ರಷ್ಯಾದಿಂದ ಅಮೆರಿಕಕ್ಕೆ ಬಂದ ಬೆದರಿಕೆಗಳಿಗೆ ಪ್ರತ್ಯುತ್ತರ ನೀಡಲು ಭಾರತದ ಮೇಲೆ ಆಮದು ಸುಂಕ ಹೇರಿಕೆ ! – ಅಮೆರಿಕ

ವಾಷಿಂಗ್ಟನ (ಅಮೆರಿಕ) – ಅಮೆರಿಕಾವು ಭಾರತಕ್ಕೆ ನೋಟಿಸ್ ಜಾರಿ ಮಾಡಿದ್ದು, ಅದರಲ್ಲಿ ಆಗಸ್ಟ್ 27 ರಿಂದ ಹೆಚ್ಚುವರಿ ಆಮದು ಸುಂಕಗಳನ್ನು ವಿಧಿಸಲಾಗುವುದು ಎಂದು ಹೇಳಿದೆ. ಈ ನೋಟಿಸ್ ಅನ್ನು ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ವಿಭಾಗವು ನೀಡಿದ್ದು, ರಷ್ಯಾದ ಸರಕಾರದಿಂದ ಅಮೆರಿಕಕ್ಕೆ ಬಂದ ಬೆದರಿಕೆಗಳಿಗೆ ಪ್ರತ್ಯುತ್ತರಕ್ಕೆ ಈ ಸುಂಕವನ್ನು ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇದರ ಅಡಿಯಲ್ಲಿ ಭಾರತವು ಹೊಸ ಸುಂಕಗಳನ್ನು ಎದುರಿಸಬೇಕಾಗುತ್ತದೆ. (ಅಮೆರಿಕದ ತಜ್ಞರು ಮತ್ತು ಟ್ರಂಪ್ ಪಕ್ಷದ ನಾಯಕರು ಸಹ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಇಷ್ಟಾದರೂ ಟ್ರಂಪ್ ತಮ್ಮ ಹಟಮಾರಿತನದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ, ಹಾಗಾಗಿ ಅದರ ಫಲಿತಾಂಶವನ್ನು ಅವರು ಎದುರಿಸಬೇಕಾಗುತ್ತದೆ! – ಸಂಪಾದಕರು)
ನೋಟಿಸ್‌ನಲ್ಲಿ, ಆಗಸ್ಟ್ 27, 2025 ರಂದು ಮಧ್ಯಾಹ್ನ 12:01 ರ ನಂತರ ಅಮೆರಿಕದಲ್ಲಿ ಬಳಸಲು ತಂದ ಅಥವಾ ಗೋದಾಮಿನಿಂದ ಹೊರತೆಗೆಯಲಾದ ಭಾರತೀಯ ಉತ್ಪನ್ನಗಳ ಮೇಲೆ ಈ ಸುಂಕವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ರಷ್ಯಾದಿಂದ ಬರುವ ಕೆಲವು ವಸ್ತುಗಳ ಆಮದನ್ನು ಈಗಾಗಲೇ ನಿಷೇಧಿಸಲಾಗಿದೆ. ಇದರಲ್ಲಿ ಕಚ್ಚಾ ತೈಲ, ಪೆಟ್ರೋಲಿಯಂ ಮತ್ತು ಇತರ ಇಂಧನಗಳು, ತೈಲ ಮತ್ತು ಅವುಗಳ ಉತ್ಪನ್ನಗಳು ಸೇರಿವೆ.
ಸಂಪಾದಕೀಯ ನಿಲುವು
|
ಎಷ್ಟೇ ಆರ್ಥಿಕ ಒತ್ತಡ ಬಂದರೂ, ನಾವು ಅದನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ! – ಪ್ರಧಾನಿ ಮೋದಿ![]() ಈ ಪೂರ್ವನಿರ್ಧರಿತ ಆಮದು ಸುಂಕ ಹೆಚ್ಚಳಕ್ಕೆ ಆಗಸ್ಟ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ಣಾವತಿಯಿಂದ ಪ್ರತ್ಯುತ್ತರ ನೀಡಿದರು. ಅವರು, ಭಾರತವು ಆರ್ಥಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ ಮತ್ತು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತದೆ. ಅಲ್ಲದೆ, ಸರಕಾರವು ಎಂದಿಗೂ ಸಣ್ಣ ಉದ್ಯಮಿಗಳು, ರೈತರು ಮತ್ತು ಪಶುಪಾಲಕರಿಗೆ ಹಾನಿ ಮಾಡುವುದಿಲ್ಲ ಎಂದು ಹೇಳಿದರು. ಅವರು ಮಾತು ಮುಂದುವರೆಸಿ, ಇಂದು ಜಗತ್ತಿನಲ್ಲಿ ಆರ್ಥಿಕ ಸ್ವಾರ್ಥದ ರಾಜಕೀಯವಿದೆ. ಪ್ರತಿಯೊಬ್ಬರೂ ತಮ್ಮ ಲಾಭಕ್ಕಾಗಿ ತೊಡಗಿಸಿಕೊಂಡಿದ್ದಾರೆ. ನಾವು ಇದನ್ನು ಬಹಳ ಚೆನ್ನಾಗಿ ನೋಡುತ್ತಿದ್ದೇವೆ ಎಂದು ಅವರು ಹೇಳಿದರು. ಸಂಪಾದಕೀಯ ನಿಲುವುಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಭಾರತವು ಪ್ರತ್ಯುತ ನೀಡುವ ಸಾಮರ್ಥ್ಯವನ್ನೂ ನಿರ್ಮಿಸಲು ಪ್ರಯತ್ನಿಸಬೇಕು! |

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation