
ಕೀವ್ (ಉಕ್ರೇನ್) – ರಷ್ಯಾಕ್ಕೆ ಯಾವುದೇ ಪರಿಸ್ಥಿತಿಯಲ್ಲೂ ಮತ್ತೆ ಉಕ್ರೇನ್ ಅನ್ನು ವಿಭಜಿಸಲು ಅವಕಾಶ ನೀಡುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಲ್ವೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಮೂಲಕ ಅವರು, ಭೂಮಿಯನ್ನು ರಷ್ಯಾಕ್ಕೆ ನೀಡುವುದರಿಂದಲ್ಲ, ಆದರೆ ಯುದ್ಧವನ್ನು ನ್ಯಾಯಯುತವಾಗಿ ಕೊನೆಗೊಳಿಸುವುದರಿಂದ ಮಾತ್ರ ಶಾಂತಿ ಸ್ಥಾಪನೆಯಾಗಬಹುದು ಎಂದು ತಿಳಿಸಿದ್ದಾರೆ.
I have not heard any partners express doubts about America’s ability to ensure that the war ends. The President of the United States has the levers and the determination. Ukraine has supported all of President Trump’s proposals, starting back in February. Ceasefire, all formats… pic.twitter.com/klG8tMqpIq
— Volodymyr Zelenskyy / Володимир Зеленський (@ZelenskyyUa) August 9, 2025
1. ಝೆಲೆನ್ಸ್ಕಿ ಮಾತು ಮುಂದುವರೆಸಿ, ನಮಗೆ ರಷ್ಯಾದ ಬಗ್ಗೆ ತಿಳಿದಿದೆ. ಒಂದು ವೇಳೆ ಎರಡನೇ ವಿಭಜನೆಗೆ ಅವಕಾಶ ನೀಡಿದರೆ, ಮೂರನೇ ವಿಭಜನೆಯೂ ಆಗುತ್ತದೆ. ಅದಕ್ಕಾಗಿಯೇ ನಾವು ನಮ್ಮ ನಿಲುವಿಗೆ ದೃಢವಾಗಿದ್ದೇವೆ. ಈ ಯುದ್ಧವು ಶಾಂತಿ ಮತ್ತು ಬಲಿಷ್ಠ ರಕ್ಷಣಾ ವ್ಯವಸ್ಥೆಯೊಂದಿಗೆ ಕೊನೆಗೊಳ್ಳಬೇಕು.
2. ಇನ್ನೊಂದೆಡೆ, ಯುದ್ಧವನ್ನು ಕೊನೆಗೊಳಿಸಲು ಕೆಲವು ಪ್ರದೇಶಗಳ ವಿನಿಮಯ ಮಾಡಿಕೊಳ್ಳಬೇಕಾಗಬಹುದು ಎಂದು ಟ್ರಂಪ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
3. ಇಂತಹ ಸಮಯದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಸ್ಟ್ 15 ರಂದು ಅಮೆರಿಕದ ಅಲಾಸ್ಕಾದಲ್ಲಿ ಭೇಟಿಯಾಗಲಿದ್ದಾರೆ. ಈ ಸಮಯದಲ್ಲಿ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಕುರಿತು ಚರ್ಚೆ ನಡೆಯಲಿದೆ. ಅಮೆರಿಕ ಮತ್ತು ರಷ್ಯಾದ ಅಧ್ಯಕ್ಷರ ನಡುವೆ ಜೂನ್ 2021 ರಲ್ಲಿ ಕೊನೆಯ ಸಭೆ ನಡೆದಿತ್ತು. 4 ವರ್ಷಗಳ ನಂತರ ನಡೆಯಲಿರುವ ಈ ಸಭೆಯ ಬಗ್ಗೆ ‘ವೈಟ್‌ಹೌಸ್’, ಟ್ರಂಪ್ ಅವರನ್ನು ಭೇಟಿಯಾಗುವ ಇಚ್ಛೆಯನ್ನು ರಷ್ಯಾ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.
4. ರಷ್ಯಾದ ಅಧ್ಯಕ್ಷೀಯ ಕಚೇರಿಯಾದ ಕ್ರೆಮ್ಲಿನ್ ನ ಸಲಹೆಗಾರ ಯೂರಿ ಉಶಾಕೋವ್ ಮಾತನಾಡಿ, ಉಭಯ ದೇಶಗಳು ಕಳೆದ 6 ತಿಂಗಳುಗಳಲ್ಲಿ ಉಕ್ರೇನ್ ವಿಷಯದ ಬಗ್ಗೆ 4 ಬಾರಿ ಆನ್‌ಲೈನ್ ಚರ್ಚೆ ನಡೆಸಿವೆ ಎಂದು ತಿಳಿಸಿದ್ದಾರೆ.
5. ರಷ್ಯಾ ಉಕ್ರೇನ್ ಮೇಲಿನ ವೈಮಾನಿಕ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು. ರಷ್ಯಾ ಮೇ 2025 ರಿಂದ ಉಕ್ರೇನ್ ಮೇಲೆ ಅತಿದೊಡ್ಡ ವೈಮಾನಿಕ ದಾಳಿಗಳನ್ನು ಮಾಡಿದೆ. ಕೇವಲ ಕೀವ್ ನಲ್ಲಿ 72 ಜನರು ಸಾವನ್ನಪ್ಪಿದ್ದಾರೆ. ಟ್ರಂಪ್ ಈ ದಾಳಿಗಳನ್ನು ‘ಹೇಯಕೃತ್ಯ’ ಎಂದು ಕರೆದಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation