
ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾ ಭಾರತದ ಮೇಲೆ ಶೇ.50% ರಷ್ಟು ಆಮದು ತೆರಿಗೆ ವಿಧಿಸಿದ್ದರೂ, ಆಗಸ್ಟ್ ತಿಂಗಳಲ್ಲಿ ಭಾರತದ ರಫ್ತುಮೌಲ್ಯ ಹೆಚ್ಚಳವಾಗಿದೆಯೆಂದು ಸರಕಾರದ ಅಂಕಿ-ಅಂಶಗಳು ಘೋಷಿಸಿವೆ. ಆಗಸ್ಟ್ ತಿಂಗಳಿನಲ್ಲಿ ಭಾರತದ ವ್ಯಾಪಾರ ಕೊರತೆ 2 ಲಕ್ಷ 33 ಸಾವಿರ ಕೋಟಿಗಳಷ್ಟಾಗಿತ್ತು, ಜುಲೈ ತಿಂಗಳಿನಲ್ಲಿ ಇದು 2 ಲಕ್ಷ 41 ಸಾವಿರ ಕೋಟಿಗಳಷ್ಟಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಭಾರತಕ್ಕೆ 2 ಲಕ್ಷ 18 ಸಾವಿರ ಕೋಟಿ ರೂಪಾಯಿಗಳ ಕೊರತೆಯುಂಟಾಗಬಹುದು’ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದರು. ಆಗಸ್ಟ್ ತಿಂಗಳಿನಲ್ಲಿ ಭಾರತದ ಆಮದು ಪ್ರಮಾಣವು ಶೇ.10.1% ರಷ್ಟು ಕುಸಿಯಿತು. ಅಂದರೆ ಆಮದು ಪ್ರಮಾಣ 5 ಲಕ್ಷ 42 ಸಾವಿರ ಕೋಟಿ ರೂಪಾಯಿಗಳವರೆಗೆ ಇಳಿಕೆಯಾಯಿತು ಹಾಗೂ ರಫ್ತು ಶೇ. 6.7% ರಷ್ಟು ಹೆಚ್ಚಳವಾಗಿ 3 ಲಕ್ಷ 9 ಸಾವಿರ ಕೋಟಿ ರೂಪಾಯಿಗಳವರೆಗೆ ಆಗಿದೆ.
ಅಮೆರಿಕಾ ಹೇರಿರುವ ಹೆಚ್ಚುವರಿ ಶುಲ್ಕದ ಬಳಿಕ ಭಾರತಕ್ಕೆ ಹೆಚ್ಚೇನೂ ಪರಿಣಾಮವಾಗಿಲ್ಲ ಎಂದು ಹೇಳಲಾಗುತ್ತಿದೆ. ಎಪ್ರಿಲ್ ನಿಂದ ಆಗಸ್ಟ್ ಕಾಲಾವಧಿಯಲ್ಲಿ ಭಾರತದಿಂದ ಅಮೆರಿಕಾಗೆ 3 ಲಕ್ಷ 56 ಸಾವಿರ ಕೋಟಿ ರೂಪಾಯಿ ಅರಬ್ ಡಾಲರ್ ವಸ್ತುಗಳನ್ನು ರಫ್ತು ಮಾಡಲಾಗಿದೆ. ಭಾರತವು ಅಮೆರಿಕಾಗೆ ರಫ್ತು ಮಾಡುವ ಅತಿ ದೊಡ್ಡ ದೇಶವಾಗಿದೆ; ಆದರೆ ಈಗ ಶೇ.50% ರಷ್ಟು ಆಮದು ಶುಲ್ಕದಿಂದಾಗಿ ರಫ್ತಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ಭಾರತಕ್ಕಿಂತ ಅಮೆರಿಕಾಗೆ ಹೆಚ್ಚು ಹಾನಿಯಾಗುತ್ತಿರುವುದು ಕಂಡು ಬರುತ್ತಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು