ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಕಾಲಾವಧಿಯಲ್ಲಿ ವಲಸೆ ನೀತಿ ಅತಿ ಹೆಚ್ಚು ಕಠೋರ ಆಗಿದೆ!

ನವದೆಹಲಿ – ಡೊನಾಲ್ಡ್ ಟ್ರಂಪ್ ಅವರು ಜನವರಿ 2025ರಲ್ಲಿ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ವಲಸೆ ನೀತಿಗಳು ಹೆಚ್ಚು ಕಠಿಣವಾಗಿವೆ. ಇದರ ಪರಿಣಾಮವಾಗಿ, ಕಳೆದ 6 ತಿಂಗಳಲ್ಲಿ ಭಾರತೀಯರನ್ನು ದೊಡ್ಡ ಪ್ರಮಾಣದಲ್ಲಿ ವಾಪಸ್ಸು ಕಳುಹಿಸಲಾಗುತ್ತಿದೆ.
ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಅಧಿಕಾರಾವಧಿಯಲ್ಲಿ ಪ್ರತಿದಿನ ಸರಾಸರಿ 3 ಭಾರತೀಯರನ್ನು ವಾಪಸ್ಸು ಕಳುಹಿಸಲಾಗುತ್ತಿತ್ತು. ಆದರೆ, ಈಗ ಈ ಸಂಖ್ಯೆ 8ಕ್ಕೆ ತಲುಪಿದೆ. ಶೇಕಡಾವಾರು ಲೆಕ್ಕದಲ್ಲಿ ಇದು ಶೇ 267ರಷ್ಟು ಹೆಚ್ಚಳವಾಗಿದೆ.
1. ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ, ಜನವರಿ 2020 ರಿಂದ ಜುಲೈ 2025 ರ ವರೆಗಿನ ಐದೂವರೆ ವರ್ಷಗಳಲ್ಲಿ, ಒಟ್ಟು 7 ಸಾವಿರ 244 ಭಾರತೀಯರನ್ನು ವಿವಿಧ ಕಾರಣಗಳಿಗಾಗಿ ಅಮೆರಿಕಾದಿಂದ ಭಾರತಕ್ಕೆ ವಾಪಸ್ಸು ಕಳುಹಿಸಲಾಗಿದೆ. ಟ್ರಂಪ್ ಅವರ ಅಧಿಕಾರಾವಧಿಯಲ್ಲಿ ಅಂದರೆ ಜನವರಿ 2025 ರಿಂದ ವಿಚಾರ ಮಾಡಿದರೆ 1 ಸಾವಿರದ 703 ಜನರನ್ನು ವಾಪಸ್ಸು ಕಳುಹಿಸಲಾಗಿದೆ. ಈ ಸಂಖ್ಯೆ ಐದೂವರೆ ವರ್ಷಗಳ ಒಟ್ಟು ಸಂಖ್ಯೆಯ ಹೋಲಿಕೆಯಲ್ಲಿ ಶೇಕಡಾ 25 ರಷ್ಟಿದೆ.
2. ರಾಜ್ಯವಾರು ಭಾರತಕ್ಕೆ ಮರಳಿ ಕಳುಹಿಸಿರುವ ಅಂಕಿ-ಅಂಶಗಳನ್ನು ನೋಡಿದರೆ, ಪಂಜಾಬ್ ಮತ್ತು ಹರಿಯಾಣ ಈ 2 ರಾಜ್ಯದಿಂದ ಅನುಕ್ರಮವಾಗಿ 620 ಮತ್ತು 604 ಭಾರತೀಯರನ್ನು ಅಮೆರಿಕದಿಂದ ವಾಪಸ್ಸು ಕಳುಹಿಸಲಾಗಿದೆ.
ಇದರ ನಂತರ ಗುಜರಾತ ಕ್ರಮಾಂಕದಲ್ಲಿ ಬರುತ್ತದೆ. 254 ಗುಜರಾತಿಗಳನ್ನು ಅಮೆರಿಕ ವಾಪಸ್ಸು ಕಳುಹಿಸಿದೆ. ಗೋವಾದ 26 ಮತ್ತು ಮಹಾರಾಷ್ಟ್ರದ 20 ಜನರನ್ನು ಸಹ ವಾಪಸ್ಸು ಕಳುಹಿಸಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara