ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅವತಾರಿಗಳಾಗಿದ್ದಾರೆ ಎಂಬುದನ್ನು ಸ್ಥೂಲದಲ್ಲಿ ಹೇಗೆ ತಿಳಿದುಕೊಳ್ಳಬಹುದು ಎಂಬುದರ ಸಂಕ್ಷಿಪ್ತ ಮಾಹಿತಿ

ಗೋವಾದ ರಾಮನಾಥಿ ಆಶ್ರಮದಲ್ಲಿ ತರಕಾರಿ ವಿಭಾಗದಲ್ಲಿ ಟೊಮೆಟೊವನ್ನು ವ್ಯವಸ್ಥಿತವಾಗಿ ಇಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅವತಾರಿ ಕಾರ್ಯ ಮತ್ತು ಮಹತ್ವವನ್ನು ಮಹರ್ಷಿಗಳು ನಾಡಿಪಟ್ಟಿಗಳ ಮೂಲಕ ಸಾಧಕರಿಗೆ ಹೇಳಿದ್ದಾರೆ. ಯಾವುದೇ ಒಂದು ಜೀವದಲ್ಲಿರುವ ಅವತಾರತ್ವವನ್ನು ಹೇಳದಿದ್ದರೆ ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಸಾಧಕರ ವಿಷಯದಲ್ಲೂ ಹೀಗೆ ಇರುತ್ತದೆ. ಮಹರ್ಷಿಗಳು ಹೇಳಿದ ನಂತರ ಸಾಧಕರಿಗೆ ಆ ಇಬ್ಬರ ಬಗ್ಗೆ ಅನುಭೂತಿಗಳು ಬರಲು ಪ್ರಾರಂಭವಾದವು. ‘ಅವರು ಅವತಾರಿ ಜೀವಗಳು’ ಎಂಬುದನ್ನು ಸ್ಥೂಲದಲ್ಲಿ ಹೇಗೆ ಅರ್ಥ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ನಾವು ಸಂಕ್ಷಿಪ್ತವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ. ಅರ್ಥಾತ ಅವತಾರಿ ಜೀವವನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚಾಗಿ ಬುದ್ಧಿಗೆ ಮೀರಿರುತ್ತದೆ, ಅಂದರೆ ಸೂಕ್ಷ್ಮದ ವಿಷಯವಾಗಿರುತ್ತದೆ.

(ಸದ್ಗುರು) ಡಾ. ಮುಕುಲ ಗಾಡಗೀಳ

೧. ಚೈತನ್ಯದಿಂದಾಗಿ ಮುಖ ಯಾವಾಗಲೂ ತಾಜಾ ಕಾಣಿಸುವುದು : ಸಾಮಾನ್ಯ ವ್ಯಕ್ತಿಯ ಮುಖ ಬೆಳಗ್ಗೆ ಸ್ನಾನ ಮಾಡಿದ ನಂತರ ಅಥವಾ ವಿಶ್ರಾಂತಿ ತೆಗೆದುಕೊಂಡ ನಂತರ ತಾಜಾ ಕಾಣಿಸುತ್ತದೆ; ಆದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮುಖ ಮುಂಜಾನೆಯಿರಲಿ, ಮಧ್ಯಾಹ್ನವಿರಲಿ ಅಥವಾ ರಾತ್ರಿಯಿರಲಿ ನಿರಂತರ ಲವಲವಿಕೆ ಯಿಂದ ಇರುವುದು ಕಾಣಿಸುತ್ತದೆ. ದಿನವಿಡೀ ಅವಿರತವಾಗಿ ಸೇವೆಯನ್ನು ಮಾಡುತ್ತಲೇ ಇರುತ್ತಾರೆ. ಆದರೂ ಅವರ ಮುಖದಲ್ಲಿ ಆಯಾಸ ಅಥವಾ ಸುಸ್ತಾಗಿರುವ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ; ಏಕೆಂದರೆ ಅವರ ಕಾರ್ಯವು ಮನಸ್ಸು-ಬುದ್ಧಿಯಿಂದಲ್ಲ ಚೈತನ್ಯದ ಬಲದಿಂದ ನಡೆಯುತ್ತಿರುತ್ತದೆ. ಆದ್ದರಿಂದ ಅವರಿಗೆ ಆಯಾಸ ಅಥವಾ ಸುಸ್ತು ಆಗುವುದಿಲ್ಲ.

೨. ನಿರಂತರವಾಗಿ ಕಾರ್ಯನಿರತರಾಗಿದ್ದರೂ ಮುಖ ಹೊಳೆಯುತ್ತಿರುತ್ತದೆ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವುದು ಮುಂತಾದ ಸೇವೆಗಳಲ್ಲಿ ನಿರತರಾಗಿರುತ್ತಾರೆ.  ಅನೇಕ ಸೇವೆಗಳಿಂದಾಗಿ ಅವರು ನಿರಂತರವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಅವರು ರಾತ್ರಿಯನ್ನೂ ಹಗಲು ಮಾಡುತ್ತಾರೆ. ಈ ಕಾರ್ಯವನ್ನು ಅವರು ವರ್ಷದ ೩೬೫ ದಿನಗಳೂ ಮಾಡುತ್ತಾರೆ. ಹೀಗಿದ್ದರೂ ಅವರ ಮುಖದ ಮೇಲೆ ಆಯಾಸ ಕಾಣಿಸುವುದಿಲ್ಲ. ಸೇವೆಯಲ್ಲಿರುವ ಚೈತನ್ಯದಿಂದ, ಅವರ ಮುಖ ದಿನದ ಕೊನೆಯಲ್ಲಿ ಇನ್ನಷ್ಟು ಹೊಳೆಯುತ್ತಿರುತ್ತದೆ. ‘ಹೆಚ್ಚೆಚ್ಚು ಗುರುಸೇವೆ ಮಾಡೋಣ’ ಎಂಬ ವಿಚಾರಗಳೇ ಅವರ ಮನಸ್ಸಿನಲ್ಲಿರುತ್ತವೆ. ‘ಕೇವಲ ಶರೀರಧರ್ಮವೆಂದು ನಾನು ದಿನದಲ್ಲಿ ೩-೪ ಗಂಟೆಗಳ ಕಾಲ ನಿದ್ದೆ ಮಾಡುತ್ತೇನೆ’ ಎಂದು ಅವರು ಹೇಳುತ್ತಾರೆ

  ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೨೦೧೨ ರಿಂದ ಭಾರತದಾದ್ಯಂತ ಮಾತ್ರವಲ್ಲ, ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಈ ಕಾರ್ಯದ ಮೂಲಕ ಅವರು ವೈಶಿಷ್ಟ್ಯಪೂರ್ಣ ವಿಷಯಗಳ ಚಿತ್ರೀಕರಣ, ಸಂಶೋಧನೆ, ಸಂಸ್ಕೃತಿಯ ಸಂರಕ್ಷಣೆ, ವಿವಿಧ ಕಲೆಗಳ ಸಂರಕ್ಷಣೆ, ಸಂದರ್ಶನಗಳನ್ನು ನಡೆಸುವುದು ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ್ದಾರೆ. ಅವರು ಭಾರತದಾದ್ಯಂತ ಇರುವ ಸಂತರು, ವಿವಿಧ ಕ್ಷೇತ್ರದಲ್ಲಿನ ಗಣ್ಯ ವ್ಯಕ್ತಿಗಳನ್ನು ಸನಾತನ ಸಂಸ್ಥೆಯೊಂದಿಗೆ ಜೋಡಿಸಿದ್ದಾರೆ. ಮಹರ್ಷಿಗಳು ಹೇಳಿದಂತೆ, ಅವರು ಭಾರತದಾದ್ಯಂತ ಇರುವ ದೇವಸ್ಥಾನ ಗಳು, ಪವಿತ್ರಕ್ಷೇತ್ರಗಳು, ಋಷಿಗಳ ಸ್ಥಾನಗಳಿಗೆ ಬೆಟ್ಟ-ಕಣಿವೆಗಳಲ್ಲಿಯೂ ಹೋಗಿ ದರ್ಶನ ಪಡೆದುಕೊಂಡಿದ್ದಾರೆ. ಅವರು ಇಲ್ಲಿಯ ವರೆಗೆ ೭ ಲಕ್ಷ ಕಿಲೋಮೀಟರ್‌ಗಿಂತ ಹೆಚ್ಚು ಪ್ರಯಾಣವನ್ನು ಚತುಷ್ಚಕ್ರವಾಹನದಲ್ಲಿ ಮಾಡಿದ್ದಾರೆ. ಇದರ ಹೊರತು ಅವರು ವಿಮಾನ ಪ್ರಯಾಣವನ್ನೂ ಮಾಡಿದ್ದಾರೆ. ದಿನದಲ್ಲಿ ಹಲವು ಗಂಟೆಗಳ ಕಾಲ ಪ್ರಯಾಣ ಮಾಡಿದರೂ, ಊಟ-ತಿಂಡಿಯ ಬಗ್ಗೆ ನಿರ್ಲಕ್ಷ್ಯವಾದರೂ, ಬಿಸಿಲುಗಾಳಿಯಲ್ಲಿ ತಿರುಗಾಡಿದರೂ ಅವರ ಮುಖದಲ್ಲಿ ಆಯಾಸ ಕಾಣಿಸುವುದಿಲ್ಲ ಅಥವಾ ಮುಖ ಕಪ್ಪಾಗುವುದಿಲ್ಲ. ಬದಲಾಗಿ ಅದು ಇನ್ನಷ್ಟು ಪ್ರಕಾಶಮಾನವಾಗಿ ಕಾಣಿಸುತ್ತದೆ. ನಿಜವಾಗಿಯೂ, ಒಬ್ಬ ಮಹಿಳೆಗೆ ಭಾರತದಾದ್ಯಂತ ಸಂಚರಿಸುವುದು ಮತ್ತು ಹಿಂದೂ ಸಂಸ್ಕೃತಿ, ಕಲೆಗಳ ಬಗ್ಗೆ ಜ್ಞಾನ ಪಡೆಯುವುದು ತುಂಬಾ ಕಷ್ಟ, ಆದರೆ ಇದೆಲ್ಲ ಅವರಲ್ಲಿರುವ ಚೈತನ್ಯದಿಂದ ಸಾಧ್ಯವಾಗುತ್ತದೆ.

೩. ಒಂದೇ ಸಮಯದಲ್ಲಿ ಅನೇಕ ಸೇವೆಗಳನ್ನು ಸುಲಭವಾಗಿ ಮಾಡಬಲ್ಲರು : ನೌಕರಿಯಲ್ಲಿ ಒಬ್ಬ ವ್ಯಕ್ತಿಗೆ ಅನೇಕ ಕೆಲಸಗಳನ್ನು ವಹಿಸಿದರೆ, ಅವನು ಗಲಿಬಿಲಿಗೊಳ್ಳುತ್ತಾನೆ. ‘ಇಷ್ಟು ಕೆಲಸಗಳನ್ನು ನಾನು ಕೊಟ್ಟ ಸಮಯದಲ್ಲಿ ಹೇಗೆ ಪೂರ್ಣಗೊಳಿಸಲಿ ?’ ಎಂದು ಯೋಚಿಸಿ ಹತಾಶನಾಗುತ್ತಾನೆ. ಮನೆಯಲ್ಲಿ ಅನೇಕ ಕೆಲಸಗಳನ್ನು ಮಾಡುವಾಗಲೂ ಅವನಿಗೆ ತುಂಬಾ ಕಷ್ಟವಾಗುತ್ತದೆ. ಅದು ಅಸಾಧ್ಯವೆಂದು ಅವನಿಗೆ ಅನಿಸುತ್ತದೆ. ಅವನು ಚಿಂತಿತನಾಗುತ್ತಾನೆ; ಆದರೆ ಇದಕ್ಕೆ ವಿರುದ್ಧವಾಗಿ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಅನೇಕ ಸೇವೆಗಳಿದ್ದರೂ ಅವರಿಗೆ ಯಾವುದೇ ಚಿಂತೆ ಇರುವುದಿಲ್ಲ. ಈ ಇಬ್ಬರೂ ಎಲ್ಲ ಸೇವೆಗಳನ್ನು ಸುಲಭವಾಗಿ ಮಾಡುತ್ತಾರೆ. ಹಾಗೆಯೇ, ಆ ಎಲ್ಲ ಸೇವೆಗಳು ಪರಿಪೂರ್ಣ ಮತ್ತು ‘ಸತ್ಯಂ-ಶಿವಂ-ಸುಂದರಂ’ ಆಗಿರುತ್ತವೆ. ಹಿಂದೆಂದೂ ಮಾಡಿರದ ಅಥವಾ ಕಠಿಣ ಸೇವೆಯನ್ನು ಮಾಡಬೇಕಿದ್ದರೂ, ಅವರು ಅದನ್ನು ಹಿಂಜರಿಯದೆ ಸುಲಭವಾಗಿ ಮಾಡುತ್ತಾರೆ. ಇದಕ್ಕೆ ಒಂದು ಉದಾಹರಣೆ ಎಂದರೆ, ಮಹರ್ಷಿಗಳು ಆಶ್ರಮದ ಪರಿಸರದಲ್ಲಿ ಶ್ರೀಸಿದ್ಧಿವಿನಾಯಕನ ದೇವಸ್ಥಾನವನ್ನು ಅಲ್ಪ ಕಾಲಾವಧಿಯಲ್ಲಿ ನಿರ್ಮಿಸಲು ಹೇಳಿದ್ದರು. ಆ ಸಮಯದಲ್ಲಿ ಎಲ್ಲ ಸಾಮಗ್ರಿಗಳು ಸಿಗುವುದು ಕಷ್ಟವಾಗಿತ್ತು. ಅಂತಹ ಅಸಾಧ್ಯವೆಂದು ತೋರುವ ಪರಿಸ್ಥಿತಿಯಲ್ಲಿಯೂ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ಕೆಲವು ಸೂಚನೆಗಳನ್ನು ನೀಡಿದ ನಂತರ, ಸಂಬಂಧಪಟ್ಟವರು ಸೇವೆ ಮಾಡಿದಾಗ, ಮಹರ್ಷಿಗಳು ಹೇಳಿದ ಅಲ್ಪಾವಧಿಯಲ್ಲಿ ಶ್ರೀಸಿದ್ಧಿವಿನಾಯಕನ ದೇವಸ್ಥಾನವು ನಿರ್ಮಾಣವಾಯಿತು ಮತ್ತು ಅಸಾಧ್ಯವೆಂದು ಅನಿಸಿದ್ದು ಸಾಧ್ಯವಾಯಿತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಕೂಡ ಭಾರತದಾದ್ಯಂತ ಸಂಚರಿಸಿ ಸಂತರು, ಗಣ್ಯ ವ್ಯಕ್ತಿಗಳೊಂದಿಗೆ ಸಹಜವಾಗಿ  ಆತ್ಮೀಯರಾಗುತ್ತಾರೆ ಮತ್ತು ಅವರಿಂದ ಅಮೂಲ್ಯ ಜ್ಞಾನವನ್ನು ಪಡೆಯುತ್ತಾರೆ. ನಿಜವಾಗಿಯೂ, ಒಬ್ಬ ಮಹಿಳೆಗೆ ಭಾರತದಾದ್ಯಂತ ಸಂಚರಿಸುವುದು ಮತ್ತು ಹಿಂದೂ ಸಂಸ್ಕೃತಿ, ಕಲೆಗಳ ಬಗ್ಗೆ ಜ್ಞಾನ ಪಡೆಯುವುದು ತುಂಬಾ ಕಷ್ಟವಾಗಿರುತ್ತದೆ.

