ಭಾರತ-ರಷ್ಯಾದ ಆರ್ಥಿಕತೆ ಸತ್ತು ಹೋಗಿದೆ, ಅದು ಕುಸಿಯಲಿ: ಟ್ರಂಪ್

ನವದೆಹಲಿ – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಸ್ಟ್ 1 ರಿಂದ ಭಾರತದ ಮೇಲೆ 25% ಆಮದು ಸುಂಕವನ್ನು ಘೋಷಿಸಿದ ನಂತರ, ಈಗ ಅವರು ಭಾರತ-ರಷ್ಯಾದ ಆರ್ಥಿಕತೆಯನ್ನು ‘ಸತ್ತ’ (ಡೆಡ್) ಎಂದು ಕರೆದಿದ್ದಾರೆ ಮತ್ತು ‘ಅದು ಕುಸಿಯಲಿ’ ಎಂದು ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರು ತಮ್ಮದೇ ಆದ ಸಾಮಾಜಿಕ ಮಾಧ್ಯಮ ‘ಟ್ರೂತ್’ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, “ಭಾರತ ರಷ್ಯಾ ಜೊತೆ ಏನು ಮಾಡುತ್ತದೆ ಎಂಬುದರ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ. ಅವರಿಬ್ಬರೂ ತಮ್ಮ ‘ಸತ್ತ’ ಆರ್ಥಿಕತೆಯನ್ನು ಹೇಗೆ ಕುಸಿಯುವಂತೆ ಮಾಡುತ್ತಾರೆ ಎಂಬುದರ ಬಗ್ಗೆ ನನಗೆ ಯಾವುದೇ ವ್ಯತ್ಯಾಸವಿಲ್ಲ. ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯಾಪಾರ ಮಾಡಿದ್ದೇವೆ. ಅವರ ಸುಂಕಗಳು ಜಗತ್ತಿನಲ್ಲಿಯೇ ಹೆಚ್ಚು. ರಷ್ಯಾ ಮತ್ತು ಅಮೇರಿಕಾ ನಡುವೆ ಬಹುತೇಕ ಯಾವುದೇ ವ್ಯಾಪಾರ ನಡೆಯುತ್ತಿಲ್ಲ. ಅದು ಹಾಗೆಯೇ ಇರಲಿ” ಎಂದು ಹೇಳಿದ್ದಾರೆ.

ಟ್ರಂಪ್ ವಾಸ್ತವವನ್ನು ಹೇಳಿದರು! – ರಾಹುಲ್ ಗಾಂಧಿ

ಪ್ರಧಾನಮಂತ್ರಿ ಮತ್ತು ವಿತ್ತ ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆಯು ನಾಶವಾದ ಆರ್ಥಿಕತೆ ಎಂದು ತಿಳಿದಿದೆ. ಅಧ್ಯಕ್ಷ ಟ್ರಂಪ್ ಅವರು ವಾಸ್ತವವನ್ನು ಮುಂದಿಟ್ಟಿರುವುದಕ್ಕೆ ನನಗೆ ಸಂತೋಷವಾಗಿದೆ. ಬಿಜೆಪಿ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶ ಮಾಡಿದೆ.

ಇಂದು ಭಾರತದ ಮುಂದಿರುವ ಮುಖ್ಯ ಪ್ರಶ್ನೆಯೆಂದರೆ, ಈ ಸರಕಾರವು ತನ್ನ ಆರ್ಥಿಕ ನೀತಿಗಳನ್ನು ಹಾಳುಮಾಡಿದೆ, ತನ್ನ ರಕ್ಷಣಾ ನೀತಿಗಳನ್ನು ಹಾಳುಮಾಡಿದೆ ಮತ್ತು ತನ್ನ ವಿದೇಶಾಂಗ ನೀತಿಗಳನ್ನೂ ಹಾಳುಮಾಡಿದೆ. ಈ ಸರಕಾರ ದೇಶವನ್ನು ಪಾತಾಳಕ್ಕೆ ತಳ್ಳುತ್ತಿದೆ. (‘ಮೂಳೆ ಇಲ್ಲದ ನಾಲಿಗೆ’. ಮನೋವಿಕೃತಿಯ ರಾಹುಲ್ ಗಾಂಧಿ! ಇದೇ ಟ್ರಂಪ್ ಪ್ರಧಾನಿ ಮೋದಿಯವರನ್ನು ಮನಸಾರೆ ಹೊಗಳಿದಾಗ, ರಾಹುಲ್ ಗಾಂಧಿ ಮತ್ತು ಅವರ ಕಾಂಗ್ರೆಸ್‌ಗೆ ಜೀರ್ಣವಾಗುವುದಿಲ್ಲ. ಇದರಿಂದ ರಾಹುಲ್ ಗಾಂಧಿಯವರ ರಾಜಕೀಯ ಹಿತಾಸಕ್ತಿ ಬಯಲಾಗುತ್ತದೆ, ಇದನ್ನು ಗಮನಿಸಿ! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತ ಮತ್ತು ರಷ್ಯಾ ನಡುವಿನ ಸ್ನೇಹವು ಅಮೇರಿಕಾಗೆ ಮೊದಲಿಂದಲೂ ಚುಚ್ಚುತ್ತಿದೆ, ಇದು ಮತ್ತೊಮ್ಮೆ ಬೆಳಕಿಗೆ ಬಂದಿದೆ.