ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ನಡೆದ ದಾಳಿಯ ಘಟನೆ ಪೂರ್ವಯೋಜಿತ ! – ಗೃಹ ಸಚಿವ

ಮದ್ದೂರು ‘ಮಿನಿ ಪಾಕಿಸ್ತಾನ್’ ಆಗಿದೆ ! – ಸ್ಥಳೀಯ ಹಿಂದೂಗಳ ಆರೋಪ

ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ

ಮದ್ದೂರು – ಇಲ್ಲಿಯ ಗಣೇಶೋತ್ಸವ ಮೆರವಣಿಗೆ ಮಸೀದಿ ಹತ್ತಿರದಿಂದ ಹೋಗುತ್ತಿರುವಾಗ ಮುಸಲ್ಮಾನರು
ಕಲ್ಲು ತೂರಾಟ ಮಾಡಿರುವುದರಿಂದ ಗಲಭೆಗೆ ಸಂಭವಿಸಿತ್ತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೨೨ ಗಲಭೆಕೋರ ಮುಸಲ್ಮಾನರನ್ನು ಬಂಧಿಸಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದರ ಬಗ್ಗೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಇವರು ಪ್ರತಿಕ್ರಿಯಿಸುತ್ತಾ, ಈ ಕಲ್ಲು ತೂರಾಟದ ಘಟನೆ ಪೂರ್ವಯೋಜಿತವಾಗಿತ್ತು, ಎಂದು ಮಾಹಿತಿ ದೊರೆತಿದೆ. ಇದರ ಬಗ್ಗೆ ಪೊಲೀಸ ತನಿಖೆ ನಡೆಸಿ ಯೋಗ್ಯವಾದ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಎನ್. ಚೆಲುವರಾಯ ಸ್ವಾಮಿ ಇವರು ಕೂಡ ಈ ಪ್ರಕರಣದ ಉನ್ನತ ಮಟ್ಟದ ವಿಚಾರಣೆ ನಡೆಸಲಾಗುವುದೆಂದು ಹೇಳಿದ್ದಾರೆ. ಮೆರವಣಿಗೆಯ ಸಮಯದಲ್ಲಿ ವಿದ್ಯುತ್ ಕಡಿತ ಕೂಡ ಮಾಡಲಾಗಿರುವ ಮಾಹಿತಿ ಕೂಡ ದೊರೆತಿದೆ. ಮೇಲ್ನೋಟಕ್ಕೆ ಈ ಘಟನೆ ಪೂರ್ವಯೋಜಿತ ಎಂದು ಕಾಣುತ್ತದೆ, ಎಂದು ಅವರು ಹೇಳಿದರು.

ಕಾಂಗ್ರೆಸ್ಸನ್ನು ಆಯ್ಕೆ ಮಾಡಿರುವುದು ಇದು ನಮ್ಮ ದೊಡ್ಡ ತಪ್ಪು !ಪೋಲೀಸರಿಂದ ಹಲ್ಲೆಗೊಳಗಾದ ಹಿಂದೂ ಮಹಿಳೆ ಜ್ಯೋತಿ

ಸೆಪ್ಟೆಂಬರ್ ೭ ರಂದು ಮೆರವಣಿಗೆಯ ಮೇಲೆ ನಡೆದಿರುವ ದಾಳಿಯ ನಂತರ ಸೆಪ್ಟೆಂಬರ್ ೮ ರಂದು ಹಿಂದೂಗಳು ನಡೆಸಿರುವ ವಿರೋಧ ಪ್ರದರ್ಶನದ ಸಮಯದಲ್ಲಿ ಅವರ ಮೇಲೆ ಲಾಠಿಚಾರ್ಜ್ ಮಾಡಿದರು. ಆ ಸಮಯದಲ್ಲಿ ಓರ್ವ ಪೊಲೀಸ್ ಹವಾಲ್ದಾರನು ಜ್ಯೋತಿ ಎಂಬ ಓರ್ವ ಹಿಂದೂ ಮಹಿಳೆಯ ಮೇಲೆ ಲಾಠಿ ಎತ್ತಿದ ವಿಡಿಯೋ ಬೆಳಕಿಗೆ ಬಂದಿದೆ. ಜ್ಯೋತಿ ರಸ್ತೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾ, “೨ ಸಾವಿರ ರೂಪಾಯಿಯ ಗ್ಯಾರಂಟಿ ಯೋಜನೆಗಳಿಗಾಗಿ ನಾವು ಕಾಂಗ್ರೆಸ್ಸಿಗೆ ಮತ ಹಾಕಿ ಆರಿಸಿ ಕೊಟ್ಟೆವು. ಇದು ನಮ್ಮ ದೊಡ್ಡ ತಪ್ಪು ಆಗಿದೆ ಎಂದು ಹೇಳಿದರು.

ಜ್ಯೋತಿ ಮಾತು ಮುಂದುವರೆಸುತ್ತಾ, ಮುಸ್ಲಿಮರು ‘ಭಗವಾ ಧ್ವಜ ಇಳಿಸಿ’, ‘ಮೂರ್ತಿ ಬೇಗ ವಿಸರ್ಜನೆ ಮಾಡಿ’ ಎಂದು ಹೇಳಿದರು. ನಾವು ಅವರಂತೆ ಎಲ್ಲವೂ ಮಾಡಿದೆವು, ಆದರೂ ನಮಗೆ ಶಾಂತಿಯಿಂದ ಬದುಕಲು ಅವಕಾಶ ನೀಡುತ್ತಿಲ್ಲ. ಮುಸಲ್ಮಾನ ಜನರು ನಮ್ಮ ದೇವಸ್ಥಾನದ ಮುಂದೆ ಓಡಾಡಬಹುದು, ಕುಣಿದಾಡಬಹುದು ಆದರೆ ನಮಗೆ ಅಂತಹ ಅಧಿಕಾರ ಇಲ್ಲ. ಗಲಭೆಯಲ್ಲಿ ಜನರ ಮೇಲೆ ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಕೂಡ ದಾಳಿ ನಡೆದಿದೆ. “ನಮ್ಮ ಪ್ರದೇಶ ‘ಮಿನಿ ಪಾಕಿಸ್ತಾನ’ವಾಗಿದೆ. ಮಸೀದಿಗಳ ಮುಂದೆ ನಾವು ಓಡಾಡುವಂತಿಲ್ಲ. ರಾತ್ರಿ ಸಮಯದಲ್ಲಿ ಯುವಕರ ಕೈಗಳಲ್ಲಿ ಖಡ್ಗ ಮತ್ತು ದೊಣ್ಣೆಗಳು ಕಾಣಿಸುತ್ತವೆ. ನಾವೆಲ್ಲರೂ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು ! – ಹಿಂದುತ್ವನಿಷ್ಠರ ಬೇಡಿಕೆ

ಬೆಂಗಳೂರಿನ ಹಿಂದುತ್ವನಿಷ್ಠ ನಾಯಕ ತೇಜಸ್ ಗೌಡ ಅವರು, ಕಳೆದ ವರ್ಷ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಿಸರ್ಜನೆ ಮೆರವಣಿಗೆಯಲ್ಲಿ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು. ಈ ವರ್ಷ ಕೂಡ ಜಿಲ್ಲೆಯ ಮದ್ದೂರು ನಗರದ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿ ಹಿಂದುಗಳನ್ನು ಹೆದರಿಸುವ ಪ್ರಯತ್ನ ಮಾಡಲಾಗಿದೆ. ಇದರ ಕುರಿತು ಕೇಂದ್ರ ಗೃಹ ಇಲಾಖೆಯು ತಕ್ಷಣ ಮಧ್ಯಸ್ಥಿಕೆ ವಹಿಸಿ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು, ಎಂದು ಹೇಳಿದೆ.

ಸಂಪಾದಕೀಯ ನಿಲುವು

ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗೆ ಇದು ಪೂರ್ವಯೋಜಿತ ಷಡ್ಯಂತ್ರ ಎಂದು ಮೊದಲೇ ಏಕೆ ತಿಳಿಯಲಿಲ್ಲ ಅಥವಾ ಅದು ತಿಳಿದರು ಕೂಡ ಕಾಂಗ್ರೆಸ್ ಅದಕ್ಕೆ ತಟಸ್ಥವಾಗಿ ಇರಲು ಆದೇಶ ನೀಡಿತ್ತೇ ?