‘ದಿ ಕೇರಳ ಸ್ಟೋರಿ’ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ; ಕಿಡಿಕಾರಿದ ಮುಖ್ಯಮಂತ್ರಿ ವಿಜಯನ್ !

ತಿರುವನಂತಪುರಂ (ಕೇರಳ) – ನಿರ್ದೇಶಕ ಸುದೀಪ್ತೋ ಸೇನ್ ಅವರ ಲವ್ ಜಿಹಾದ್ ಆಧಾರಿತ ‘ಕೇರಳ ಸ್ಟೋರಿ’ ಚಲನಚಿತ್ರಕ್ಕೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಅತ್ಯುತ್ತಮ ನಿರ್ದೇಶಕ’ ಮತ್ತು ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿಗಳು ದೊರೆತಿವೆ. ಇದರಿಂದಾಗಿ ಕೇರಳದ ಹಿಂದೂದ್ವೇಷಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ಎಕ್ಸ್’ನಲ್ಲಿ ಈ ಪ್ರಶಸ್ತಿಯನ್ನು ವಿರೋಧಿಸಿ ‘ಇದು ಭಾರತೀಯ ಚಲನಚಿತ್ರೋದ್ಯಮದ ಮಹಾನ್ ಸಂಪ್ರದಾಯದ ಅವಮಾನ’ ಎಂದು ಹೇಳಿದ್ದಾರೆ. ‘ಕೇರಳ ಸ್ಟೋರಿ’ ಚಲನಚಿತ್ರವು 2023ರಲ್ಲಿ ಬಿಡುಗಡೆಯಾಗಿತ್ತು.
By honouring a film that spreads blatant misinformation with the clear intent of tarnishing Kerala’s image and sowing seeds of communal hatred, the jury of the #NationalFilmAwards has lent legitimacy to a narrative rooted in the divisive ideology of the Sangh Parivar. Kerala, a…
— Pinarayi Vijayan (@pinarayivijayan) August 1, 2025
ಅವರು ಮಾತು ಮುಂದುವರೆಸುತ್ತಾ, “ಕೇರಳದ ಪ್ರತಿಷ್ಠೆಯನ್ನು ಹಾಳು ಮಾಡುವುದು ಮತ್ತು ಧಾರ್ಮಿಕ ದ್ವೇಷವನ್ನು ಹರಡುವ ಉದ್ದೇಶದಿಂದ ಇಂತಹ ಸುಳ್ಳು ಕಥೆಯನ್ನು ತೋರಿಸುವ ಚಲನಚಿತ್ರವನ್ನು ಗೌರವಿಸುವುದು ಅತ್ಯಂತ ಚಿಂತೆಯ ವಿಷಯವಾಗಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿಯು ಸಂಘ ಪರಿವಾರದ ಒಡಕಿನ ಸಿದ್ಧಾಂತವನ್ನು ಆಧರಿಸಿದ ಕಥೆಗೆ ಮಾನ್ಯತೆ ನೀಡಿದೆ. ಕೇರಳ ರಾಜ್ಯವು ಯಾವಾಗಲೂ ಸೌಹಾರ್ದತೆ, ಶಾಂತಿ ಮತ್ತು ಸಹೋದರತ್ವಕ್ಕೆ ಹೆಸರುವಾಸಿಯಾಗಿದೆ. ಈ ಚಲನಚಿತ್ರಕ್ಕೆ ಪ್ರಶಸ್ತಿ ನೀಡಿರುವುದು ಕೇರಳ ಮತ್ತು ಅಲ್ಲಿನ ಜನರಿಗೆ ಮಾಡಿದ ಅವಮಾನ. ಮಲೆಯಾಳಿಗಳು ಮಾತ್ರವಲ್ಲದೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ನಂಬುವ ಪ್ರತಿಯೊಬ್ಬರೂ ಈ ಚಲನಚಿತ್ರದ ವಿರುದ್ಧ ಧ್ವನಿ ಎತ್ತಬೇಕು” ಎಂದಿದ್ದಾರೆ.
Congrats to all the National Film Awards 2025 winners from Kerala, especially @christotomy for ‘Ullozhukku’, Urvashi and Vijayaraghavan for supporting roles. However, recognising ‘The Kerala Story’, a film that spreads hate and baseless allegations, devalues all other awards.
— V. Sivankutty (@VSivankuttyCPIM) August 1, 2025
ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅವರು ಕೂಡ ‘ದ್ವೇಷ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವ ಕೇರಳ ಸ್ಟೋರಿ ಚಲನಚಿತ್ರವನ್ನು ಗೌರವಿಸುವುದು, ಇತರ ಎಲ್ಲ ಪ್ರಶಸ್ತಿಗಳ ಗೌರವವನ್ನು ಮಣ್ಣುಪಾಲು ಮಾಡಿದಂತಾಗಿದೆ’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದ್ ಆಧಾರಿತ ಕೇರಳ ಸ್ಟೋರಿ ಚಲನಚಿತ್ರದಲ್ಲಿ ಕೇರಳದಲ್ಲಿ ಲವ್ ಜಿಹಾದ್ ನಿಂದ ಬಳಲುತ್ತಿರುವ ಹಿಂದೂಗಳ ಸ್ಥಿತಿಯನ್ನು ತೋರಿಸಲಾಗಿದೆ. ಹಿಂದೂಗಳ ಈ ಶೋಚನೀಯ ಸ್ಥಿತಿ ವಿಜಯನ್ ಅವರಿಗೆ ಕೇರಳದ ಅವಮಾನ ಎಂದು ಅನ್ನಿಸುವುದಿಲ್ಲವೇ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