
ಲಾಸ್ ಏಂಜಲೀಸ್ (ಅಮೆರಿಕ) – ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಈಗ ದೀಪಾವಳಿಯ ದಿನವನ್ನು ಅಧಿಕೃತ ರಜೆಯೆಂದು ಘೋಷಿಸಲಾಗಿದೆ. ಕ್ಯಾಲಿಫೋರ್ನಿಯಾ ವಿಧಾನ ಸಭೆಯು ‘ಎಬಿ 268 ವಿಧೇಯಕ’ವನ್ನು ಅಂಗೀಕರಿಸಿದ್ದು, ಅದರಲ್ಲಿ ದೀಪಾವಳಿ ರಜೆಯ ಘೋಷಣೆಯನ್ನು ಸೇರಿಸಲಾಗಿದೆ.
ಈ ವಿಧೇಯಕವನ್ನು ಜನವರಿ 2025ರಲ್ಲಿ ಮಂಡಿಸಲಾಗಿತ್ತು. ದೀಪಾವಳಿಯನ್ನು ರಾಜ್ಯದ ರಜೆಗಳ ಪಟ್ಟಿಯಲ್ಲಿ ಸೇರಿಸುವುದು, ಹಾಗೂ ಸಮುದಾಯ ಕಾಲೇಜುಗಳು ಮತ್ತು ಸರಕಾರಿ ಶಾಲೆಗಳಿಗೆ ಈ ದಿನದಂದು ರಜೆ ಘೋಷಿಸುವ ಅಧಿಕಾರ ನೀಡುವುದು ಈ ವಿಧೇಯಕದಲ್ಲಿ ಅವಕಾಶ ಒದಗಿಸಲಾಗಿತ್ತು. ಈ ವಿಧೇಯಕವು ಸೆಪ್ಟೆಂಬರ್ 10ರಂದು ವಿಧಾನಸಭೆಯಲ್ಲಿ 36 ವಿರುದ್ಧ 4 ಮತಗಳಿಂದ ಮತ್ತು ಸೆಪ್ಟೆಂಬರ್ 11, 2025ರಂದು ‘ಸೆನೆಟ್’ನಲ್ಲಿ 76 ವಿರುದ್ಧ 4 ಮತಗಳಿಂದ ಅಂಗೀಕರಿಸಲ್ಪಟ್ಟಿತು. ಈ ವಿಧೇಯಕದ ನಂತರ, ಕ್ಯಾಲಿಫೋರ್ನಿಯಾದಲ್ಲಿ ದೀಪಾವಳಿಯನ್ನು ‘ರಾಜ್ಯ ರಜೆ’ಯೆಂದು ಘೋಷಿಸಲಾಗಿದೆ.
ಸಂಪಾದಕೀಯ ನಿಲುವುಜಗತ್ತಿನಲ್ಲಿ ಹಿಂದೂಗಳ ಜನಸಂಖ್ಯೆ ಶೇ. 15 ರಷ್ಟಿದ್ದರೂ, ಹಿಂದೂಗಳ ಪ್ರಮುಖ ಹಬ್ಬಗಳಿಗೆ ಎಲ್ಲೆಡೆ ರಜೆ ಘೋಷಿಸುವಂತೆ ಜಗತ್ತಿನಾದ್ಯಂತ ಹಿಂದೂಗಳು ಪ್ರಯತ್ನಿಸುವುದು ಅವಶ್ಯಕವಾಗಿದೆ! |
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!