ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೋಣೆಯಲ್ಲಿನ ದೇವತೆಗಳ ಮೂರ್ತಿಗಳಲ್ಲಿ ಆಗಿರುವ ಬದಲಾವಣೆ ಮತ್ತು ಕೋಣೆ ಬಗ್ಗೆ ಅರಿವಾದ ಅಂಶಗಳು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ನಾನು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಕೋಣೆಗೆ ಸೇವೆಯ ನಿಮಿತ್ತ ಆಗಾಗ ಹೋಗುತ್ತಿರುತ್ತೇನೆ. ಅವರ ಕೋಣೆಯಲ್ಲಿ ಒಂದು ಮೇಜಿನ ಮೇಲೆ ಶ್ರೀಕೃಷ್ಣನ ಮರದ ವಿಗ್ರಹ ಮತ್ತು ಗುರುಪಾದುಕೆಗಳಿವೆ, ಹಾಗೆಯೇ ಇನ್ನೊಂದು ಮೇಜಿನ ಮೇಲೆ ಶ್ರೀ ಕಾಲಭೈರವನ ದಂಡ, ದೇವಿಯ ಮಾರಕ ರೂಪದ ವಿಗ್ರಹ, ಶ್ರೀ ಗಣೇಶನ ೨ ಮೂರ್ತಿಗಳು) ಮತ್ತು ಶ್ರೀ ಕಾರ್ತೀಕೇಯ ಮುಂತಾದ ದೇವತೆಗಳ ವಿಗ್ರಹಗಳಿವೆ. ಇವೆಲ್ಲವುಗಳ ನಿರೀಕ್ಷಣೆಯನ್ನು ಮಾಡುವಾಗ ಕೆಲವು ವಿಗ್ರಹಗಳಲ್ಲಿ ನನಗೆ ಅರಿವಾದ ಬದಲಾವಣೆಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಕೋಣೆಯಲ್ಲಿನ ವಿಗ್ರಹಗಳಲ್ಲಿ ಅರಿವಾದ ಬದಲಾವಣೆಗಳು

೧ ಅ. ಶ್ರೀಕೃಷ್ಣನ ವಿಗ್ರಹದ ಹೊಳಪು ಹೆಚ್ಚಾಗಿರುವುದು ಅರಿವಾಗುವುದು : ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಕೋಣೆಯಲ್ಲಿನ ಶ್ರೀಕೃಷ್ಣನ ವಿಗ್ರಹವು ಹೆಚ್ಚು ಹಸನ್ಮುಖವಾಗಿದೆ ಮತ್ತು ಹೊಳಪು ಹೆಚ್ಚಾಗಿರುವುದು ಅರಿವಾಯಿತು. ವಿಗ್ರಹದತ್ತ ನೋಡಿದಾಗ ಅದರ ಕಣ್ಣುಗಳ ಮತ್ತು ಮುಖದ ಮೇಲಿನ ಭಾವವು ನಮ್ಮನ್ನು ಆಕರ್ಷಿಸುತ್ತದೆ. ಆದ್ದರಿಂದ ವಿಗ್ರಹದ ಕಡೆಗೆ ‘ನೋಡುತ್ತಲೇ ಇರಬೇಕು’, ಎಂದೆನಿಸುತ್ತದೆ.

೧ ಆ. ದೇವಿಯ ವಿಗ್ರಹ

೧ ಆ ೧. ದೇವಿಯ ರೂಪವು ಮಾರಕವಾಗಿದ್ದರೂ ಕೆಲವೊಮ್ಮೆ ಅವಳು ಪ್ರೇಮಮಯಿ ಮತ್ತು ತಾರಕವೆನಿಸುವುದು : ಈ ಮೂರ್ತಿಯಲ್ಲಿ ಕಾಲಕ್ಕನುಸಾರ ಶಕ್ತಿಯ ಅರಿವಾಗುತ್ತದೆ. ದೇವಿಯ ಮುಖವು ರಕ್ತವರ್ಣದ್ದಾಗಿದ್ದು, ಅವಳು ನಾಲಿಗೆಯನ್ನು ಹೊರಗೆ ತೆಗೆದಿದ್ದಾಳೆ. ಅವಳ ‘ದೊಡ್ಡ ಕಣ್ಣುಗಳು, ಕೊರಳಿನಲ್ಲಿ ರುಂಡಮಾಲೆ ಮತ್ತು ಉದ್ದ ಬಿಟ್ಟಿರುವ ಕೂದಲುಗಳು’, ಈ ರೀತಿ ದೇವಿಯ ರೂಪವಾಗಿದೆ. ದೇವಿಯ ರೂಪವು ಮಾರಕವಾಗಿದ್ದರೂ ಕೆಲವೊಮ್ಮೆ ದೇವಿಯು ಪ್ರೇಮಮಯಿ ಮತ್ತು ತಾರಕವೆನಿಸುತ್ತಾಳೆ.

೧ ಆ ೨. ದೇವಿಯ ತಾರಕ ಮತ್ತು ಮಾರಕ ರೂಪ ಅರಿವಾಗುವ ಹಿಂದಿನ ಕಾರಣ : ಒಮ್ಮೆ ನನ್ನ ಮನಸ್ಸಿನಲ್ಲಿ, ‘ದೇವಿಯು ಅಸುರರನ್ನು ಸಂಹರಿಸುತ್ತಾಳೆ, ಹಾಗೆಯೇ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಸಾಧಕರ ಸ್ಥೂಲ ಮತ್ತು ಸೂಕ್ಷ್ಮ ಅಹಂಕಾರವನ್ನು ಸಂಹರಿಸುತ್ತಾರೆ, ಎಂಬ ವಿಚಾರ ಬಂದಿತು. ನಾವು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಪ್ರೀತಿಯನ್ನು ಅನುಭವಿಸುತ್ತೇವೆ, ಹಾಗೆಯೇ ಸ್ಸಾಧಕರ ತೀವ್ರ ಸ್ವಭಾವದೋಷ ಮತ್ತು ಅಹಂನಿಂದಾಗುವ ಅಯೋಗ್ಯ ಮತ್ತು ಗಂಭೀರ ತಪ್ಪುಗಳಿಗಾಗಿ ಅಷ್ಟೇ ಕಠೋರವಾಗಿ ಅವರು ಅರಿವು ಮಾಡಿಕೊಡುತ್ತಾರೆ. ಈ ಕಠೋರತೆಯ ಹಿಂದೆಯೂ ಅವರ ಪ್ರೀತಿಯೇ ಇರುತ್ತದೆ. ‘ಸಾಧಕರ ಸಾಧನೆಯು ತಪ್ಪುಗಳಿಂದ ಖರ್ಚು ಆಗಬಾರದು’, ಎಂಬ ಅವರ ವಿಚಾರವಿರುತ್ತದೆ. ಆದ್ದರಿಂದ ‘ದೇವಿಯ ರೂಪವೂ ನನಗೆ ಕೆಲವೊಮ್ಮೆ ತಾರಕ, ಕೆಲವೊಮ್ಮೆ ಮಾರಕವಾಗಿರುವುದು ಅರಿವಾಗುತ್ತದೆ’, ಎಂದು ಅನಿಸುತ್ತದೆ.

೧ ಆ ೩. ಶ್ರೀ ಕಾಲಭೈರವನ ದಂಡ : ಈ ದಂಡವು ಮೊದಲು ಆಶ್ರಮದ ಪರಿಸರದಲ್ಲಿ ಕಟ್ಟಿದ ಗುಮ್ಮಟದಲ್ಲಿತ್ತು. ನಂತರ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಕೋಣೆಯಲ್ಲಿ ಇಟ್ಟಿದ್ದಾರೆ; ಏಕೆಂದರೆ ‘ಈ ದಂಡವನ್ನು ಇಡಲು ಇದೇ ಯೋಗ್ಯ ಜಾಗ’, ಎಂದು ಸಂತರು ಹೇಳಿದರು.

ಕು. ಮೇಘಾ ಚವ್ಹಾಣ

೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೋಣೆಯ ಬಗ್ಗೆ ಅರಿವಾದ ಅಂಶಗಳು

ಹಗಲಿರುಳು ಕಾರ್ಯನಿರತವಾಗಿರುವ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಕೋಣೆ ಅಂದರೆ ರಣಕ್ಷೇತ್ರವಾಗಿದೆ. ಇಲ್ಲಿ ಸುರಾಸುರರ ಸೂಕ್ಷ್ಮಯುದ್ಧ ನಡೆಯುತ್ತಿರುತ್ತದೆ. ಇದರಿಂದ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರಿಗೆ ‘ಗಂಟಲು ಒಣಗುವುದು, ಒಳಗಿನಿಂದ ತುಂಬಾ ಉಷ್ಣತೆ ಅನಿಸುವುದು’, ಇಂತಹ ತೊಂದರೆಗಳಾಗುತ್ತವೆ. ಹಾಗಾಗಿ ಅವರಿಗೆ ಚಳಿಗಾಲದಲ್ಲಿಯೂ ತಂಪು ನೀರು ಅಥವಾ ಶರಬತ್ತನ್ನು ಕುಡಿಯಬೇಕಾಗುತ್ತದೆ.

೨ ಅ. ಸಾಧಕರಿಗೆ ಸಾಧನೆಗಾಗಿ ಊರ್ಜೆ ಸಿಗುವುದು : ಈ ಕೋಣೆಯು ಸಾಧಕರಿಗೆ ಸತ್ಸಂಗ ಮತ್ತು ಚೈತನ್ಯ ಮತ್ತು ಸಾಧನೆಯ ಊರ್ಜೆಯನ್ನು ನೀಡುತ್ತದೆ. ನನಗೆ ಕೆಲವೊಮ್ಮೆ ನಿರುತ್ಸಾಹವೆನಿಸುತ್ತಿದ್ದರೆ ಅಥವಾ ಸೇವೆಯ ವೇಗವು ಕಡಿಮೆ ಯಾಗುತ್ತಿದ್ದರೆ, ಕೆಲವು ಕ್ಷಣ ಈ ಕೋಣೆಗೆ ಹೋಗಿಬಂದರೂ ನನಗೆ ಉತ್ಸಾಹವೆನಿಸಿ ಸೇವೆಯ ವೇಗ ಹೆಚ್ಚಾಗುತ್ತದೆ. ‘ಅವರು ನೀಡಿದ ಊರ್ಜೆಯಿಂದಲೇ ನಮಗೆ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ’, ಎಂಬುದನ್ನು ನಾವು ನಿತ್ಯ ಅನುಭವಿಸುತ್ತೇವೆ.

೨ ಆ. ಅವರ ಕೋಣೆಯಲ್ಲಿ ನಾಮಜಪವು ತಾನಾಗಿಯೇ ಆಗುತ್ತದೆ

೨ ಇ. ಕೋಣೆಯ ಹೊರಗೆ-ಒಳಗೆ ಬೇರೆ ಅನುಭವವಾಗುತ್ತದೆ.’

ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೋರಿಸಿದ ವಿಶ್ವಾಸ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಒಮ್ಮೆ ಸಹಜವಾಗಿ ಮಾತನಾಡುವಾಗ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಮುಂದಿನಂತೆ ಹೇಳಿದರು, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಇದರಲ್ಲಿನ ಶ್ರೀ ಗಣೇಶಮೂರ್ತಿಯನ್ನು ನನಗೆ ಮತ್ತು ಶ್ರೀ ಕಾರ್ತೀಕೆಯನ ಮೂರ್ತಿಯನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಕೊಟ್ಟಿದ್ದಾರೆ. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ”ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಸತತವಾಗಿ ಪ್ರವಾಸದಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಈ ವಿಗ್ರಹದ ಪೂಜೆಯನ್ನು ಮಾಡುವುದು, ಸಂಭಾಳಿಸುವುದು ಕಠಿಣವಾಗುತ್ತದೆ; ಆದ್ದರಿಂದ ಅದನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೋಣೆಯಲ್ಲಿಡೋಣ. ಆಶ್ರಮದಲ್ಲಿ ಇದಕ್ಕಿಂತ ಸೂಕ್ತವಾದ ಜಾಗ ಯಾವುದಿದೆ ?’’ ಎಂದು ಕೇಳಿದ್ದರು.

– ಕು. ಮೇಘಾ ಚವ್ಹಾಣ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೧೦.೨೦೨೩)