೧. ನಾಗಪುರದಲ್ಲಿ ನಿಷೇಧಿತ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಓರ್ವ ಕಾರ್ಯಕರ್ತನ ಬಂಧನ
‘ಆರ್.ಎಮ್.ಎಸ್. ಸಿದ್ಧಿಕೀಯನ್ನು ಪೊಲೀಸರು ನಾಗಪುರದಲ್ಲಿ ಬಂದಿಸಿದರು. ಇವನು ನಿಷೇಧಿತ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಕಾರ್ಯಕರ್ತನಾಗಿದ್ದು ಅವನಿಗೆ ಪಾಕಿಸ್ತಾನದ ಗೂಢಚರ ಸಂಸ್ಥೆ ‘ಐ.ಎಸ್.ಐ’ಯೊಂದಿಗೆ ನೇರ ನಂಟಿದೆ ಎಂಬುದು ತಿಳಿದುಬಂದಿದೆ. ಇದರ ಜೊತೆಗೆ ಅವನು ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೂ ನಿಯಮಿತವಾಗಿ ಸಂಪರ್ಕದಲ್ಲಿರುತ್ತಾನೆ. ಇಂತಹ ವ್ಯಕ್ತಿಗೆ ‘ಆಪರೇಶನ್ ಸಿಂದೂರ’ ಜೀರ್ಣಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ಅವನು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತವನ್ನು ಟೀಕಿಸುವುದು, ದೇಶವಿರೋಧಿ ಘೋಷಣೆಗಳನ್ನು ನೀಡುವುದು, ಇತ್ಯಾದಿ ಕೃತ್ಯಗಳನ್ನು ಮಾಡುವುದು ಆಶ್ಚರ್ಯವೇನಲ್ಲ. ಅವನನ್ನು

ನಾಗಪುರದ ಒಂದು ಹೊಟೇಲ್‌ನಲ್ಲಿ ಈಶಾ ಪ್ರಿಯಾ ಕುಮಾರಿ ಎಂಬ ಯುವತಿಯೊಂದಿಗೆ ಬಂಧಿಸಲಾಯಿತು. ಈ ಘಟನೆಯಲ್ಲಿ ಪೊಲೀಸರು ಆ ಯುವತಿಯನ್ನು ವಿಚಾರಣೆ ಮಾಡಿ ಬಿಟ್ಟುಬಿಟ್ಟರು. ಸಿದ್ದಿಕಿಯನ್ನು ಮಾತ್ರ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳಕ್ಕೆ ಒಪ್ಪಿಸಲಾಗಿದೆ. ಅನಂತರ ಮಹಾರಾಷ್ಟ್ರ ಪೊಲೀಸರು ಕೇರಳ ಪೊಲೀಸರ ಸಹಾಯದಿಂದ ಕೊಚ್ಚಿಯಲ್ಲಿದ್ದ ಅವನ ಮನೆಯ ಮೇಲೆ ದಾಳಿ ಮಾಡಿದರು. ಅವನ ವಿರುದ್ಧ ಈ ಹಿಂದೆಯೇ ಕ್ರಿಮಿನಲ್ ಅಪರಾಧ ದಾಖಲಾಗಿರುವುದು ಪೊಲೀಸರಿಗೆ ತಿಳಿಯಿತು.
೨. ಪತ್ರಕರ್ತ ರಾಜದೀಪ
ಸರ್‌ದೇಸಾಯಿಯ ದೇಶವಿರೋಧಿ ಹೇಳಿಕೆ ಭಾರತೀಯ ಸೈನ್ಯದ ‘ಆಪರೇಶನ್ ಸಿಂದೂರ’ದಿಂದ ೧೦೦ ಕ್ಕಿಂತಲೂ ಹೆಚ್ಚು ಭಯೋತ್ಪಾದಕರ ಹತ್ಯೆಯಾಗಿದೆ. ಇದು ಅರಗಿಸಿಕೊಳ್ಳಲು ಅನೇಕರಿಗೆ ಆಗಿಲ್ಲ. ಆದ್ದರಿಂದ ಇಂತಹ ಜನರು ಚಡಪಡಿಸುತ್ತಿದ್ದಾರೆ. ಪತ್ರಕರ್ತ ರಾಜದೀಪ ಸರ್‌ದೇಸಾಯಿ ಯವರು, ‘ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು ಹಾಗೂ ಅದಕ್ಕೆ ಹೊಂದಿಕೊಂಡು ವಾಸ್ತವಿಕ ನಿಯಂತ್ರಣ ರೇಖೆಯನ್ನು ಸಿದ್ಧಪಡಿಸಬೇಕು. ಭಾರತ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿದರೆ ಪಾಕಿಸ್ತಾನ ಸುಮ್ಮನಿರುವುದಿಲ್ಲ. ಅದು ಪ್ರತಿಕಾರ ನೀಡಿದರೆ ಅದಕ್ಕೆ ಪ್ರತ್ಯುತ್ತರ ನೀಡುವ ಕ್ಷಮತೆಭಾರತಕ್ಕಿದೆಯೇ ?’ ಎಂದೆಲ್ಲ ಹೇಳಿದರು. ವಾಸ್ತವದಲ್ಲಿ ಜಗತ್ತಿನ ಯಾವ ದೇಶಕ್ಕೂ ನಾವು ಉತ್ತರಿಸುವ ಪ್ರಮೇಯವೇ ಬರಲಿಲ್ಲ; ಏಕೆಂದರೆ ಭಾರತೀಯ ಸೈನ್ಯವು ಭಯೋತ್ಪಾದಕರ ೯ ನೆಲೆÀಗಳನ್ನು ಧೂಳೀಪಟ ಮಾಡಿ ೧೦೦ ಕ್ಕೂ ಹೆಚ್ಚು ಭಯೋತ್ಪಾದಕರನ್ನು ಯಮಸದನಕ್ಕೆ ಅಟ್ಟಿತು. ಪಾಕಿಸ್ತಾನವು ಭಾರತದ ಜನವಸತಿಯ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದಾಗ ಅದರ ವಾಯುನೆಲೆಗಳನ್ನು ಧ್ವಂಸಗೊಳಿಸಲಾಯಿತು. ಭಾರತವು ೨ ದಿನದೊಳಗೆ ನೀಡಿದ ಮಹಾಭಯಂಕರ ಪ್ರತ್ಯುತ್ತರದಿಂದ, ಪಾಕಿಸ್ತಾನ ಯುದ್ಧ ವಿರಾಮಕ್ಕಾಗಿ ಅಮೇರಿಕಾದ ಕಾಲು ಹಿಡಿಯಬೇಕಾಯಿತು. ಇಷ್ಟು ಪರಾಕ್ರಮ ತೋರಿಸಿದ ಭಾರತೀಯ ಸೈನ್ಯದ ಸಮರ್ಥನೆಗಾಗಿ ಪ್ರತಿಯೊಬ್ಬ ಭಾರತೀಯನೂ ಎದ್ದು ನಿಲ್ಲುವ ಅವಶ್ಯಕತೆಯಿತ್ತು; ಆದರೆ ಕೆಲವರಿಗೆ ಭಾರತದ ಪರಾಕ್ರಮವನ್ನು ಸಹಿಸಲು ಸಾಧ್ಯವಾಗಲಿಲ್ಲ.
೩. ನ್ಯಾಯಾಲಯಗಳು ಮತ್ತು ಮಾನವಾಧಿಕಾರದವರಿಂದ ದೇಶದ್ರೋಹಿಗಳ ವೈಭವೀಕರಣ
ಹರಿಯಾಣಾದ ಒಬ್ಬ ಮುಸಲ್ಮಾನ ಪ್ರಾಧ್ಯಾಪಕನು ಸಾಮಾಜಿಕ ಮಾಧ್ಯಮದಲ್ಲಿ ಭಾರತವನ್ನು ಟೀಕಿಸಿದನು. ಅನಂತರ ರಾಜ್ಯ ಮಹಿಳಾ ಆಯೋಗದ ಆದೇಶದಿಂದ ಅವನ ವಿರುದ್ಧ ಕ್ರಿಮಿನಲ್ ಅಪರಾಧವನ್ನು ದಾಖಲಿಸಲಾಯಿತು. ‘ಪಾಕಿಸ್ತಾನಕ್ಕೆ ಬೆಂಬಲ ನೀಡಿ ಭಾರತದ ಸೈನಿಕರನ್ನು ಟೀಕಿಸಿರುವುದರಿಂದ ಅವನ ವಿರುದ್ಧ ಅಪರಾಧವನ್ನು ದಾಖಲಿಸಿರಿ’, ಎಂದು ಅವನ ಊರಿನ ಸರಪಂಚರು ಕೂಡ ವಿನಂತಿಸಿದ್ದರು. ೧೮.೫.೨೦೨೫ ರಂದು ಪೊಲೀಸರು ಅವನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತಳ್ಳಿದರು. ಅಲ್ಲಿ ಪೊಲೀಸರ ಪೌರುಷವನ್ನು ತೋರಿಸಲಾಯಿತು. ಅನಂತರ ತಕ್ಷಣ ಮಾನವಾಧಿಕಾರ ಆಯೋಗವು ಪೊಲೀಸರಿಗೆ ನೋಟೀಸು ಜ್ಯಾರಿ ಮಾಡಿ ಸ್ಪಷ್ಟೀಕರಣ ಕೇಳಿತು. ಅದೇ ವೇಳೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸ ಲಾಯಿತು. ನ್ಯಾಯಾಲಯ ಅವನಿಗೆ ತಕ್ಷಣ ಜಾಮೀನು ನೀಡಿತು ಮತ್ತು ಈ ರೀತಿಯ ಹೇಳಿಕೆಗಳನ್ನು ನೀಡಬಾರದೆಂದು ಬುದ್ಧಿವಾದ ಹೇಳಿತು. ಇಂತಹದ್ದೇ ಘಟನೆ ಮಹಾರಾಷ್ಟ್ರದಲ್ಲಿ ಘಟಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಭಾರತದ ವಿರುದ್ಧ ಲೇಖನಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಒಬ್ಬ ೧೯ ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು ಬಂಧಿಸಲಾಯಿತು. ಅವಳು ನ್ಯಾಯಾಂಗ ಕಸ್ಟ್ಟಡಿಯಲ್ಲಿದ್ದಳು, ಆಗ ‘ಜನರು ಸರಕಾರದ ವಿರುದ್ಧ ಮಾತನಾಡಬಾರದೇ ?’, ಎಂದು ಉಚ್ಚ ನ್ಯಾಯಾಲಯ ಪ್ರಶ್ನಿಸಿತು. ಇವೆಲ್ಲ ಪ್ರಸಂಗಗಳನ್ನು ನೋಡುವಾಗ ‘ನ್ಯಾಯಾಲಯಗಳು ಮತ್ತು ಮಾನವಾಧಿಕಾರ ಸಂಘಟನೆಗಳು ಕೇವಲ ಭಾರತದ್ವೇಷ ಮಾಡುವವರಿಗಾಗಿಯೆ ಇವೆಯೇ ?’, ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಉದ್ಭವಿಸಬಹುದು.
೪. ಮಾನವಾಧಿಕಾರ ಸಂಘಟನೆಗಳು, ಮಹಿಳಾ ಆಯೋಗ ಹಾಗೂ ಮೇಲಿನ ಹಂತದ ನ್ಯಾಯಾಲಯಗಳಿಗೆ ದೇಶವಿರೋಧಿಗಳ ಕುರಿತು ಇರುವ ಮೋಹ ದೇಶಕ್ಕೆ ಚಿಂತೆಯ ವಿಷಯವಾಗಿದೆ !
ಪಹಲಗಾಮ್‌ನಲ್ಲಿ ಸಾವಿಗೀಡಾದ ಪ್ರವಾಸಿಗರು, ಭಾರತೀಯ ಸೈನ್ಯ ಹಾಗೂ ಭಾರತ ಸರಕಾರದ ವಿರುದ್ಧ ೩ ದಿನ ವಿಷಕಾರಿದ ಜನರಿಗೆ ಯಾವತ್ತೂ ‘ಕಾರಣಕೇಳಿ’ ನೋಟೀಸು ನೀಡಿ ಮಾನವಾಧಿಕಾರದವರು ಕರೆಸಲಿಲ್ಲ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಮ್ ೩೭೦ ಮತ್ತು ೩೫-ಅ ರದ್ದುಪಡಿಸಿದ ನಂತರವೂ ಹಿಂದೂಗಳ ಹತ್ಯೆಯಾಗುತ್ತಿದೆ, ಆಗ ಅಲ್ಲಿನ ಆಡಳಿತ ಅಥವಾ ಪೊಲೀಸರಿಗೆ ಮಾನವಾಧಿಕಾರದವರು ಸ್ಪಷ್ಟೀಕರಣ ಕೇಳುವುದಿಲ್ಲ, ನಕ್ಸಲರು ಅನೇಕ ವರ್ಷಗಳಿಂದ ಭದ್ರತಾದಳ ಮತ್ತು ನಿರಪರಾಧಿ ನಾಗರಿಕರನ್ನು ಹತ್ಯೆ ಮಾಡುತ್ತಿದ್ದಾರೆ, ಭಾರತದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮತಾಂಧರು ಗಲಭೆಯೆಬ್ಬಿಸಿ ಹಿಂದೂಗಳನ್ನು ಹತ್ಯೆ ಮಾಡುತ್ತಾರೆ, ಇದರ ಕಡೆಗೆ ಮಾನವಾಧಿಕಾರ ಸಂಘಟನೆ, ಮಹಿಳಾ ಆಯೋಗ ಹಾಗೂ ನ್ಯಾಯಾಲಯಗಳು ತಾವಾಗಿಯೆ ಗಮನ ಹರಿಸಿರುವುದು ಎಲ್ಲಿಯೂ ಕಾಣಿಸುವುದಿಲ್ಲ. ಆದ್ದರಿಂದ ಇವೆಲ್ಲವೂ ಕಾನೂನಿನ ಪಾಲನೆ ಮಾಡುವ ನಾಗರಿಕರಿಗೆ ಚಿಂತೆಯ ವಿಷಯವಾಗಿದೆ. ಇದರಲ್ಲಿ ಪರಿವರ್ತನೆಯಾಗಬೇಕಾದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆಯಿದೆ.’
|| ಶ್ರೀಕೃಷ್ಣಾರ್ಪಣಮಸ್ತು ||
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೮.೫.೨೦೨೫)

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು