ಉತ್ತರಪ್ರದೇಶ ವಿಧಾನಸಭೆ; ಶಾಸಕ ರಾಜಾ ಭೈಯಾ ಅವರಿಂದ ಜಾತಿ ತಾರತಮ್ಯದ ಕುರಿತು ವಾಗ್ದಾಳಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಂದು ಭಾರತವು ಎದುರಿಸುತ್ತಿರುವ ಅತಿದೊಡ್ಡ ಬೆದರಿಕೆ ಜಿಹಾದಿ ಭಯೋತ್ಪಾದನೆ. ಅಮರನಾಥ ಯಾತ್ರೆಗೆ ಹೋಗುವ ಭಕ್ತರ ಭದ್ರತೆಗಾಗಿ 80 ಸಾವಿರ ಸೈನಿಕರನ್ನು ನಿಯೋಜಿಸಬೇಕಾಗಿದೆ. ಭದ್ರತೆ ಇಲ್ಲದೆ ಈ ಯಾತ್ರೆ ಸಾಧ್ಯವೇ? ಭಯೋತ್ಪಾದಕರು ದಾಳಿ ಮಾಡಿದಾಗ, ಅವರು ಹಿಂದೂಗಳ ಜಾತಿ ಕೇಳುತ್ತಾರೆಯೇ? ಪಹಲ್ಗಾಮ್‌ನಲ್ಲಿ ನಾವು ನೋಡಿದಂತೆ, ಭಯೋತ್ಪಾದಕರು ‘ಕಲಮಾ’ (ಅಲ್ಲಾನನ್ನು ಕೊಂಡಾಡುವ ನುಡಿಗಟ್ಟುಗಳು) ಹೇಳುವಂತೆ ಒತ್ತಾಯಿಸಿದರು, ಬಟ್ಟೆ ಬಿಚ್ಚಿಸಿ ಅವರು ಹಿಂದೂ ಎಂದು ಖಚಿತಪಡಿಸಿಕೊಂಡ ನಂತರ ಅವರನ್ನು ಹತ್ಯೆ ಮಾಡಲಾಯಿತು. ಅಲ್ಲಿ ಯಾರೂ ಜಾತಿ ಕೇಳಲಿಲ್ಲ, ಎಂದು ಉತ್ತರಪ್ರದೇಶ ವಿಧಾನಸಭೆಯಲ್ಲಿ ಜನಸತ್ತಾ ದಳ ಪಕ್ಷದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭೈಯಾ ಅವರು ಹೇಳಿದರು. ಅವರು ಹಿಂದೂಗಳಲ್ಲಿನ ಜಾತಿ ತಾರತಮ್ಯವನ್ನು ಟೀಕಿಸಿದರು. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ‘ಉತ್ತರ ಪ್ರದೇಶ ಸರಕಾರದ ವಿಜನ್ (ರೂಪರೇಷೆ) 2047’ ವಿಷಯದ ಕುರಿತು 24 ಗಂಟೆಗಳ ಚರ್ಚೆ ನಡೆಯುತ್ತಿರುವಾಗ ರಾಜಾ ಭೈಯಾ ಅವರು ಮಾತನಾಡುತ್ತಿದ್ದರು.
ಶಾಸಕ ರಾಜಾ ಭೈಯಾ ಅವರು ಮಂಡಿಸಿದ ಪ್ರಮುಖ ಅಂಶಗಳು

ಹಿಂದೂಗಳಿಂದಲೇ ಭಾರತದಲ್ಲಿ ಪ್ರಜಾಪ್ರಭುತ್ವ!
ಯಾವುದೇ ವಸ್ತುವನ್ನು ವಿಭಜಿಸಿದರೆ, ಅದು ದುರ್ಬಲಗೊಳ್ಳುತ್ತದೆ. ಅದು ಮನೆ, ಆಸ್ತಿ ಅಥವಾ ವ್ಯಾಪಾರವಾಗಿದ್ದರೂ, ವಿಭಜನೆಯಾದಾಗ ದುರ್ಬಲತೆ ಬರುತ್ತದೆ. ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಇದರ ಹೆಚ್ಚಿನ ಶ್ರೇಯಸ್ಸು ಹಿಂದೂ ಸಮಾಜಕ್ಕೆ ಸಲ್ಲುತ್ತದೆ.
ವಿಶ್ವದಲ್ಲಿ ಯಾರೂ ಸಂವಿಧಾನದ ಪ್ರಸ್ತಾವನೆಯನ್ನು ಬದಲಿಸಿಲ್ಲ
ಅನೇಕ ದೇಶಗಳಲ್ಲಿ ಕಾಲ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂವಿಧಾನದಲ್ಲಿ ಸುಧಾರಣೆಗಳಾಗುತ್ತವೆ; ಆದರೆ ಯಾವುದೇ ದೇಶದ ಪ್ರಸ್ತಾವನೆಯನ್ನು ಬದಲಿಸುವುದಿಲ್ಲ; ಆದರೆ ಭಾರತದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ಮತ್ತು ಪ್ರಜಾಪ್ರಭುತ್ವ ಇಲ್ಲದಿದ್ದಾಗ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಇತರ ವಿದ್ವಾಂಸರು ಸಿದ್ಧಪಡಿಸಿದ ಪ್ರಸ್ತಾವನೆಯನ್ನು ಬದಲಿಸಲಾಯಿತು.
ಹಿಂದೂಗಳ 4 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳ ಸರಕಾರೀಕರಣವನ್ನು ತೆಗೆದುಹಾಕಬೇಕು!
ಭಾರತದಲ್ಲಿ ಎಲ್ಲಾ ಪ್ರಮುಖ ಧರ್ಮಗಳ ಜನರು ವಾಸಿಸುತ್ತಾರೆ; ಆದರೆ ಇತರ ಯಾವುದೇ ಧರ್ಮದ ಪೂಜಾ ಸ್ಥಳಗಳಿಂದ ಸರಕಾರ ಹಣ ಪಡೆಯುವುದಿಲ್ಲ. ಮಸೀದಿ ಅಥವಾ ಚರ್ಚ್‌ಗಳಿಂದ ಸರಕಾರ ಹಣ ತೆಗೆದುಕೊಳ್ಳುತ್ತದೆಯೇ? ಆದರೆ ಹಿಂದೂಗಳ 4 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿವೆ ಮತ್ತು ಅಲ್ಲಿನ ಕಾಣಿಕೆಯ ಹಣವನ್ನು ಸರಕಾರ ತೆಗೆದುಕೊಳ್ಳುತ್ತದೆ. ಈ ದೇವಸ್ಥಾನಗಳ ಮೇಲಿನ ಸರಕಾರದ ನಿಯಂತ್ರಣವನ್ನು ತೆಗೆದುಹಾಕಬೇಕು.
ಧರ್ಮಕ್ಕಾಗಿ ಹಿಂಸೆ ಸರಿಯೇ!

ಸ್ವಾತಂತ್ರ್ಯದ ನಂತರ ನಮಗೆ ‘ಅಹಿಂಸಾ ಪರಮೋ ಧರ್ಮ’ (ಅಹಿಂಸೆಯೇ ಪರಮ ಧರ್ಮ) ಎಂದು ಕಲಿಸಲಾಗಿದೆ, ಇದು ಸರಿ; ಆದರೆ ಇದರ ಎರಡನೇ ಸಾಲು ‘ಧರ್ಮ ಹಿಂಸಾ ತಥೈವ ಚ’ (ಧರ್ಮ ರಕ್ಷಣೆಗಾಗಿ ಮಾಡುವ ಹಿಂಸೆಯೂ ಪರಮ ಧರ್ಮ) ಎಂಬುದನ್ನು ಮರೆಯಬಾರದು.
ಮಹಾಕುಂಭ ಪರ್ವದಲ್ಲಿ ಹಿಂದೂಗಳು ಇತರ ಧರ್ಮೀಯರನ್ನು ಓಡಿಸುವ ಘೋಷಣೆಗಳನ್ನು ಕೂಗಿಲ್ಲ!
ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಪರ್ವದ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆಯಾಯಿತು. ಮುಖ್ಯಮಂತ್ರಿ ಗೋರಖಪುರಕ್ಕೆ ಹೋಗದಷ್ಟು ಬಾರಿ ನಾನು ಮಹಾಕುಂಭ ಪರ್ವಕ್ಕಾಗಿ ಪ್ರಯಾಗ್‌ರಾಜ್‌ಗೆ ಹೋಗಿದ್ದೇನೆ. ಅಲ್ಲಿ ಅದ್ಭುತ ವ್ಯವಸ್ಥೆ ಇತ್ತು. 60 ಕೋಟಿಗೂ ಹೆಚ್ಚು ಸನಾತನಿಗಳು ಗಂಗಾ ಸ್ನಾನ ಮಾಡಿದರು; ಆದರೆ ಎಲ್ಲಿಯೂ ಯಾವುದೇ ಧರ್ಮವನ್ನು ಅಥವಾ ಧರ್ಮೀಯರನ್ನು ಓಡಿಸುವ ಘೋಷಣೆಗಳನ್ನು ಕೂಗಿಲ್ಲ. ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದಲೇ ಜಾತ್ಯತೀತವಾಗಿದೆ.
ಮೆಕಾಲೆ ಕಾರಣದಿಂದ ಗುರುಕುಲಪದ್ಧತಿ ನಾಶವಾಯಿತು!
2047 ರಲ್ಲಿ ಅತ್ಯಂತ ಪ್ರಮುಖ ಕಾರ್ಯವೆಂದರೆ ಜನರನ್ನು ಜಾಗೃತಗೊಳಿಸುವುದು ಮತ್ತು ಅದಕ್ಕಾಗಿ ಶಿಕ್ಷಣ ವ್ಯವಸ್ಥೆ ಮುಖ್ಯವಾಗಿದೆ. ಮೆಕಾಲೆಯ ಶಿಕ್ಷಣ ಪದ್ಧತಿಯು ನಮ್ಮಲ್ಲಿ ಕೀಳರಿಮೆಯನ್ನು ಹುಟ್ಟುಹಾಕಿತು ಮತ್ತು ಗುರಕುಲ ವ್ಯವಸ್ಥೆ ಕೊನೆಗೊಂಡಿತು.
ಬ್ರಿಟಿಷರ ಆಡಳಿತದಿಂದ ಭಾರತ ಬಡವಾಯಿತು!
ಬ್ರಿಟಿಷರು ಭಾರತಕ್ಕೆ ಬಂದಾಗ, ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನವು ವಿಶ್ವದಲ್ಲಿ 30% ಕ್ಕಿಂತ ಹೆಚ್ಚಿತ್ತು; ಆದರೆ ಅವರು ವಾಪಸ್ ಹೋದಾಗ ನಮ್ಮ ರಾಷ್ಟ್ರೀಯ ಉತ್ಪನ್ನವು ಕೇವಲ 1 ರಿಂದ 1.5% ಆಗಿತ್ತು. ಭಾರತ ದಿವಾಳಿಯಾಯಿತು. 60 ಕೋಟಿ ಜನರ ಮೇಲೆ ಕೇವಲ 1 ಲಕ್ಷ ಬ್ರಿಟಿಷ್ ಸೈನಿಕರು ಆಳ್ವಿಕೆ ಮಾಡಿದರು; ಏಕೆಂದರೆ ನಾವು ಮೌನವಾಗಿದ್ದೆವು ಮತ್ತು ನಿಷ್ಕ್ರಿಯರಾಗಿದ್ದೆವು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!