
ತಿರುವಲ್ಲಿ (ತಮಿಳುನಾಡು) – ಇಲ್ಲಿನ ತಿರುತ್ತಣಿ ಗ್ರಾಮದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿನ ಕಾರ್ತಿಕೇಯನ ಜೀವನಾಡಿಪಟ್ಟಿ ಓದುವವರಾದ ಪೂ. ಡಾ. ಓಂ ಉಲಗನಾಥನ್ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರು ಜುಲೈ ೩೦ ರಂದು ದರ್ಶನ ಪಡೆದರು. ಈ ಸಮಯದಲ್ಲಿ ಭಗವಾನ್ ಕಾರ್ತಿಕೇಯನಿಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಶ್ರೀಚಿತ್ ಶಕ್ತಿ (ಸೌ.) ಗಾಡಗೀಳ ಅವರು ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ದೊರೆಯಲಿ, ಮುಂಬರುವ ಆಪತ್ಕಾಲದಲ್ಲಿ ಸಾಧಕರ ರಕ್ಷಣೆ ಆಗಲಿ ಮತ್ತು ಆದಷ್ಟು ಬೇಗ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿ’ ಎಂದು ಪ್ರಾರ್ಥಿಸಿದರು.

ತಿರುತ್ತಣಿ ಕಾರ್ತಿಕೇಯ ದೇವಸ್ಥಾನದ ಸ್ಥಳ ಮಹಿಮೆ
ತಾರಕಾಸುರನ ಸಂಹಾರದ ನಂತರ ಶಿವ-ಪಾರ್ವತಿಯ ಆಜ್ಞೆಯ ಮೇರೆಗೆ ಕಾರ್ತಿಕೇಯನು ದಕ್ಷಿಣಕ್ಕೆ ಬರುತ್ತಾನೆ. ಕಾರ್ತಿಕೇಯನು ತಾರಕಾಸುರನ ಹಿರಿಯ ಸಹೋದರನಾದ ಅಸುರ ಶೂರಪದ್ಮನನ್ನು ತಮಿಳುನಾಡಿನ ತಿರುಚೆಂದೂರು ಸಮುದ್ರ ತೀರದಲ್ಲಿ ಸಂಹರಿಸುತ್ತಾನೆ. ಆಕ್ರೋಶದಲ್ಲಿದ್ದ ಕಾರ್ತಿಕೇಯನು ವಿಶ್ರಾಂತಿಗಾಗಿ ಯಾವ ಪರ್ವತಕ್ಕೆ ಬರುತ್ತಾನೋ ಅದುವೇ ತಿರುತ್ತಣಿ ಪರ್ವತ. ಕಾರ್ತಿಕೇಯನು ಈ ಪರ್ವತಕ್ಕೆ ಬಂದು ವಾಸಿಸಲು ಆರಂಭಿಸಿದಾಗ ಶಾಂತನಾಗುತ್ತಾನೆ. ‘ತಿರು’ ಎಂದರೆ ಶ್ರೀ ಮತ್ತು ‘ತಣಿ’ ಎಂದರೆ ಶಾಂತವಾಗುವುದು. ಕಾರ್ತಿಕೇಯನು ಇದೇ ಪರ್ವತದ ಮೇಲೆ ಅಗಸ್ತ್ಯ ಋಷಿಗಳಿಗೆ ತಮಿಳು ಭಾಷೆಯನ್ನು ಕಲಿಸಿದನು.
ಕಾರ್ತಿಕೇಯನಿಗೆ ದೇವಸೇನಾ ಮತ್ತು ವಲ್ಲಿ ಎಂಬ ಇಬ್ಬರು ಪತ್ನಿಯರಿದ್ದಾರೆ. ತಾರಕಾಸುರನ ಸಂಹಾರದ ನಂತರ ಸಂತುಷ್ಟನಾದ ಇಂದ್ರನು ತನ್ನ ಮಗಳು ದೇವಸೇನಳನ್ನು ಕಾರ್ತಿಕೇಯನಿಗೆ ಕೊಟ್ಟನು ಮತ್ತು ಕೈಲಾಸದಲ್ಲಿ ಅವರ ವಿವಾಹವಾಯಿತು. ಶೂರಪದ್ಮ ಅಸುರನ ಸಂಹಾರದ ನಂತರ ಕಾರ್ತಿಕೇಯನು ತಿರುತ್ತಣಿಗೆ ಬಂದನು. ಇಲ್ಲಿ ಅವನು ತನ್ನ ಭಕ್ತಳಾದ ವಲ್ಲಿ ಎಂಬ ಬೇಡನ ಹುಡುಗಿಯನ್ನು ವಿವಾಹವಾದನು. ತಮಿಳುನಾಡಿನಲ್ಲಿ ಈ ದೈವಿಕ ವಿವಾಹವನ್ನು ‘ಜೀವ ಮತ್ತು ಶಿವನ ಮಿಲನ’ ಎಂದು ಪರಿಗಣಿಸಲಾಗುತ್ತದೆ. ತಿರುತ್ತಣಿ ಕಾರ್ತಿಕೇಯ ದೇವಸ್ಥಾನದಲ್ಲಿ ವಲ್ಲಿ ಮತ್ತು ಕಾರ್ತಿಕೇಯರ ವಿವಾಹವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ತಿರುತ್ತಣಿ ಕಾರ್ತಿಕೇಯ ದೇವಸ್ಥಾನವು ಕಾಂಚೀಪುರಂನಿಂದ 45 ಕಿಲೋಮೀಟರ್ ಮತ್ತು ಚೆನ್ನೈನಿಂದ 80 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ತಿರುಪತಿ 60 ಕಿಲೋಮೀಟರ್ ದೂರದಲ್ಲಿದೆ. ಒಂದು ಚಿಕ್ಕ ಬೆಟ್ಟದ ಮೇಲಿರುವ ಈ ದೇವಸ್ಥಾನಕ್ಕೆ 365 ಮೆಟ್ಟಿಲುಗಳಿವೆ, ಇದು 365 ದಿನಗಳ ಸಂಕೇತವಾಗಿದೆ. ಕಾರ್ತಿಕೇಯನ ಭಕ್ತರು ಕಾವಡ ಹೊತ್ತುಕೊಂಡು ಈ 365 ಮೆಟ್ಟಿಲುಗಳನ್ನು ಹತ್ತಿ ದೇವರ ಬಳಿಗೆ ಹೋಗುತ್ತಾರೆ.

ಕಾರ್ತಿಕೇಯನಿಗೆ ಒಟ್ಟು 6 ಪ್ರಮುಖ ಸ್ಥಳಗಳಿವೆ. ವಿಶೇಷವೆಂದರೆ ಈ 6 ಸ್ಥಳಗಳು ದಕ್ಷಿಣ ಭಾರತದ ತಮಿಳುನಾಡು ರಾಜ್ಯದಲ್ಲಿವೆ. ಕಾರ್ತಿಕೇಯನು ತಮಿಳುನಾಡಿನ ಇಷ್ಟದೇವತೆ. ಈ 6 ಪ್ರಮುಖ ಕಾರ್ತಿಕೇಯ ಸ್ಥಳಗಳ ಪೈಕಿ ತಿರುತ್ತಣಿ 5 ನೇ ಪ್ರಮುಖ ಸ್ಥಳವಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!