ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಹೇಳಿಕೆ!

ವಾಷಿಂಗ್ಟನ್ (ಅಮೆರಿಕ) – ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಪ್ರತಿದಿನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಎರಡೂ ದೇಶಗಳ ನಡುವಿನ ಕದನ ವಿರಾಮ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಹೇಳಿದ್ದಾರೆ. “ಪರಸ್ಪರ ಗುಂಡು ಹಾರಿಸಿಕೊಳ್ಳುತ್ತಿರುವ ಎರಡೂ ಕಡೆಯವರನ್ನು ತಡೆಯಲು ಕದನ ವಿರಾಮ ಒಂದೇ ದಾರಿ” ಎಂದು ಅವರು ಹೇಳಿದ್ದಾರೆ. ಅವರು ಫಾಕ್ಸ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಶಾಂತಿ ಒಪ್ಪಂದ ನಮ್ಮ ಗುರಿ!
ರುಬಿಯೊ ಅವರು ಮಾತು ಮುಂದುವರೆಸಿ, ಕದನ ವಿರಾಮದ ವಿಷಯದಲ್ಲಿ ಅತ್ಯಂತ ಕಷ್ಟದ ವಿಷಯವೆಂದರೆ ಅದನ್ನು ಉಳಿಸಿಕೊಳ್ಳುವುದು. ನಾವು ಶಾಶ್ವತ ಕದನ ವಿರಾಮಕ್ಕಾಗಿ ಪ್ರಯತ್ನಿಸುತ್ತಿದ್ದೇವೆ ಎಂಬ ಬಗ್ಗೆ ಯಾರೂ ಭಿನ್ನಾಭಿಪ್ರಾಯ ಹೊಂದಿಲ್ಲ. ಶಾಂತಿ ಒಪ್ಪಂದ ನಮ್ಮ ಗುರಿಯಾಗಿದೆ. ಇದರಿಂದ ಈಗಲೂ ಯುದ್ಧ ಆಗುವುದಿಲ್ಲ ಮತ್ತು ಭವಿಷ್ಯದಲ್ಲಿಯೂ ಆಗುವುದಿಲ್ಲ.
ಟ್ರಂಪ್ ಅವರು ಯುದ್ಧವನ್ನು ನಿಲ್ಲಿಸಿದರು!
ರುಬಿಯೊ ಅವರು, “ನಾವು ಅದೃಷ್ಟವಂತರು. ನಾವು ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದ ಹೇಳಬೇಕು. ಅವರು ಶಾಂತಿಯನ್ನು ಸ್ಥಾಪಿಸುವುದಕ್ಕೆ ತಮ್ಮ ಆಡಳಿತದಲ್ಲಿ ಆದ್ಯತೆ ನೀಡಿದ್ದಾರೆ. ಇದನ್ನು ನಾವು ಕಾಂಬೋಡಿಯಾ-ಥೈಲ್ಯಾಂಡ್, ಭಾರತ-ಪಾಕಿಸ್ತಾನದಲ್ಲಿ ನೋಡಿದ್ದೇವೆ. ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಲು ನಾವು ಸಿಗುವ ಪ್ರತಿ ಅವಕಾಶವನ್ನು ಬಳಸಿಕೊಳ್ಳುತ್ತೇವೆ” ಎಂದು ಹೇಳಿದರು.
ಸಂಪಾದಕೀಯ ನಿಲುವುಇದರ ಅರ್ಥ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯಬೇಕು ಮತ್ತು ಅದರಿಂದ ಅಮೆರಿಕಕ್ಕೆ ಲಾಭವಾಗಬೇಕು, ಜೊತೆಗೆ ಭಾರತಕ್ಕೆ ಹಾನಿಯಾಗಬೇಕು ಎಂಬ ಕಪಟ ಉದ್ದೇಶ ಅಮೆರಿಕಕ್ಕೆ ಇದೆ ಎಂದು ಹೇಳಿದರೆ ತಪ್ಪಾಗಲಾರದು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation