ಪ.ಪೂ. ಭಕ್ತರಾಜ ಮಹಾರಾಜರ ಆಜ್ಞೆಯಂತೆ ೧೯೯೧ ರಲ್ಲಿ ಡಾ. ಆಠವಲೆಯವರು ಸಂಸ್ಥೆಯನ್ನು ಸ್ಥಾಪಿಸುವುದು ಮತ್ತು ೧೯೯೫ ರಲ್ಲಿ ಪ.ಪೂ. ಬಾಬಾರವರ ಮಹಾನಿರ್ವಾಣ !

|| ಹರಿ ಓಂ ತತ್ಸತ್‌ ||

‘ಡಾ. ಆಠವಲೆಯವರ ಅಂದರೆ, ನನ್ನ ಪತಿದೇವರ ೮೩ ನೆಯ ಹುಟ್ಟುಹಬ್ಬ ಆಚರಣೆಯಾಯಿತು. ಆದ್ದರಿಂದ ಅವರ ವಿಷಯದಲ್ಲಿ ಬರೆಯಬೇಕೆಂದು ನನಗೆ ಸೂಚಿಸಲಾಯಿತು. ಆದ್ದರಿಂದ ನಾನು ಬರೆಯಲು ಮುಂದಾದೆನು. ‘ಡಾಕ್ಟರರ ಆಧ್ಯಾತ್ಮಿಕ ಪ್ರಯಾಣದ ವಿಷಯದಲ್ಲಿ ಮತ್ತು ಅವರಲ್ಲಿದ್ದ ಶಿಷ್ಯಭಾವದ ವಿಷಯದಲ್ಲಿ ನಾನು ಅನುಭವಿಸಿದ್ದನ್ನು ಬರೆಯಬೇಕೆಂದು ನನಗನಿಸಿತು. – ಡಾ. (ಸೌ.) ಕುಂದಾ ಆಠವಲೆ

‘ಡಾ. ಆಠವಲೆಯವರ ಆಧ್ಯಾತ್ಮಿಕ ಮಾರ್ಗಕ್ರಮಣ’ ಈ ಲೇಖನಮಾಲೆಯನ್ನು ೨೬/೪೬ ರಲ್ಲಿ ಪ್ರಕಟಿಸಲಾಗಿತ್ತು. ಈ ಲೇಖನದ ಕೊನೆಯ ಭಾಗವನ್ನು ಇಲ್ಲಿ ನೀಡಲಾಗಿದೆ.

ಪ.ಪೂ. ಭಕ್ತರಾಜ ಮಹಾರಾಜರ ಸೇವೆಯನ್ನು ಯಾವಾಗಲೂ ತತ್ಪರರಾಗಿದ್ದು, ಆನಂದದಿಂದ, ಭಾವಪೂರ್ಣವಾಗಿ ಮಾಡುತ್ತಿರುವ ಶಿಷ್ಯ ಡಾ. ಆಠವಲೆ

