗ್ರೂಪ್’ (ಭಯೋತ್ಪಾದನೆಯನ್ನು ಎದುರಿಸುವ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟು ಗುಂಪು) ಪ್ರಸಾರ ಮಾಡಿದ ವರದಿಯ ಪ್ರಕಾರ, ಇಂಡೋನೇμಯ್Áದ ಮದರಸಾಗಳಲ್ಲಿ ಶೇ. ೯೧ ವಿದ್ಯಾರ್ಥಿಗಳು ಧಾರ್ಮಿಕವಾಗಿ ಪ್ರೇರಿತ ಮುಸಲ್ಮಾನೇತರರ ಹತ್ಯೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಇವೆಲ್ಲವೂ ಮುಖ್ಯವಾಹಿನಿಯ ಇಸ್ಲಾಮಿಕ್ ಮದರಸಾಗಳಾಗಿವೆ. ಈ ಹಿಂಸಾತ್ಮಕ ಮನಃಸ್ಥಿತಿ ತರಗತಿಗೆ ಮಾತ್ರ ಸೀಮಿತವಾಗಿಲ್ಲ, ಅದು ನೇರವಾಗಿ ನೆಲದ ಮೇಲಿನ ಹಿಂಸಾಚಾರಕ್ಕೆ ಸಂಬಂಧಿಸಿದೆ. ಸಾಕ್ಷ್ಯಚಿತ್ರವು, ‘೨೦೨೪ ರಲ್ಲಿ ಗಣೇಶಮೂರ್ತಿ ವಿಸರ್ಜನೆಯ ದಿನದಂದು ಭಾರತದ ೧೭ ನಗರಗಳಲ್ಲಿ ಮೆರವಣಿಗೆಗಳ ಮೇಲೆ ನಡೆದ ೧೭ ಸಂಘಟಿತ ದಾಳಿಗಳು ಮದರಸಾಗಳಲ್ಲಿನ ಮೂಲಭೂತವಾದಿ ಶಿಕ್ಷಣದ ಪುರಾವೆಗಳಾಗಿವೆ’ ಎಂದು ಹೇಳಿದೆ. ಇದು ಅಮೂರ್ತ ಅತಿರೇಕವಷ್ಟೇ ಅಲ್ಲ, ಶಿಕ್ಷಣದ ಆಯುಧವಾಗಿದೆ.
೩. ಮುಸಲ್ಮಾನರೇ ಬಲಿಪಶುಗಳು !
ಜಿಹಾದಿ ಭಯೋತ್ಪಾದಕರ ದಾಳಿಗಳಲ್ಲಿ ಹತ್ಯೆಯಾದವರಲ್ಲಿ ಶೇ. ೯೧ ಜನರು ಮುಸಲ್ಮಾನರೇ ಆಗಿದ್ದಾರೆ. ಇದರಿಂದ ಸಾಕ್ಷ್ಯಚಿತ್ರವು, ‘ಇಸ್ಲಾಮ್ನ್ನು ರಕ್ಷಿಸುವ ಬಗ್ಗೆ ಮಾತನಾಡುವ ಸಿದ್ಧಾಂತವು ವಾಸ್ತವದಲ್ಲಿ ಮುಸಲ್ಮಾನ ಜಗತ್ತಿನ ಮೇಲೆ ಆಳವಾದ ರಾಜಕೀಯ, ಆಧ್ಯಾತ್ಮಿಕ ಮತ್ತು ಜನಸಂಖ್ಯಾಶಾಸ್ತ್ರದ ಗಾಯ ಮಾಡಿದೆ’ ಎಂಬ ವಾಸ್ತವವನ್ನು ಹೊರತಂದಿದೆ.
೪. ಉಘೂರ್ ಹತ್ಯಾಕಾಂಡದ ಬಗ್ಗೆ ಇಸ್ಲಾಮಿಕ್ ಜಗತ್ತಿನ ಮೌನ, ಅಂದರೆ ನೈತಿಕ ಹೊಣೆಗಾರಿಕೆಯ ಪತನ !
ಸಾಕ್ಷ್ಯಚಿತ್ರದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದು, ಚೀನಾದ ಶಿನಝಿಯಾಂಗ್ ಪ್ರಾಂತ್ಯದಲ್ಲಿನ ೧ ಕೋಟಿಗೂ ಹೆಚ್ಚು ಉಘುರ್ ಮುಸಲ್ಮಾನರು ಚೀನಿ ಆಡಳಿತದಿಂದ ಅನುಭವಿಸುತ್ತಿರುವ ಅತೀವ ದೌರ್ಜನ್ಯಗಳ ಬಗ್ಗೆ ಮುಸಲ್ಮಾನ ಬಹುಸಂಖ್ಯಾತ ದೇಶಗಳ ಮೌನ ! ಸಾಕ್ಷ್ಯಚಿತ್ರವು ಇದನ್ನು ‘ರಾಜಕೀಯ ತಪ್ಪಲ್ಲ, ಆದರೆ ನೈತಿಕ ಹೊಣೆಗಾರಿಕೆಯ ಪತನ’ ಎಂದು ಬಣ್ಣಿಸಿದೆ.
೫. ಜಿಹಾದಿ ಭಯೋತ್ಪಾದನೆಯಿಂದ ಭಾರತಕ್ಕಾದ ಹಾನಿಯ ಅವಲೋಕನ !
ಸಾಕ್ಷ್ಯಚಿತ್ರದಲ್ಲಿ ‘ಅಸೋಚೆಮ್’, ‘ಏಷ್ಯಾ ಎಕನಾಮಿಕ್ಸ್ ಇನ್ಸ್ಟಿಟ್ಯೂಟ್’ ಮತ್ತು ‘ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಎಂಡ್ ಪೀಸ್’ ನಂತಹ ರಾಷ್ಟ್ರೀಯ-ಅಂತಾರಾಷ್ಟ್ರೀಯ ಸಂಸ್ಥೆಗಳು ನೀಡಿದ ಅಂಕಿ-ಅಂಶಗಳನ್ನು ಹೇಳಲಾಗಿದೆ.
೫ ಅ. ೨೬.೧೧.೨೦೦೮ ರಂದು ಮುಂಬಯಿಯಲ್ಲಾದ ಜಿಹಾದಿ ದಾಳಿಯಿಂದ ೧೦೦ ಬಿಲಿಯನ್ ಡಾಲರ್ (೯ ಲಕ್ಷ ಕೋಟಿ ರೂ.) ನಷ್ಟ ಹಾಗೂ ೨೦ ಬಿಲಿಯನ್ ಡಾಲರ್ (೧.೮ ಲಕ್ಷ ಕೋಟಿ ರೂ.) ವಿದೇಶಿ ಹೂಡಿಕೆಯನ್ನೂ ಕಳೆದುಕೊಂಡಿತು.
೫ ಆ. ೦೧೭ರಲ್ಲಿ ಭಯೋತ್ಪಾದನೆ ಮತ್ತು ಕೋಮುಹಿಂಸೆಯಿಂದ ಭಾರತಕ್ಕೆ ‘ಪಿಪಿಪಿ’ ಗೆ ಸುಮಾರು ೧ ಟ್ರಿಲಿಯನ್ ಡಾಲರ್ (೮೭ ಲಕ್ಷ ೫೦ ಸಾವಿರ ಕೋಟಿ ರೂಪಾಯಿ) ನಷ್ಟವಾಯಿತು. (‘ಪಿಪಿಪಿ’ ಎಂದರೆ ‘ಪರ್ಚೇಸಿಂಗ್ ಪವರ್ ಪ್ಯಾರಿಟಿ’ – ವಿವಿಧ ದೇಶಗಳಲ್ಲಿ ಒಂದು ವಸ್ತುವನ್ನು ಖರೀದಿಸಲು ಎಷ್ಟು ಹಣ ತೆರಬೇಕು ಎಂಬುದನ್ನು ಅಧ್ಯಯನ ಮಾಡಿ, ಆ ಮಾಹಿತಿಯ ಆಧಾರದಲ್ಲಿ ಕರೆನ್ಸಿಗಳನ್ನು ವಸ್ತುನಿಷ್ಠ ಹೋಲಿಸುವ ವಿಧಾನ.) ಈ ಅಂಕಿ-ಅಂಶವು ‘ಜಿಡಿಪಿ’ಯ (ಸಕಲ ದೇಶೀಯ ಉತ್ಪನ್ನದ) ಸುಮಾರು ಶೇ. ೯ ರಷ್ಟು ಆಗಿತ್ತು. ೨೦೨೦ರಲ್ಲಿ ೬೪೬ ಬಿಲಿಯನ್ ಡಾಲರ್ (೫೬ ಲಕ್ಷ ೨೩ ಸಾವಿರ ಕೋಟಿ ರೂಪಾಯಿ) ನಷ್ಟವಾಯಿತು.
೫ ಇ. ಸೌದಿ ಅರೇಬಿಯಾ ಪರಿಹಾರ ನೀಡುವುದೇ ? : ಸಾಕ್ಷ್ಯ ಚಿತ್ರದಿಂದ ಒಂದು ಯುಕ್ತಿವಾದವನ್ನು ಮಂಡಿಸಲಾಗಿದೆ, ಅದೆಂದರೆ ಒಂದು ವೇಳೆ ಸೌದಿ ಅರೇಬಿಯಾ ನಿಜವಾಗಿಯೂ ಇನ್ನುಮುಂದೆ ವಹಾಬಿ ವಿಚಾರಸರಣಿಗೆ ಹಣಕಾಸು ಒದಗಿಸ ದಿದ್ದರೂ, ಕಳೆದ ಹಲವಾರು ದಶಕಗಳಿಂದ ಈ ವಿಚಾರಸರಣಿ ಯಿಂದ ಭಾರತಕ್ಕಾದ ಹಾನಿಗೆ ಅದು ಪರಿಹಾರ ನೀಡುವುದೇ ?
೬. ‘ಕ್ರಿಮ್ಸನ್ ಕ್ರೆಸೆಂಟ್’ ೨೦ ವರ್ಷಗಳ ಹಿಂದಿನ ‘ದಿ ಬಾಂಗ್ಲಾ ಕ್ರೆಸೆಂಟ್’ ಸಾಕ್ಷ್ಯಚಿತ್ರದ ಮುಂದಿನ ವೈಚಾರಿಕ ಭಾಗ !
‘ಕ್ರಿಮ್ಸನ್ ಕ್ರೆಸೆಂಟ್ – ದಿ ಲಾಸ್ಟ್ ಕ್ವಾರ್ಟರ್’ ಎಂಬ ಈ ಸಾಕ್ಷ್ಯ ಚಿತ್ರವು ಮಯಾಂಕ್ ಜೈನ್ ಅವರು ೨ ದಶಕಗಳ ಹಿಂದೆ ನಿರ್ದೇಶಿಸಿದ ‘ದಿ ಬಾಂಗಲಾ ಕ್ರೆಸೆಂಟ್ – ಐ.ಎಸ್.ಐ., ಮದರಸಾಗಳು ಮತ್ತು ಒಳನುಸುಳುವಿಕೆ’ ಎಂಬ ಸಾಕ್ಷ್ಯಚಿತ್ರದ ಮುಂದಿನ ವೈಚಾರಿಕ ಭಾಗವಾಗಿದೆ. ‘ಬಾಂಗ್ಲಾ ಕ್ರೆಸೆಂಟ್’ ನಲ್ಲಿ ಮುಂದೆ ಏನಾಗಬಹುದು ಎಂಬ ಮಾಹಿತಿಯಿದೆ, ‘ಕ್ರಿಮ್ಸನ್ ಕ್ರೆಸೆಂಟ್’ ಏನು ನಡೆಯಿತು ಮತ್ತು ಕೊನೆಗೆ ಏನು ಬದಲಾಗುತ್ತಿದೆ ಎಂಬುದನ್ನು ದಾಖಲಿಸಿದೆ. ನಿರ್ಭೀತ ಪತ್ರಿಕೋದ್ಯಮ ಮತ್ತು ಆಳವಾದ ‘ಗ್ರೌಂಡ್ ರಿಪೋಟಿರ್ಂಗ್’ ಈ ಎರಡೂ ಸಾಕ್ಷ್ಯಚಿತ್ರಗಳ ಪ್ರಮುಖ ಅಂಶಗಳಾಗಿವೆ ಎನ್ನಬಹುದು.
