|

ನವದೆಹಲಿ – ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಭರಮೌರನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಣಿಮಹೇಶ ಯಾತ್ರೆಗೆ ತೆರಳಿದ್ದ 11 ಭಕ್ತರು ಭೂಕುಸಿತದಿಂದ ಸಾವನ್ನಪ್ಪಿದ್ದಾರೆ. ಮರಣ ಹೊಂದಿದವರಲ್ಲಿ 3 ಜನ ಪಂಜಾಬ ರಾಜ್ಯದವರಾಗಿದ್ದು, ಒಬ್ಬರು ಉತ್ತರ ಪ್ರದೇಶದವರಾಗಿದ್ದಾರೆ ಮತ್ತು 5 ಜನರು ಚಂಬಾದವರು. ಇನ್ನೂ ಇಬ್ಬರ ಗುರುತು ಪತ್ತೆಯಾಗಿಲ್ಲ. ಅಧಿಕಾರಿಗಳ ಪ್ರಕಾರ, ಬೆಟ್ಟದಿಂದ ಕಲ್ಲುಗಳು ಬಿದ್ದು ಮತ್ತು ಆಮ್ಲಜನಕದ ಕೊರತೆಯಿಂದ ಜನರು ಸಾವನ್ನಪ್ಪಿದ್ದಾರೆ. ಭರಮೌರನಲ್ಲಿ ಸುಮಾರು 3 ಸಾವಿರ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದಾರೆ. ಕಳೆದ ವಾರ ಈ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 7 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. 21 ದಿನಗಳಲ್ಲಿ ಮೇಘಸ್ಫೋಟದಿಂದ 3 ರಾಜ್ಯಗಳಲ್ಲಿ 80 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಉತ್ತರಾಖಂಡ ರಾಜ್ಯದಲ್ಲಿ ಸಂಭವಿಸಿದ ಘಟನೆಗಳು!
1. ಉತ್ತರಾಖಂಡದಲ್ಲಿ ಅನೇಕ ಕಡೆ ಮೇಘಸ್ಫೋಟ!

ಆಗಸ್ಟ್ 28 ರ ರಾತ್ರಿ ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿ ಮತ್ತು ಟಿಹರಿ ಗಡವಾಲ ಜಿಲ್ಲೆಗಳಲ್ಲಿ ಮೇಘಸ್ಫೋಟ ಸಂಭವಿಸಿತು. ಇದರಿಂದಾಗಿ ಅನೇಕ ಜನರು ನಾಪತ್ತೆಯಾಗಿದ್ದಾರೆ. ರುದ್ರಪ್ರಯಾಗದ ಪೀಡಿತ ಪ್ರದೇಶದಿಂದ 70 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. 4 ನೇಪಾಳಿ ಮತ್ತು 4 ಸ್ಥಳೀಯರು ಸೇರಿದಂತೆ 8 ಜನ ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿಕೊಂಡಿದ್ದಾರೆ.
2. ನೀರಿನಲ್ಲಿ ಮುಳುಗಿದ ಬದರಿನಾಥ ಯಾತ್ರೆಯ ಹೆದ್ದಾರಿ !
ರುದ್ರಪ್ರಯಾಗದಲ್ಲಿನ ಅಲಕನಂದಾ ಮತ್ತು ಮಂದಾಕಿನಿ ನದಿಗಳ ನೀರು ಅಪಾಯದ ಮಟ್ಟದಲ್ಲಿದೆ. ಬದರಿನಾಥ ಯಾತ್ರೆಯ ಹೆದ್ದಾರಿಯು ಅಲಕನಂದಾ ನದಿಯಲ್ಲಿ ಮುಳುಗಿದೆ. ಇದರಿಂದಾಗಿ ಶ್ರೀನಗರ-ರುದ್ರಪ್ರಯಾಗ ನಡುವಿನ ಸಂಚಾರ ಸ್ಥಗಿತಗೊಂಡಿದೆ.
3. ಕೇದಾರನಾಥ ಕಣಿವೆಯ ಲಾವಾರಾ ಗ್ರಾಮದ ರಸ್ತೆಯ ಮೇಲಿನ ಒಂದು ಸೇತುವೆ ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿದೆ.
4. ಚಮೋಲಿಯಲ್ಲಿ ಅನೇಕ ಕುಟುಂಬಗಳು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಭಯವಿದೆ.
ಪಂಜಾಬನಲ್ಲಿನ ಪ್ರವಾಹದಿಂದ ಇಲ್ಲಿಯವರೆಗೆ 6 ಜನರ ಸಾವು!

ಪಂಜಾಬನ ಪಠಾಣಕೋಟ್, ಗುರುದಾಸಪುರ, ಅಮೃತಸರ, ತರನತಾರಣ, ಫಾಜಿಲ್ಕಾ ಮತ್ತು ಕಪೂರ್ತಲಾ ಜಿಲ್ಲೆಗಳು ಪ್ರವಾಹದ ಸುಳಿಯಲ್ಲಿ ಸಿಲುಕಿವೆ. ಇಲ್ಲಿನ 250ಕ್ಕೂ ಹೆಚ್ಚು ಗ್ರಾಮಗಳು 5 ರಿಂದ 15 ಅಡಿ ನೀರಿನಲ್ಲಿ ಮುಳುಗಿವೆ. ಇಲ್ಲಿಯವರೆಗೆ 6 ಜನರು ಪ್ರವಾಹದಿಂದ ಸಾವನ್ನಪ್ಪಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ.
ಇತರ ಪ್ರಮುಖ ಘಟನೆಗಳು!
1. ಹರಿಯಾಣದ ಪಂಚಕುಲಾದಲ್ಲಿ ಟಾಂಗರಿ ನದಿಗೆ ನಿರ್ಮಿಸಿರುವ ಸೇತುವೆಯ ದೊಡ್ಡ ಭಾಗವು ಕೊಚ್ಚಿಹೋಗಿದೆ.
2. ಒಡಿಶಾದ 100 ಗ್ರಾಮಗಳು ಸತತ ಐದನೇ ದಿನವೂ ಪ್ರವಾಹದ ನೀರಿನಲ್ಲಿ ಮುಳುಗಿವೆ.
3. ಹಿಮಾಚಲ ಪ್ರದೇಶದ ಮಂಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿದೆ.
4. ಛತ್ತೀಸಗಢ ರಾಜ್ಯದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದ 2 ಸಾವಿರಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯದಲ್ಲಿ 200 ಮನೆಗಳು ಕುಸಿದಿವೆ.
ಶ್ರೀ ವೈಷ್ಣೋದೇವಿ ಯಾತ್ರೆ ಸತತ ನಾಲ್ಕನೇ ದಿನವೂ ಸ್ಥಗಿತ!

ಶ್ರೀ ವೈಷ್ಣೋದೇವಿ ಯಾತ್ರಾ ಮಂಡಳಿಯು ಯಾತ್ರಾರ್ಥಿಗಳಿಗೆ ಮುಂದಿನ ಸೂಚನೆ ಬರುವವರೆಗೂ ಪ್ರಯಾಣ ಮಾಡದಿರಲು ಸಲಹೆ ನೀಡಿದೆ. ಅಲ್ಲದೆ, ಯಾತ್ರಾ ಮಂಡಳಿ ಮತ್ತು ಸ್ಥಳೀಯ ಆಡಳಿತವು ಹೊರಡಿಸಿದ ಅಧಿಕೃತ ನಿರ್ದೇಶನಗಳನ್ನು ಪಾಲಿಸಲು ತಿಳಿಸಿದೆ. ಆಗಸ್ಟ್ 26 ರಂದು ಕತ್ರಾ ಇಲ್ಲಿನ ಶ್ರೀ ವೈಷ್ಣೋದೇವಿ ಯಾತ್ರೆಯ ಮಾರ್ಗದಲ್ಲಿ ಮೇಘಸ್ಫೋಟದಿಂದ ಭೂಕುಸಿತ ಸಂಭವಿಸಿತ್ತು. ಅದರಲ್ಲಿ 35 ಜನರು ಸಾವನ್ನಪ್ಪಿದ್ದರು, ಮತ್ತು 23 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರದ 115 ವರ್ಷಗಳ ಹಳೆಯ ದಾಖಲೆ ಮುರಿಯಿತು, ಮಳೆಯಿಂದ 41 ಜನರ ಸಾವು!
ಜಮ್ಮು-ಕಾಶ್ಮೀರದಲ್ಲಿ ಸತತವಾಗಿ ಸುರಿಯುತ್ತಿರುವ ಅತಿ ಭಾರೀ ಮಳೆಯು 115 ವರ್ಷಗಳ ದಾಖಲೆಯನ್ನು ಮುರಿದಿದೆ. ಇಲ್ಲಿಯವರೆಗೆ ಮಳೆಯಿಂದ 41 ಜನರು ಸಾವನ್ನಪ್ಪಿದ್ದಾರೆ. ಎಲ್ಲಾ ಶಾಲೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ. ಜೇಲಂ ನದಿಯ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿರುವುದರಿಂದ ದಕ್ಷಿಣ ಕಾಶ್ಮೀರದಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. |

ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)