೧೦. ಡಾಕ್ಟರರು ಪ.ಪೂ. ಬಾಬಾ ಇವರಿಗೆ ತಮ್ಮ ಆಸ್ಪತ್ರೆಯ ವಾಸ್ತುವನ್ನು ‘ಗುರುದಕ್ಷಿಣೆ’ಯೆಂದು ಅರ್ಪಿಸುವ ಸಿದ್ಧತೆ ತೋರಿಸುವುದು, ಆ ಸಮಯದಲ್ಲಿ ಪ.ಪೂ. ಬಾಬಾ ಇವರು ಗುರುವಾರದ ಗಳಿಕೆಯಲ್ಲಿನ ನಾಲ್ಕನೇ ಭಾಗವನ್ನು ‘ಗುರುದಕ್ಷಿಣೆ’ಯೆಂದು ನೀಡಲು ಹೇಳುವುದು ಮತ್ತು ಆ ದಿನ ಅತ್ಯಧಿಕ ಗಳಿಕೆಯಾಗತೊಡಗುವುದು : ಒಂದು ಬಾರಿ ಪ.ಪೂ. ಭಕ್ತರಾಜ ಮಹಾರಾಜರು ಮುಂಬಯಿಗೆ ಬಂದಾಗ ಡಾಕ್ಟರರು ಅವರಿಗೆ, ‘ನಿಮಗೆ ‘ಗುರುದಕ್ಷಿಣೆ’ಯೆಂದು ನೀಡಲು ನನ್ನ ಬಳಿ ಕೇವಲ ಆಸ್ಪತ್ರೆಯ ವಾಸ್ತು ಮಾತ್ರ ಇದೆ. ನಾನು ಅದನ್ನು ನಿಮಗೆ ಅರ್ಪಿಸುತ್ತೇನೆ’’, ಎಂದು ಹೇಳಿದರು. ಅದಕ್ಕೆ ಪ.ಪೂ. ಮಹಾರಾಜರು, ”ನಿನ್ನದೆಲ್ಲವೂ, ನನ್ನದಾಗಿದೆ ಮತ್ತು ನನ್ನದನ್ನು ನಾನು ನಿನಗೆ ಬಳಸಲು ಕೊಟ್ಟಿರುವೆ. ಅದನ್ನು ಈಗ ನೀನೇ ಬಳಸು’’, ಎಂದು ಹೇಳಿದರು. ಆದರೆ ಡಾಕ್ಟರರು ‘ನೀವು ಆಸ್ಪತ್ರೆಯನ್ನು ಸ್ವೀಕರಿಸಿ’, ಎಂದು ಹೇಳಿ ಅವರನ್ನು ಒತ್ತಾಯಿಸಿದರು. ಆಗ ಪ.ಪೂ. ಬಾಬಾ ಇವರು, ”ಸರಿ, ಈಗ ಹೀಗೆ ಮಾಡೋಣ, ಪ್ರತಿ ಗುರುವಾರದ ಗಳಿಕೆಯಲ್ಲಿ ೪ ಭಾಗ ಮಾಡು. ‘ಒಂದು ನನಗಾಗಿ, ಒಂದು ನಿನಗಾಗಿ, ಒಂದು ಕುಂದಾಳಿಗಾಗಿ, ನಾಲ್ಕನೇಯದು ಆಸ್ಪತ್ರೆಯ ನಿರ್ವಹಣೆಗಾಗಿ’’, ಎಂದು ಹೇಳಿ ದರು. ಡಾಕ್ಟರರು ಅದನ್ನು ಒಪ್ಪಿಕೊಂಡರು. ಸಾಮಾನ್ಯವಾಗಿ ಗುರುವಾರದಂದು ಕೆಲವು ಹೊಸ ರೋಗಿಗಳು ಮತ್ತು ೧-೨ ಹಳೆಯ ರೋಗಿಗಳನ್ನು ಬಿಟ್ಟರೆ, ಉಳಿದವರು ಸಾಧನೆಯ ಸಂದರ್ಭದಲ್ಲಿ ಮಾರ್ಗದರ್ಶನ ಪಡೆಯಲು ಬರುತ್ತಿದ್ದರು. ಅವರಿಂದ ಶುಲ್ಕ ತೆಗೆದು ಕೊಳ್ಳುತ್ತಿರಲಿಲ್ಲ. ಆದುದರಿಂದ ಆ ದಿನದ ಗಳಿಕೆ ಇತರ ದಿನಗಳಿಗಿಂತ ಕಡಿಮೆ ಇರುತ್ತಿತ್ತು; ಆದರೆ ವಿಶೇಷವೆಂದರೆ ಪ.ಪೂ. ಭಕ್ತರಾಜ ಮಹಾರಾಜರು ಗುರುವಾರದ ಗಳಿಕೆಯಲ್ಲಿನ ಪಾಲು ಕೇಳಿದ ನಂತರ ಆ ದಿನದ ರೋಗಿಗಳ ಸಂಖ್ಯೆ ಬಹಳ ಹೆಚ್ಚಾಯಿತು. ಆದುದರಿಂದ ನಾವು ಪ.ಪೂ. ಬಾಬಾ ಇವರನ್ನು ಭೇಟಿ ಯಾದಾಗ, ಅವರಿಗೆ ವ್ಯವಸ್ಥಿತವಾಗಿ ದಕ್ಷಿಣೆ ಯನ್ನು ಕೊಡಲು ಸಾಧ್ಯವಾಗತೊಡಗಿತು.

