(ಜೆನ್-ಝೀ ಎಂದರೆ 1996 ಮತ್ತು 2010ರ ನಡುವೆ ಜನಿಸಿದ ಪೀಳಿಗೆ)
(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ)

ತೆಹ್ರಾನ್ (ಇರಾನ್) – ಸೆಪ್ಟೆಂಬರ್ 2022ರಲ್ಲಿ 22 ವರ್ಷದ ಮಹ್ಸಾ ಅಮಿನಿ ಅವರು ಪೋಲಿಸ ಕಸ್ತಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಳಿಕ ಇರಾನ್ಲ್ ನಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ಹಲವು ತಿಂಗಳುಗಳ ಕಾಲ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಇರಾನ್ ನೂರಾರು ನಾಗರಿಕರನ್ನು ಕೊಂದಿತು ಮತ್ತು ಸಾವಿರಾರು ಜನರನ್ನು ಬಂಧಿಸಿತು. ಆದರೆ, ಇಂದು 3 ವರ್ಷಗಳ ನಂತರ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ಹೆಚ್ಚಿನ ಇರಾನ್ ನ ನಗರಪ್ರದೇಶಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದನ್ನು ನಿಲ್ಲಿಸಿದ್ದಾರೆ. ಇಂದು ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್ ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳು ಹಿಜಾಬ್ ಇಲ್ಲದೆ ಓಡಾಡುತ್ತಿರುವುದು ಕಂಡುಬರುತ್ತಿದೆ. ‘ಜೆನ್-ಝೀ’ನ ಧೈರ್ಯ, ಸಾಮಾಜಿಕ ಬದಲಾವಣೆ ಮತ್ತು ರಾಜಕೀಯ ಒತ್ತಡದ ಮುಂದೆ ಇರಾನ್ ಸರಕಾರ ಬಾಗಿದೆ. ಈಗ ಇಲ್ಲಿ ಮಹಿಳೆಯರು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸುವುದು ಮತ್ತು ಕೂದಲನ್ನು ಬಿಟ್ಟುಬಿಡುವುದು ಸಾಮಾನ್ಯವಾಗಿದೆ. ಹೆಣ್ಣುಮಕ್ಕಳು ಈಗ ದ್ವಿಚಕ್ರ ವಾಹನಗಳನ್ನೂ ಓಡಿಸುತ್ತಿದ್ದಾರೆ. ಹಿಂದೆ, ಇವೆಲ್ಲವನ್ನೂ ನಿಷಿದ್ಧವೆಂದು ಪರಿಗಣಿಸಲಾಗಿತ್ತು.
🇮🇷 Iran faces undeclared hijab relaxation due to Gen-Z defiance & wartime necessity.
🔻 Trigger: #MahsaAmini’s death (2022) → mass protests
🔻 Now: Women appear unveiled in cities, airports, cafés, hotels
🔻 Parliament’s harsh law (2024) blocked by Prez Pezeshkian
🔻… https://t.co/JM9Rrmgkpb pic.twitter.com/CZxZU28oIB
— Sanatan Prabhat (@SanatanPrabhat) September 18, 2025
ಇಸ್ರೇಲ್ ಯುದ್ಧದ ನಂತರ ಮಹಿಳೆಯರಿಗೆ ರಿಯಾಯಿತಿ ನೀಡುವುದು ಸರಕಾರದ ಅನಿವಾರ್ಯತೆ!
ಡಿಸೆಂಬರ್ 2024 ರಲ್ಲಿ, ಇರಾನ್ ಸಂಸತ್ತು ಕಠಿಣ ಹಿಜಾಬ್ ಕಾನೂನನ್ನು ಜಾರಿಗೊಳಿಸಿತು. ಅದನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ನಿಯಮವಿತ್ತು. ಆದರೂ, ಅಧ್ಯಕ್ಷ ಮಸೂದ್ ಪೆಜೇಶ್ಕಿಯಾನ್ ಅದರ ಅಸ್ಪಷ್ಟತೆಯನ್ನು ಉಲ್ಲೇಖಿಸಿ ಅದನ್ನು ತಡೆಹಿಡಿದರು. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅನುಮೋದನೆಯಿಲ್ಲದೆ ಇದು ಅಸಾಧ್ಯವೆಂದು ಹೇಳಲಾಗುತ್ತದೆ. ನಂತರ, ಜೂನ್ 2025 ರಲ್ಲಿ, ಇಸ್ರೇಲ್ ವಿರುದ್ಧದ 12 ದಿನಗಳ ಯುದ್ಧದ ನಂತರ ಇರಾನ್ ಸರಕಾರಕ್ಕೆ ಮಹಿಳೆಯರಿಗೆ ರಿಯಾಯಿತಿಗಳನ್ನು ನೀಡುವುದು ಅನಿವಾರ್ಯವಾಯಿತು. ಯುದ್ಧದ ಸಮಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಅವಶ್ಯಕತೆಯೂ ಹೆಚ್ಚಾಗಿದೆ.
ಸಂಪಾದಕೀಯ ನಿಲುವುಇರಾನ್ಗೆ ತನ್ನ ಕಟ್ಟರವಾದಿ ದೃಷ್ಟಿಕೋನವನ್ನು ಬದಲಾಯಿಸುವ ಅನಿವಾರ್ಯತೆ |
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