ಮಯಾಂಕ್ ಜೈನ್‌ರಿಂದ ಹಿಂದೂಪರ ಸಂಘಟನೆಗಳಿಗೆ ಕರೆ !‘ಸನಾತನ ಪ್ರಭಾತ’ವು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಶ್ರೀ. ಮಯಾಂಕ್ ಜೈನ್ ಅವರನ್ನು ಸಂಪರ್ಕಿಸಿತು. ಈ ಸಂದರ್ಭದಲ್ಲಿ ಜೈನ್ ಅವರು, ”ಈ ಸಾಕ್ಷ್ಯಚಿತ್ರವನ್ನು ಬಹಳಷ್ಟು ಜನರಿಗೆ ತಲುಪಿಸಲು ಹಿಂದೂಪರ ಸಂಘಟನೆಗಳು ಮುಂದೆ ಬರಬೇಕು. ಸಾಕ್ಷ್ಯಚಿತ್ರವು ಸಮಾಜ ಜಾಗೃತಿಯ ಉತ್ತಮ ಮಾಧ್ಯಮವಾಗಿದೆ. ನಾನು ಈ ಸಾಕ್ಷ್ಯಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದ್ದೇನೆ’’ ಎಂದು ಹೇಳಿದರು. |
ರಾಜಧಾನಿ ದೆಹಲಿಯ ಒಂದು ಮದರಸಾದಲ್ಲಿ ‘ಕಾಫಿರ್’ ಪದದ ಬಗ್ಗೆ ಪ್ರಶ್ನಿಸಿದಾಗ ನಿರ್ದೇಶಕರಿಗೆ ಬೆದರಿಕೆ !
ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ನಿರ್ದೇಶಕ ಶ್ರೀ. ಮಯಾಂಕ್ ಜೈನ್ ಅವರು ಹರಿಯಾಣದ ನೂಹ್, ರಾಜಧಾನಿ ದೆಹಲಿಯ ಸುಂದರನಗರಿ, ಹಾಗೆಯೇ ಬಂಗಾಲ ಮತ್ತು ಆಸ್ಸಾಂನ ಕೆಲವು ಸ್ಥಳಗಳಿಗೆ ಪ್ರಯಾಣ ಮಾಡಿದರು. ಆಗ ಅವರು ಮನೆಗಳು, ಮದರಸಾಗಳು ಮತ್ತು ನಗರದ ಒಳಪ್ರದೇಶಗಳಲ್ಲಿ ಕ್ಯಾಮೆರಾದ ಮೂಲಕ ಸಂಭಾಷಣೆಗಳನ್ನು ಸೆರೆಹಿಡಿದರು. ಅನೇಕ ಸಂದರ್ಶನಗಳಲ್ಲಿ ಮದರಸಾಗಳ ವಿದ್ಯಾರ್ಥಿಗಳು ಮುಸಲ್ಮಾನೇತರರನ್ನು ‘ಕಾಫಿರ್’ (ಅಲ್ಲಾನನ್ನು ನಂಬದವರು) ಎಂದು ಸ್ಪಷ್ಟವಾಗಿ ಉಲ್ಲೇಖಿಸಿದರು, ಜೊತೆಗೆ ‘ದಾವತ್’ (ದಾವಾ, ಅಂದರೆ ಮುಸಲ್ಮಾನೇತರರನ್ನು ಇಸ್ಲಾಮ್‌ಗೆ ಆಹ್ವಾನಿಸುವ ಕೆಲಸ) ಮತ್ತು ‘ಜಿಹಾದ್’ (ಮುಸಲ್ಮಾನೇತರರ ವಿರುದ್ಧದ ಯುದ್ಧ) ಬಗ್ಗೆಯೂ ವಿದ್ಯಾರ್ಥಿಗಳು ಮಾತನಾಡಿದರು.
ಸುಂದರನಗರಿಯಲ್ಲಿ ಜೈನ್ ಅವರು ಒಂದು ಮದರಸಾದ ಶಿಕ್ಷಕ ಮತ್ತು ವಿದ್ಯಾರ್ಥಿಗಳ ‘ಕಾಫಿರ್’ ಪರಿಕಲ್ಪನೆಯ ಬಗ್ಗೆ ಸಂದರ್ಶನ ಮಾಡುತ್ತಿದ್ದಾಗ, ಜನಸಮೂಹ ಸೇರಿ ಗದ್ದಲ ಶುರು ಮಾಡಿತು. ಇದರಿಂದ ಸಂದರ್ಶನವನ್ನು ನಿಲ್ಲಿಸಬೇಕಾಯಿತು. ಜನರ ವರ್ತನೆ ಬೆದರಿಕೆಯಾಗಿದ್ದರೂ, ಸಂದೇಶ ಸ್ಪಷ್ಟವಾಗಿತ್ತು; ‘ಇಂತಹ ಪ್ರಶ್ನೆಗಳನ್ನು ಕೇಳಬಾರದು’. ಈ ಘಟನೆಯನ್ನೂ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು