ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ ಅಮೆರಿಕಾದಲ್ಲಿ ನೀಡಿದ ಹೇಳಿಕೆ

ಫ್ಲೋರಿಡಾ (ಅಮೆರಿಕಾ) – ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ, ಅದೊಂದು ಅಪೂರ್ಣ ಅಂತರಾಷ್ಟ್ರೀಯ ವಿಷಯವಾಗಿದೆ. ಕಾಶ್ಮೀರ ವಿಷಯವು ವಿಶ್ವಸಂಸ್ಥೆಯಲ್ಲಿ ಇದೆ ಮತ್ತು ಪಾಕಿಸ್ತಾನ ಅದನ್ನು ಬೆಂಬಲಿಸುತ್ತದೆ ಎಂದು ಪಾಕಿಸ್ತಾನದ ಸೇನಾ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹೇಳಿದ್ದಾರೆ. ಅವರು ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಈ ಹಿಂದೆ ಕೂಡ, ಕಾಶ್ಮೀರದ ಕುರಿತು ಮುನೀರ್ ‘ಕಾಶ್ಮೀರ ಪಾಕಿಸ್ತಾನದ ಕುತ್ತಿಗೆಯ ನರ’ ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯ ನಂತರ ಪಹಲ್ಗಾಮನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಭಾರತ ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಮುನೀರ್ ಹೇಳಿದ್ದಾರೆ. ಯಾವುದೇ ಒಂದು ತಪ್ಪು ಈ ಪ್ರದೇಶದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಭಾರತ ಸುಳ್ಳು ಘಟನೆಗಳ ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಮುನೀರ ಆರೋಪಿಸಿದ್ದಾರೆ.
🇮🇳🔥 Asim Munir’s Rant Won’t Change the Truth — Kashmir is India Forever!
After nuclear sabre-rattling, Pak Field Marshal Asim Munir rants in the U.S.:
🗣 “Kashmir is not India’s internal matter… it’s an unfinished international issue!”📌 Reality: No matter how many speeches… https://t.co/qTEBEKlItr pic.twitter.com/9ATrgb9xbd
— Sanatan Prabhat (@SanatanPrabhat) August 11, 2025
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕಾಗಿ ಟ್ರಂಪ್‌ಗೆ ಧನ್ಯವಾದ
ಟ್ರಂಪ್ ಅವರ ಕಾರ್ಯತಂತ್ರದಿಂದಾಗಿಯೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ ಉಂಟಾಗಿದೆ ಎಂದು ಹೇಳುತ್ತಾ, ಅವರು ಟ್ರಂಪ್ ಗೆ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ, ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರತೀಯ ಗುಪ್ತಚರ ಸಂಸ್ಥೆ ‘ರಾ’ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ – ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ) ತೊಡಗಿದೆ ಎಂದು ಮುನೀರ್ ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನ ಎಲ್ಲಿಗೇ ಹೋಗಿ ಕಾಶ್ಮೀರದ ಬಗ್ಗೆ ಎಷ್ಟೇ ಹೇಳಿಕೆಗಳನ್ನು ನೀಡಿದರೂ, ಕಾಶ್ಮೀರ ಭಾರತದ್ದೇ ಆಗಿರುತ್ತದೆ! |
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump