‘ದಿ ಬಂಗಾಲ್ ಫೈಲ್ಸ್’ : ಇತಿಹಾಸದ ಅಧ್ಯಯನ ಮತ್ತು ಸಂಶೋಧನೆಯ ಆಧಾರದ ಮೇಲೆ ನಿರ್ಮಾಣ ! : The Bengal Files

ಚಲನಚಿತ್ರದ ವಿರುದ್ಧ ಪ್ರಕರಣ ದಾಖಲಾದ ನಂತರ ನಿರ್ದೇಶಕ ವಿವೇಕ ರಂಜನ ಅಗ್ನಿಹೋತ್ರಿ ಅವರು ಸ್ಪಷ್ಟೀಕರಣ ನೀಡಿದ್ದಾರೆ

ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ

ಕೋಲಕಾತಾ (ಬಂಗಾಳ) – ನಿರ್ದೇಶಕ ವಿವೇಕ ರಂಜನ ಅಗ್ನಿಹೋತ್ರಿ ಅವರ ‘ದಿ ಬಂಗಾಲ್ ಫೈಲ್ಸ್’ ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಚಿತ್ರದಲ್ಲಿ ಗೋಪಾಲ ಮುಖರ್ಜಿ ಅವರನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಅಗ್ನಿಹೋತ್ರಿ ಅವರು ಈ ಚಲನಚಿತ್ರವನ್ನು ಸಾಕಷ್ಟು ಸಂಶೋಧನೆ ಮತ್ತು ಅಧ್ಯಯನ ಮಾಡಿ ತಯಾರಿಸಲಾಗಿದೆ ಎಂದು ಹೇಳಿದರು.

. ವಿವೇಕ ಅಗ್ನಿಹೋತ್ರಿ ಅವರು, ಈ ಚಲನಚಿತ್ರವನ್ನು ಯಾರೂ ತಮ್ಮ ಮನಸ್ಸಿನಿಂದ ನಿರ್ಮಿಸಲು ಸಾಧ್ಯವಿಲ್ಲ. ನಾವು ಜನರೊಂದಿಗೆ ಮಾತನಾಡಿ ಅಧ್ಯಯನ ನಡೆಸಿದ್ದೇವೆ. ೧೮ ಸಾವಿರ ಪುಟಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಚಲನಚಿತ್ರವನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ಗೆ (ಸೆನ್ಸಾರ್ ಬೋರ್ಡ್) ತೋರಿಸಿದಾಗ, ಇತಿಹಾಸಕಾರರನ್ನು ಸಹ ಕರೆಯಲಾಗಿತ್ತು. ಹಲವು ಹಂತಗಳ ನಂತರ, ಯಾವುದೇ ಕಡಿತವಿಲ್ಲದೆ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲಾಗಿದೆ. ನಾವು ಈ ಚಿತ್ರವನ್ನು ಅಮೆರಿಕಾದಲ್ಲಿ ವಿವಿಧ ಸಮುದಾಯಗಳಿಗೆ ತೋರಿಸಿದ್ದೇವೆ. ಬಂಗಾಳ ಸರಕಾರವು ನಮ್ಮನ್ನು ಆಹ್ವಾನಿಸಬೇಕು, ಏಕೆಂದರೆ ‘ಡೈರೆಕ್ಟ್ ಆಕ್ಷನ್’ ಬಗ್ಗೆ ಇಂತಹ ಚಲನಚಿತ್ರವನ್ನು ಇದುವರೆಗೆ ನಿರ್ಮಿಸಿಲ್ಲ ಎಂದು ಹೇಳಿದರು.

. ಚಲನ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಅಗ್ನಿಹೋತ್ರಿ ಅವರು, ಹಿಂದಿ ಚಲನಚಿತ್ರರಂಗದ ಜನರು ತಮ್ಮ ಚಲನಚಿತ್ರಗಳನ್ನು ಈದ್, ಆಗಸ್ಟ್ ೧೫ ಅಥವಾ ಯಾವುದೇ ನಟನ ಜನ್ಮದಿನದಂದು ಬಿಡುಗಡೆ ಮಾಡುತ್ತಾರೆ. ‘ಡೈರೆಕ್ಟ್ ಆಕ್ಷನ್’ ಆಧಾರಿತ ಚಿತ್ರವನ್ನು ಆಗಸ್ಟ್ ೧೬ ರಂದು ಬಿಡುಗಡೆ ಮಾಡುವುದು ಹೇಗೆ ಅಪರಾಧವಾಗುತ್ತದೆ? ಟ್ರೈಲರ್ ಬಿಡುಗಡೆ ಮಾಡಲು ಅನುಮತಿ ಬೇಕಾಗಿಲ್ಲ. ನಾನು ಟ್ರೈಲರ್ ಬಿಡುಗಡೆ ಮಾಡಲು ಕೋಲಕಾತಾದ ಐಟಿಸಿ ಹೋಟೆಲ್‌ಗೆ ತಲುಪಿದಾಗ, ನೀವು ಟ್ರೈಲರ್ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ನನಗೆ ತಿಳಿಸಲಾಯಿತು. ಅಲ್ಲಿನ ವ್ಯವಸ್ಥಾಪಕರು ನಮ್ಮನ್ನು ವಿರೋಧಿಸಿದರು ಎಂದರು.

. ಚಿತ್ರದ ಬಗ್ಗೆ ಪಲ್ಲವಿ ಜೋಶಿ ಅವರು, ಕೋಲಕಾತಾ ಪೊಲೀಸರು ನಮ್ಮ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಬಿಡದ ಕಾರಣ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.

ಟ್ರೈಲರ್ ಬಿಡುಗಡೆ ಮಾಡುವಾಗ ಏನಾಯಿತು?

ಆಗಸ್ಟ್ ೧೬ ರಂದು ಕೋಲಕಾತಾದ ಐಟಿಸಿ ಹೋಟೆಲ್‌ನಲ್ಲಿ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಬೇಕಿತ್ತು. ಆದರೆ, ಅದಕ್ಕೂ ಮೊದಲೇ ಅದಕ್ಕೆ ವಿರೋಧ ವ್ಯಕ್ತವಾಯಿತು. ಪೊಲೀಸರು ಅದನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸಿದರು. ಈ ಘಟನೆಯ ಬಗ್ಗೆ ವಿವೇಕ ಅಗ್ನಿಹೋತ್ರಿ ಅವರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು, ನಾನು ನಿಮಗೆ ಬಹಳ ಮುಖ್ಯವಾದ ಮಾಹಿತಿಯನ್ನು ನೀಡಲು ಬಯಸುತ್ತೇನೆ. ಕೆಲವು ಜನರು ಇಲ್ಲಿಗೆ ಬಂದಿದ್ದಾರೆ ಮತ್ತು ಅವರು ಇಲ್ಲಿನ ಎಲ್ಲಾ ತಂತಿಗಳನ್ನು ಕತ್ತರಿಸಿದ್ದಾರೆ ಎಂದು ನನಗೆ ಈಗಷ್ಟೇ ತಿಳಿದುಬಂದಿದೆ. ಖಾಸಗಿ ಹೋಟೆಲ್‌ಗೆ ಬಂದು ಯಾರಾದರೂ ತಂತಿಗಳನ್ನು ಕತ್ತರಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದು ಯಾರ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ. ಇದು ಏಕೆ ನಡೆಯುತ್ತಿದೆ ಎಂದು ಸಹ ನನಗೆ ತಿಳಿದಿಲ್ಲ. ‘ದಿ ಬಂಗಾಲ್ ಫೈಲ್ಸ್’ ಒಂದು ಚಲನಚಿತ್ರವಾಗಿದ್ದು, ಇದನ್ನು ನೋಡಿದ ನಂತರ ಪ್ರತಿಯೊಬ್ಬ ಬಂಗಾಳಿ ವ್ಯಕ್ತಿಯು ಭಾರತದ ಆ ಸತ್ಯದ ಬಗ್ಗೆ ಹೆಮ್ಮೆಪಡುತ್ತಾನೆ. ಈ ಸತ್ಯ ಜನರಿಗೆ ತಿಳಿಯಬಾರದು ಎಂದು ಬಯಸುವವರು ಯಾರು? ಎಂದು ಅಗ್ನಿಹೋತ್ರಿ ಪ್ರಶ್ನಿಸಿದರು.

‘ಡೈರೆಕ್ಟ್ ಆಕ್ಷನ್ ಡೇ’ ಎಂದರೇನು?

ಹಿಂದೂಗಳನ್ನು ಆಯ್ದು ಹತ್ಯೆ ಮಾಡಲಾಯಿತು

ಈ ಚಿತ್ರವು ೧೯೪೬ ರಲ್ಲಿ ಅವಿಭಜಿತ ಬಂಗಾಳದಲ್ಲಿ ನಡೆದ ಹಿಂದೂಗಳ ನರಮೇಧವನ್ನು ಚಿತ್ರಿಕರಿಸಲಾಗಿದೆ. ಇದು ೧೯೪೬ ರ ಮೊಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್‌ನ ‘ಡೈರೆಕ್ಟ್ ಆಕ್ಷನ್ ಡೇ’ (ಹಿಂದೂಗಳ ವಿರುದ್ಧದ ಕೃತ್ಯ) ಮತ್ತು ನೋಖಾಲಿ ಗಲಭೆಗಳನ್ನು ಒಳಗೊಂಡಿದೆ. ಈ ನರಮೇಧವು ೫ ದಿನಗಳವರೆಗೆ ನಡೆಯಿತು. ಕೋಲಕಾತಾದಲ್ಲಿ ಕೇವಲ ೭೨ ಗಂಟೆಗಳಲ್ಲಿ ಸುಮಾರು ೬ ಸಾವಿರ ಹಿಂದೂಗಳು ಕೊಲ್ಲಲಾಗಿತ್ತು. ೨೦ ಸಾವಿರಕ್ಕೂ ಹೆಚ್ಚು ಹಿಂದೂಗಳು ತೀವ್ರವಾಗಿ ಗಾಯಗೊಂಡರು. ೧ ಲಕ್ಷ ಜನರು ತಮ್ಮ ಎಲ್ಲಾ ಆಸ್ತಿಯನ್ನು ಬಿಟ್ಟು ಪಲಾಯನ ಮಾಡಬೇಕಾಯಿತು.

ಹಿಂದೂಗಳ ಹತ್ಯಾಕಾಂಡ

ಹಿಂದೂಗಳನ್ನು ಆಯ್ದು ಹತ್ಯೆ ಮಾಡಲಾಯಿತು, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಯಿತು, ಹಿಂದೂಗಳ ಆಸ್ತಿಯನ್ನು ಸುಡಲಾಯಿತು. ಪೂರ್ವ ಬಂಗಾಳದ ನೋಖಾಲಿ ಪ್ರದೇಶದಲ್ಲಿ ಹಿಂದೂಗಳ ಹತ್ಯಾಕಾಂಡವನ್ನು ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆಯಲಾಗಿದೆ. ಇದು ಹಲವಾರು ತಿಂಗಳುಗಳ ಕಾಲ ನಡೆಯಿತು. ಸಾವಿರಾರು ಹಿಂದೂಗಳನ್ನು ಹತ್ಯೆ ಮಾಡಲಾಯಿತು. ಅಂದಾಜು ೭೫ ಸಾವಿರ ಹಿಂದೂಗಳು ಕೇವಲ ನೋಖಾಲಿಯಿಂದ ಪಲಾಯನ ಮಾಡಬೇಕಾಯಿತು, ಆದರೆ ೨೦ ಸಾವಿರಕ್ಕೂ ಹೆಚ್ಚು ಹಿಂದೂಗಳು ಟಿಪ್ಪ್ರಾದಿಂದ ಪಲಾಯನ ಮಾಡಿದರು.