‘ಆಗಸ್ಟ್ 15 ರಂದು ದೆಹಲಿಗೆ ಹೋಗುವ ರೈಲುಗಳನ್ನು ಸ್ಫೋಟಿಸುತ್ತೇನೆ – Gurpatwant Singh Pannu

  • ಅಮೆರಿಕ-ಪ್ರಾಯೋಜಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ ಸಿಂಗ್ ಪನ್ನುನ ಬೆದರಿಕೆ

  • ರೈಲುಗಳಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದ್ದಾನೆ

 

ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು

ವಾಷಿಂಗ್ಟನ (ಅಮೆರಿಕಾ) – ಅಮೆರಿಕಾ ಪ್ರಾಯೋಜಿತ ಖಲಿಸ್ತಾನಿ ಭಯೋತ್ಪಾದಕ ಮತ್ತು ‘ಸಿಖ್ ಫಾರ್ ಜಸ್ಟಿಸ್’ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ ಸಿಂಗ್ ಪನ್ನು, ಆಗಸ್ಟ್ 15 ರಂದು ದೆಹಲಿಗೆ ಹೋಗುವ ರೈಲುಗಳನ್ನು ಗುರಿಯಾಗಿಸಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆದ್ದರಿಂದ, ಈ ದಿನ ದೆಹಲಿಗೆ ಹೋಗುವ ರೈಲುಗಳಲ್ಲಿ ಪ್ರಯಾಣಿಸದಂತೆ ಅವನು ಎಚ್ಚರಿಕೆ ನೀಡಿದ್ದಾನೆ. ಅಲ್ಲದೆ, ಪಂಜಾಬಿನ ಜನರಿಗೆ ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್ ಅವರ ಫರೀದಕೋಟನಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಿಂದ ದೂರವಿರುವಂತೆ ಕರೆ ನೀಡಿದ್ದಾನೆ. ಪನ್ನುವಿನ ಸಹಚರ ಭಯೋತ್ಪಾದಕ ಜಶ್ನಪ್ರೀತ ಸಿಂಗನನ್ನು ಪೊಲೀಸರು ಎನ್ ಕೌಂಟರ್‌ ನಲ್ಲಿ ಗಾಯಗೊಳಿಸಿದ್ದರಿಂದ ಪನ್ನು ಈ ಬೆದರಿಕೆ ಹಾಕಿದ್ದಾನೆ. ಅವನು ಬೆದರಿಕೆಯ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾನೆ.

ಸಂಪಾದಕೀಯ ನಿಲುವು

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಗಾಗ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮತ್ತು ಈಗ ಸ್ವಾತಂತ್ರ್ಯ ದಿನದಂದು ಇಂತಹ ಕೃತ್ಯ ನಡೆಸುವುದಾಗಿ ಬೆದರಿಕೆ ಹಾಕಿದ ಪನ್ನುವಿನ ವಿರುದ್ಧ ಅಮೆರಿಕಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಅಮೆರಿಕಾ ಅವನಿಗೆ ಬೆಂಬಲ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ!