ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಸ್ವಾರ್ಥ!

ವಾಷಿಂಗ್ಟನ್ (ಅಮೆರಿಕ) – ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ರಷ್ಯಾಕ್ಕೆ ಉಕ್ರೇನ್‌ನಲ್ಲಿ ಯುದ್ಧ ಮಾಡಲು ಬೆಂಬಲ ಸಿಗುತ್ತಿದೆ. ಇದರಿಂದಾಗಿಯೇ ಭಾರತ ಮತ್ತು ಅಮೆರಿಕದ ಸಂಬಂಧಗಳಲ್ಲಿ ಕಟುತ್ವ ಉಂಟಾಗಿದೆ. ಕಟುತ್ವದ ಹಿಂದಿನ ಕೆಲವು ಕಾರಣಗಳಲ್ಲಿ ಇದೂ ಒಂದು ಕಾರಣ, ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರು ಸ್ವಾರ್ಥಿ ನಿಲುವನ್ನು ಮಂಡಿಸಿದ್ದಾರೆ. ಅವರು ‘ಫಾಕ್ಸ್ ರೇಡಿಯೋ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
೧. ರುಬಿಯೋ ಅವರು ಮಾತು ಮುಂದುವರೆಸಿ, ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣ ನೀಡಲು ಇತರ ಅನೇಕ ತೈಲ ಮಾರಾಟಗಾರರು ಇದ್ದರೂ, ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿದೆ. ಇದರಿಂದ ಡೊನಾಲ್ಡ್ ಟ್ರಂಪ್ ಅವರು ನಿರಾಶರಾಗಿದ್ದಾರೆ. (ದುರಹಂಕಾರಿ ಅಮೆರಿಕ! – ಸಂಪಾದಕರು)
೨. ರುಬಿಯೋ ಅವರು, ಭಾರತಕ್ಕೆ ಭಾರೀ ಪ್ರಮಾಣದ ಶಕ್ತಿಯ ಅವಶ್ಯಕತೆಯಿದೆ. ರಷ್ಯಾದ ತೈಲ ಅಗ್ಗವಾಗಿದೆ. ಅನೇಕ ನಿರ್ಬಂಧಗಳಿಂದಾಗಿ ರಷ್ಯಾ ಅದನ್ನು ಜಾಗತಿಕ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. (ಇದು ತಿಳಿದಿದ್ದರೂ, ರುಬಿಯೋ ಅವರು ಭಾರತದ ಮೇಲೆ ಅಧಿಕಾರ ನಡೆಸಲು ಪ್ರಯತ್ನಿಸುತ್ತಿದ್ದಾರೆ! ರಷ್ಯಾವನ್ನು ವಿರೋಧಿಸುವುದರಿಂದ ಅಮೆರಿಕದ ಹಿತಾಸಕ್ತಿಗಳು ಸಾಧಿಸಲ್ಪಡುತ್ತವೆ. ಅದೇ ರೀತಿ, ಭಾರತಕ್ಕೆ ಅಗ್ಗದ ತೈಲ ಸಿಗುವುದರಿಂದ ಅದರ ೧೪೦ ಕೋಟಿ ಜನರ ಹಿತಾಸಕ್ತಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಇಂತಹ ಸಮಯದಲ್ಲಿ, ಅಮೆರಿಕಕ್ಕೆ ಭಾರತದ ಹಿತಾಸಕ್ತಿಗಳು ಬೇಕಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! – ಸಂಪಾದಕರು)
ಕೃಷಿ ಮತ್ತು ಡೈರಿ ಕ್ಷೇತ್ರಗಳನ್ನು ಅಮೆರಿಕಕ್ಕಾಗಿ ತೆರೆಯಲು ಭಾರತದ ವಿರೋಧ! – ರುಬಿಯೋರುಬಿಯೋ ಅವರು, ರಷ್ಯಾದಿಂದ ತೈಲ ಖರೀದಿಸುವುದರ ಜೊತೆಗೆ, ಉಭಯ ದೇಶಗಳ ನಡುವೆ ಕಟುತ್ವಕ್ಕೆ ಕಾರಣವಾದ ಇತರ ಸಹಕಾರ ಸೂತ್ರಗಳೂ ಇವೆ. ಭಾರತವು ಕೃಷಿ ಮತ್ತು ಡೈರಿ ಕ್ಷೇತ್ರಗಳನ್ನು ಅಮೆರಿಕಕ್ಕೆ ತೆರೆಯಲು ವಿರೋಧ ವ್ಯಕ್ತಪಡಿಸಿದೆ. (ಈ ಕ್ಷೇತ್ರಗಳಲ್ಲಿ ಅಮೆರಿಕ ಪ್ರವೇಶಿಸಿದರೆ, ಭಾರತೀಯ ರೈತರಿಗೆ ದೊಡ್ಡ ಪ್ರಮಾಣದ ಹಾನಿಯಾಗಲಿದೆ ಮತ್ತು ಅಮೆರಿಕದ ಖಜಾನೆ ತುಂಬಲಿದೆ. ಆದ್ದರಿಂದ ಭಾರತ ಅದಕ್ಕೆ ವಿರೋಧ ವ್ಯಕ್ತಪಡಿಸಿದೆ! – ಸಂಪಾದಕರು) ಇದಕ್ಕೆ ಕೇಂದ್ರ ಸರಕಾರವು, ಅಗ್ಗದ ಮತ್ತು ಸಬ್ಸಿಡಿ ಇರುವ ಅಮೆರಿಕದ ಕೃಷಿ ಉತ್ಪನ್ನಗಳು ದೇಶಕ್ಕೆ ಬಂದರೆ, ಸುಮಾರು ೮ ಕೋಟಿ ಸಣ್ಣ ಡೈರಿ ಉತ್ಪಾದಕರು ಸೇರಿದಂತೆ ೭೦ ಕೋಟಿ ಗ್ರಾಮೀಣ ಜನರಿಗೆ ಹಾನಿಯಾಗಬಹುದು, ಎಂದು ವಾದಿಸಿದೆ. |
ಸಂಪಾದಕೀಯ ನಿಲುವುಅಮೆರಿಕದ ಈ ದುಷ್ಟತನವನ್ನು ಭಾರತ ಸಹಿಸುವುದಿಲ್ಲ. ವೈಯಕ್ತಿಕ ಜೀವನದಲ್ಲೂ ಇಬ್ಬರು ಶತ್ರುಗಳಿಗೆ ಒಬ್ಬನೇ ಸಾಮಾನ್ಯ ಸ್ನೇಹಿತ ಇರುತ್ತಾನೆ. ಅಂತಹ ಸಮಯದಲ್ಲಿ, ಒಬ್ಬ ಶತ್ರು ಸ್ನೇಹಿತನಿಗೆ ನನ್ನ ಶತ್ರುವಿನೊಂದಿಗೆ ನೀನು ಸ್ನೇಹ ಇಡಬಾರದು ಎಂದು ಹೇಳಿದರೆ, ಅಂತಹ ಅವ್ಯವಹಾರಿಕ ಮತ್ತು ಸ್ವಾರ್ಥಿ ನಿಲುವನ್ನು ವಿರೋಧಿಸಲಾಗುತ್ತದೆ. ಅಮೆರಿಕ ಅದೇ ರೀತಿ ವರ್ತಿಸುತ್ತಿದೆ ಮತ್ತು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾದ ಭಾರತವು ಅದಕ್ಕೆ ಅದರ ಯೋಗ್ಯತೆ ತೋರಿಸಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation