
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ರಂಗಪುರ ಜಿಲ್ಲೆಯ ತಾರಾಗಂಜ ಉಪಜಿಲ್ಲೆಯ ಬುರಿರಹಾಟ್ ಹೈಸ್ಕೂಲ್ ಆವರಣದಲ್ಲಿ ಕಳ್ಳತನದ ಸಂಶಯದ ಮೇಲೆ 2 ಹಿಂದೂಗಳಿಗೆ ಥಳಿಸಿ ಹತ್ಯೆ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಮೃತಪಟ್ಟವರು ಘನಿರಾಮಪುರದ ರೂಪಲಾಲ್ ದಾಸ್ (40 ವರ್ಷ) ಮತ್ತು ಮಿಠಾಪುಕೂರ್ ಉಪಜಿಲ್ಲೆಯ ಪ್ರದೀಪ ದಾಸ್ (35 ವರ್ಷ) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಒಂದೇ ಕುಟುಂಬಕ್ಕೆ ಸೇರಿದವರು. ಈ ಪ್ರಕರಣದಲ್ಲಿ ಪೊಲೀಸರು ಇಬಾದತ್ ಹುಸೇನ್, ಅಖ್ತರುಲ್ ಇಸ್ಲಾಂ, ರಫೀಕುಲ್ ಇಸ್ಲಾಂ ಮತ್ತು ಮಿಜಾನೂರ್ ರೆಹಮಾನ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಪೊಲೀಸರು ಜನಸಮೂಹ ಕಂಡು ಓಡಿಹೋದರು!
‘ಢಾಕಾ ಟ್ರಿಬ್ಯೂನ್’ ವರದಿಯ ಪ್ರಕಾರ, ಪೊಲೀಸರು ಸ್ಥಳಕ್ಕೆ ತಲುಪಿದ್ದರು, ಆದರೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇಷ್ಟೆ ಅಲ್ಲ, ಅವರು ಭಯಭೀತರಾಗಿ ಅಲ್ಲಿಂದ ಓಡಿಹೋಗಿದ್ದಾರೆ. ನಂತರ ಸೇನಾ ವಾಹನಗಳು ಸ್ಥಳಕ್ಕೆ ಬಂದಾಗ, ರೂಪಲಾಲ್ ದಾಸ್ ಆಗಲೇ ಮೃತಪಟ್ಟಿದ್ದರು ಮತ್ತು ಥಳಿಸಿದವರಲ್ಲಿ ಹೆಚ್ಚಿನವರು ಪರಾರಿಯಾಗಿದ್ದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಹತ್ಯೆ ಮಾಡಲು ಮತಾಂಧರು ಅವರ ಮೇಲೆ ಯಾವುದೇ ಸುಳ್ಳು ಕಾರಣಗಳನ್ನು ಹೇಳಿ ದಾಳಿ ಮಾಡುತ್ತಾರೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!