
ಕಳೆದ ಒಂದು ತಿಂಗಳಿಂದ ದೆಹಲಿ ಸೇರಿದಂತೆ ದೇಶದೆಲ್ಲೆಡೆಯು ‘ಪ್ರಾಣಿ’ ವಿಷಯ ಚರ್ಚೆಯಲ್ಲಿದೆ. ಸರ್ವೋಚ್ಚ ನ್ಯಾಯಾಲಯವು ರಾಜಧಾನಿ ದೆಹಲಿಯಿಂದ ನಾಯಿಗಳನ್ನು ತೊಲಗಿಸುವಂತೆ ನೀಡಿದ ನಿರ್ಧಾರದಿಂದಾಗಿ ‘ಪೇಟಾ’ ಸಂಸ್ಥೆಯು ಆಕ್ರೋಶಗೊಂಡಿದೆ. ಈ ನಿಮಿತ್ತ, ‘ಪೇಟಾ’ ಸಂಸ್ಥೆಗೆ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸುವ ಅಥವಾ ತನ್ನ ಅಸ್ತಿತ್ವವನ್ನು ತೋರಿಸುವ ಅವಕಾಶ ಸಿಕ್ಕಿದೆ. ಸರ್ವೋಚ್ಚ ನ್ಯಾಯಾಲಯವು ಬೀದಿ ನಾಯಿಗಳನ್ನು ತಕ್ಷಣವೇ ಹಿಡಿದು ಶಾಶ್ವತವಾಗಿ ಆಶ್ರಯ ಕೇಂದ್ರಗಳಲ್ಲಿ ಇರಿಸುವುದನ್ನು ಕಡ್ಡಾಯಗೊಳಿಸಿದೆ. ಈ ಸರ್ವೋಚ್ಚ ನಿರ್ಧಾರವನ್ನು ಅಮಾನವೀಯ, ಕಾನೂನುಬಾಹಿರ ಮತ್ತು ಅತಾರ್ಕಿಕ ಎಂದು ಕರೆದು, ಅಮೆರಿಕಾದಲ್ಲಿ ಸ್ಥಾಪಿತವಾಗಿರುವ ‘ಪೇಟಾ’ ಕಾರ್ಯಕರ್ತರು ಮತ್ತು ಭಾರತದ ಪ್ರಾಣಿಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಉಪದ್ರವವನ್ನು ಉತ್ಕಟತೆಯಿಂದ ಬೆಂಬಲಿಸುವ ಜನರು ಕಂಡುಬರುವ ಜಗತ್ತಿನ ಏಕೈಕ ದೇಶವೆಂದರೆ ಭಾರತವಾಗಿರಬಹುದು. ವಾಸ್ತವದಲ್ಲಿ ಅಂತಹ ಜನರ ಬುದ್ಧಿಶಕ್ತಿಯನ್ನು ಪರೀಕ್ಷಿಸಬೇಕು.
ಸರಕಾರಿ ಅಂಕಿಅಂಶಗಳ ಪ್ರಕಾರ, ೨೦೨೨ ರಿಂದ ೨೦೨೪ ರವರೆಗೆ ದೇಶಾದ್ಯಂತ ೮೯ ಲಕ್ಷ ೫೮ ಸಾವಿರದ ೧೪೩ ನಾಯಿ ಕಡಿತದ ಘಟನೆಗಳಾಗಿವೆ. ಪ್ರಸ್ತುತ ವರ್ಷದ ಮೊದಲ ತಿಂಗಳ ಅಂಕಿಅಂಶವು ೪ ಲಕ್ಷ ೨೯ ಸಾವಿರದ ೬೬೪ ಆಗಿದ್ದು, ಇದು ಅತ್ಯಂತ ಆತಂಕಕಾರಿಯಾಗಿದೆ. ದೆಹಲಿಯಲ್ಲಿ ಬೀದಿ ನಾಯಿಗಳಿಗೆ ಪಾವ್ ಮತ್ತು ಬಿಸ್ಕೆಟ್ ತಿನ್ನಿಸುವವರ ಮತ್ತು ಚಳಿಗಾಲದಲ್ಲಿ ಕಂಬಳಿಗಳನ್ನು ನೀಡುವವರ ಸಂಖ್ಯೆ ಸಾಕಷ್ಟಿದೆ. ಈ ರೀತಿ ನಾಯಿಗಳ ಮೇಲೆ ಪ್ರೀತಿ ತೋರಿಸುವ ಜನರು ಅವುಗಳನ್ನು ತಮ್ಮ ಐಷಾರಾಮಿ ಮನೆಗಳಿಗೆ ಕರೆದುಕೊಂಡು ಹೋಗಲು ಸಿದ್ಧರಿಲ್ಲ ಎನ್ನುವ ಚಿತ್ರಣ ಕಂಡು ಬರುತ್ತದೆ. ನಾಯಿಗಳಿಗೂ ಸುಲಭವಾಗಿ ಆಹಾರ ಸಿಗುವುದರಿಂದ ಅವುಗಳ ಸಂಖ್ಯೆ ಹೆಚ್ಚಲು ಪ್ರೋತ್ಸಾಹ ಸಿಗುತ್ತದೆ. ೧೦ ರೂಪಾಯಿಯ ಪಾವ್ ಮತ್ತು ೫ ರೂಪಾಯಿಯ ಬಿಸ್ಕೆಟ್ ನೀಡಿ ನಾಯಿಗಳ ಬಗ್ಗೆ ಸಹಾನುಭೂತಿ ತೋರುವವರ ಅಂಧ ಪ್ರೀತಿಯು, ಬೀದಿ ನಾಯಿಗಳು ಒಂದು ಚಿಕ್ಕ ಮಗುವನ್ನು ಕಚ್ಚಿ ನೋವನ್ನುಂಟು ಮಾಡುವ ಮನಕಲುಕುವ ದೃಶ್ಯವನ್ನು ನೋಡಿದ ನಂತರವಾದರೂ ಕಡಿಮೆಯಾಗುತ್ತದೆಯೇ ? ಎನ್ನುವ ಸಂಶಯವಿದೆ. ನಾಯಿಗಳ ಸಮಸ್ಯೆಯಿಂದ ಜನರು ಬಳಲುತ್ತಿರು ವಾಗ, ಪ್ರಾಣಿಪ್ರೇಮಿಗಳಿಗೆ ‘ಮನುಷ್ಯನೂ ಒಂದು ಪ್ರಾಣಿ ಮತ್ತು ಅವನನ್ನೂ ನಾವು ಪ್ರೀತಿಸಬೇಕು’ ಎಂದು ಅರ್ಥವಾದರೆ ಅದು ಸುದಿನವಾಗಿದೆ. ಇಂದಿನ ಕಾಲದಲ್ಲಿ ಮನುಷ್ಯನಿಗೆ ಅಲ್ಲ, ನಾಯಿಯ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದೇ ಕಲಿಯುಗ !
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಅನೇಕ ಸುಪ್ರಸಿದ್ಧ ಕಲಾವಿದರು ನಾಯಿಗಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ಬಗ್ಗೆ ದುಃಖ ವ್ಯಕ್ತಪಡಿಸುವ ಕಲಾವಿದರು ವೈಯಕ್ತಿಕ ಜೀವನದಲ್ಲಿ ಮಾಂಸಾಹಾರವನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅವರ ಪ್ರಾಣಿಪ್ರೇಮದ ಈ ದ್ವಿಮುಖ ಪಾತ್ರವನ್ನು ಜನರು ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದಾರೆ. ಆದರೂ, ಹಣದ ಮೇಲಿನ ಪ್ರೀತಿಯಿಂದ ಅವರ ಪ್ರಾಣಿಪ್ರೇಮವು ಭವಿಷ್ಯದಲ್ಲಿ ಕಡಿಮೆಯಾಗುವುದಿಲ್ಲ ಎಂಬುದು ಖಚಿತ.
ಕಠಿಣ ಕ್ರಮದ ನಿರೀಕ್ಷೆ !
ದೇಶದ ‘ಪ್ರಾಣಿ ಜನನ ನಿಯಂತ್ರಣ ನಿಯಮಗಳು, ೨೦೨೩’ ರ ಪ್ರಕಾರ, ಬೀದಿ ನಾಯಿಗಳನ್ನು ಹಿಡಿದು, ಅವುಗಳ ಸಂತಾನಹರಣ ಮತ್ತು ಲಸಿಕೆ ನೀಡಿ, ಅವುಗಳ ಪ್ರದೇಶದಲ್ಲಿ ಮತ್ತೆ ಬಿಡುವುದು ಅಪೇಕ್ಷಿತವಾಗಿದೆ. ಆದರೆ, ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶವು ದೆಹಲಿಗೆ ಈ ನಿಯಮವನ್ನು ಬದಲಾಯಿಸಿ, ‘ನಾಯಿಗಳನ್ನು ಮರಳಿ ಬಿಡದೇ ಆಶ್ರಯ ಕೇಂದ್ರಗಳಿಗೆ ಬಿಡುವುದು’ ಎಂಬ ವಿಧಾನವನ್ನು ಜಾರಿಗೊಳಿಸಿದೆ. ಇದರಿಂದ ಬೀದಿ ನಾಯಿಗಳ ಹೆಚ್ಚು ಅಪಾಯವಿರುವ ಪ್ರದೇಶಗಳಲ್ಲಿ ತಕ್ಷಣದ ಪರಿಣಾಮ ಉಂಟಾಗಬಹುದು.
ಜಗತ್ತಿನ ಅನೇಕ ದೇಶಗಳು ಬೀದಿ ನಾಯಿಗಳ ಸಮಸ್ಯೆಯ ಮೇಲೆ ನಿಯಂತ್ರಣ ಸಾಧಿಸಿವೆ. ಟರ್ಕಿಯಲ್ಲಿ ನಗರಪಾಲಿಕೆ ಮಟ್ಟದಲ್ಲಿ ನಾಯಿಗಳನ್ನು ಹಿಡಿಯುವುದು, ಅವುಗಳಿಗೆ ಲಸಿಕೆ ಮತ್ತು ಸಂತಾನಹರಣ ಮಾಡುವುದು ಹಾಗೂ ಅವುಗಳನ್ನು ದತ್ತು ನೀಡುವುದಕ್ಕೆ ಆದ್ಯತೆ ನೀಡಲಾಗುತ್ತದೆ, ಆದರೆ ಆಕ್ರಮಣಕಾರಿ ಅಥವಾ ಗುಣಪಡಿಸಲಾಗದ ಕಾಯಿಲೆ ಇರುವ ನಾಯಿಗಳಿಗೆ ದಯಾಮರಣದ ಅವಕಾಶವಿದೆ. ಜಪಾನನಲ್ಲಿಯೂ ಉಪದ್ರವಿ ನಾಯಿಗಳನ್ನು ಕೊಲ್ಲಲಾಗುತ್ತದೆ. ಭಾರತದಲ್ಲಿಯೂ ಉಪದ್ರವಿ ನಾಯಿಗಳನ್ನು ಕೊಲ್ಲಲು ಕಾನೂನು ಇರಲೇಬೇಕು. ಈ ಬಗ್ಗೆ ‘ನಾಯಿಗಳ ಹಕ್ಕು’ ಎಂಬ ಪ್ರಕಾರವು ಮನುಷ್ಯರ ಹಕ್ಕುಗಳ ಮೇಲಿನ ಅನ್ಯಾಯವಾಗಿದೆ. ನಾವು ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡಿದಾಗ, ನಾವು ಅವರ ಹಕ್ಕುಗಳ ಬಗ್ಗೆ ವಿಚಾರ ಮಾಡುವುದಿಲ್ಲ ಬದಲಾಗಿ ಸಮಾಜದ ಬಗ್ಗೆ ಯೋಚಿಸುತ್ತೇವೆ. ಅದೇ ರೀತಿ, ಉಪದ್ರವಿ ಮತ್ತು ಹಿಂಸಾತ್ಮಕ ನಾಯಿಗಳನ್ನು ಕಾಡಿನಲ್ಲಿ ಬಿಡುವುದು ಅಥವಾ ಕೊಲ್ಲುವುದು ಸೂಕ್ತ ಮಾರ್ಗವಾಗಿದೆ.
ಸರ್ವೋಚ್ಚ ನ್ಯಾಯಾಲಯ ಕೂಡ ಬೀದಿ ನಾಯಿಗಳ ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣದ ಈ ಆದೇಶ ನೀಡಿದೆ. ಇದರ ಬಗ್ಗೆ ಸಮಾಜದಿಂದ ಯಾವುದೇ ಪ್ರತಿಕ್ರಿಯೆಗಳು ವ್ಯಕ್ತವಾದರೂ, ಸರ್ವೋಚ್ಚ ನ್ಯಾಯಾಲಯದ ನಿರ್ಧಾರದ ಕಠಿಣ ಅನುಷ್ಠಾನವು ಸಂಪೂರ್ಣವಾಗಿ ಆಡಳಿತ ಯಂತ್ರದ ಕೈಯಲ್ಲಿದೆ. ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆಗಳು ಅಥವಾ ನಗರಪಾಲಿಕೆಗಳು ನಾಯಿಗಳ ಸಂತಾನಹರಣಕ್ಕೆ ಗಮನ ಹರಿಸದೆ, ಕೇವಲ ಅವುಗಳನ್ನು ನಗರದ ಹೊರಗೆ ಬಿಡುತ್ತವೆ ಎಂದು ೨೦೨೨ ರಲ್ಲಿ, ಕೇಂದ್ರ ಪಶುಸಂಗೋಪನಾ ಸಚಿವಾಲಯವು ಗಮನಿಸಿತ್ತು. ಅಲ್ಲಿಂದ ಆ ನಾಯಿಗಳು ಮತ್ತೆ ಮೂಲ ಸ್ಥಳಕ್ಕೆ ಬರುತ್ತವೆ ಮತ್ತು ಸಮಸ್ಯೆ ಹಾಗೆಯೇ ಉಳಿಯುತ್ತದೆ. ಕೇಂದ್ರ ಸರಕಾರವು ‘ರೇಬೀಸ್ ತಡೆಗಟ್ಟುವ ಲಸಿಕೆ’ ಮತ್ತು ‘ಸಂತಾನಹರಣ’ ಈ ಎರಡನ್ನೂ ಸ್ಥಳೀಯ ಸಂಸ್ಥೆಗಳಿಗೆ ಕಡ್ಡಾಯಗೊಳಿಸಿದೆ. ಹೀಗಿದ್ದರೂ, ಇದರ ಸರಿಯಾದ ಅನುಷ್ಠಾನವಾಗುತ್ತಿಲ್ಲ ಎಂದು ಕೇಂದ್ರದ ಪಶುಸಂಗೋಪನಾ ಸಚಿವಾಲಯವು ಸ್ಥಳೀಯ ಸಂಸ್ಥೆಗಳನ್ನು ಟೀಕಿಸಿತ್ತು. ಪಶುಸಂಗೋಪನಾ ಸಚಿವಾಲಯವು ಕೇವಲ ಟೀಕೆ ಮಾಡದೇ, ನ್ಯಾಯಾಲಯದ ಆದೇಶದ ಪ್ರಕಾರ ಕ್ರಮ ಕೈಗೊಳ್ಳು ವುದು ಮತ್ತು ಆ ಕೆಲಸದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ. ಆದ್ದರಿಂದ, ಸರ್ವೋಚ್ಚ ನ್ಯಾಯಾಲಯವು ನಿರ್ಣಯ ನೀಡಿದಾಗ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಶಿಸೋಣ.
‘ಪೇಟಾ’ ಸ್ವತಃ ಕ್ರಮ ಕೈಗೊಳ್ಳಬೇಕು !

ಬೀದಿ ನಾಯಿಗಳ ದಾಳಿಯಲ್ಲಿ ಎಷ್ಟೇ ಜನರು ಗಾಯಗೊಂಡರೂ, ಸಾವಿಗೀಡಾದರೂ, ಪ್ರಾಣಿಪ್ರೇಮಿ ಸಂಘಟನೆಗಳು ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಡುವುದಿಲ್ಲ. ಈ ಜನರು ತಕ್ಷಣವೇ ನ್ಯಾಯಾಲಯದ ಬಾಗಿಲು ತಟ್ಟಿ, ನ್ಯಾಯಾಲಯದ ಸಮಾಜೋಪಯೋಗಿ ಆದೇಶಗಳಿಗೆ ಅಡ್ಡಿಪಡಿಸುತ್ತಾರೆ. ಸತ್ತ ಜನರ ಬಗ್ಗೆ ಈ ಜನರು ದುಃಖ ವ್ಯಕ್ತಪಡಿಸುವುದಿಲ್ಲ. ಈಗ ನ್ಯಾಯಾಲಯವು ಸಮಾಜೋಪಯೋಗಿ ತೀರ್ಪು ನೀಡಿದೆ, ಅದಕ್ಕಾಗಿ ಕೃತಿಶೀಲ ಪ್ರಯತ್ನ ಮಾಡುವ ಬದಲು, ನಾಯಿಗಳ ಸಂಖ್ಯೆ ಹೆಚ್ಚಿದೆ, ಅವುಗಳಿಗಾಗಿ ಆಶ್ರಯ ಕೇಂದ್ರಗಳ ಸಂಖ್ಯೆ ಸಾಕಾಗುತ್ತದೆಯೇ ? ಆಶ್ರಯ ಕೇಂದ್ರಗಳ ನಿರ್ವಹಣೆಯನ್ನು ಯಾರು ಮಾಡುತ್ತಾರೆ ? ಅದಕ್ಕಾಗಿ ಹಣವನ್ನು ಯಾರು ಖರ್ಚು ಮಾಡುತ್ತಾರೆ ? ಎಂದು ಪ್ರಶ್ನಿಸುತ್ತಾ, ನಾಯಿಯಂತೆ ತಮ್ಮದೇ ಬಾಲವನ್ನು ಹಿಡಿಯಲು ಪ್ರಯತ್ನಿಸುತ್ತಾ ಸುತ್ತು ಹಾಕುತ್ತಿದ್ದಾರೆ.
ಅಮೆರಿಕಾದ ‘ಪೇಟಾ’ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಫಾರ್ ಅನಿಮಲ್ಸ್) ಸಂಸ್ಥೆಯು ತನ್ನ ಉದ್ದೇಶಗಳ ಪ್ರಕಾರ ಕೆಲಸ ಮಾಡುವ ಬದಲು, ಸಿಕ್ಕ ಅವಕಾಶವನ್ನು ದುರುಪಯೋಗಿಸುತ್ತಿರುವುದು ಕಾಣುತ್ತದೆ. ಅದು ಬುದ್ಧಿಯಾಚೆಗಿನ ತರ್ಕಗಳನ್ನು ನೀಡಿ ಮತ್ತು ವಿರುದ್ಧ ನಿಲುವನ್ನು ತಳೆದು, ತಥಾಕಥಿತ ಪ್ರಾಣಿಪ್ರೇಮದ ಹೆಸರಿನಲ್ಲಿ ಭಾರತೀಯರನ್ನು ಗೊಂದಲಕ್ಕೀಡು ಮಾಡಲು ಪ್ರಯತ್ನಿಸುತ್ತಿದೆ. ೩೫೦ ಕೋಟಿ ರೂಪಾಯಿಗಳ ಬಜೆಟ್ ಹೊಂದಿರುವ ಈ ಸಂಸ್ಥೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತದೆ, ಇದರ ಉದ್ದೇಶ ‘ಪ್ರಾಣಿಗಳ ಸಂರಕ್ಷಣೆ, ಅವುಗಳ ಆರೋಗ್ಯವನ್ನು ಕಾಪಾಡಿ ಮೂಲ ಸ್ಥಳಕ್ಕೆ ಬಿಡುವುದು’ ಎಂದು ಹೇಳಲಾಗುತ್ತದೆ. ಇದು ನಿಜ ಹೌದೋ ಅಲ್ಲವೋ ಎಂಬುದು ‘ಪೇಟಾ’ ಜಾಲತಾಣದಿಂದ ಸ್ಪಷ್ಟವಾಗುವುದಿಲ್ಲ. ಆದರೂ, ‘ಪೇಟಾ’ ತನ್ನ ಉದ್ದೇಶವನ್ನು ಬಿಟ್ಟು ದುರುದ್ದೇಶಪೂರ್ವಕ ಕೆಲಸಕ್ಕೆ ಪ್ರಸಿದ್ಧವಾಗಿದೆ. ‘ಪೇಟಾ’ ನಿಜವಾಗಿಯೂ ಪ್ರಾಣಿ ಸಂರಕ್ಷಣೆಗಾಗಿ ಕೆಲಸ ಮಾಡುವುದಿದ್ದರೆ, ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಸರಕಾರಕ್ಕೆ ಸಂಪೂರ್ಣವಾಗಿ ಸಹಾಯ ಮಾಡಬೇಕು. ಪ್ರತಿಕ್ರಿಯೆಗಳನ್ನು ನೀಡುವ ಬದಲು ಅಗಾಧ ಪ್ರಮಾಣದಲ್ಲಿ ಸಿಗುವ ದೇಣಿಗೆಯಿಂದ ‘ಪೇಟಾ’ವು ನಾಯಿಗಳಿಗಾಗಿ ಆಶ್ರಯ ಕೇಂದ್ರಗಳನ್ನು ನಡೆಸುವು ದಾದರೆ ಯಾವುದೇ ಅಭ್ಯಂತರವಿಲ್ಲ.
ಸುಪ್ರೀಂ ಕೋರ್ಟ್ಗೆ 5 ಹೊಸ ನ್ಯಾಯಾಧೀಶರ ಸೇರ್ಪಡೆ; ಒಂದು ಹುದ್ದೆ ಮಾತ್ರ ಖಾಲಿ!
ಉಚ್ಚ ನ್ಯಾಯಾಲಯಗಳು 3 ತಿಂಗಳಿಗಿಂತ ಹೆಚ್ಚು ಕಾಲ ತೀರ್ಪನ್ನು ಕಾಯ್ದಿರಿಸಬಾರದು! – ಸರ್ವೋಚ್ಚ ನ್ಯಾಯಾಲಯ
ಸಿ.ಬಿ.ಎಸ್.ಇ.ಯ ತ್ರಿಭಾಷಾ ನಿಯಮದ ಅನುಷ್ಠಾನದ ಕುರಿತು ತನಿಖೆ ನಡೆಯಲಿದೆ! – ಸರ್ವೋಚ್ಚ ನ್ಯಾಯಾಲಯ : CBSE Three Language Rule
ಅಕ್ರಮ ವಲಸೆ ಸಮಸ್ಯೆ ಎದುರಿಸಲು ಕೇಂದ್ರ ಸರಕಾರದಿಂದ ಸಮಿತಿ ಸ್ಥಾಪನೆ
ಮತದಾರರ ಪಟ್ಟಿಯ ವಿಶೇಷ ಆಳವಾದ ಪರಿಶೀಲನೆ ಮಾಡುವುದು ಚುನಾವಣಾ ಆಯೋಗದ ಅಧಿಕಾರ! – ಸುಪ್ರೀಂ ಕೋರ್ಟ್
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft