ಹಿಂದೂ ವಿರೋಧಿ ಪೊಲೀಸರು ಅಫ್ಜಲ್ ಖಾನ್ ವಧೆಯ ಫಲಕವನ್ನು ತೆಗೆದುಹಾಕಿದ ನಂತರ, ಆಕ್ರೋಶಿತ ಹಿಂದೂಗಳಿಂದ ಮತ್ತೊಂದು ಫಲಕ ಸ್ಥಾಪನೆ !

ದಾವಣಗೆರೆಯ ಘಟನೆ

ದಾವಣಗೆರೆ – ಗಣೇಶೋತ್ಸವದ ಅಂಗವಾಗಿ ಇಲ್ಲಿನ ಮಟ್ಟಿಕಲ್ ಪ್ರದೇಶದಲ್ಲಿ ಹಿಂದೂಗಳು ಹಾಕಿದ್ದ ಅಫ್ಜಲ್ ಖಾನ್ ವಧೆಯ ಫಲಕವನ್ನು ಪೊಲೀಸರು ತೆಗೆದುಹಾಕಿದ್ದರು. ಇದರ ನಂತರ, 24 ಗಂಟೆಯಲ್ಲೇ ಅಂದರೆ ಆಗಸ್ಟ್ 29 ರ ಸಂಜೆ, ಆಕ್ರೋಶಿತ ಹಿಂದೂಗಳು ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನನ ಕರುಳನ್ನು ಹೊರತೆಗೆಯುತ್ತಿರುವ ಮತ್ತೊಂದು ಫಲಕವನ್ನು ಹಾಕಿದರು.

ಸಂಪೂರ್ಣ ಘಟನೆಯ ವಿವರ !

1. ಗಣೇಶೋತ್ಸವಕ್ಕಾಗಿ ಹಿಂದೂಗಳು ಅಫ್ಜಲ್ ಖಾನ್ ವಧೆಯ ಫಲಕವನ್ನು ಹಾಕಿದ್ದರು; ಆದರೆ ಪೊಲೀಸರು ಅದನ್ನು ತೆಗೆದುಹಾಕುವಂತೆ ಹಿಂದೂಗಳಿಗೆ ಎಚ್ಚರಿಕೆ ನೀಡಿದ್ದರು. ಆಗಸ್ಟ್ 29 ರಂದು ಬೆಳಿಗ್ಗೆ 10:30 ರೊಳಗೆ ಅದನ್ನು ತೆಗೆದುಹಾಕುವಂತೆ ಆದೇಶಿಸಿದ್ದರು. ಆದರೆ, ಪೊಲೀಸರು ಅದನ್ನು ರಾತ್ರಿ 1:30 ಕ್ಕೇ ತೆಗೆದುಕೊಂಡು ಹೋದರು. ಇದರಿಂದ ಹಿಂದೂಗಳು ಕೆರಳಿದರು ಮತ್ತು ಸಂಜೆಯ ಹೊತ್ತಿಗೆ ಇನ್ನೊಂದು ಫಲಕವನ್ನು ಹಾಕಿದರು.

2. ಹಿಂದಿನ ದಿನ, ಪೊಲೀಸರು ಮತ್ತು ಹಿಂದೂ ಯುವಕರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ, ಅಫ್ಜಲ್ ಖಾನ್ ವಧೆಯ ಚಿತ್ರದ ಬಗ್ಗೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದಾಗ, ಹಿಂದೂ ಯುವಕರು “ಜಿಲ್ಲೆಯಲ್ಲಿರುವ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬರ ಎಲ್ಲಾ ಫ್ಲೆಕ್ಸ್‌ಗಳನ್ನು ತೆಗೆದುಹಾಕಿ” ಎಂದು ಪೊಲೀಸರನ್ನು ಒತ್ತಾಯಿಸಿದರು.

3. “ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತದೆ” ಎಂದು ಕಾರಣ ನೀಡಿ, ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಪೊಲೀಸರು ಫಲಕವನ್ನು ತೆಗೆದುಹಾಕಿದ ನಂತರ, ಹಿಂದೂ ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಮತ್ತೊಂದು ಫಲಕವನ್ನು ಹಾಕಿದರು. ಈ ಫಲಕದ ಹಿನ್ನೆಲೆಯಲ್ಲಿ ಕತ್ತಿ ಮತ್ತು ಹಿಂದವಿ ಧ್ವಜಗಳು ಇದ್ದವು.

4. ಇದರ ನಂತರ ಪೊಲೀಸರು ಕೆಲವು ಹಿಂದೂ ಯುವಕರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

  • ಹಿಂದೂಗಳ ವಿರೋಧವನ್ನು ನಿರ್ಲಕ್ಷಿಸಿ ಕ್ರೂರ ಟಿಪ್ಪು ಸುಲ್ತಾನನ ಜಯಂತಿಗೆ ರಕ್ಷಣೆ ನೀಡುವ ಪೊಲೀಸರು, ಹಿಂದೂಗಳು ಹಾಕಿದ್ದ ಅಫ್ಜಲ್ ಖಾನ್ ವಧೆಯ ಫಲಕವನ್ನು ತೆಗೆದುಹಾಕುತ್ತಾರೆ ಎಂಬುದನ್ನು ನೆನಪಿಡಿ!
  • ರಾಜ್ಯದಲ್ಲಿ ಕಾಂಗ್ರೆಸ್‌ನ ಹಿಂದೂ ವಿರೋಧಿ ಆಡಳಿತವನ್ನು ನೋಡಿದರೆ, ಭವಿಷ್ಯದಲ್ಲಿ ಹಿಂದೂಗಳು ಹಬ್ಬಗಳು, ಉತ್ಸವಗಳು ಮತ್ತು ಶೌರ್ಯ ದಿನಗಳನ್ನು ಆಚರಿಸುವುದರ ಮೇಲೆ ನಿಷೇಧ ಹೇರಿದರೆ ಆಶ್ಚರ್ಯಪಡಬೇಕಾಗಿಲ್ಲ!