ಬಾಂಗ್ಲಾದೇಶದ ಪತ್ರಕರ್ತ ಸಲಾಹುದ್ದೀನ್ ಶೋಯೆಬ್ ಚೌಧುರಿ ಅವರ ದಾವೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಸೇನೆಯಲ್ಲಿ ವಜಾಗೊಂಡಿದ್ದ ಮೇಜರ್, ಜೊತೆಗೆ ‘ಅನ್ಸರ್ ಅಲ್ ಇಸ್ಲಾಂ’ ಎಂಬ ಜಿಹಾದಿ ಸಂಘಟನೆಯ ಮುಖ್ಯಸ್ಥ ಮತ್ತು ಅಲ್ ಕಾಯ್ದಾದ ಸ್ಥಳೀಯ ಗುಂಪಿನ ನಾಯಕ ಸೈಯದ್ ಜಿಯಾಉಲ್ ಹಕ್ ಝಿಯಾ ಇವನ ಮೇಲೆ ಅಮೆರಿಕ ಇಟ್ಟಿದ್ದ 50 ಲಕ್ಷ ಡಾಲರ್ (41 ಕೋಟಿ 50 ಲಕ್ಷ ರೂಪಾಯಿ) ಬಹುಮಾನವನ್ನು ರದ್ದುಗೊಳಿಸಿದೆ ಎಂದು ಬಾಂಗ್ಲಾದೇಶದ ಪತ್ರಕರ್ತ ಸಲಾಹುದ್ದೀನ್ ಶೋಯೆಬ್ ಚೌಧುರಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿದ್ದಾರೆ. ಜಿಯಾ ವಿರುದ್ಧ ಅಮೆರಿಕದ ಪ್ರಜೆ ಅಭಿಜಿತ ರಾಯ್ ಅವರನ್ನು ಕೊಲೆ ಮಾಡಿದ ಮತ್ತು ಅವರ ಪತ್ನಿ ರಫಿದಾ ಬೊನ್ಯಾ ಅವರನ್ನು ಗಂಭೀರವಾಗಿ ಗಾಯಗೊಳಿಸಿದ ಆರೋಪವಿದೆ.
🚨 Trump Administration backs Al Qaeda!
In a shocking move, the @StateDept under President Trump has silently deleted it’s US$5 million bounty announcement on Major (sacked) Syed Ziaul Huq Zia, kingpin of Ansar Al Islam, a local franchise of Al Qaeda from the website. Zia is… pic.twitter.com/5D8uV8Pzma
— Salah Uddin Shoaib Choudhury (@salah_shoaib) August 14, 2025
ಚೌಧುರಿ ಅವರು ಹೇಳುವ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಅಲ್-ಕಾಯ್ದಾದ ಭಯೋತ್ಪಾದಕರು ಮತ್ತು ಇತರ ಇಸ್ಲಾಮಿಕ್ ಕಟ್ಟರವಾದಿಗಳು ಬಾಂಗ್ಲಾದೇಶದಲ್ಲಿ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಿದ್ದಾರೆ. ಕಳೆದ ವಾರ, ಜಿಯಾಉಲ್ ಹಕ್ ಝಿಯಾ ಈ ಕುಖ್ಯಾತ ಭಯೋತ್ಪಾದಕನು ಅಮೆರಿಕದ ವಿದೇಶಾಂಗ ಇಲಾಖೆಯ ಪರಾರಿ ಆಗಿರುವ ಪಟ್ಟಿಯಲ್ಲಿ ಇದ್ದನು, ಅವನು ಬಹಿರಂಗವಾಗಿ ಮಣಿಪುರ್, ಖಲಿಸ್ತಾನ್ ಮತ್ತು ಕಾಶ್ಮೀರದಲ್ಲಿನ ಬಂಡಾಯಕೋರರ ಚಳುವಳಿಯ ಕಾರ್ಯಾಲಯಗಳನ್ನು ಬಾಂಗ್ಲಾದೇಶದಲ್ಲಿ ಆರಂಭಿಸಲು ಕರೆ ನೀಡಿದ್ದಾನೆ. ಕಳೆದ ವರ್ಷ ನಡೆದಿರುವ ಜಿಹಾದಿ ಸಮರ್ಥನೆಯ ಸೈನ್ಯ ಬಂಡಾಯದ ನಂತರ ಝಿಯಾ ಭೂಗತನಾಗಿ ಮತ್ತೆ ಬಾಂಗ್ಲಾದೇಶಕ್ಕೆ ಹಿಂತಿರುಗಿದ್ದಾನೆ ಎಂದು ನಂಬಲಾಗಿದೆ.
ಸಂಪಾದಕೀಯ ನಿಲುವುಕಳೆದ ಒಂದು ವರ್ಷದಿಂದ ಬಾಂಗ್ಲಾದೇಶದ ವಿದ್ಯಮಾನಗಳನ್ನು ಗಮನಿಸಿದರೆ ಇದರ ಹಿಂದೆ ಅಮೆರಿಕ ಇದೆ ಎಂದು ಸ್ಪಷ್ಟವಾಗುತ್ತಿತ್ತು. ಈಗ ಅಲ್ಲಿನ ಭಯೋತ್ಪಾದಕನನ್ನು ರಕ್ಷಿಸಲು ಅಮೆರಿಕ ಪ್ರಯತ್ನಿಸುತ್ತಿರುವುದು ಈ ಘಟನೆಯ ಹಿಂದಿದೆ ಎಂಬುದನ್ನು ಬಹಿರಂಗಪಡಿಸಿದೆ. |
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis