ಚಿತ್ರದ ‘ಟ್ರೈಲರ್’ ನೋಡದೇ ಸರಕಾರ ನಿಷೇಧ ಹೇಗೆ ಹೇರುತ್ತದೆ? – ಹಿರಿಯ ನಟ ಮಿಥುನ್ ಚಕ್ರವರ್ತಿ

‘ದಿ ಬಂಗಾಲ್ ಫೈಲ್ಸ್’ ಚಿತ್ರದ ‘ಟ್ರೈಲರ್’ ಅನ್ನು ಪ್ರಸಾರ ಮಾಡದಂತೆ ಏಕಾಏಕಿ ನಿಷೇಧ; ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಂದ ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ವಾಗ್ದಾಳಿ!

(‘ಟ್ರೈಲರ್’ ಎಂದರೆ ಚಿತ್ರದ ಜಾಹೀರಾತು ಮಾಡುವ ವಿಡಿಯೋ)

ಕೋಲಕಾತಾ – ಬಿಡುಗಡೆಯ ಹಾದಿಯಲ್ಲಿರುವ ‘ದ ಬಂಗಾಲ್ ಫೈಲ್ಸ್’ ಚಿತ್ರದ ‘ಟ್ರೈಲರ್’ ಅನ್ನು ಪ್ರಸಾರ ಮಾಡದಂತೆ ಏಕಾಏಕಿ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಥುನ್ ಅವರು ಸರಕಾರವನ್ನು ಉದ್ದೇಶಿಸಿ ಮಾತನಾಡಿ, ‘ಸರಕಾರವು ಟ್ರೈಲರ್ ನೋಡದಿದ್ದರೆ ನಿಷೇಧ ಹೇಗೆ ಹೇರಲು ಸಾಧ್ಯ?’. “ಈ ಚಿತ್ರವು ಸತ್ಯವನ್ನು ಹೇಳುತ್ತದೆ ಮತ್ತು ಆಘಾತಕಾರಿಯಾಗಿದೆ. ಸತ್ಯ ಹೊರಬರುವುದೆಂದು ಸರಕಾರಕ್ಕೆ ಭಯವಿದೆ, ಆದರೆ ಸತ್ಯವನ್ನು ಎಷ್ಟು ದಿನ ತಡೆಯಲು ಸಾಧ್ಯ?” ಎಂದು ಅವರು ಹೇಳಿದರು. ಚಿತ್ರದ ನಿರ್ಮಾಪಕಿ ಮತ್ತು ನಟಿ ಪಲ್ಲವಿ ಜೋಶಿ ಕೂಡ ಈ ‘ಟ್ರೈಲರ್’ ಪ್ರದರ್ಶನವನ್ನು ನಿಷೇಧಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಸರಕಾರವನ್ನು ದೂಷಿಸಿದ್ದಾರೆ.

‘ದಿ ಬಂಗಾಲ್ ಫೈಲ್ಸ್’ ಚಿತ್ರದಲ್ಲಿ ಏನಿದೆ?

‘ದಿ ಬಂಗಾಲ್ ಫೈಲ್ಸ್’ ಚಿತ್ರವು ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು 1946 ರಲ್ಲಿ ನಡೆದ ಕೋಲಕಾತಾ ಹತ್ಯಾಕಾಂಡ ಮತ್ತು ನೊವಾಖಾಲಿ ಗಲಭೆಗಳನ್ನು ಆಧರಿಸಿದೆ. ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಅವರು ಹುಚ್ಚನ, ಆದರೆ ಸತ್ಯವನ್ನು ಮಾತನಾಡುವ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಹತ್ತಿಕ್ಕಲಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ!