ಭಾರತವು ಕಣ್ಣುಕುಕ್ಕುತ್ತಿದೆ !

ಬಲಿಷ್ಠ ಮರವೆಂದರೆ ಬಿರುಗಾಳಿಯಿಂದ ರಕ್ಷಿಸಲ್ಪಟ್ಟ ಅರಣ್ಯದಲ್ಲಿರುವ ಮರವಲ್ಲ, ಬಯಲು ಪ್ರದೇಶದಲ್ಲಿದ್ದು ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಮರವಾಗಿದೆ ! ೨೦ ನೇ ಶತಮಾನದ ಪ್ರಸಿದ್ಧ ಅಮೆರಿಕನ್‌ ಲೇಖಕ ನೆಪೋಲಿಯನ್‌ ಹಿಲ್‌ ಅವರ ಈ ಹೇಳಿಕೆಯು ಇಂದಿನ ಭಾರತಕ್ಕೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಬಲಿಷ್ಠ ಆದರೆ ಸ್ವಾರ್ಥಿ ಅಮೆರಿಕವು ಇಂದು ‘ಮೇಕ ಅಮೆರಿಕ ಗ್ರೇಟ್‌ ಅಗೇನ್’ ಎಂಬ ರಾಷ್ಟ್ರೀಯವಾದಿ ನಿಲುವಿನಿಂದ ಇತರ ದೇಶಗಳ ಮೇಲೆ ಭಾರಿ ಆಮದು ಸುಂಕಗಳನ್ನು ವಿಧಿಸುತ್ತಿದೆ. ಇದರಿಂದ ಭಾರತವು ದೊಡ್ಡ ಹೊಡೆತವನ್ನು ಅನುಭವಿಸಿದೆ. ಟ್ರಂಪ್‌ರ ಅನ್ಯಾಯದ ನೀತಿಗೆ ಮಣಿದ ದಕ್ಷಿಣ ಕೊರಿಯಾ ಮತ್ತು ಜಪಾನ್‌ಗಳ ಸುಂಕವನ್ನು ಅಮೆರಿಕ ಕಡಿಮೆ ಮಾಡಿದೆ, ಆದರೆ ಭಾರತವು ತನ್ನ ವಿದೇಶಾಂಗ ಮತ್ತು ವ್ಯಾಪಾರನೀತಿಯಲ್ಲಿ ದೃಢವಾಗಿ ನಿಂತಿದೆ. ಈ ದಿಟ್ಟತನ ಅಮೆರಿಕಕ್ಕೆ ಅಸಹನೆ ಉಂಟುಮಾಡಿದೆ, ಆದರೆ ಇದೇ ಮೂಲಕ ಭಾರತವು ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಜಗತ್ತು ಅರ್ಥಮಾಡಿಕೊಂಡಿದೆ. ಆದ್ದರಿಂದ, ಹಿಲ್‌ ಅವರ ಮಾತಿನಂತೆ, ಈ ವ್ಯಾಪಾರ ಲಾಭದ ಕೆಸರಿನಿಂದ ಭಾರತದ ಕಮಲ ಖಂಡಿತವಾಗಿ ಅರಳಲಿದೆ. ಇದಕ್ಕೆ ಅಮೆರಿಕದ ಮಾಧ್ಯಮಗಳೇ ಸಾಕ್ಷಿ. ಅಮೆರಿಕದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ, ಕಟು ಭಾರತ ವಿರೋಧಿ ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್’ ಕೂಡ ಸೆಪ್ಟೆಂಬರ್‌ ೧ ರಂದು ತನ್ನ ಮುಖ್ಯ ಲೇಖನದಲ್ಲಿ ಚೀನಾದ ಶಾಂಘೈ ಸಹಕಾರ ಸಂಘದ ಶೃಂಗಸಭೆಯ ಬಗ್ಗೆ ಹೀಗೆ ಉಲ್ಲೇಖಿಸಿದೆ: ‘ಜಗತ್ತಿನ ೪ ಮಹಾಶಕ್ತಿಗಳಲ್ಲಿ ೩ ಶಕ್ತಿಗಳು ಪ್ರಸ್ತುತ ಚೀನಾದಲ್ಲಿವೆ.’ ಇದರರ್ಥ ಸ್ಪಷ್ಟವಾಗಿದೆ. ಅಮೆರಿಕ, ರಷ್ಯಾ, ಚೀನಾ ಜೊತೆಗೆ ಭಾರತವನ್ನು ಕೂಡಾ ಜಗತ್ತಿನ ಬಲಿಷ್ಠ ದೇಶಗಳಲ್ಲಿ ಒಂದು ಎಂದು ಅಮೆರಿಕ ಪರಿಗಣಿಸಿದೆ.

 ಕೇವಲ ಆರ್ಥಿಕ ಮಾತ್ರವಲ್ಲ, ಸ್ವತಂತ್ರ ಮತ್ತು ಬಲಿಷ್ಠ ವಿದೇಶಾಂಗ ನೀತಿಯಿಂದಾಗಿ ಇಂದು ಭಾರತದ ಪ್ರಭಾವ ಹೆಚ್ಚಾಗಿದೆ. ‘ಜಗತ್ತಿನ ಬಲಿಷ್ಠ ದೇಶಗಳ ನೀತಿಗಳು, ಸ್ಥಳೀಯ ಮಟ್ಟದ ಅಂತಾರಾಷ್ಟ್ರೀಯ ಯುದ್ಧಗಳು, ಉದ್ವಿಗ್ನತೆ, ಬದಲಾಗುತ್ತಿರುವ ಪರಿಸ್ಥಿತಿ ಮತ್ತು ನೈಸರ್ಗಿಕ ವಿಕೋಪಗಳಿಂದಾಗಿ ವಿದೇಶಾಂಗ ಸಂಬಂಧಗಳಲ್ಲಿ ನಮ್ಯತೆ ಇರುವುದು ಅನಿವಾರ್ಯ’ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್‌ ಅವರು ತಮ್ಮ ‘ವೈ ಭಾರತ್‌ ಮ್ಯಾಟರ್ಸ್?’ ಪುಸ್ತಕದಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಕಳೆದ ಹತ್ತು ವರ್ಷಗಳಲ್ಲಿ ಭಾರತವು ಪ್ರತಿಯೊಂದು ಅಂತಾರಾಷ್ಟ್ರೀಯ ಸವಾಲಿಗೆ ಸಮತೋಲಿತ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರಿಂದ ವಿದೇಶಾಂಗ ನೀತಿಯಲ್ಲಿ ಅಗ್ರಸ್ಥಾನದಲ್ಲಿದೆ’ ಎಂದರೆ ಅತಿಶಯೋಕ್ತಿಯಲ್ಲ.

ಭಾರತವೇ ಎಚ್ಚರ !

 ಮ. ಗಾಂಧಿಯವರ ಒಂದು ಮಾತನ್ನು ಇಲ್ಲಿ ಉಲ್ಲೇಖಿಸುವುದು ಅವಶ್ಯಕ. ಅವರು ಹೇಳಿದ್ದರು, ”ಮೊದಲು ಅವರು (ಶತ್ರು ಅಥವಾ ಪ್ರತಿಸ್ಪರ್ಧಿ) ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ಬಳಿಕ ನಿಮ್ಮನ್ನು ನೋಡಿ ನಗುತ್ತಾರೆ, ಅನಂತರ ನಿಮ್ಮೊಂದಿಗೆ ಯುದ್ಧ ಮಾಡುತ್ತಾರೆ ಮತ್ತು ಆಗ ನೀವು ಗೆಲ್ಲುತ್ತೀರಿ.’’ ಇಂದು ಪರಿಸ್ಥಿತಿಯು ಅಮೆರಿಕ ಮತ್ತು ಭಾರತವನ್ನು ಮುಖಾಮುಖಿಯಾಗಿ ನಿಲ್ಲಿಸಿದೆ. ೬೦ ರ ದಶಕದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರುರವರ ನೇತೃತ್ವದಲ್ಲಿ ‘ಅಲಿಪ್ತ ಚಳುವಳಿ’ ಪ್ರಾರಂಭವಾಯಿತು. ಆದರೆ, ‘ನೀವು ಸರ್ವಶಕ್ತಿಶಾಲಿಯಾಗಲು ಪ್ರಾರಂಭಿಸಿದಾಗ, ನೀವು ಯಾವುದಾದರೂ ಒಂದು ಪಕ್ಷವನ್ನು ಆಯ್ಕೆ ಮಾಡಲೇಬೇಕು’ ಎಂದು ಹೇಳುತ್ತಾರಲ್ಲವೇ, ಅದೇ ರೀತಿ ಭಾರತದ ವಿಷಯದಲ್ಲೂ ಆಗಿದೆ ಅಥವಾ ಭಾರತವು ಹಾಗೆ ಮಾಡಲು ಒತ್ತಡವನ್ನು ಎದುರಿಸುತ್ತಿದೆ. ಭಾರತವು ಮಹಾಶಕ್ತಿಯಾಗಿ ಅಥವಾ ‘ವಿಶ್ವಗುರು’ ಆಗಿ ಮುಂದುವರೆಯುತ್ತಿರುವ ಸೂಚನೆಯಿದು. ಇದು ಇಷ್ಟವಾಗದ ಅಮೆರಿಕವು ಭಾರತದ ಆಂತರಿಕ ಸಾಮಾಜಿಕ ವಿಭಜನೆಗಾಗಿ ವಿನಾಶಕಾರಿ ಪ್ರಯತ್ನಗಳನ್ನು ಮಾಡುತ್ತಿದೆ. ಟ್ರಂಪ್‌ರ ಪ್ರಮುಖ ವ್ಯಾಪಾರ ಸಲಹೆಗಾರ ಪೀಟರ್‌ ನವರೋ ಪ್ರಸ್ತುತ ಈ ಭಾರತವಿರೋಧಿ ‘ನೆರೆಟಿವ್‌ಗೆ’ ನಾಯಕತ್ವ ವಹಿಸಿದ್ದಾರೆ. ಮೊದಲು ಅವರು ಉಕ್ರೇನ್‌ ಯುದ್ಧವನ್ನು ‘ಮೋದಿ ಯುದ್ಧ’ ಎಂದು ಕರೆದರು ಮತ್ತು ರಷ್ಯಾದಿಂದ ತರಿಸಿದ ತೈಲದ ಲಾಭವು ಬ್ರಾಹ್ಮಣರಿಗೆ ಆಗುತ್ತಿದೆ ಎಂದು ಹೇಳಿದ್ದಾರೆ.

ಕುಖ್ಯಾತ ಅಮೆರಿಕ !

 ಮೇಲ್ನೋಟಕ್ಕೆ ನವರೋ ಅವರ ಹೇಳಿಕೆಯು ಬಾಲಿಶವೆಂದು ಅನಿಸಬಹುದು. ಯಾವುದೇ ತಾರ್ಕಿಕ ವ್ಯಕ್ತಿ ಈ ಹೇಳಿಕೆಯನ್ನು ಖಂಡಿಸಿ, ‘ರಷ್ಯಾದಿಂದ ತೈಲ ಆಮದಿನಿಂದ ಭಾರತದಲ್ಲಿನ ಒಟ್ಟು ಹಣದುಬ್ಬರ ನಿಯಂತ್ರಣದಲ್ಲಿದೆ, ಇದರಿಂದ ಪ್ರತಿಯೊಬ್ಬ ಭಾರತೀಯನಿಗೆ ಲಾಭವಾಗುತ್ತಿದೆ’. ಈ ವಾದ ಸಂಪೂರ್ಣ ಸರಿಯಿದ್ದರೂ, ನವರೋ ಅವರ ಹೇಳಿಕೆ ಅಷ್ಟು ಸರಳವಾಗಿಲ್ಲ. ಪೀಟರ್‌ ನವರೋ ಅವರ ಹೇಳಿಕೆಗಳು ಭಾರತ ವಿರೋಧಿ ನಿರೂಪಣೆಯ ಹೊಸ ಆರಂಭವಾಗಿದೆ. ‘ಡೀಪ್‌ ಸ್ಟೇಟ್‌’ನ ಏಜೆಂಟ್‌ ಕಾಂಗ್ರೆಸ್‌ ಕೂಡ ಈ ಬ್ರಾಹ್ಮಣ ವಿರೋಧಿ ಹೇಳಿಕೆಯನ್ನು ಬಳಸಿಕೊಂಡಿದೆ. ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌ ಅವರು ನವರೋ ಅವರನ್ನು ಬಹಿರಂಗವಾಗಿ ಸಮರ್ಥಿಸಿ, ‘ಮೇಲ್ಜಾತಿಯ ಜನರು ರಷ್ಯಾದಿಂದ ಕಚ್ಚಾ ತೈಲ ಖರೀದಿಸಿ, ಅದನ್ನು ಸಂಸ್ಕರಿಸಿ ಇತರ ದೇಶಗಳಿಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ. ಸಾಮಾನ್ಯ ಜನರಿಗೆ ಇದರಿಂದ ಯಾವುದೇ ಲಾಭವಾಗುತ್ತಿಲ್ಲ’ ಎಂದು ಹೇಳಿದ್ದಾರೆ.

 ‘ಅಮೆರಿಕ ಫಸ್ಟ್‌’ ಎಂದು ಒಂದು ಕಾಲದಲ್ಲಿ ಟ್ರಂಪ್‌ರ ಕಟ್ಟಾ ಬೆಂಬಲಿಗರಾಗಿದ್ದ ಅಮೆರಿಕದ ಭೂರಾಜಕೀಯ ವಿಶ್ಲೇಷಕಿ ಪೂರ್ಣಿಮಾ ನಾಥ್‌ ಹೇಳುತ್ತಾರೆ, ‘ಅಮೆರಿಕದ ಎಲ್ಲ ಪಕ್ಷ ಗಳು ಕಟುವಾದ ಹಿಂದೂ ವಿರೋಧಿಗಳಾಗಿದ್ದು ಅವನ್ನು ನಿಯಂತ್ರಿಸದಿದ್ದರೆ, ಭಾರತದಲ್ಲಿ ಭೀಕರ ಹಿಂಸಾಚಾರವಾಗುವುದು ಖಂಡಿತ’! ಜಗತ್ತಿನ ಹಲವು ದೇಶಗಳಲ್ಲಿ ಗೃಹಯುದ್ಧಗಳ ಮೂಲಕ ಅಧಿಕಾರ ಬದಲಾವಣೆ ಮಾಡಿಸಲು ಅಮೆರಿಕ ಕುಖ್ಯಾತವಾಗಿದೆ. ತನ್ನ ಕೆಟ್ಟ ಉದ್ದೇಶಗಳನ್ನು ಸಾಧಿಸಲು ಅದು ಇರಾನ್‌ (೧೯೫೩), ಬ್ರೆಜಿಲ್‌ (೧೯೬೪), ಗ್ರೀಸ್‌ (೧೯೬೭), ಲಿಬಿಯಾ (೨೦೧೧) ಸೇರಿದಂತೆ ಅನೇಕ ದೇಶಗಳಲ್ಲಿ ಸರಕಾರಗಳನ್ನು ಉರುಳಿಸಿದೆ. ಪಾಕಿಸ್ತಾನದ ಇಮ್ರಾನ್‌ ಖಾನ್‌ ಸರಕಾರ ಮತ್ತು ಬಾಂಗ್ಲಾದೇಶದ ಶೇಖ್‌ ಹಸೀನಾ ಸರಕಾರವನ್ನು ಸಹ ಉರುಳಿಸುವ ಪಿತೂರಿ ಮಾಡಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಪ್ರಯತ್ನಿಸ ಲಾಗುತ್ತಿದೆ. ಏನೇ ಆಗಲಿ, ಇವೆಲ್ಲದರ ವಿರುದ್ಧ ಹೋರಾಡಲು ಭಾರತೀಯ ಜನರು, ವಿಶೇಷವಾಗಿ ಹಿಂದೂಗಳು ‘ಇಂದಲ್ಲದೆ ಇನ್ನೆಂದೂ ಇಲ್ಲ’ ಎಂಬ ರೀತಿಯಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಆದ್ದರಿಂದ ಹಿಂದೂಗಳೇ, ಸಂಘಟಿತರಾಗಿ, ಇಲ್ಲದಿದ್ದರೆ ವಿನಾಶ ಅನಿವಾರ್ಯ ಎಂದು ತಿಳಿಯಿರಿ ! ನೆನಪಿಡಿ, ‘ಬಟೆಂಗೆ ತೊ ಕಟೇಂಗೆ (ಬೇರ್ಪಟ್ಟರೆ, ಕತ್ತರಿಸಲ್ಪಡುತ್ತೀರಿ)!’