‘ರಾಷ್ಟ್ರ ರಕ್ಷಣಾ ಸೇನೆ’ಯು ಬಾನು ಮುಷ್ತಾಕ ಅವರ ಮನೆಗೆ ಹೋಗಿ ಮನವಿ ನೀಡಿದರು

ಹಾಸನ / ಬೆಂಗಳೂರು – ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತೆ ಮತ್ತು ಮತಾಂಧ ಮುಸ್ಲಿಂ ಲೇಖಕಿ ಬಾನು ಮುಷ್ತಾಕ್ ಅವರಿಗೆ ರಾಜ್ಯ ಸರಕಾರದಿಂದ ಆಹ್ವಾನ ನೀಡಲಾಗಿದೆ. ಇದಕ್ಕೆ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ‘ರಾಷ್ಟ್ರ ರಕ್ಷಣಾ ಸೇನೆ’ಯ ಹಿಂದುತ್ವನಿಷ್ಠರು ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಯ ಆಹ್ವಾನವನ್ನು ನಿರಾಕರಿಸುವಂತೆ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 3ರ ಬೆಳಿಗ್ಗೆ ಹಾಸನದಲ್ಲಿರುವ ಬಾನು ಮುಷ್ತಾಕ್ ಅವರ ಮನೆಗೆ ತೆರಳಿ, ಒಂದು ಮನವಿಯ ಮೂಲಕ ಅವರಿಗೆ ವಿನಂತಿಸಿದರು, ‘ನೀವು ಶ್ರೀ ಭುವನೇಶ್ವರಿ ದೇವಿಯ ವಿರುದ್ಧ ಮಾತನಾಡಿದ್ದೀರಿ. ದಸರಾ ರಾಷ್ಟ್ರೀಯ ಹಬ್ಬವಾದರೂ, ಅದು ನಮ್ಮ ಹಿಂದೂಗಳ ಹಬ್ಬವಾಗಿದೆ. ಆದ್ದರಿಂದ, ನಮ್ಮ ಸಂಸ್ಕೃತಿಯನ್ನು ಒಪ್ಪದವರು ದಸರಾ ಉತ್ಸವದಿಂದ ಹಿಂದೆ ಸರಿಯಬೇಕು. ನೀವು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬಹುದು; ಆದರೆ ದಸರಾ ಉದ್ಘಾಟನಾ ಕಾರ್ಯಕ್ರಮದಿಂದ ನೀವೇ ಸ್ವತಃ ಹಿಂದೆ ಸರಿಯಬೇಕು ಎಂಬುದು ನಮ್ಮ ವಿನಂತಿ’, ಎಂದು ಹೇಳಿದ್ದಾರೆ.
ನಂತರ ಸೆಪ್ಟೆಂಬರ್ 3ರ ಸಂಜೆ, ಹಾಸನ ಜಿಲ್ಲಾಡಳಿತವು ಬಾನು ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿ ಸರಕಾರದ ವತಿಯಿಂದ ಉತ್ಸವದ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಿದೆ.
‘ನಾನು ಹಿಂದೂ ಧರ್ಮದ ಪ್ರಕಾರ ದೇವಿಯನ್ನು ಪೂಜಿಸುವೆ!’ – ಬಾನು ಮುಷ್ತಾಕ್ ಅವರ ಭರವಸೆ

ಈ ಸಂಬಂಧ ‘ಸನಾತನ ಪ್ರಭಾತ’ ಪತ್ರಿಕೆಯು ‘ರಾಷ್ಟ್ರ ರಕ್ಷಣಾ ಸೇನೆ’ಯ ಅಧ್ಯಕ್ಷ ಸುರೇಶ್ ಗೌಡ ಅವರೊಂದಿಗೆ ಮಾತುಕತೆ ನಡೆಸಿದೆ. ಈ ವೇಳೆ ಅವರು, ನಾವು ಸೆಪ್ಟೆಂಬರ್ 1ರಂದು ಈ ವಿಷಯಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿ ನಡೆಸಿ ಬಾನು ಮುಷ್ತಾಕ್ ಅವರಿಗೆ ಈ ಉತ್ಸವದ ಆಹ್ವಾನವನ್ನು ಸ್ವೀಕರಿಸದಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದೇವೆ. ನಂತರ ಸೆಪ್ಟೆಂಬರ್ 3ರ ಬೆಳಿಗ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ನಮ್ಮ ನಿಲುವನ್ನು ಅವರಿಗೆ ವಿವರಿಸಿದ್ದೇವೆ. ಆಗ ಅವರು ‘ನಾನು ಹಿಂದೂ ಧರ್ಮದ ಪ್ರಕಾರ ಪೂಜೆ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ ಎಂದರು.
ಇದಕ್ಕೂ ಮುಂಚೆ ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯು ‘ಸರಕಾರ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಮನವಿಯ ಮೂಲಕ ಆಗ್ರಹಿಸಿದೆ. ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.
ಹಿಂದೂ-ಮುಸ್ಲಿಂರ ನಡುವೆ ಸಂಘರ್ಷ ಸೃಷ್ಟಿಸಲು ಕಾಂಗ್ರೆಸ್ಸಿನ ನೀಚ ರಾಜಕೀಯ! – ಮುಸ್ಲಿಂ ನಾಯಕ ಸಾದಿಕ್ ಪಾಷಾ

ಈ ಪ್ರಕರಣದಲ್ಲಿ ಬೆಂಗಳೂರಿನ ‘ಸದ್ಭಾವನಾ ಯೂತ್ ಸೋಶಿಯಲ್ ವೆಲ್‌ಫೇರ್ ಅಸೋಸಿಯೇಷನ್’ ಎಂಬ ಮುಸ್ಲಿಂ ಸಾಮಾಜಿಕ ಸಂಘಟನೆಯ ಅಧ್ಯಕ್ಷರಾದ ಸಾದಿಕ್ ಪಾಷಾ ಅವರೊಂದಿಗೆ ‘ಸನಾತನ ಪ್ರಭಾತ’ ಸಂಪರ್ಕಿಸಿದೆ. ಈ ವೇಳೆ ಪಾಷಾ ಅವರು, ಬಾನು ಮುಷ್ತಾಕ್ ಪ್ರಕರಣದಲ್ಲಿ ಕಾಂಗ್ರೆಸ್ ಧರ್ಮದ ರಾಜಕೀಯ ಮಾಡುತ್ತಿದೆ. ಇದು ಅತ್ಯಂತ ಅಯೋಗ್ಯವಾಗಿದೆ. ಈ ಪ್ರಕರಣದ ಮೂಲಕ ಕಾಂಗ್ರೆಸ್ ಮುಸ್ಲಿಮರನ್ನು ಸಂತುಷ್ಟಪಡಿಸಲು ನೋಡುತ್ತಿದೆ. ಆದಾಗ್ಯೂ, ಬಾನು ಮುಷ್ತಾಕ್ ಹಿಂದೂ ಸಂಪ್ರದಾಯಗಳ ಪ್ರಕಾರ ಮೈಸೂರು ದಸರಾ ಉತ್ಸವದಲ್ಲಿ ದೇವಿಯನ್ನು ಪೂಜಿಸಿದರೆ, ಅದರಿಂದ ಹಿಂದೂಗಳಷ್ಟೇ ಅಲ್ಲ, ಮುಸ್ಲಿಮರ ಧಾರ್ಮಿಕ ಭಾವನೆಗಳಿಗೂ ನೋವಾಗುತ್ತದೆ ಎಂದರು.
ಪಾಷಾ ಮಾತು ಮುಂದುವರೆಸಿ, ಪರಸ್ಪರ ಧರ್ಮಗಳನ್ನು ಗೌರವಿಸಬೇಕು; ಆದರೆ ಉದ್ದೇಶಪೂರ್ವಕವಾಗಿ ಇನ್ನೊಂದು ಧರ್ಮದ ಪೂಜಾ ಸ್ಥಳಕ್ಕೆ ಏಕೆ ಹೋಗಬೇಕು? ಕಾಂಗ್ರೆಸ್ ಸರಕಾರ ಮುಸ್ಲಿಮರ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಹಿಂದೂ-ಮುಸ್ಲಿಂರ ನಡುವೆ ಶತ್ರುತ್ವವನ್ನು ಸೃಷ್ಟಿಸುತ್ತಿದೆ. ಈ ರೀತಿ ಧರ್ಮದ ರಾಜಕೀಯ ನಡೆಯಬಾರದು, ಎಂದರು.
ಬಾನು ಮುಷ್ತಾಕ್ ಅವರ ಅವಕಾಶವಾದಿತನ! – ಹಿಂದೂ ಜನಜಾಗೃತಿ ಸಮಿತಿ

ಈ ಸಂದರ್ಭದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ ಮೋಹನ ಗೌಡಾ ಅವರು ‘ಸನಾತನ ಪ್ರಭಾತ’ಕ್ಕೆ ಮಾತನಾಡಿ, ಬಾನು ಮುಷ್ತಾಕ್ ಅವರು ‘ಹಿಂದೂ ಧರ್ಮದ ಪ್ರಕಾರ ದೇವಿಯನ್ನು ಪೂಜಿಸಲು ಸಿದ್ಧತೆ ತೋರಿಸಿದ್ದಾರೆ’ ಇದು ಒಳ್ಳೆಯ ಸಂಗತಿಯಾಗಿದೆ. ಆದರೂ, ‘ಕರ್ನಾಟಕ ಸಾಹಿತ್ಯ ಸಮ್ಮೇಳನ’ದಲ್ಲಿ ಅವರು ಕನ್ನಡ ಭಾಷೆಯ ನಾಡದೇವತೆ (6 ಕೋಟಿ ಹಿಂದೂಗಳ ದೇವತೆ) ಆದ ಕನ್ನಡ ಶ್ರೀ ಭುವನೇಶ್ವರಿ ಮಾತೆಗೆ ಅವಮಾನ ಮಾಡಿದ್ದರು. ಹಾಗೆಯೇ ಹಿಂದೂಗಳ ದತ್ತಪೀಠಕ್ಕೆ ಮುಸ್ಲಿಮರಿಗೆ ಪ್ರವೇಶಾವಕಾಶ ನೀಡಬೇಕೆಂದು ಹಿಂದೂ ವಿರೋಧಿ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಈ ಬಗ್ಗೆ ಅವರ ಅಭಿಪ್ರಾಯವೇನು? ಈ ಪ್ರಕರಣಗಳಲ್ಲಿ ಅವರು ಸಾರ್ವಜನಿಕವಾಗಿ ಹಿಂದೂಗಳ ಕ್ಷಮೆಯಾಚಿಸುತ್ತಾರೆಯೇ? ಅವರು ಹಾಗೆ ಮಾಡದಿದ್ದರೆ, ಇದು ಬಾನು ಮುಷ್ತಾಕ್ ಅವರ ಅವಕಾಶವಾದಿತನವನ್ನು ತೋರಿಸುತ್ತದೆ. ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಈ ಷಡ್ಯಂತ್ರವಾಗಿದೆ. ಮೈಸೂರು ದಸರಾ ಮಹೋತ್ಸವದ ಸಾವಿರಾರು ವರ್ಷಗಳಿಂದ ನಡೆದು ಬಂದ ಪರಂಪರೆಯ ಉದ್ಘಾಟನೆಯನ್ನು ಹಿಂದೂ ಧರ್ಮದ ಪ್ರಕಾರ ಆಚರಣೆ ಮಾಡುವವರು ಮಾತ್ರ ಮಾಡಬೇಕು ಎಂದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!