
೧. ಪ.ಪೂ ಮಹಾರಾಜರ ಆಶ್ರಮಕ್ಕೆ ಹೋಗಿ ಡಾಕ್ಟರರು ಎಲ್ಲ ರೀತಿಯ ಶಾರೀರಿಕ ಸೇವೆ ಮಾಡುವುದು ಮತ್ತು ಸೇವೆಯನ್ನು ಮುಗಿಸಿದ ನಂತರ ಪ.ಪೂ. ಬಾಬಾ ಇವರಿಂದ ಅಧ್ಯಾತ್ಮದಲ್ಲಿನ ಸಂದೇಹಗಳ ನಿವಾರಣೆ ಮಾಡಿಕೊಳ್ಳುವಾಗ ಅವರಿಗೆ ಸಮಯದ ಪ್ರಜ್ಞೆ ಇಲ್ಲದಿರುವುದು ‘ಡಾಕ್ಟರರು ಪ.ಪೂ. ಮಹಾರಾಜರನ್ನು ಭೇಟಿಯಾಗಲು ಆಶ್ರಮಕ್ಕೆ ಹೋದ ತಕ್ಷಣ, ಅವರು ಮೊದಲು ಬಟ್ಟೆಗಳನ್ನು ಬದಲಿಸಿ ಆಶ್ರಮದ ಸ್ವಚ್ಛತೆ ಮಾಡುತ್ತಿದ್ದರು. ‘ಆಶ್ರಮ ಗುಡಿಸು ವುದು, ಜೇಡರಬಲೆಗಳನ್ನು ತೆಗೆಯುವುದು, ಹಾಸಿಗೆಗಳನ್ನು ಬಿಸಿಲಿಗೆ ಹಾಕುವುದು, ಹಾಗೆಯೇ ಕೈಗಳಿಗೆ ಪ್ಲಾಸ್ಟಿಕ್‌ನ ಚೀಲಗಳನ್ನು ಕಟ್ಟಿಕೊಂಡು ಶೌಚಾಲಯ ಮತ್ತು ಸ್ನಾನಗೃಹವನ್ನು ಸ್ವಚ್ಛ ಮಾಡುವುದು’, ಇಂತಹ ಕೆಲಸಗಳಲ್ಲಿ ಅವರು ಯಾವಾಗಲೂ ತೊಡಗಿರುತ್ತಿದ್ದರು. ಈ ಎಲ್ಲವನ್ನೂ ಮುಗಿಸಿದ ನಂತರ ಸ್ನಾನ ಇತ್ಯಾದಿ ಮಾಡಿ ಅವರು ಪ.ಪೂ. ಮಹಾರಾಜರ ಕೋಣೆಗೆ ಪುಸ್ತಕ ಮತ್ತು ಪೆನ್ಸಿಲ್ ತೆಗೆದುಕೊಂಡು ಹೋಗುತ್ತಿದ್ದರು. ಅಧ್ಯಾತ್ಮದ ಬಗ್ಗೆ ಇರುವ ಸಂದೇಹಗಳ ಬಗ್ಗೆ ಪ.ಪೂ. ಮಹಾರಾಜರಿಂದ ನಿವಾರಣೆ ಮಾಡಿಕೊಂಡು ಅದನ್ನು ಪುಸ್ತಕದಲ್ಲಿ ಬರೆದಿಡುತ್ತಿದ್ದರು. ಇದರಲ್ಲಿ ಅವರಿಗೆ ಸಮಯದ ಪರಿವೆ ಇರುತ್ತಿರಲಿಲ್ಲ. ಪ.ಪೂ. ಮಹಾರಾಜರ ಎದೆಯ ಮೇಲೆ ‘ಕಿಲೈಡ್’ (ಗಾಯದ ಹುಣ್ಣು ದೊಡ್ಡದಾಗುವುದು) ಆಗಿತ್ತು. ಅದರಿಂದ ಅವರಿಗೆ ತೊಂದರೆ ಯಾಗುತ್ತಿತ್ತು. ಪ.ಪೂ. ಮಹಾರಾಜರಿಗೆ ನಿದ್ದೆ ತಾಗಿದ್ದರೂ ಅವರ ಏಳುವವರೆಗೆ ಡಾಕ್ಟರರು ಅಲ್ಲಿಯೇ ಕುಳಿತುಕೊಳ್ಳುತ್ತಿದ್ದರು.

೨. ಶಾರೀರಿಕ ಸೇವೆಯನ್ನು ಮಾಡುವ ಡಾಕ್ಟರರನ್ನು ನೋಡಿ ಪ.ಪೂ ಮಹಾರಾಜರು ತಮಾಷೆಯಿಂದ ತೆಗೆದ ಉದ್ಗಾರ !
ಡಾಕ್ಟರರು ಕಾಂದಳಿಯ ಆಶ್ರಮಕ್ಕೆ ಹೋದರೂ ಅಲ್ಲಿಯೂ ಅವರು ಇದನ್ನೇ ಮಾಡುತ್ತಿದ್ದರು. ಅಲ್ಲಿನ ‘ಅಂಗಳವನ್ನು ಗುಡಿಸುವುದು, ಕಲ್ಲುಗಳನ್ನು ಆಯ್ದು ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುವುದು, ಒಣಗಿದ ಹೂವಿನ ಗಿಡಗಳನ್ನು ತೆಗೆಯುವುದು’, ಈ ಎಲ್ಲವನ್ನೂ ಅವರು ಮಾಡುತ್ತಿದ್ದರು. ಒಂದು ಬಾರಿ ಪ.ಪೂ. ಮಹಾರಾಜರು ಅವರನ್ನು ಭೇಟಿಯಾಗಲು ಬಂದ ಓರ್ವ ಅತಿಥಿಗೆ, ‘ನೋಡಿ ನೋಡಿ, ‘ಫಾರಿನ್ ರಿಟರ್ನ್ ಡಾಕ್ಟರ್’ ನನ್ನ ಅಂಗಳವನ್ನು ಗುಡಿಸುತ್ತಿದ್ದಾನೆ’ ಎಂದು ಹೇಳಿದರು.
೩. ಡಾಕ್ಟರರು ಸಾಧಕರ ಸಹಾಯದಿಂದ ಆಶ್ರಮದ ಪರಿಸರವನ್ನು ಸ್ವಚ್ಛ ಮಾಡಿ ಒಂದು ಚಿಕ್ಕ ಕಾಲುದಾರಿಯನ್ನು ತಯಾರಿಸುವುದು ಮತ್ತು ನಂತರ ಅದೇ ಜಾಗದಲ್ಲಿ ಪ.ಪೂ. ಮಹಾರಾಜರ ಸಮಾಧಿಯನ್ನು ಕಟ್ಟಲಾಯಿತು
ಆಶ್ರಮದ ಅಂಗಳದ ಕೊನೆಯಲ್ಲಿ ಕುಳಿತುಕೊಳ್ಳಲು ಕಲ್ಲಿನ ಸುಖಾಸನ(ಸೋಫಾ) ಇತ್ತು. ಅದರ ಆಚೆಗೆ ಮುಳ್ಳುಕಂಟಿಗಳು, ಕಲ್ಲುಗಳು ಇತ್ಯಾದಿ ಎಲ್ಲೆಂದರಲ್ಲಿ ಹರಡಿದ್ದವು. ಡಾಕ್ಟರರು ತಮ್ಮೊಂದಿಗೆ ಕರೆದುಕೊಂಡು ಹೋದ ಸಾಧಕರ ಸಹಾಯದಿಂದ ಆ ಎಲ್ಲ ಜಾಗವನ್ನು ಸ್ವಚ್ಛ ಮಾಡಿದರು. ಅಲ್ಲಿ ಒಂದು ಚಿಕ್ಕ ಕಾಲುದಾರಿಯನ್ನೂ ತಯಾರಿಸಿದರು. ಆಶ್ಚರ್ಯವೆಂದರೆ, ಇದೇ ಜಾಗದಲ್ಲಿ ಇಂದು ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಯನ್ನು ಕಟ್ಟಲಾಗಿದೆ.
೪. ಪ.ಪೂ. ಬಾಬಾ ಇವರು ತಮ್ಮ ಕೊನೆಯ ಅನಾರೋಗ್ಯದಲ್ಲಿ ಡಾಕ್ಟರರಿಗೆ ‘ಗುರುಚರಿತ್ರೆ’ಯನ್ನು ಓದಲು ಆಜ್ಞೆ ಮಾಡುವುದು
ಪ.ಪೂ. ಬಾಬಾ ಇವರ ಕೊನೆಯ ಅನಾರೋಗ್ಯದಲ್ಲಿ ಡಾಕ್ಟರರು ಅವರ ಚರಣಗಳ ಬಳಿಯೇ ಕುಳಿತುಕೊಂಡು ಓದುವುದು ಮತ್ತು ಬರೆಯುವುದು ಮಾಡುತ್ತಿದ್ದರು. ಒಂದು ಸಲ ಪ.ಪೂ ಭಕ್ತರಾಜ ಮಹಾರಾಜರು ಅಧ್ಯಾತ್ಮದ ವಿವೇಚನೆ ಮಾಡುವಾಗ ಇದ್ದಕ್ಕಿದ್ದಂತೆಯೇ, ‘ನೀವು ‘ಗುರುಚರಿತ್ರೆ’ಯನ್ನು ಓದಿದ್ದೀರಾ ?’’ ಎಂದು ಕೇಳಿದರು. ಡಾಕ್ಟರರು ”ಇಲ್ಲ ಓದಿಲ್ಲ’’, ಎಂದು ಹೇಳಿದಾಗ, ಅವರು ಸ್ವಲ್ಪ ಕೋಪಗೊಂಡರು ಮತ್ತು, ”ನಾಳೆಯಿಂದ ನನ್ನ ಕಾಲುಗಳ ಬಳಿ ಕುಳಿತುಕೊಂಡು ಅದನ್ನು ಓದು’’, ಎಂದು ಹೇಳಿದರು. ಡಾಕ್ಟರರು ಮರುದಿನದಿಂದ ಗುರುಚರಿತ್ರೆಯನ್ನು ಓದತೊಡಗಿದರು. ಅಷ್ಟೇ ಅಲ್ಲ, ಆ ಬಗ್ಗೆ ಬರೆದಿಟ್ಟುಕೊಂಡರು. ಅದು ಅವರಿಗೆ ಮುಂದೆ ಅವರ ಬರವಣಿಗೆಗಾಗಿ ಉಪಯೋಗವಾಯಿತು.
೫. ಪ.ಪೂ. ಭಕ್ತರಾಜ ಮಹಾರಾಜರು ತೆಗೆದುಕೊಂಡ ಡಾಕ್ಟರರ ಪರೀಕ್ಷೆ
೫ ಅ. ಪ.ಪೂ. ಬಾಬಾರವರು ಹೇಳಿದಂತೆ ಡಾಕ್ಟರರು ಓರ್ವ ದಂಪತಿ ಗಳಿಗೆ ‘ಈಗ ಬಾಬಾ ಭೇಟಿಯಾಗುವುದಿಲ್ಲ’, ಎಂದು ಹೇಳುವುದು, ಅದೇ ಸಮಯದಲ್ಲಿ ಪ.ಪೂ. ಬಾಬಾರವರು ಅವರನ್ನು ಭೇಟಿ ಮಾಡಲು ಕಳುಹಿಸಲು ಹೇಳುವುದು ಮತ್ತು ನಂತರ ಅತಿಥಿಗಳು ಸಿಟ್ಟಿಗೆದ್ದು ಹಿಂದಿರುಗುವಾಗ ‘ಮಹಾರಾಜರಿಗಿಂತ ಅವರ ಶಿಷ್ಯನೇ ತನ್ನನ್ನು ತಾನು ದೊಡ್ಡವನೆಂದು ತಿಳಿಯುತ್ತಾನೆ’, ಎಂದು ಹೇಳುವುದು : ಒಂದು ಬಾರಿ ಅನಾರೋಗ್ಯದ ಸಮಯದಲ್ಲಿ ಪ.ಪೂ. ಬಾಬಾ ಇವರು ಡಾಕ್ಟರರಿಗೆ, ”ನಾನು ಈಗ ಮಲಗುತ್ತೇನೆ. ಯಾರೇ ಬಂದರೂ ನನ್ನನ್ನು ಎಬ್ಬಿಸಬೇಡ’’, ಎಂದು ಹೇಳಿದರು. ಇವರು (ಡಾಕ್ಟರ್) ಬಾಗಿಲಿನ ಬಳಿ ಓದುತ್ತಾ ಕುಳಿತರು. ಅಷ್ಟರಲ್ಲಿಯೇ ದೂರದಿಂದ ಓರ್ವ ದಂಪತಿಗಳು ಪ.ಪೂ. ಬಾಬಾರನ್ನು ಭೇಟಿಯಾಗಲು ಬಂದರು. ‘ಪ.ಪೂ ಮಹಾರಾಜರು ಅನಾರೋಗ್ಯಪೀಡಿತರಾದುದರಿಂದ ಅವರು ಭೇಟಿಯಾಗುವುದಿಲ್ಲ’, ಎಂದು ಡಾಕ್ಟರರು ಹೇಳಿದರು. ಅಷ್ಟರಲ್ಲಿಯೇ ಪ.ಪೂ. ಭಕ್ತರಾಜ ಮಹಾರಾಜರು ಒಳಗಿನಿಂದ ‘ಯಾರು ಬಂದಿದ್ದಾರೆ’, ಎಂದು ಕೇಳಿದರು. ಡಾಕ್ಟರರು ‘ಯಾರು ಬಂದಿದ್ದಾರೆ’ ಎಂಬುದನ್ನು ಹೇಳಿದರು. ಆಗ ಪ.ಪೂ ಮಹಾರಾಜರು ಅವರನ್ನು ಒಳಗೆ ಭೇಟಿಯಾಗಲು ಕಳಿಸಲು ಹೇಳಿದರು. ಬಂದ ಅತಿಥಿಗಳು ಸ್ವಲ್ಪ ಸಮಯ ನಿಂತು ಹೋದರು. ಹೋಗುವಾಗ ಅವರು ”ಮಹಾರಾಜರಿಗಿಂತ ಅವರ ಶಿಷ್ಯನೇ ತನ್ನನ್ನು ತಾನು ದೊಡ್ಡವನೆಂದು ತಿಳಿಯುತ್ತಾನೆ !’’, ಎಂದು ಬಡಬಡಿಸುತ್ತಾ ಹೋದರು.
೫ ಆ. ಅತಿಥಿಗಳು ಹೋದ ನಂತರ ತಮ್ಮನ್ನು ಭೇಟಿಯಾಗಲು ಕಳಿಸಿದ ಬಗ್ಗೆ ಪ.ಪೂ ಬಾಬಾ ಇವರು ಡಾಕ್ಟರರ ಮೇಲೆ ಸಿಟ್ಟು ಮಾಡುವುದು : ಆ ಸಮಯದಲ್ಲಿ ನಾನು ಪಕ್ಕದಲ್ಲಿಯೇ ಇದ್ದೆನು. ನಾನು ಅವರ ಮಾತನ್ನು ಕೇಳಿದೆ. ನಾನು ಡಾಕ್ಟರರಿಗೆ, ”ನೀವೇಕೆ ಅವರಿಗೆ ಹೇಳಲು ಹೋದಿರಿ ?’’, ಎಂದು ಕೇಳಿದೆನು. ಆಗ ಡಾಕ್ಟರರು, ”ಅತಿಥಿಗಳು ಹೋದ ನಂತರ ನನ್ನನ್ನು ಕರೆಯಿಸಿ ಮಹಾರಾಜರು ಏನು ಹೇಳಿದರು, ಎಂಬುದು ಗೊತ್ತೇ ? ಅವರು ನನಗೆ, ”ತುರ್ತುನಿಗಾ ಘಟಕದಲ್ಲಿರುವ ರೋಗಿಗಳ ಕಾಳಜಿಯನ್ನು ನೀನು ಇದೇ ರೀತಿ ತೆಗೆದುಕೊಳ್ಳುತ್ತೀಯಾ ? ನೀನು ಡಾಕ್ಟರ್ ಇದ್ದೀಯಾ ಅಥವಾ ಹಜಾಮನಾಗಿದ್ದೀಯಾ ?’’, ಎಂದು ಕೇಳಿದರು’, ಎಂದು ಹೇಳಿದರು. ಇದನ್ನು ಕೇಳಿ ನನಗೆ ಆಘಾತವೇ ಆಯಿತು. ‘ಗುರುಗಳು ತಮ್ಮ ಶಿಷ್ಯನ ಪರೀಕ್ಷೆಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ?’, ಎಂಬುದರ ಇದು ಉತ್ತಮ ಉದಾಹರಣೆಯಾಗಿತ್ತು.
೬. ಪ.ಪೂ. ಮಹಾರಾಜರು ಪ್ರಸನ್ನಗೊಂಡು ಡಾಕ್ಟರರಿಗೆ ನೀಡಿದ ಅಮೂಲ್ಯ ಆಶೀರ್ವಾದ !
ಪ.ಪೂ ಮಹಾರಾಜರು ಇಂತಹ ಬಹಳಷ್ಟು ಪರೀಕ್ಷೆಗಳನ್ನು ತೆಗೆದುಕೊಂಡರು. ಅವುಗಳಲ್ಲಿ ಅವರು ಉತ್ತೀರ್ಣ ಸಹ ಆದರು; ಆದುದರಿಂದಲೇ ಪ್ರಸನ್ನಗೊಂಡು ಒಂದು ಸಲ ಅವರು, ”ಡಾಕ್ಟರ್, ನಾನು ನಿಮಗೆ ‘ಜ್ಞಾನ, ಭಕ್ತಿ ಮತ್ತು ವೈರಾಗ್ಯ’ ನೀಡಿದೆನು’’, ಎಂದು ಹೇಳಿದರು. ಗುರುಗಳಿಂದ ಇಂತಹ ಆಶೀರ್ವಾದ ಸಿಗುವುದು, ಪರಮ ಭಾಗ್ಯವೇ ಆಗಿದೆ.
– ಡಾ. (ಸೌ.) ಕುಂದಾ ಜಯಂತ ಆಠವಲೆ (೨೯.೪.೨೦೨೫)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !