ಮಿತ್ರರಾಷ್ಟ್ರ (ಅಮೇರಿಕಾದ)ದಿಂದ ಇಂತಹ ಹೇಳಿಕೆ ನೀಡುವುದು ದುರದೃಷ್ಟಕರ!

ಅಸಿಮ್ ಮುನೀರ್ ಅಮೇರಿಕಾದಿಂದ ಹೇಳಿಕೆ ನೀಡಿದ ಅಣುಬಾಂಬ್ ಬೆದರಿಕೆಗೆ ಭಾರತದ ಪ್ರತಿಕ್ರಿಯೆ

ನವ ದೆಹಲಿ – ಅಣು ಯುದ್ಧದ ಬಗ್ಗೆ ಪಾಕಿಸ್ತಾನದ ಸೇನಾ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಹೇಳಿಕೆಯನ್ನು ಭಾರತವು ಆಕ್ಷೇಪಿಸುತ್ತಾ ಟೀಕಿಸಿದೆ. ಮುನೀರ್ ಅವರ ಅಮೇರಿಕಾ ಭೇಟಿಯ ಸಮಯದಲ್ಲಿನ ಹೇಳಿಕೆಗಳನ್ನು ನಾವು ಕೇಳಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು. ಅಣ್ವಸ್ತ್ರಗಳ ಬೆದರಿಕೆ ಹಾಕುವುದು ಪಾಕಿಸ್ತಾನದ ಅಭ್ಯಾಸ. ಇದು ಅದರ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಸೇನೆ ಭಯೋತ್ಪಾದಕ ಗುಂಪುಗಳೊಂದಿಗೆ ಸೇರಿಕೊಂಡು ಕೆಲಸ ಮಾಡುವ ದೇಶದಲ್ಲಿನ ಅಣು ನಿಯಂತ್ರಣ ಮತ್ತು ನಾಯಕತ್ವದ ಸಮಗ್ರತೆಯ ಬಗ್ಗೆ ಮುನೀರ್ ಅವರ ಹೇಳಿಕೆಯು ಗಂಭೀರ ಸಂದೇಹಗಳನ್ನು ಹುಟ್ಟುಹಾಕುತ್ತದೆ. ಮಿತ್ರರಾಷ್ಟ್ರದ ನೆಲದಿಂದ ಈ ಹೇಳಿಕೆಗಳು ಬಂದಿರುವುದು ದುರದೃಷ್ಟಕರ. ಭಾರತವು ಅಣ್ವಸ್ತ್ರ ಬೆದರಿಕೆಗೆ ಮಣಿಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ನಾವು ನಮ್ಮ ರಾಷ್ಟ್ರೀಯ ಭದ್ರತೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಮುಂದುವರಿಸುತ್ತೇವೆ ಎಂದು ಜೈಸ್ವಾಲ್ ನುಡಿದರು.

ಸಂಪಾದಕೀಯ ನಿಲುವು

ಈ ಹೇಳಿಕೆಯ ಹಿಂದೆ ಮೇರಿಕಾದ ಕೈವಾಡವಿದೆ ಎಂದು ಯಾರಿಗಾದರೂ ಅನ್ನಿಸಬಹುದು! ಹಾಗಾಗಿ, ಅಮೇರಿಕಾ ಭಾರತದ ಮಿತ್ರರಾಷ್ಟ್ರವಲ್ಲ, ಬದಲಿಗೆ ಶತ್ರು ರಾಷ್ಟ್ರ ಎಂದು ಈಗ ಹೇಳಬೇಕಾಗಿದೆ!