ಚಾಟ್ ಜಿಪಿಟಿಯ 5ನೇ ಆವೃತ್ತಿ ಬಿಡುಗಡೆ

(ಚಾಟ್ ಜಿಪಿಟಿ ಎಂದರೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ರಚಿಸಲಾದ ಕಂಪ್ಯೂಟರ್ ವ್ಯವಸ್ಥೆ. ಇದು ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುವ ವೇಗದ ‘ಎ.ಐ.’ (ಕೃತಕ ಬುದ್ಧಿಮತ್ತೆ – ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ವ್ಯವಸ್ಥೆಯಾಗಿದೆ.)
ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) – ‘ಓಪನ್ಎಐ’ ಸಂಸ್ಥೆಯು ತನ್ನ ‘ಚಾಟ್ ಜಿಪಿಟಿ’ ವೆಬ್‌ಸೈಟ್ ನ 5ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್ ಮನ್ ಅವರು, ‘ಜಿಪಿಟಿ-5’ ಮೂಲಕ ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ತಜ್ಞರಂತೆ ಉತ್ತರಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಜಿಪಿಟಿ-5 ಆವೃತ್ತಿಯು ನಿಖರತೆ, ವೇಗ, ತಾರ್ಕಿಕ ಮತ್ತು ಗಣಿತದ ಸಾಮರ್ಥ್ಯಗಳಲ್ಲಿ ಸುಧಾರಿತವಾಗಿರುತ್ತದೆ. ಜಿಪಿಟಿ-5 ಕೃತಕ ಬುದ್ಧಿಮತ್ತೆಯಲ್ಲಿ ದೊಡ್ಡ ಮುನ್ನಡೆಯಾಗಿದೆ. ನೀವು ಜಿಪಿಟಿ-5 ಗೆ ಯಾವುದೇ ಪ್ರಶ್ನೆಗಳನ್ನು ಕೇಳಿದರೆ, ಅದರಿಂದ ಸಿಗುವ ಉತ್ತರವು ತಜ್ಞರು ನೀಡಿದಂತೆ ಅನಿಸುತ್ತದೆ. ನಾವು ಆರಂಭದಲ್ಲಿ ಬಳಕೆದಾರರಿಗೆ ಈ ಸೇವೆಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ.
ಅಮೆರಿಕದ ನಂತರ ಭಾರತ ನಮ್ಮ ಎರಡನೇ ಅತಿ ದೊಡ್ಡ ಮಾರುಕಟ್ಟೆ!
ಆವೃತ್ತಿಯ ಬಿಡುಗಡೆಯ ಸಮಯದಲ್ಲಿ ಆಲ್ಟ್ ಮನ್ ಅವರು ಭಾರತವನ್ನು ಉಲ್ಲೇಖಿಸಿ, ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಿದರು. ಭಾರತಿಯರು ಮತ್ತು ವ್ಯವಹಾರಗಳು ‘ಎಐ’ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಅಮೆರಿಕದ ನಂತರ ಭಾರತ ನಮ್ಮ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ; ಆದರೆ ಭಾರತದಲ್ಲಿನ ಎಐ ಬಳಕೆದಾರರು ಅದನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನೋಡುವುದು ಮುಖ್ಯವಾಗಿರಲಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University