
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಚಿತ್ತಗಾಂವ್ ನಗರದಲ್ಲಿ ಪ್ರಿಯಾಂಕಾ ದತ್ತಾ ಎಂಬ ಹಿಂದೂ ಮಹಿಳೆಯ ಮೃತದೇಹವು ಆಕೆ ಕೆಲಸ ಮಾಡುತ್ತಿದ್ದ ‘ನಾದಿಯಾಸ್ ಮೇಕ್ ಓವರ್’ ಬ್ಯೂಟಿ ಪಾರ್ಲರ್ ನ ಸ್ನಾನಗೃಹದಲ್ಲಿ ಅನುಮನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆ ಈ ಪಾರ್ಲರ್ ನ ಒಂದು ಶಾಖೆಯ ವ್ಯವಸ್ಥಾಪಕಿಯಾಗಿದ್ದರು. ಇದು ಆತ್ಮಹತ್ಯೆಯಲ್ಲ, ಕೊಲೆಯಾಗಿರಬಹುದು ಎಂದು ಪ್ರಾಥಮಿಕವಾಗಿ ಸಂದೇಹ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿತ್ತಗಾಂವ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕಳುಹಿಸಿದ್ದು, ಪ್ರಿಯಾಂಕಾ ಅವರ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದೆ.
ಇದಕ್ಕೂ ಮೊದಲು, ಬಾಂಗ್ಲಾದೇಶದ ಮುನ್ಸಿಗಂಜ್‌ನಲ್ಲಿ ಹಿಂದೂ ಪತ್ರಕರ್ತ ಬಿಭುರಂಜನ್ ಸರಕಾರ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿತ್ತು. ಹೀಗಾಗಿ, ಅಲ್ಪಸಂಖ್ಯಾತ ಹಿಂದೂಗಳು ಈ ರೀತಿಯಾಗಿ ಅನುಮನಾಸ್ಪದ ರೀತಿಯಲ್ಲಿ ಮೃತಪಡುತ್ತಿರುವ ಇದು ಸತತ ಎರಡನೇ ಘಟನೆಯಾಗಿದೆ.
ಸಂಪಾದಕೀಯ ನಿಲುವುಇನ್ನೆಷ್ಟು ಹಿಂದೂಗಳ ಸಾವು ಆದ ಮೇಲೆ ಸರಕಾರ ಬಾಂಗ್ಲಾದೇಶದ ಪೀಡಿತ ಹಿಂದೂಗಳನ್ನು ರಕ್ಷಿಸಲಿದೆ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara