
ಕರ್ಣಾವತಿ (ಗುಜರಾತ್) – ಗುಜರಾತ್ ಭಯೋತ್ಪಾದಕ ವಿರೋಧಿ ದಳವು ಅಲ್ ಖೈದಾದ ಭಾರತೀಯ ಗುಂಪಿಗೆ ಸೇರಿದ ಮಹಿಳಾ ಭಯೋತ್ಪಾದಕಿ ಶಮಾ ಪರ್ವೀನ್ (ವಯಸ್ಸು ೩೦ ವರ್ಷ) ಳನ್ನು ಬೆಂಗಳೂರಿನ ಹೆಬ್ಬಾಳ ಪ್ರದೇಶದಲ್ಲಿ ಬಂಧಿಸಿದೆ. ಜುಲೈ ೨೩ ರಂದು ಈ ದಳವು ಉತ್ತರಪ್ರದೇಶ, ದೆಹಲಿ ಮತ್ತು ಗುಜರಾತ್‌ನಿಂದ ೪ ಭಯೋತ್ಪಾದಕರನ್ನು ಬಂಧಿಸಿತ್ತು. ಅವರ ವಿಚಾರಣೆಯಿಂದ ಶಮಾ ಕುರಿತು ಮಾಹಿತಿ ಲಭ್ಯವಾಗಿದೆ. ಶಮಾ ಪರ್ವೀನ್ ಬಂಧನದಿಂದ ಭಯೋತ್ಪಾದಕ ಸಂಘಟನೆಗಳು ಈಗ ಮಹಿಳೆಯರನ್ನೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಬಂಧಿತ ಮಹಿಳೆ ಪಾಕಿಸ್ತಾನದೊಂದಿಗೆ ನೇರ ಸಂಪರ್ಕದಲ್ಲಿದ್ದಳು ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘ್ವಿ ಮಾಹಿತಿ ನೀಡಿದ್ದಾರೆ.
ದಳದ ಉಪ ಮಹಾನಿರೀಕ್ಷಕ ಸುನಿಲ ಜೋಶಿ ಅವರು, ಪರ್ವೀನ್ ಸಾಮಾಜಿಕ ಜಾಲತಾಣಗಳ ಮೂಲಕ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದಳು. ಇದರ ಮೂಲಕ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಯುವಕರನ್ನು ಸೇರಿಸಿಕೊಳ್ಳುವ ಜವಾಬ್ದಾರಿಯನ್ನು ಆಕೆಗೆ ವಹಿಸಲಾಗಿತ್ತು. ಪ್ರಸ್ತುತ, ಈ ಗುಂಪಿನ ಇತರ ಭಯೋತ್ಪಾದಕರು ಮತ್ತು ಅವರ ಪಿತೂರಿಗಳ ಬಗ್ಗೆ ಮಾಹಿತಿ ಪಡೆಯಲು ಆಕೆಯ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
‘ಗಜವಾ-ಎ-ಹಿಂದ್’ (ಭಾರತವನ್ನು ಇಸ್ಲಾಮೀಕರಣಗೊಳಿಸುವ ಯುದ್ಧ) ಪ್ರಚಾರ
ಬಂಧಿತ ಭಯೋತ್ಪಾದಕರು ‘ಇನ್‌ಸ್ಟಾಗ್ರಾಮ್’ ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ‘ಗಜವಾ-ಎ-ಹಿಂದ್’ ಅನ್ನು ಪ್ರಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಭಾರತದ ಯುವಕರನ್ನು ದಿಕ್ಕುತಪ್ಪಿಸಿ ಅಲ್ ಖೈದಾ ಗುಂಪಿಗೆ ಸೇರಿಸುವ ಕೆಲಸವನ್ನು ಪರ್ವೀನ್ ಮಾಡುತ್ತಿದ್ದಳು. ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಭಯೋತ್ಪಾದಕರು ಪ್ರಯತ್ನಿಸುತ್ತಿದ್ದರು. ಜಿಹಾದಿ ವಿಚಾರಗಳನ್ನು ಹರಡಲು ಪರ್ವೀನ್ ೫ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ವಹಿಸುತ್ತಿದ್ದಳು. ಅಲ್ಲಿ ಆಕೆ ಯುವಕರನ್ನು ಜಿಹಾದಿ ವಿಚಾರಗಳಿಗೆ ಪ್ರೇರೇಪಿಸುತ್ತಿದ್ದಳು. ‘ಜಿಹಾದ್‌ಗೆ ಬಾಂಬ್‌ನ ಅಗತ್ಯವಿಲ್ಲ, ಕೇವಲ ಒಂದು ಚಾಕು ಸಾಕು’ ಎಂಬಂತಹ ಪ್ರಚೋದನಕಾರಿ ವಿಚಾರಗಳನ್ನು ಆಕೆ ಹರಡುತ್ತಿದ್ದಳು. ಆಕೆಯ ‘ಇನ್‌ಸ್ಟಾಗ್ರಾಮ್’ ಖಾತೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಇದುವರೆಗೆ ಎಷ್ಟು ಯುವಕರು ಆಕೆಯ ಸಂಪರ್ಕಕ್ಕೆ ಬಂದಿದ್ದಾರೆ ಎಂದು ತನಿಖೆ ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವುಇಂತಹವರಿಗೆ ಈಗ ಸಾಕುವುದಕ್ಕಿಂತ, ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಗೆ ಸರಕಾರ ಪ್ರಯತ್ನಿಸಬೇಕು! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !