ಸನಾತನ ಸಂಸ್ಥೆಯ ಸಾಧಕ ಹಾಗೂ ‘ಮಾಲೇಗಾಂವ್ ಸ್ಫೋಟದ ಹಿಂದಿನ ಅದೃಶ್ಯ ಕೈ’ ಪುಸ್ತಕದ ಲೇಖಕರಾದ ಶ್ರೀ. ವಿಕ್ರಮ ಭಾವೆ ಅವರ ಹೇಳಿಕೆ

ಮುಂಬಯಿ – “ಇದು ಅತ್ಯಂತ ಸಂತೋಷದ ಕ್ಷಣ. ಎಲ್ಲಾ ನಿರಪರಾಧಿ ಹಿಂದುತ್ವನಿಷ್ಠ ಆರೋಪಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು! ಇಂದು 17 ವರ್ಷಗಳ ನಂತರ ಇವರೆಲ್ಲರೂ ನಿರಪರಾಧಿಗಳಾಗಿ ಬಿಡುಗಡೆಗೊಂಡ ನಂತರ ಒಂದು ಪ್ರಶ್ನೆ ಉದ್ಭವಿಸುತ್ತದೆ: ಆ ಬಾಂಬ್ ಸ್ಫೋಟಗಳನ್ನು ಯಾರು ಮಾಡಿದರು? ಇದು ಪೊಲೀಸ್ ಮತ್ತು ತನಿಖಾ ದಳಗಳ ಕೆಲಸ. ಎರಡನೆಯ ಪ್ರಶ್ನೆಯೆಂದರೆ, ಕಳೆದ 17 ವರ್ಷಗಳಿಂದ ಈ ಹಿಂದುತ್ವನಿಷ್ಠಗಳು ಅನುಭವಿಸಿದ್ದಕ್ಕೆ ಅಥವಾ ಅವರು ಅನುಭವಿಸಬೇಕಾಗಿದ್ದಕ್ಕೆ ಅಥವಾ ಅವರನ್ನು ಹಿಂಸಿಸಿದ್ದಕ್ಕೆ ನಮ್ಮ ವ್ಯವಸ್ಥೆಯಲ್ಲಿ ಯಾರು ಪರಿಹಾರ ನೀಡುತ್ತಾರೆ? ‘ಭಯೋತ್ಪಾದಕ’ ಎಂಬ ಹಣೆಪಟ್ಟಿಯೊಂದಿಗೆ ನ್ಯಾಯಕ್ಕಾಗಿ 17 ವರ್ಷಗಳನ್ನು ಕಳೆದವರಿಗೆ ಯಾರು ಪರಿಹಾರ ನೀಡುತ್ತಾರೆ? ಈ ಪ್ರಶ್ನೆಯನ್ನು ಪ್ರತಿಯೊಬ್ಬ ಹಿಂದೂವೂ ವ್ಯವಸ್ಥೆಗೆ ಕೇಳಬೇಕು” ಎಂದು ಸನಾತನ ಸಂಸ್ಥೆಯ ಸಾಧಕ ಮತ್ತು ‘ಮಾಲೇಗಾಂವ್ ಸ್ಫೋಟದ ಹಿಂದಿನ ಅದೃಶ್ಯ ಕೈ’ ಪುಸ್ತಕದ ಲೇಖಕರಾದ ಶ್ರೀ. ವಿಕ್ರಮ ಭಾವೆ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಶ್ರೀ. ಭಾವೆ ಅವರು ಮಾತು ಮುಂದುವರೆಸಿ, “2006 ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಸ್ಲಿಂ ಆರೋಪಿಗಳಿರಲಿ, 2008 ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಿಂದೂ ಆರೋಪಿಗಳಿರಲಿ ಅಥವಾ ಇತ್ತೀಚೆಗೆ ತೀರ್ಪು ಬಂದ 2006 ರಲ್ಲಿ ಮುಂಬಯಿ ರೈಲುಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಗಳಾಗಿ ಘೋಷಿಸಲ್ಪಟ್ಟ ಆರೋಪಿಗಳಿರಲಿ. ಈ ಮೂರು ಪ್ರಕರಣಗಳಲ್ಲಿನ ತನಿಖಾ ದಳಗಳಲ್ಲಿ 50 ರಿಂದ 60 ಪ್ರತಿಶತ ಅಧಿಕಾರಿಗಳು ಒಂದೇ ಆಗಿದ್ದಾರೆ. ಹಾಗಾದರೆ ಇಂತಹ ದೊಡ್ಡ ಪ್ರಕರಣಗಳಲ್ಲಿ ಆರೋಪಿಗಳು ನಿರಪರಾಧಿಗಳಾಗಿ ಹೊರಬರಲು ಕಾರಣವೇನು? ಆ ಸಮಯದಲ್ಲಿ ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಸರಕಾರವು ತನಿಖಾ ದಳಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು. ಬಹುಶಃ ಇದೇ ಕಾರಣದಿಂದಾಗಿ, ತನಿಖಾ ದಳಗಳು ಸುಳ್ಳು ಪುರಾವೆಗಳನ್ನು ಸೃಷ್ಟಿಸಿದವು. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಅತಿ ಭೀಕರವಾಗಿ ಥಳಿಸಲಾಯಿತು. ಇದೆಲ್ಲವೂ ಪ್ರಕಟವಾಗಿದೆ” ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!