‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಂದರ್ಭದಲ್ಲಿ ದೇವರ ಕೃಪೆಯಿಂದ ಅರಿವಾದ ಅಂಶಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೩ ನೆಯ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ’ದ ನಿಮಿತ್ತ ೧೭ ರಿಂದ ೧೯ ಮೇ ೨೦೨೫ ರ ಅವಧಿಯಲ್ಲಿ ಗೋವಾದ ಫರ್ಮಾಗುಡಿಯಲ್ಲಿರುವ ಅಭಿಯಾಂತ್ರಿಕಿ ಮಹಾವಿದ್ಯಾಲಯದ (ಇಂಜಿನಿಯರಿಂಗ್‌ ಕಾಲೇಜು) ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಜರುಗಿತು. ಆ ಸಂದರ್ಭದಲ್ಲಿ ನನಗೆ ಅರಿವಾದ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಶ್ರೀ. ಅತುಲ ದಿಘೆ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಸ್ತಿತ್ವದಿಂದಾದ ಲಾಭ

‘ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಸ್ತಿತ್ವದಿಂದ ಒಟ್ಟು ಶೇ. ೫೦ ರಷ್ಟು ಲಾಭವನ್ನು ಪಡೆಯಲು ಸಾಧ್ಯವಾಯಿತು. ಅದರಲ್ಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಸ್ತಿತ್ವದಿಂದ ಸಾಧಕರಿಗೆ ಅರಿವಿಲ್ಲದಂತೆಯೇ ಶೇ. ೩೫ ರಷ್ಟು ಲಾಭವಾಯಿತು ಮತ್ತು ಸಾಧಕರು ಮಾಡಿದ ಪ್ರಯತ್ನಗಳಿಂದಾಗಿ ಅವರಿಗೆ ಶೇ. ೧೫ ರಷ್ಟು ಲಾಭವಾಯಿತು.’

೨. ಸಂಘಟನೆಯಿಂದ ಸಾಧಕರಿಗಾದ ಲಾಭ

ಸಾಧಕರು ಪರಸ್ಪರರ ಜೊತೆಗೆ ಇದ್ದ ಕಾರಣ ಅವರಲ್ಲಿನ ಸಂಘಟನಾ ಮನೋಭಾವವು ಶೇ. ೧೫ ರಷ್ಟು ಹೆಚ್ಚಾಯಿತು.

೩. ಸಾಧಕರ ತೊಂದರೆಗಳು ಕಡಿಮೆಯಾಗುವುದು

ಅ. ಶಂಖನಾದ ಮಹೋತ್ಸವಕ್ಕೆ ಬಂದಿದ್ದ ಸಾಧಕರ ಪ್ರಾರಬ್ಧವು ಶೇ. ೨೦ ರಷ್ಟು ಕಡಿಮೆಯಾಯಿತು.
ಆ. ಶಂಖನಾದ ಮಹೋತ್ಸವಕ್ಕೆ ಬಂದಿದ್ದ ಸಾಧಕರ ಶಾರೀರಿಕ ತೊಂದರೆಗಳು ಶೇ. ೫ ರಷ್ಟು, ಮಾನಸಿಕ ತೊಂದರೆಗಳು ಶೇ. ೨೦ ರಷ್ಟು ಮತ್ತು ಆಧ್ಯಾತ್ಮಿಕ ತೊಂದರೆಗಳು ಶೇ. ೨೫ ರಷ್ಟು ಕಡಿಮೆಯಾದವು.

೪. ಸಾಧಕರಲ್ಲಿರುವ ಭಾವ, ಚೈತನ್ಯ, ಆನಂದ ಮತ್ತು ಶಾಂತಿಯಲ್ಲಿ ಆದ ಹೆಚ್ಚಳ

ಅ. ಸಾಧಕರು ಮಹೋತ್ಸವಕ್ಕೆ ಬಂದಾಗ ಅವರಲ್ಲಿ ಶೇ. ೫ ರಷ್ಟು ಆಧ್ಯಾತ್ಮಿಕ ಭಾವವಿತ್ತು. ಮಹೋತ್ಸವದ ಮೂರನೇ ದಿನದಂದು ಸಾಧಕರ ಆಧ್ಯಾತ್ಮಿಕ ಭಾವದಲ್ಲಿ ಶೇ. ೨೫ ರಷ್ಟು ಹೆಚ್ಚಳವಾಯಿತು.
ಆ. ಎಲ್ಲಾ ಸಾಧಕರಲ್ಲಿ ಶೇ. ೧೦ ರಷ್ಟು ಚೈತನ್ಯವು ಹೆಚ್ಚಾಯಿತು. ಶೇ. ೩೦ ರಷ್ಟು ಸಾಧಕರಿಗೆ ಆನಂದ ದೊರಕಿತು. ಶೇ. ೩ ರಷ್ಟು ಸಾಧಕರು ಶಾಂತಿಯ ಅನುಭೂತಿಯನ್ನು ಪಡೆದರು.

೫. ಮಹೋತ್ಸವದ ಚೈತನ್ಯದಿಂದ ಅಲ್ಲಿನ ಪರಿಸರವು ಪಾವನವಾಯಿತು

ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಸ್ತಿತ್ವದಿಂದ ಗೋವಾದ ಫರ್ಮಾಗುಡಿಯಲ್ಲಿರುವ ಅಭಿಯಾಂತ್ರಿಕಿ ಮಹಾವಿದ್ಯಾಲಯದ ಪರಿಸರವು ಪಾವನವಾಗಿದೆ. ಅಲ್ಲಿ ೨ ತಿಂಗಳ ಕಾಲ ಚೈತನ್ಯವು ಉಳಿಯಲಿದೆ. ಅಲ್ಲಿನ ವಿದ್ಯಾರ್ಥಿಗಳಿಗೆ ಅದರ ಲಾಭವಾಗಿ ಅವರಲ್ಲಿ ಕ್ಷಾತ್ರಭಾವ ಮತ್ತು ದೇಶಪ್ರೇಮವು ನಿರ್ಮಾಣವಾಗುವುದು.
ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶಂಖನಾದ ಮಹೋತ್ಸವಕ್ಕಾಗಿ ಅಭಿಯಾಂತ್ರಿಕಿ ಮಹಾವಿದ್ಯಾಲಯದ ಮೈದಾನದ ಒಂದು ಸ್ಥಳಕ್ಕೆ ಬಂದಿದ್ದರು. ಆ ಸ್ಥಳದಲ್ಲಿ ೫೦ ವರ್ಷಗಳ ನಂತರ ಒಂದು ಆಲದ ಮರವು ಬೆಳೆಯುವುದು. ಅಲ್ಲಿ ಒಂದು ಗುರುಕುಲವನ್ನು ಕಟ್ಟಲಾಗುವುದು.

೬. ಅನುಭವಕ್ಕೆ ಬಂದ ಇತರ ಅಂಶಗಳು

ಅ. ಉಪಸ್ಥಿತರಿದ್ದ ಸಾಧಕರಲ್ಲಿ ಕಲಿಯುವ ಮನೋಭಾವವು ಶೇ. ೧೫ ರಿಂದ ಶೇ. ೪೦ ರಷ್ಟಿತ್ತು.
ಆ. ಮಹೋತ್ಸವಕ್ಕೆ ಬಂದಿದ್ದ ಸಾಧಕರಲ್ಲಿ ಶೇ. ೫ ರಷ್ಟು ಸಾಧಕರ ವ್ಯಷ್ಟಿ ಸಾಧನೆಯು ಗುರುಗಳಿಗೆ ಅಪೇಕ್ಷಿತವಿದ್ದಂತೆ ನಡೆಯುತ್ತಿದೆ.
ಇ. ಮಹೋತ್ಸವಕ್ಕೆ ಬಂದಿದ್ದ ಪ್ರತಿಯೊಬ್ಬ ಸಾಧಕನಿಗೆ ಸಚ್ಚಿದಾನಂದ
ಪರಬ್ರಹ್ಮ ಡಾ. ಆಠವಲೆಯವರು ಸೂಕ್ಷ್ಮದಲ್ಲಿ ಒಂದು ಉಡುಗೊರೆ
ಯನ್ನು ನೀಡಿದ್ದಾರೆ. ಪ್ರತಿಯೊಬ್ಬ ಸಾಧಕನಿಗೆ ಯೋಗ್ಯ ಸಮಯದಲ್ಲಿ ‘ಆ ಉಡುಗೊರೆ ಏನು ?’ ಎಂಬುದು ತಿಳಿಯಲಿದೆ.
ಈ. ೨೦.೫.೨೦೨೫ ರಂದು ಗೋವಾದಲ್ಲಿ ಜೋರಾಗಿ ಮಳೆ ಬಿದ್ದಿರುವುದು, ಇದು ‘ಮುಂದಿನ ೩ ವರ್ಷಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ? ಎಂಬುದರ ಸಂಕೇತವಾಗಿದೆ.

– ಶ್ರೀ. ಅತುಲ ದಿಘೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೫.೨೦೨೫)