ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ
|

ಮುಂಬಯಿ – ಮಾಲೆಗಾಂವ್ ನಲ್ಲಿ ಬಾಂಬ್ ಸ್ಫೋಟ ನಡೆದ ದಿನ ನಾನು ಮುಂಬಯಿಯಲ್ಲಿದ್ದೆ; ಆದರೆ ಈ ಪ್ರಕರಣದಲ್ಲಿ ನನ್ನನ್ನು ಬಂಧಿಸಿದ ನಂತರ ನನಗೆ ಹೊಡೆಯಲಾಯಿತು ಮತ್ತು ನಿಂದಿಸಲಾಯಿತು. ಕಳೆದ 17 ವರ್ಷಗಳಲ್ಲಿ ನಮ್ಮ ಕುಟುಂಬವು ಬಹಳಷ್ಟು ತೊಂದರೆಗಳನ್ನು ಸಹಿಸಿಕೊಳ್ಳಬೇಕಾಯಿತು. ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡುವ ಬೆದರಿಕೆಗಳು ಬಂದಿದ್ದವು. (ಭಯೋತ್ಪಾದನಾ ನಿಗ್ರಹ ದಳದ ಅಂದಿನ ಮುಖ್ಯಸ್ಥ) ಹೇಮಂತ್ ಕರಕರೆ ಎಂಬ ಈ ಪೊಲೀಸ್ ಅಧಿಕಾರಿ ನನ್ನನ್ನು ಬೆಲ್ಟ್‌ನಿಂದ ಹೊಡೆದರು. ನನ್ನ ಬಟ್ಟೆಗಳನ್ನು ತೆಗೆದು ನನ್ನ ಎದೆಯ ಮೇಲೆ ಕುಣಿದರು ಮತ್ತು ಹಲ್ಲೆ ಮಾಡಿದರು. ಪೊಲೀಸ್ ಅಧಿಕಾರಿ ಹೇಮಂತ ಕರಕರೆ ಅವರು ನನಗೆ ಅತಿ ಹೆಚ್ಚು ತೊಂದರೆ ಕೊಟ್ಟರು; ಆದರೆ ಭೂಮಿ ದುಂಡಾಗಿರುತ್ತದೆ. ಭಯೋತ್ಪಾದಕರ ದಾಳಿಯಲ್ಲಿ ಕರಕರೆ ಅವರು ಹತ್ಯೆಗೀಡಾದರು, ಈ ಭಯಾನಕ ಸ್ಥಿತಿಯನ್ನು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಿಂದ ನಿರ್ದೋಷಿಯಾಗಿ ಬಿಡುಗಡೆಯಾದ ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ) ಅವರು ಒಂದು ಸುದ್ದಿವಾಹಿನಿಗೆ ತಿಳಿಸಿದರು.
🚨 “The one who tortured me most during my arrest was Hemant Karkare” – Major Ramesh Upadhyay (Retd.)
He revealed Parambir Singh jumped on his chest, beat him with a belt & even threatened his daughter.
👮♂️ Karkare, then ATS chief, is no more; but this exposes how the Malegaon… pic.twitter.com/K820vwRPwj
— Sanatan Prabhat (@SanatanPrabhat) August 1, 2025
ಉಪಾಧ್ಯಾಯ ಅವರು,…

1. ನಾನು ನನ್ನ ಜೀವನದಲ್ಲಿ ಎಂದಿಗೂ ಮಾಲೆಗಾಂವ್ ಗೆ ಹೋಗಿಲ್ಲ; ಆದರೆ ನನಗೆ ಹೊಡೆದು ಪ.ಪೂ.ಸರಸಂಘಚಾಲಕ ಡಾ. ಮೋಹನಜಿ ಭಾಗವತ್, ಪ್ರವೀಣ್ ತೊಗಾಡಿಯಾ, ಶ್ರೀ ಶ್ರೀ ರವಿಶಂಕರ, ಯೋಗಿ ಆದಿತ್ಯನಾಥ ಅವರ ಹೆಸರುಗಳನ್ನು ಹೇಳುವಂತೆ ಒತ್ತಾಯಿಸಲಾಯಿತು; ಆದರೆ ನಾನು ಕೊನೆಯವರೆಗೂ ಅವರ ಹೆಸರುಗಳನ್ನು ಹೇಳಲಿಲ್ಲ. ನಮಗೆ ಅವರು ದೊಡ್ಡ ವ್ಯಕ್ತಿಗಳಾಗಿದ್ದರು. ‘ಅವರ ಹೆಸರುಗಳನ್ನು ಹೇಳದಿದ್ದರೆ, ನಾವು ನಿಮ್ಮನ್ನು ಆರೋಪಿಯನ್ನಾಗಿ ಮಾಡುತ್ತೇವೆ’ ಎಂದು ಹೇಮಂತ ಕರಕರೆ ನನಗೆ ಯಾವಾಗಲೂ ಹೇಳುತ್ತಿದ್ದರು.
2. ಸುಶೀಲಕುಮಾರ್ ಶಿಂಧೆ ಮತ್ತು ದಿಗ್ವಿಜಯ ಸಿಂಗ್ ಅವರು ನಮ್ಮೆಲ್ಲರನ್ನೂ ಉದ್ದೇಶಪೂರ್ವಕವಾಗಿ ಬಂಧಿಸುವಂತೆ ಮಾಡಿದರು.
3. ನನ್ನನ್ನು ಮೂರು ಬಾರಿ ನಾರ್ಕೋ ಪರೀಕ್ಷೆಗೆ ಒಳಪಡಿಸಲಾಯಿತು. ನಾನು ನಿರ್ದೋಷಿ ಎಂದು ಮೊದಲ ದಿನದಿಂದಲೇ ನ್ಯಾಯಾಲಯಕ್ಕೆ ತಿಳಿದಿತ್ತು; ಆದರೆ ಹಾಗಿದ್ದರೂ ಸಾಮಾಜಿಕ ಮತ್ತು ಆರ್ಥಿಕ ಎರಡೂ ರೀತಿಯಲ್ಲಿ ನಮ್ಮನ್ನು ನಾಶಪಡಿಸಲಾಯಿತು. ನಾನು ಸೇನಾ ಅಧಿಕಾರಿ, ನಾನು ಬಾಂಬ್ ಸ್ಫೋಟ ಏಕೆ ಮಾಡುತ್ತೇನೆ?
4. ‘ನನ್ನ ಮಗನನ್ನು ಭಯೋತ್ಪಾದಕ ಎಂದು ಘೋಷಿಸಲಾಗುವುದು’ ಎಂಬ ಬೆದರಿಕೆಗಳು ಕೂಡ ಬಂದಿದ್ದವು.
5. ಒಂದು ದಿನ ನಮ್ಮ ಮನೆಗೆ ನುಗ್ಗಿ ನಮ್ಮ ಎಲ್ಲಾ ಸಾಮಾನುಗಳನ್ನು ಹೊರಗೆ ಎಸೆಯಲಾಗಿತ್ತು. ಆಗಲೂ ನಮಗೆ ಯಾರೂ ಸಹಾಯ ಮಾಡಲಿಲ್ಲ.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”