|

ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದಲ್ಲಿ ಹೆಚ್ಚುತ್ತಿರುವ ಮತಾಂತರ ಸಮಸ್ಯೆಯನ್ನು ತಡೆಗಟ್ಟಲು ರಾಜ್ಯ ಸರಕಾರ ಬದ್ಧವಾಗಿದೆ. ಮುಂಬರುವ ವಿಧಾನಸಭೆಯಲ್ಲಿ ಕಠಿಣ ಮತಾಂತರ ವಿರೋಧಿ ಕಾನೂನನ್ನು ಮಂಡಿಸಿ ಜಾರಿಗೆ ತರಲಾಗುವುದು. ಹಾಗೆಯೇ ನಕ್ಸಲಿಸಂಅನ್ನು ಬೇರುಸಹಿತ ಕಿತ್ತೆಸೆಯಲು ನಾವು ನಿರ್ಧರಿಸಿದ್ದೇವೆ ಎಂದು ಛತ್ತೀಸ್‌ಗಢ ರಾಜ್ಯದ ಮುಖ್ಯಮಂತ್ರಿ ವಿಷ್ಣುದೇವ ಸಾಯ ಆಶ್ವಾಸನೆ ನೀಡಿದರು.

ಪೂ. ಶದಾನಿ ದರ್ಬಾರ್ ತೀರ್ಥ (ರಾಯಪುರ) ಮತ್ತು ಹಿಂದೂ ಜನಜಾಗೃತಿ ಸಮಿತಿ ಜಂಟಿಯಾಗಿ ಜುಲೈ ೨೭ ರಂದು ಇಲ್ಲಿ ಆಯೋಜಿಸಿದ್ದ ಛತ್ತೀಸ್‌ಗಢದ ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಈ ಅಧಿವೇಶನದಲ್ಲಿ ರಾಜ್ಯದ ೨೫೦ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು, ಸಂತರು, ಧರ್ಮಪ್ರೇಮಿ ನಾಗರಿಕರು, ವಕೀಲರು, ವ್ಯಾಪಾರಿಗಳು ಮತ್ತು ರಾಜಕೀಯ ನಾಯಕರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ವಿಷ್ಣುದೇವ ಸಾಯ ಅವರ ಭಾಷಣದ ಪ್ರಮುಖ ಅಂಶಗಳುಛತ್ತೀಸ್ಗಢದಲ್ಲಿ ಮತಾಂತರ ವಿರೋಧಿ ಕಾನೂನಿನ ಕರಡು ಸಿದ್ಧಪಡಿಸಲಾಗಿದೆ. ಮುಂಬರುವ ವಿಧಾನಸಭೆಯಲ್ಲಿ ಅದನ್ನು ಮಂಡಿಸಲಾಗುವುದು. ೧. ಛತ್ತೀಸ್‌ಗಢ ರಾಜ್ಯದ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಸರಕಾರ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುತ್ತಿದೆ. ೨. ಭಾಜಪ ಅಧಿಕಾರಕ್ಕೆ ಬರುವ ಮೊದಲು ರಾಜ್ಯದ ಗೋಶಾಲೆಗಳಿಗೆ ಪ್ರತಿದಿನ ೨೫ ರೂಪಾಯಿ ಅನುದಾನ ನೀಡಲಾಗುತ್ತಿತ್ತು. ಅದನ್ನು ಈಗ ೩೫ ರೂಪಾಯಿಗೆ ಹೆಚ್ಚಿಸಲಾಗಿದೆ. ೩. ಬೀದಿಯಲ್ಲಿ ಸಂಚರಿಸುತ್ತಿರುವ ದನಗಳ ಪೋಷಣೆಗಾಗಿ ಸರಕಾರ ಕಾರ್ಯಪ್ರವೃತ್ತವಾಗಿದೆ. |

ಕಾರ್ಯಕ್ರಮದಲ್ಲಿ ಪೂ. ಯುಧಿಷ್ಠಿರಲಾಲ ಮಹಾರಾಜ, ಪೂ. ರಾಮಬಾಲಕದಾಸ ಮಹಾರಾಜ, ಮಹಾಮಂಡಲೇಶ್ವರ ಸರ್ವೇಶ್ವರದಾಸ ಮಹಾರಾಜ, ಪೂ. ವೇದಪ್ರಕಾಶಾಚಾರ್ಯ ಮಹಾರಾಜ, ಸನಾತನ ಸಂಸ್ಥೆಯ ಪೂ. ಅಶೋಕ ಪಾತ್ರಿಕರ ಸೇರಿದಂತೆ ಸಂತ-ಮಹಂತರು, ಸರ್ವಶ್ರೀ. ಪ್ರಬಲ ಪ್ರತಾಪ ಸಿಂಗ್ ಜೂದೇವ, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನಿಲ ಘನವಟ, ಹಾಗೂ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಮೊಮ್ಮಗ ಮತ್ತು ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ್ ಅವರು ತಮ್ಮ ವಿಚಾರಗಳನ್ನು ಮಂಡಿಸಿದರು.

ಗಜವಾ-ಎ-ಹಿಂದ್‌ಗೆ ಪ್ರತ್ಯುತ್ತರ ನೀಡಲು ಭಗವಾ-ಎ-ಹಿಂದ್ ಚಳುವಳಿ ಅಗತ್ಯ! – ಸುನೀಲ ಘನವಟ
ಛತ್ತೀಸ್‌ಗಢದಲ್ಲಿ ನಕ್ಸಲಿಸಂ ಅನ್ನು ಮಾರ್ಚ್ 2026 ರೊಳಗೆ ಕೊನೆಗೊಳಿಸಲಾಗುವುದು ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿವೆ. ಸರಕಾರದ ಕ್ರಮಗಳಿಂದ ನಕ್ಸಲಿಸಂ ನಿಯಂತ್ರಣಕ್ಕೆ ಬರುತ್ತಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿ ವಿಷ್ಣುದೇವ್ ಸಾಯ ಅವರನ್ನು ಅಭಿನಂದಿಸುತ್ತೇನೆ. ಛತ್ತೀಸ್‌ಗಢದಲ್ಲಿ ನಕ್ಸಲಿಸಂ ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿದ್ದರೂ, ‘ನಗರ ನಕ್ಸಲಿಸಂ’ ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಮತಾಂತರ ಮಾಡುವ ಶಕ್ತಿಗಳು ಮತ್ತು ನಕ್ಸಲ್ ಸಿದ್ಧಾಂತದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇವು ಒಂದೇ ನಾಣ್ಯದ ಎರಡು ಮುಖಗಳಾಗಿದ್ದೇವೆ. ಆದ್ದರಿಂದ, ಕಠಿಣ ಮತಾಂತರ ವಿರೋಧಿ ಕಾನೂನನ್ನು ತಕ್ಷಣವೇ ಜಾರಿಗೆ ತರುವುದು ಅವಶ್ಯಕ. ಲವ್ ಜಿಹಾದ್, ಗೋಹತ್ಯೆ, ಹಲಾಲ್ ಜಿಹಾದ್ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಒಂದೇ ಪರ್ಯಾಯವಾಗಿದೆ. ಛತ್ತೀಸ್‌ಗಢ ರಾಜ್ಯದಲ್ಲಿ ಹಿಂದೂ ರಾಷ್ಟ್ರದ ಚಳುವಳಿ ವೇಗ ಪಡೆಯುತ್ತಿದೆ. ದೇಶದಲ್ಲಿ ಮತಾಂಧ ಮತ್ತು ದೇಶವಿರೋಧಿ ಶಕ್ತಿಗಳಿಂದ ಜಾರಿಗೆ ತರಲಾದ ‘ಗಜವಾ-ಎ-ಹಿಂದ್’ಗೆ (ಭಾರತವನ್ನು ಇಸ್ಲಾಮಿಸ್ತಾನವಾಗಿಸುವುದು) ಪ್ರತ್ಯುತ್ತರ ನೀಡಲು ಭಗವಾ-ಎ-ಹಿಂದ್ ಚಳುವಳಿಯನ್ನು ನಡೆಸುವ ಅವಶ್ಯಕತೆಯಿದೆ.
ಸಂಸ್ಕೃತಿ ಮತ್ತು ಧರ್ಮವನ್ನು ರಕ್ಷಿಸುವುದು ರಾಜಧರ್ಮ ! – ಪ್ರಬಲ ಪ್ರತಾಪ ಸಿಂಗ್ ಜೂದೇವ

ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಿಂದ ಹಿಂದೂಗಳಿಗೆ ದೊಡ್ಡ ಸ್ಫೂರ್ತಿ ಸಿಕ್ಕಿದೆ. ರಾಜ್ಯದ ಬಸ್ತರ್‌ನಲ್ಲಿಯೂ ಕೂಡ ಮತಾಂತರಗೊಂಡ ಹಿಂದೂಗಳನ್ನು ಸ್ವಧರ್ಮಕ್ಕೆ ಮರಳಿ ಕರೆತರುವ (ಘರ್‌ವಾಪಸಿ) ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಹಾಗೆಯೇ ‘ಮೋಸದ ಹಿಂದೂಗಳನ್ನು’ (ಕೆಟ್ಟ ಉದ್ದೇಶದಿಂದ ಕಾರ್ಯನಿರ್ವಹಿಸುವ ಹಿಂದೂಗಳನ್ನು) ಬಹಿರಂಗಪಡಿಸಲು ಕಾನೂನನ್ನು ಜಾರಿಗೆ ತರಬೇಕು.
ಪ್ರಬಲ ಪ್ರತಾಪ ಸಿಂಗ್ ಜೂದೇವ ಅವರು ದಿವಂಗತ ದಿಲೀಪ ಸಿಂಗ್ ಜೂದೇವ ಅವರ ಘರ್‌ವಾಪಸಿ ಅಭಿಯಾನವನ್ನು ಉಲ್ಲೇಖಿಸಿ, ‘ಸಂಸ್ಕೃತಿ ಮತ್ತು ಧರ್ಮವನ್ನು ರಕ್ಷಿಸುವುದೇ ರಾಜಧರ್ಮವಾಗಿದೆ’ ಎಂದು ದೃಢವಾಗಿ ಹೇಳಿದರು.
ಸ್ವಾತಂತ್ರ್ಯವೀರ ಸಾವರ್ಕರ್ ಸ್ಮಾರಕದ ಕಾರ್ಯಕಾರಿ ಅಧ್ಯಕ್ಷ ರಣಜಿತ ಸಾವರ್ಕರ್ ಅವರನ್ನು ಅಧಿವೇಶನದಲ್ಲಿ ಸನ್ಮಾನಿಸಲಾಯಿತು. ಪೂ. ಅಶೋಕ ಪಾತ್ರೀಕರ ಅವರು ಅವರಿಗೆ ಶ್ರೀಕೃಷ್ಣನ ವಿಗ್ರಹವನ್ನು ನೀಡಿ ಗೌರವಿಸಿದರು. ಶ್ರೀ. ಸಾವರ್ಕರ ಅವರು ಮಹಾರಾಷ್ಟ್ರದಲ್ಲಿ ‘ಹಲಾಲ್ ಪ್ರಮಾಣಪತ್ರ’ದ ವಿರುದ್ಧ ಆರಂಭಿಸಿರುವ ‘ಓಂ ಪ್ರಮಾಣಪತ್ರ’ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು ಮತ್ತು ಈ ಚಳುವಳಿ ಛತ್ತೀಸ್‌ಗಢದಲ್ಲಿಯೂ ಪ್ರಾರಂಭಿಸುವುದು ಆವಶ್ಯಕವಿದೆ ಎಂದು ಹೇಳಿದರು.
ಮತಾಂತರ ವಿರೋಧಿ ಕಾನೂನಿನ ಕುರಿತು ವಿಚಾರ ಸಂಕಿರಣ
‘ಮತಾಂತರ ವಿರೋಧಿ ಕಾನೂನಿನ ಅವಶ್ಯಕತೆ’ ಎಂಬ ವಿಷಯದ ಕುರಿತು ಒಂದು ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಶ್ರೀ. ಸುನೀಲ ಘನವಟ, ಪತ್ರಕರ್ತ ಯೋಗೇಶ ಮಿಶ್ರಾ, ಮಾಜಿ ಪೊಲೀಸ್ ಮಹಾನಿರ್ದೇಶಕ ಶ್ರೀ. ಸುಶೀಲ ದ್ವಿವೇದಿ, ವಕೀಲ ಆಶೀಶ ಶರ್ಮಾ ಮತ್ತು ಶ್ರೀ. ಕಮಲ ಬಿಸ್ವಾಲ ಅವರು ಮಾರ್ಗದರ್ಶನ ಮಾಡಿದರು. ಕಾನೂನು ಜಾರಿಯಾಗುವವರೆಗೂ ನಿರಂತರವಾಗಿ ಕಾರ್ಯ ಮಾಡುವುದಾಗಿ ಅವರು ಭರವಸೆ ನೀಡಿದರು.
ಛತ್ತೀಸ್‌ಗಢದ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಯವರು ಹಿಂದೂಗಳ ಹಿತಾಸಕ್ತಿಯ ಕಾನೂನು ತರಬೇಕು ! – ಪೂ. ರಾಮಬಾಲಕದಾಸ ಮಹಾರಾಜ ಮಹತ್ಯಾಗಿ

ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರ ಜಾಗೃತಿಯ ಕಾರ್ಯ ಮಾಡುತ್ತಿದೆ. ಇದರಿಂದ ಹಿಂದೂ ರಾಷ್ಟ್ರದ ಚಳುವಳಿ ರಾಷ್ಟ್ರವ್ಯಾಪಿಯಾಗಿ ಬೆಳೆದಿದೆ. ಇದಕ್ಕೆ ನಾನೇ ಸಾಕ್ಷಿ. ಸಮಿತಿಯ ಸ್ಫೂರ್ತಿಸ್ಥಾನವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರನ್ನು ನಾನು ಭೇಟಿ ಮಾಡಿದ್ದೇನೆ. ಅವರ ಪ್ರೇರಣೆಯಿಂದ ರಾಜ್ಯದಲ್ಲಿ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಗೋರಕ್ಷಕರ ಮೇಲೆ ದಾಳಿಗಳು ನಡೆಯುತ್ತಿವೆ, ಮತ್ತು ಧರ್ಮ ಪರಿವರ್ತನೆಯ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಇನ್ನೂ ಜಾರಿಯಾಗಿಲ್ಲ. ಸಂತ ಸಮುದಾಯವು ರಾಜ್ಯ ಸರಕಾರಕ್ಕೆ ಬೇಡಿಕೆ ಇಡುತ್ತಿಲ್ಲ, ನಾವು ಆದೇಶ ನೀಡುತ್ತಿದ್ದೇವೆ, ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳು ಕಾನೂನು ಜಾರಿಗೆ ತರಬೇಕು.
ಹಿಂದೂ ವಿರೋಧಿ ಚಟುವಟಿಕೆ ತಡೆಯಲು ಹಿಂದೂಗಳು ಸಂಘಟಿತರಾಗುವುದು ಅಗತ್ಯ ! – ಸುಶೀಲ ದ್ವಿವೇದಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಛತ್ತೀಸ್‌ಗಢ
ರಾಜ್ಯದಲ್ಲಿ ಹಿಂದೂಗಳ ಮತಾಂತರದ ಘಟನೆಗಳು ನಡೆಯುತ್ತಿವೆ. ಅದಕ್ಕಾಗಿ ಹಿಂದೂ ವಿರೋಧಿಗಳ ಇಕೋಸಿಸ್ಟಂ (ಒಂದು ನಿರ್ದಿಷ್ಟ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುವ ವ್ಯವಸ್ಥೆ) ಕಾರ್ಯನಿರ್ವಹಿಸುತ್ತಿದೆ. ಇಂತಹ ಹಿಂದೂ ವಿರೋಧಿ ಚಟುವಟಿಕೆಗಳನ್ನು ತಡೆಯಲು ಹಿಂದೂಗಳ ವ್ಯವಸ್ಥೆಯನ್ನೂ ನಿರ್ಮಿಸುವುದು ಅಗತ್ಯ. ಛತ್ತೀಸ್‌ಗಢದಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳನ್ನು ತಡೆಯಲು ಹಿಂದೂಗಳು ಸಂಘಟಿತರಾಗಿ ಪ್ರಯತ್ನ ಮಾಡಬೇಕು.
ಹಿಂದೂತ್ವದ ಕಾರ್ಯಕ್ಕಾಗಿ ಶದಾನಿ ದರ್ಬಾರ್‌ನ ಬಾಗಿಲು ಯಾವಾಗಲೂ ತೆರೆದಿರುತ್ತದೆ ! – ಪೂ. ಯುಧಿಷ್ಠಿರಲಾಲ್ ಮಹಾರಾಜ
ಪೂ. ಯುಧಿಷ್ಠಿರಲಾಲ್ ಮಹಾರಾಜ ಅವರ ವತಿಯಿಂದ ಅವರ ಭಕ್ತ ಮತ್ತು ರಾಜ್ಯ ಮಾಧ್ಯಮ ಪ್ರಮುಖ ಶ್ರೀ ಅಮಿತ ಚಿಮ್ನಾನಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಶದಾನಿ ದರ್ಬಾರ್ ಹಿಂದೂತ್ವದ ಕಾರ್ಯಕ್ಕಾಗಿ ಯಾವಾಗಲೂ ತೆರೆದಿರುತ್ತದೆ. ಹಿಂದೂತ್ವದ ಕಾರ್ಯವು ಖಂಡಿತವಾಗಿಯೂ ವಿಶ್ವವ್ಯಾಪಿಯಾಗಲಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ರಾಷ್ಟ್ರ ಅಧಿವೇಶನದ ಮೂಲಕ ಆರಂಭವಾಗಿರುವ ಈ ಅಭಿಯಾನವು ಮುಂದುವರಿಯಲಿ ಎಂದು ಆಶಿಸುತ್ತೇವೆ, ಎಂದು ಹೇಳಿದರು.
ಕ್ಷಣಚಿತ್ರಗಳು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