೧೧. ಪ.ಪೂ. ಭಕ್ತರಾಜ ಮಹಾರಾಜರು ಅಧ್ಯಾತ್ಮದ ಪ್ರಚಾರ ಮತ್ತು ಪ್ರಸಾರ ಮಾಡಲು ಆಧ್ಯಾತ್ಮಿಕ ಸಂಸ್ಥೆಯನ್ನು ಸ್ಥಾಪಿಸಲು ಹೇಳುವುದು

೧೧ ಅ. ಪ.ಪೂ. ಬಾಬಾ ಇವರು, ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ ಈ ಹೆಸರಿನಿಂದ ಸಂಸ್ಥೆಯನ್ನು ಸ್ಥಾಪಿಸಲು ಹೇಳಿ ‘ಪ್ರಚಾರ ಮಾಡುವ ಸಂಸ್ಥೆಯು ಹೇಗಿರಬೇಕು ?’, ಎಂಬುದರ ಬಗ್ಗೆ ಸುಂದರ ವಿವರಣೆಯನ್ನು ನೀಡುವುದು : ೧೯೯೧ ಆಗಸ್ಟ್ ೧ ರಂದು ನಾಸಿಕ್‌ದಲ್ಲಿ ಶ್ರೀ. ಗಿರೀಶ ದೀಕ್ಷಿತ್‌ ಇವರ ಮನೆಯಲ್ಲಿ ತಂಗಿದಾಗ ಡಾಕ್ಟರರ ಅಧ್ಯಾತ್ಮಕಾರ್ಯದ ಪ್ರಸಾರದ ವಿಷಯ ಬಂದಿತು. ಆ ಸಮಯದಲ್ಲಿ ಪ.ಪೂ ಭಕ್ತರಾಜ ಮಹಾರಾಜರು ಒಂದು ಸಂಸ್ಥೆಯನ್ನು ಸ್ಥಾಪಿಸಲು ಹೇಳಿದರು. ‘ಪ್ರಚಾರ ಮಾಡುವ ಸಂಸ್ಥೆ ಹೇಗಿರಬೇಕು ?’, ಎಂಬುದರ ಬಗ್ಗೆ ಅವರು ಸುಂದರ ವಿವೇಚನೆ ಮಾಡಿದರು. ಅವರು ಸಾಧಕರ ‘ಥ್ರಿ ಟೈಯರ್‌ ಸಿಸ್ಟಮ್’ (ಟಿಪ್ಪಣಿ) ಬಗ್ಗೆ ಮಾತನಾಡಿದರು. ‘ಸಾಧಕರನ್ನು ಹಂತಹಂತವಾಗಿ ಮುಂದಕ್ಕೆ ಹೇಗೆ ಕೊಂಡೊಯ್ಯುವುದು ?’, ಎಂದು ಅವರು ವಿವರಿಸಿ ಹೇಳಿದರು. ಅವರು ಸಂಸ್ಥೆಗೆ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ ಎಂಬ ಹೆಸರನ್ನೂ ಇಟ್ಟರು. ಹತ್ತಿರದಲ್ಲೇ ಕುಳಿತಿರುವ ಶ್ರೀ. ಮನೋಹರ ಕೆತಕರ ಇವರಿಗೆ ಆ ಹೆಸರನ್ನು ಮೂರು ಬಾರಿ ಉಚ್ಚರಿಸಲು ಹೇಳಿದರು. ಈ ರೀತಿ ೧೯೯೧ ಆಗಸ್ಟ್ ೧ ರಂದು ಸಂಸ್ಥೆಯ ಸ್ಥಾಪನೆಯಾಯಿತು. ಅವರು ಮುಜರಾಯಿ ಆಯುಕ್ತರ ಬಳಿಗೆ ಸಂಸ್ಥೆಯ ನೋಂದಣಿ (ರಿಜಿಸ್ಟರ್) ಮಾಡಲು ಹೇಳಿದರು. ಮುಂಬಯಿಯಲ್ಲಿ ಮುಜರಾಯಿ ಆಯುಕ್ತರ ಕಚೇರಿ ಇತ್ತು. ಆಯುಕ್ತರು ಪ.ಪೂ ಮಹಾರಾಜರ ಭಕ್ತರೇ ಆಗಿದ್ದರು. ಅವರ ವಿಳಾಸ ಮತ್ತು ಫೋನ್‌ ಕ್ರಮಾಂಕ ನೀಡಿದರು ಮತ್ತು ಅವರನ್ನು ಭೇಟಿಯಾಗಲು ಹೇಳಿದರು.

( ಟಿಪ್ಪಣಿ : ‘ಥ್ರಿ ಟೈಯರ್‌ ಸಿಸ್ಟಮ್’ ಮುಂದಿನಂತಿದೆ

೧. ‘ಪ.ಪೂ. ಬಾಬಾ ಇವರ ಹೇಳಿಕೆಗನುಸಾರ ಹೊಸ ಸಾಧಕನನ್ನು ಒಮ್ಮೆಲೆ ‘ಯಮ-ನಿಯಮ’ಗಳಲ್ಲಿ ಸಿಲುಕಿಸುವುದು ಸರಿಯಲ್ಲ. ಎಲ್ಲರಿಗೂ ಅದನ್ನು ಪಾಲಿಸುವುದು ಕಷ್ಟವಾಗು ತ್ತದೆ; ಆದುದರಿಂದ ಪ್ರಾಥಮಿಕ ಹಂತದಲ್ಲಿ ಅವರಿಗೆ ಸ್ವಾತಂತ್ರ್ಯ ನೀಡಬೇಕು. ಸಂಸಾರಿಕ ಜೀವನದಲ್ಲಿ ಅವರು ಹೇಗೆ ವರ್ತಿಸುತ್ತಾರೆಯೋ, ಅವರಿಗೆ ಅದೇ ರೀತಿ ವರ್ತಿಸಲು ಬಿಡಬೇಕು.
೨. ಈ ಹಂತದಲ್ಲಿ ಸ್ಥಿರವಾದ ನಂತರ ಎರಡನೇ ಹಂತದಲ್ಲಿ ಅವರಿಗೆ ಕೆಲವು ವಿಶಿಷ್ಟ ಬಂಧನಗಳನ್ನು ಹಾಕಬೇಕು, ಅಂದರೆ ಅವರಿಗೆ ಶಿಸ್ತುಬದ್ಧ ಜೀವನದ ಅಭ್ಯಾಸವಾಗುತ್ತದೆ.
೩. ಮುಂದೆ ಆಧ್ಯಾತ್ಮಿಕ ಜೀವನಕ್ಕೆ ಆವಶ್ಯಕವಾದ ಎಲ್ಲ ನಿಯಮಗಳನ್ನು ಪಾಲಿಸಲು ಹೇಳಬೇಕು.’)

೧೧ ಆ. ಮುಂಬಯಿಯಲ್ಲಿ ಆಯುಕ್ತರ ಭೇಟಿ ಮತ್ತು ‘ಟ್ರಸ್ಟ್‌’ನ ಸ್ಥಾಪನೆ ! : ಮುಂಬಯಿಗೆ ಬಂದ ನಂತರ ನಾವು ಆಯುಕ್ತರನ್ನು ಭೇಟಿಯಾದೆವು. ಅವರು ಎಲ್ಲ ಪ್ರಕ್ರಿಯೆಯನ್ನು ತಿಳಿಸಿ ಹೇಳಿದರು. ಅಷ್ಟೇ ಅಲ್ಲದೇ ‘ಸಂಸ್ಥೆಯ ನಿಯಮಗಳು, ಉದ್ದೇಶ ಮತ್ತು ಕಾರ್ಯಪದ್ಧತಿ ಹೇಗಿರಬೇಕು ?’, ಈ ಬಗ್ಗೆಯೂ ತಿಳಿಸಿ ಹೇಳಿದರು. ಈ ರೀತಿ ಟ್ರಸ್ಟ್‌ನ ಸ್ಥಾಪನೆಯಾಯಿತು. ಅನಂತರ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಕಾರ್ಯ ವೃದ್ಧಿಯಾಗಿ ಅನೇಕರು ಸಂಸ್ಥೆಯ ಸಂಪರ್ಕಕ್ಕೆ ಬಂದರು.

೧೧ ಇ. ೧೯೯೨ ರಲ್ಲಿ ಸಂಸ್ಥೆಯ ವತಿಯಿಂದ ಪ.ಪೂ. ಬಾಬಾ ರವರ ಗುರುಪೂರ್ಣಿಮೆ ಆಚರಿಸುವಾಗ ಟ್ರಕ್‌ಚಾಲಕರ ಮುಷ್ಕರ ಆರಂಭವಾದುದರಿಂದ ಆವಶ್ಯಕ ವಸ್ತುಗಳನ್ನು ಪಡೆಯುವಲ್ಲಿ ಬಂದ ಅಡಚಣೆಗಳು ಮತ್ತು ಗುರುಗಳ ಕೃಪೆಯಿಂದ ಅಡಚಣೆಗಳು ದೂರವಾಗಿ ಉತ್ತಮರೀತಿಯಲ್ಲಿ ನೆರವೇರಿದ ಸಮಾರಂಭ ! : ೧೯೯೨ ರಲ್ಲಿ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ’ ವತಿಯಿಂದ ಮುಂಬಯಿಯ ಮಾಟುಂಗಾದ ‘ಆಂಧ್ರಸಮಾಜ ಸಭಾಗೃಹದಲ್ಲಿ’ ಪ.ಪೂ ಬಾಬಾರವರ ಗುರುಪೂರ್ಣಿಮೆ ಯನ್ನು ಆಚರಿಸಲು ನಿರ್ಧರಿಸಲಾಯಿತು. ಎಲ್ಲ ಸಿದ್ಧತೆಗಳು ಆರಂಭವಾದವು. ಗುರುಪೂರ್ಣಿಮೆಯ ೧ ವಾರ ಮೊದಲು ಟ್ರಕ್‌ಚಾಲಕರ ಮುಷ್ಕರ ಆರಂಭವಾದುದರಿಂದ ಮುಂಬಯಿ ಯಲ್ಲಿ ನಡೆಯುವ ವಸ್ತುಗಳ ಆಮದು ನಿಂತಿತು. ಆದುದರಿಂದ ಎಲ್ಲ ವಸ್ತುಗಳ ಕೊರತೆ ಉದ್ಭವಿಸಿತು.

೧. ಉತ್ಸವಕ್ಕೆ ೨ ದಿನಗಳು ಉಳಿದಿದ್ದವು, ಮುಷ್ಕರ ಮುಗಿಯುವ ಲಕ್ಷಣ ಕಾಣಿಸುತ್ತಿರಲಿಲ್ಲ. ಕೊನೆಗೆ ಸಾಧಕರಿಗೆ ಸಕ್ಕರೆ ಮತ್ತು ಚಹಾಪುಡಿ ಇತ್ಯಾದಿ ಅರ್ಧ ಕಿಲೋ, ಒಂದು ಕಿಲೋ, ಹೀಗೆ ಸಾಧ್ಯವಿದ್ದಷ್ಟು ಕೊಡಲು ಹೇಳಿದರು.

೨. ಉಂಡೆಗಳನ್ನು ಮಾಡಬೇಕಿತ್ತು. ಅದಕ್ಕಾಗಿ ಹೆಚ್ಚು ಸಕ್ಕರೆ ಬೇಕಾಗಿತ್ತು. ಪ.ಪೂ ಮಹಾರಾಜರ ಓರ್ವ ಭಕ್ತರು ವಾಶಿ ಮಾರುಕಟ್ಟೆಯಲ್ಲಿ ಓರ್ವ ಸಗಟು ವ್ಯಾಪಾರಿಯ ಬಳಿ ನೌಕರಿಗೆ ಇದ್ದರು. ಅವರಲ್ಲಿ ವಿನಂತಿಸಿಕೊಂಡಾಗ ನಮಗೆ ೫೦ ಕಿಲೋ ಸಕ್ಕರೆ ಸಿಕ್ಕಿತು.

೩. ನಾಸಿಕದಿಂದ ಶ್ರೀ. ಛಂದಾ ದೀಕ್ಷಿತ್‌ ಬರುವವರಿದ್ದರು. ಅವರಿಗೆ ನಾಸಿಕದ ತರಕಾರಿ ಮಾರುಕಟ್ಟೆಯಿಂದ ಎಷ್ಟು ಸಾಧ್ಯವೋ ಅಷ್ಟು ತರಕಾರಿಯನ್ನು ತರಲು ಹೇಳಲಾಯಿತು.

೪. ಅಲಂಕಾರಕ್ಕಾಗಿ ಹೂವುಗಳು ಇರಲಿಲ್ಲ. ಮುಂಬಯಿಯ ‘ಕ್ರಾಫರ್ಡ ಮಾರ್ಕೆಟ್‌’ನಿಂದ ಕನಕಾಂಬರ ಹೂವುಗಳ ಮಾಲೆಗಳ ಒಂದು ‘ಬಂಡಲ್’ ಸಿಕ್ಕಿತು. ಅವುಗಳನ್ನು ಬಳಸಿ ಸಾಧ್ಯವಿದ್ದಷ್ಟು ರಂಗಮಂಟಪವನ್ನು ಅಲಂಕರಿಸಲಾಯಿತು.

೫. ಸೌ. ಶೋಭಾ ಪ್ರಧಾನ (ಬಾಬಾರ ಓರ್ವ ಭಕ್ತರು) ಇವರು ಪ.ಪೂ. ಮಹಾರಾಜರ ಸದ್ಗುರುಗಳ ಒಂದು ತೈಲಚಿತ್ರ ವನ್ನು ಬಿಡಿಸಿದರು. ಆ ಚಿತ್ರದಿಂದ ಸಮಾರಂಭದ ಶೋಭೆ ಹೆಚ್ಚಾಯಿತು. ಪ.ಪೂ. ಭಕ್ತರಾಜ ಮಹಾರಾಜರು ಆ ಚಿತ್ರವನ್ನು ನೋಡಿ ಬಹಳ ಪ್ರಸನ್ನಗೊಂಡರು. ಈ ರೀತಿ ಸಮಾರಂಭವು ಉತ್ತಮ ರೀತಿಯಲ್ಲಿ ನೆರವೇರಿತು. ಅನಂತರ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ವತಿಯಿಂದ ವರ್ಷ ೧೯೯೩ ರಲ್ಲಿ ಗೋವಾ ಮತ್ತು ೧೯೯೫ ರಲ್ಲಿ ಕುಡಾಳದಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಗೋವಾದ ಗುರುಪೂರ್ಣಿಮೆ ಬಹಳ ಅತ್ಯುತ್ತಮವಾಯಿತು.

೧೧ ಈ. ಸಂಸ್ಥೆಯ ಕಾರ್ಯ ಹೆಚ್ಚಾಗತೊಡಗುವುದು : ಇದೇ ಕಾಲಾವಧಿಯಲ್ಲಿ ಡಾಕ್ಟರರ ಭಾರತಾದ್ಯಂತ ಪ್ರವಾಸ ಆರಂಭವಾಗಿತ್ತು. ಕಾರ್ಯ ಹೆಚ್ಚಾಗುತ್ತಲೇ ಇತ್ತು. ಎಲ್ಲ ಕಡೆಗಳಲ್ಲಿ ಸಂಸ್ಥೆಯ ಉಪಕೇಂದ್ರಗಳು ಸ್ಥಾಪನೆಯಾಗಿದ್ದವು. ಅನೇಕ ಜನರು ಕಾರ್ಯದಲ್ಲಿ ಭಾಗವಹಿಸಿದ್ದರು ಬಾಲಸಂಸ್ಕಾರವರ್ಗಗಳು ಮತ್ತು ಅಭ್ಯಾಸವರ್ಗಗಳು ರಭಸದಿಂದ ಆರಂಭವಾಗಿದ್ದವು.

೧೧ ಉ. ಪ.ಪೂ. ಭಕ್ತರಾಜ ಮಹಾರಾಜರ ಕೊನೆಯ ಅನಾರೋಗ್ಯ ಮತ್ತು ಒಂದು ಚೈತನ್ಯಮಯ ಪುಣ್ಯಕಾಲದ ಅಂತ್ಯ !

೧೧ ಉ ೧. ಕುಡಾಳದ ಗುರುಪೂರ್ಣಿಮೆಯ ನಂತರ ಪ.ಪೂ. ಮಹಾರಾಜರ ಅನಾರೋಗ್ಯ ಆರಂಭವಾಗುವುದು : ೧೯೯೫ ರಲ್ಲಿ ಕುಡಾಳದಲ್ಲಿ ನಡೆದ ಗುರುಪೂರ್ಣಿಮೆಯ ನಂತರ ಪ.ಪೂ. ಮಹಾರಾಜರ ಅನಾರೋಗ್ಯ ಆರಂಭವಾಯಿತು. ಗುರುಪೂರ್ಣಿಮೆಗೆ ಅವರು ಪಾದಪೂಜೆಗಾಗಿ ಕುಳಿತುಕೊಳ್ಳಲೂ ಸಾಧ್ಯವಾಗಲಿಲ್ಲ. ಕುಡಾಳದಿಂದ ಅವರು ಔದುಂಬರಕ್ಕೆ ಮತ್ತು ಅಲ್ಲಿಂದ ಇಂದೂರಿಗೆ ಹಿಂದಿರುಗಿದರು. ದೀಪಾವಳಿಯಲ್ಲಿ ಅವರು ನಮ್ಮನ್ನು ಕಾಂದಳಿಗೆ ಕರೆದರು. ಆಗಲೂ ಅವರಿಗೆ ಅನಾರೋಗ್ಯವಿತ್ತು.

೧೧ ಉ ೨. ಪ.ಪೂ ಬಾಬಾರವರ ಎಡಕಾಲಿನ ರಕ್ತವಾಹಿನಿಯಲ್ಲಿ ರಕ್ತದ ಗಂಟು ಆದುದರಿಂದ ಅವರ ಕಾಲಿನ ಶಸ್ತ್ರಚಿಕಿತ್ಸೆ ಆಗುವುದು; ಆದರೆ ಅವರು ಅದರಿಂದ ಗುಣಮುಖರಾಗದೇ ೧೭.೧೧.೧೯೯೫ ರಂದು ಬೆಳಗ್ಗೆ ಅನಂತದಲ್ಲಿ ವಿಲೀನರಾಗುವುದು : ನವೆಂಬರ್‌ನಲ್ಲಿ ಶ್ರೀ. ಘಾಣೇಕರರ ಮಗಳ ಮದುವೆಗಾಗಿ ಪ.ಪೂ. ಬಾಬಾ ಇವರು ಗೋವಾಗೆ ಬಂದಿದ್ದರು. ಅಲ್ಲಿಂದ ಅವರು ಮುಂಬಯಿಗೆ ಹೋದರು. ಇದು ಅವರ ಮುಂಬಯಿಯ ಕೊನೆಯ ಭೇಟಿಯಾಯಿತು. ಇಂದೂರಿಗೆ ಹೋದ ನಂತರ ಅವರ ಎಡಕಾಲಿನ ರಕ್ತವಾಹಿನಿಯಲ್ಲಿ ರಕ್ತದ ಗಂಟಾಯಿತು. ಅದಕ್ಕಾಗಿ ಅವರನ್ನು ತುರ್ತಾಗಿ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು. ನಮ್ಮನ್ನು ತುರ್ತಾಗಿ ಇಂದೂರಿಗೆ ಕರೆಯಲಾಯಿತು. ನಾವು ಬಂದ ನಂತರ ಮರುದಿನ ಶಸ್ತ್ರಚಿಕಿತ್ಸೆ ಮಾಡಲಾಯಿತು; ಆದರೆ ಅದರಿಂದ ಅವರು ಗುಣಮುಖರಾಗಲಿಲ್ಲ. ೧೭ ನವೆಂಬರ್‌ ೧೯೯೫ ರಂದು ಬೆಳಗ್ಗೆ ಅವರು ಅನಂತದಲ್ಲಿ ವಿಲೀನರಾದರು. ನಮ್ಮ ಜೀವನದಲ್ಲಿನ ಒಂದು ಚೈತನ್ಯಮಯ ಪುಣ್ಯಕಾಲವು ಕೊನೆಗೊಂಡಿತು.

ಪ್ರಾರ್ಥನೆ : ‘ಸಂಸ್ಥೆಯ ಸ್ಥಾಪನೆ ಮತ್ತು ಅದರ ಅಭ್ಯುದಯವಾಗುವುದು’, ಇದು ಪ.ಪೂ. ಮಹಾರಾಜರ ಕೃಪಾಶೀರ್ವಾದದ ಫಲವೇ ಆಗಿದೆ’, ಈ ಬಗ್ಗೆ ಸಂದೇಹವೇ ಇಲ್ಲ. ಅವರ ಕೃಪಾದೃಷ್ಟಿ ಹೀಗೆ ಇರಲಿ. ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !’

– ಡಾ. (ಸೌ.) ಕುಂದಾ ಜಯಂತ ಆಠವಲೆ (೨೯.೪.೨೦೨೫) (ಮುಕ್ತಾಯ)