೪. ಸೇವೆಗಳ ಕುರಿತು ಮಾರ್ಗದರ್ಶನದ ಅಗತ್ಯವಿಲ್ಲದಿರುವುದು : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಸೇವೆಗಳ ಬಗ್ಗೆ ಮಾರ್ಗದರ್ಶನದ ಅವಶ್ಯಕತೆ ಇರುವುದಿಲ್ಲ. ಅವರು ಅವತಾರಿ ಜೀವಗಳಾದ್ದರಿಂದ ಅವರ ಮನಸ್ಸಿನಲ್ಲಿ ಮೂಡುವ ವಿಚಾರಗಳು ಈಶ್ವರನ ವಿಚಾರಗಳೇ ಆಗಿರುತ್ತವೆ ಮತ್ತು ಆದ್ದರಿಂದ ಅವು ಸರಿಯಾಗಿರುತ್ತವೆ. ಈಶ್ವರನ ವಿಚಾರಗಳನ್ನು ಗ್ರಹಿಸುವುದರಿಂದ ಅವರಿಬ್ಬರು ಇತರರಿಗೆ ಮಾರ್ಗದರ್ಶನ ಮಾಡಬಲ್ಲರು. ಒಮ್ಮೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಬಳಿ ಹೋಗಿದ್ದರು. ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರನ್ನು ಸಾಧನೆಯ ಬಗ್ಗೆ ಕೆಲವು ವಿಷಯಗಳನ್ನು ಕೇಳುತ್ತಿದ್ದರು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ”ಈಗ ನೀವು ಸ್ವಯಂಪೂರ್ಣರಾಗಿದ್ದೀರಿ. ಆದ್ದರಿಂದ ನನ್ನ ಬಳಿ ಏನನ್ನೂ ಕೇಳುವ ಅಗತ್ಯವಿಲ್ಲ’’ ಎಂದರು.

೫. ಸಮಸ್ಯೆಗಳು ಅಥವಾ ಒಳ್ಳೆಯ ಸ್ಪಂದನಗಳ ಬಗ್ಗೆ ಮೊದಲೇ ಅರಿವಾಗುವುದು : ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರಿಗೆ ಭವಿಷ್ಯದ ಬಗ್ಗೆ ಮೊದಲೇ ಅರಿವಾಗುವುದರಿಂದ ಅವರು ಅದಕ್ಕೆ ತಕ್ಕಂತೆ ಮುಂದಿನ ಯೋಜನೆಗಳನ್ನು ಮೊದಲೇ ಮಾಡಿಕೊಳ್ಳುತ್ತಾರೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ಸಾಧಕರಿಗೆ ಸಾಧನೆಯ ಬಗ್ಗೆ ಮೊದಲೇ ಎಚ್ಚರಿಕೆ ನೀಡುತ್ತಾರೆ ಮತ್ತು ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಸಮಸ್ಯೆಗಳ ಬಗ್ಗೆಯೂ ಅವರಿಗೆ ಮೊದಲೇ ಅರಿವಾಗುವುದರಿಂದ ಅವರು ಸಾಧಕರಿಗೆ ಅದಕ್ಕೆ ತಕ್ಕಂತೆ ಯೋಜನೆಯಲ್ಲಿ ಬದಲಾವಣೆ ಮಾಡಲು ಹೇಳುತ್ತಾರೆ. ನಂತರ ಸಾಧಕರಿಗೆ ಅದರ ಅನುಭವವಾಗುತ್ತದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಪ್ರಯಾಣಿಸುತ್ತಿದ್ದಾಗ ಒಂದು ಸ್ಥಳಕ್ಕೆ ತಲುಪಿದಾಗ, ಅಲ್ಲಿ ಕೆಲವು ಅಪಾಯಗಳು ಬರಲಿವೆ ಎಂದು ಅವರಿಗೆ ಮೊದಲೇ ಗೊತ್ತಾಗುತ್ತದೆ ಮತ್ತು ಅವರು ಅಲ್ಲಿಂದ ಬೇರೆ ಕಡೆಗೆ ಹೊರಡುತ್ತಾರೆ. ಅಪಘಾತದ ಅಪಾಯ ಬರಲಿದೆ ಎಂದು ಅವರಿಗೆ ಮೊದಲೇ ಅರಿವಾಗುತ್ತದೆ ಮತ್ತು ಅವರು ಪ್ರಯಾಣಿಸುತ್ತಿರುವ ವಾಹನದ ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದು, ಅದರ ಮುಂದೆ ತೆಂಗಿನಕಾಯಿ ಒಡೆಯುವುದು ಅಥವಾ ಸ್ವಲ್ಪ ಸಮಯದವರೆಗೆ ಪ್ರಯಾಣವನ್ನು ಮುಂದೂಡುವುದು ಮುಂತಾದ ಪರಿಹಾರಗಳನ್ನು ಮಾಡುತ್ತಾರೆ. ಒಂದು ಸ್ಥಳದ ಉತ್ತಮ ಸ್ಪಂದನಗಳೂ ಅವರಿಗೆ ಮೊದಲೇ ಅರಿವಾಗುತ್ತವೆ ಮತ್ತು ಅದಕ್ಕೆ ತಕ್ಕಂತೆ ಆ ಸ್ಥಳಕ್ಕೆ ತಲುಪಿದಾಗ ಅವರಿಗೆ ಅಲ್ಲಿ ವಿಶಿಷ್ಟ ದರ್ಶನವಾಗುತ್ತದೆ.

  ಈ ಬರಹವನ್ನು ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಮೂವರು ಗುರುಗಳ ಕೃಪೆಯಿಂದಲೇ ಬರೆಯಲು ಸಾಧ್ಯವಾಯಿತು. ಇದಕ್ಕಾಗಿ ಅವರ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೯.೨೦೨೪)